Close Menu
    What's Hot

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ವಾಟರ್ ಪ್ಯೂರಿಫೈಯರ್ ಒಳಗೆ MDMA ಬಚ್ಚಿಟ್ಟು ಸಾಗಾಟ; ₹1.63 ಕೋಟಿ ಮೌಲ್ಯದ ಸೊತ್ತು ವಶಕ್ಕೆ
    ಅಪರಾಧ

    ವಾಟರ್ ಪ್ಯೂರಿಫೈಯರ್ ಒಳಗೆ MDMA ಬಚ್ಚಿಟ್ಟು ಸಾಗಾಟ; ₹1.63 ಕೋಟಿ ಮೌಲ್ಯದ ಸೊತ್ತು ವಶಕ್ಕೆ

    adminBy adminOctober 9, 2026No Comments2 Mins Read

    ಮಂಗಳೂರು: ಮಂಗಳೂರು ನಗರದಲ್ಲಿ ನಿಷೇಧಿತ ಮಾದಕವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಭಾರಿ ಜಾಲವನ್ನು ಮಂಗಳೂರು ಸಿಸಿಬಿ (CCB) ಪೊಲೀಸರು ಭೇದಿಸಿದ್ದಾರೆ. ಉಳ್ಳಾಲ ತಾಲೂಕಿನ ಕುಂಪಲ ಡಿ-ಮಾರ್ಟ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ₹1,58,34,000 ಮೌಲ್ಯದ ಬರೋಬ್ಬರಿ 1 ಕೆಜಿ 796.96 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಕ್ಟೋಬರ್ 8, 2026 ರಂದು ರಾತ್ರಿ 10:00 ಗಂಟೆಗೆ ಸಿಸಿಬಿ ಪೊಲೀಸರು ಈ ಯಶಸ್ವಿ ದಾಳಿ ನಡೆಸಿದ್ದಾರೆ.

    ಬಂಧಿತ ಆರೋಪಿಗಳ ವಿವರ: ಅಬ್ದುಲ್ ಹಾಫೀಲ್ (25): ಕಾಸರಗೋಡು, ಕೇರಳ. ಜಿಯಾವುಲ್ ಹಕ್ (30): ಕೂಳೂರು, ಮಂಗಳೂರು. ಅಲ್ತಾಫ್ (28): ಮಂಗಳೂರು.

    ಬಂಧಿತರಿಂದ ಒಟ್ಟು ₹1,63,84,000 ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ವಿವರ ಹೀಗಿದೆ:

    MDMA ಮಾದಕವಸ್ತು: 1 ಕೆಜಿ 796.96 ಗ್ರಾಂ (ಮೌಲ್ಯ: ₹1.58 ಕೋಟಿ)

    ವಾಹನಗಳು: ಮಾರುತಿ ಸುಜುಕಿ ಸ್ವಿಫ್ಟ್ ಕಾರು ಹಾಗೂ ಆಟೋ ರಿಕ್ಷಾ

    ಇತರ ವಸ್ತುಗಳು: 03 ಮೊಬೈಲ್ ಫೋನ್‌ಗಳು, ಕೋರಿಯರ್ ರಟ್ಟಿನ ಬಾಕ್ಸ್ ಹಾಗೂ ವಾಟರ್ ಪ್ಯೂರಿಫೈಯರ್.

    ಆರೋಪಿಗಳು ಅತ್ಯಂತ ಚಾಲಾಕಿ ತಂತ್ರ ಬಳಸಿ ಡ್ರಗ್ಸ್ ಜಾಲ ನಡೆಸುತ್ತಿದ್ದರು. ಪಂಜಾಬ್ ರಾಜ್ಯದ ಅಮೃತಸರದಿಂದ ಎಂಡಿಎಂಎ ಖರೀದಿಸುತ್ತಿದ್ದ ಆರೋಪಿಗಳು, ಅದನ್ನು ವಾಟರ್ ಪ್ಯೂರಿಫೈಯರ್ (Water Purifier) ನ ನೀರು ಸಂಗ್ರಹವಾಗುವ ಖಾಲಿ ಜಾಗದಲ್ಲಿ ಭದ್ರವಾಗಿ ಅಡಗಿಸಿಡುತ್ತಿದ್ದರು. ಬಳಿಕ ಖಾಸಗಿ ಕೋರಿಯರ್ ಮೂಲಕ ಮಂಗಳೂರಿಗೆ ರವಾನಿಸುತ್ತಿದ್ದರು. ಇಲ್ಲಿಗೆ ತಲುಪಿದ ಡ್ರಗ್ಸ್ ಅನ್ನು ಮಂಗಳೂರು ನಗರ ಹಾಗೂ ನೆರೆಯ ಕೇರಳ ರಾಜ್ಯದ ವಿವಿಧ ಭಾಗಗಳಿಗೆ ಸಣ್ಣ ಸಣ್ಣ ಪ್ರಮಾಣದಲ್ಲಿ ಸರಬರಾಜು ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಆದರೆ ಜಾಲ ಸಕ್ರಿಯಗೊಳ್ಳುವ ಪ್ರಾರಂಭಿಕ ಹಂತದಲ್ಲೇ ಸಿಸಿಬಿ ಪೊಲೀಸರು ದಾಳಿ ನಡೆಸಿ ಜಾಲವನ್ನು ಮಟ್ಟಹಾಕಿದ್ದಾರೆ.

    ಬಂಧಿತರ ಪೈಕಿ ಅಬ್ದುಲ್ ಹಾಫೀಲ್ ವಿರುದ್ಧ ಈ ಹಿಂದೆ ಉಳ್ಳಾಲ ಠಾಣೆಯಲ್ಲಿ ಮತ್ತು ಅಲ್ತಾಫ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಗಾಂಜಾ/ಡ್ರಗ್ಸ್ ಸೇವನೆ ಪ್ರಕರಣಗಳು ದಾಖಲಾಗಿದ್ದವು. ಮತ್ತೊಬ್ಬ ಆರೋಪಿ ಜಿಯಾವುಲ್ ಹಕ್, ದುಬೈನ ರಾಸ್-ಅಲ್-ಖೈಮಾದಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಸಿಕ್ಕಿಬಿದ್ದು 3 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಭಾರತಕ್ಕೆ ಮರಳಿದ್ದ ಕರಾವಳಿ ಮೂಲದ ಆರೋಪಿಯಾಗಿದ್ದಾನೆ. ಘಟನೆ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.




    #crime #dakshinakannada
    Previous Articleಮಂಗಳೂರು: “ಕಾನೂನು ಕೈಗೆತ್ತಿಕೊಂಡರೆ ಸುಮ್ಮನಿರಲ್ಲ”; ದಾಂಡಿಯಾ ವಿವಾದದ ನಡುವೆ ಪೊಲೀಸ್ ಕಮಿಷನರ್ ಎಚ್ಚರಿಕೆ
    Next Article ಸರ್ಕಾರಿ ನೌಕರರಿಗೆ ತಮಿಳುನಾಡು ಸರ್ಕಾರದ ಹೊಸ ಆದೇಶ; ಆಸ್ತಿ ವಿವರ ನೀಡದಿದ್ದರೆ ಬಡ್ತಿ ಇಲ್ಲ

    Related Posts

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026

    ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    October 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.