ಮಂಗಳೂರು/ಚಿಕ್ಕಮಗಳೂರು: ಬಂಗಾರದ ಬಳೆ ತೊಟ್ಟು ಶೋಕಿ ಮಾಡುತ್ತಿದ್ದ ಲಂಚು ಲಾಲ್ ರವರ ‘ಅಕ್ಷಯಪಾತ್ರ ಸ್ಕೀಮ್’ ಮಂಗಳೂರಿನಲ್ಲಿ ಈಗಾಗಲೇ ಡೋಂಗಿಗೆ ಜನರ ಮನೆ ಮಾತಾಗಿತ್ತು. ಒಂದೆರಡು ಬಾರಿ ಜನರ ಕಣ್ಣಿಗೆ ಮಣ್ಣೆರಚಬಹುದು, ಆದರೆ ಪ್ರತಿ ಬಾರಿಯೂ ದೋಖ ಮಾಡಿ ಬಚಾವ್ ಆಗೋಕೆ ಆಗುತ್ತೆ ಎಂದು ತಿಳಿಯೋದು ಅದು ಶತದಡ್ಡತನ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ.
ಮಂಗಳೂರಿನಲ್ಲಿ ‘ಅಸ್ತ್ರ’ ಹೆಸರಿನಲ್ಲಿ ಲಕ್ಕಿ ಸ್ಕೀಮ್ ಮಾಡಿ ಶೋಕಿ ಮಾಡಿ, ಅನೇಕ ಜನರ ಹಣ ಹಿಂತಿರುಗಿಸದೆ ಗುಳುಂ ಮಾಡಿದ್ದ ಲಂಚು ಲಾಲ್ ರವರು ಈಗ ಚಿಕ್ಕಮಗಳೂರಲ್ಲಿ ಸಾಕಷ್ಟು ಗ್ರಾಹಕರನ್ನು ಸೆಳೆದು, ಈಗ ಅಲ್ಲಿಯೂ ದೋಖಾದ ಹೊಸ ಡ್ರಾಮಾ ಶುರುಮಾಡಿದ್ದಾರೆ.
‘ಟೋಪಿ’ ಮೇಲೆ ಟೋಪಿ? ‘ಲಕ್ಕಿ ಸ್ಕೀಮ್’ ಹೆಸರಿನಲ್ಲಿ ಹಣ ಸಂಗ್ರಹಿಸಿ ಮರುಪಾವತಿ ವಿಳಂಬ ಆರೋಪ; ಲಂಚು ಲಾಲ್ ವಿರುದ್ಧ ಮತ್ತೆ ಪ್ರಶ್ನೆಗಳ ಸುರಿಮಳೆ
10 ಕಂತು ಮುಗಿದರೂ ಲಾಸ್ಟ್ ಡ್ರಾ ಯಾವಾಗ?
ಅಕ್ಷಯಪಾತ್ರ ಚಿಕ್ಕಮಗಳೂರು ಸೀಸನ್‌ನ ಈಗಾಗಲೇ 10 ಕಂತುಗಳು ಪೂರ್ಣಗೊಂಡಿದ್ದು, ಕೊನೆಯ ಕಂತಿನ ಡ್ರಾ ದಿನಾಂಕವನ್ನು ನಿರ್ಧಾರ ಮಾಡಿಲ್ಲ. ಮಂಗಳೂರು ಸೀಸನ್‌ನ ಬಾಕಿಯಿರುವ ಹಣ ಪೂರ್ಣವಾಗಿ ಮರುಪಾವತಿಯಾದ ಬಳಿಕವೇ ಚಿಕ್ಕಮಗಳೂರು ಸೀಸನ್‌ನ ಫೈನಲ್ ಡ್ರಾ ಲಂಚು ಲಾಲ್ ಇವರ ಸಮ್ಮುಖದಲ್ಲೇ ನಡೆಯಲಿದೆ ಎಂದು ತಿಳಿಸಲಾಗುತ್ತಿದೆ.
ಇದರ ನಡುವೆ ‘ಲಾಸ್ಟ್ ಡ್ರಾ ಯಾವಾಗ?’, ‘ಹಣ ಯಾವಾಗ ವಾಪಸ್?’, ‘ಮಾತು ಕೊಟ್ಟಂತೆ ಮರುಪಾವತಿ ಆಗುತ್ತದೆಯೇ?’ ಎಂಬ ಪ್ರಶ್ನೆಗಳು ಗ್ರಾಹಕರಲ್ಲಿ ಮೂಡಿವೆ.
ಅಕ್ಷಯಪಾತ್ರ ಸೇವಿಂಗ್ಸ್ ಸ್ಕೀಮ್‌ನ ಮೊದಲ ಸೀಸನ್‌ನ ಮರುಪಾವತಿಯಾಗಲು ಬಾಕಿಯಿರುವ ನಗದು ಡಿಸೆಂಬರ್ ತಿಂಗಳ 30ರ ಒಳಗಾಗಿ ಮರುಪಾವತಿಯಾಗಲಿದೆ ಎಂದು ಜನರಲ್ಲಿ ತಿಳಿಸುತ್ತಿರುವ ಇವರು, ಹೊಸ ರೀತಿಯಲ್ಲಿ ಬಣ್ಣ ಬಣ್ಣದ ಟೋಪಿ ಹಾಕಲು ರೆಡಿಯಾಗಿ ನಿಂತಂತೆ ಕಾಣುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜನರ ಪ್ರಶ್ನೆ ಒಂದೇ—ಈ ಬಾರಿ ಹೇಳಿರುವ ಗಡುವು ನಿಜವಾಗಿಯೂ ಹಣ ಮರಳುವ ದಿನವಾಗುತ್ತದೆಯೇ? ಅಥವಾ ಮತ್ತೊಂದು ಗಡುವಿನ ಕಥೆ ಶುರುವಾಗುತ್ತದೆಯೇ?
‘ಲಾಸ್ಟ್ ಡ್ರಾ’ ಮಾಡಿದರೆ 85,000 ಮಂದಿ… ಹಾಗಾದರೆ ಡ್ರಾ ಯಾಕಿಲ್ಲ?
ಲಾಸ್ಟ್ ಡ್ರಾ ಮಾಡಿದರೆ ಮತ್ತೆ 85,000 ಮಂದಿ ಎದ್ದೇಳುತ್ತಾರೆ ಹಾಗಾಗಿ ಲಾಸ್ಟ್ ಡ್ರಾ ಮಾಡದಿದ್ದರೆ ಜನರು ತಾಳ್ಮೆಯಿಂದ ಡಿಸೆಂಬರ್ ವರೆಗೆ ಕಾಯುತ್ತಾರಾ?
ಇಲ್ಲಿಯೇ ಮತ್ತೊಂದು ದೊಡ್ಡ ಪ್ರಶ್ನೆ ಎದ್ದಿದೆ—ಜನರಿಗೆ ಸ್ಕ್ಯಾಮ್ ಮಾಡೋದೆ ಈತನ ಸ್ಕೀಮ್ ಆಗೋಯ್ತಾ? ಎಂಬ ಪ್ರಶ್ನೆಯನ್ನು ಕೆಲವರು ಎತ್ತುತ್ತಿದ್ದಾರೆ.
ಮಂಗಳೂರಿನ ಜನರಿಗೆ ಆದ ಪರಿಸ್ಥಿತಿಯೇ ಚಿಕ್ಕಮಗಳೂರು ಜನರಿಗೂ ಎದುರಿಸುವಂಥಾಗುತ್ತದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ.
‘ಟೋಪಿ’ಯ ಸರಣಿ ಮುಂದುವರಿಯುತ್ತಾ?
ಇನ್ನು ಎಷ್ಟು ಜನರಿಗೆ ಇಂತಹ ಸ್ಕೀಮ್‌ಗಳನ್ನು ಮಾಡಿ, ಬಂಗಾರಗಳನ್ನು ತೊಟ್ಟು ಶೋಕಿಯಲ್ಲಿ ನಂಬಿಸಿ, ಟೋಪಿ ಹಾಕಲಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಒಂದೆಡೆ ಸ್ಕೀಮ್‌ನ ಹಣ, ಮತ್ತೊಂದೆಡೆ ಬಾಕಿ ಮರುಪಾವತಿ, ಇನ್ನೊಂದೆಡೆ ಫೈನಲ್ ಡ್ರಾ ದಿನಾಂಕದ ಅನಿಶ್ಚಿತತೆ—ಇವೆಲ್ಲದರ ನಡುವೆ ಗ್ರಾಹಕರು ‘ದೋಖಾ ಆಗುತ್ತಾ? ಹಣ ವಾಪಸ್ ಬರುತ್ತಾ? ಮತ್ತೊಂದು ಟೋಪಿ ಬೀಳುತ್ತಾ?’ ಎಂಬ ಗೊಂದಲದಲ್ಲಿದ್ದಾರೆ.








