Close Menu
    What's Hot

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026

    ಸುರತ್ಕಲ್ ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು

    October 17, 2026

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮತದಾರರ ಪಟ್ಟಿ ಅಳಿಸುವಿಕೆ ಆರೋಪ: ಬಿಜೆಪಿ ಮುಖಂಡರ ವಿರುದ್ಧದ ಪ್ರಕರಣದ ಆದೇಶ ಕಾಯ್ದಿರಿಸಿದ ಹೈಕೋರ್ಟ್
    ಅಪರಾಧ

    ಮತದಾರರ ಪಟ್ಟಿ ಅಳಿಸುವಿಕೆ ಆರೋಪ: ಬಿಜೆಪಿ ಮುಖಂಡರ ವಿರುದ್ಧದ ಪ್ರಕರಣದ ಆದೇಶ ಕಾಯ್ದಿರಿಸಿದ ಹೈಕೋರ್ಟ್

    adminBy adminOctober 14, 2026No Comments2 Mins Read

    ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಫಾರಂ 7 ದುರ್ಬಳಕೆ ಆರೋಪದ ಮೇಲೆ ಬಿಜೆಪಿ ಮುಖಂಡರ ಮೇಲೆ ದಾಖಲಾಗಿದ್ದ ಎಫ್​​​ಐಆರ್​​ಗೆ ಇತ್ತೀಚೆಗೆ ಹೈಕೋರ್ಟ್ ತಡೆ ನೀಡಿತ್ತು. ಇದೀಗ ಆದೇಶ ಕಾಯ್ದಿರಿಸಿ ತಡೆಯಾಜ್ಞೆಯನ್ನು ವಿಸ್ತರಿಸಲಾಗಿದ್ದು, ಚುನಾವಣಾ ಆಯೋಗದ ಸಿಸಿಟಿವಿ ಸಂರಕ್ಷಿಸುವಂತೆ ನ್ಯಾ. ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಪೀಠ ಸೂಚಿಸಿದೆ.

    ತಡೆಯಾಜ್ಞೆ ತೆರವು ಕೋರಿ ಸರ್ಕಾರದ ಪರ ವಕೀಲರು ಮನವಿ

    ಎಸ್‌ಐಆರ್ ವೇಳೆ ತಪ್ಪು ಮಾಹಿತಿ ನೀಡಿ ಫಾರಂ 7 ಸಲ್ಲಿಕೆ ಆರೋಪ ಹಿನ್ನೆಲೆ ಎಫ್‌ಐಆರ್​ ರದ್ದು ಕೋರಿ ಬಿಜೆಪಿ ಮುಖಂಡರಾದ ವಸಂತಲಕ್ಷ್ಮೀ ಮತ್ತು ದೀಪಕ್ ಸಿಂಗ್​​ ಇತ್ತೀಚೆಗೆ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ಮಾಡಿದ್ದ ಹೈಕೋರ್ಟ್, ಎಫ್‌ಐಆರ್​ಗೆ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆ ತೆರವು ಕೋರಿ ಸರ್ಕಾರದ ಪರ ವಕೀಲರು ಮನವಿ ಮಾಡಿದ್ದರು.

    ‘ಬಿಎಲ್‌ಎ ಹಾಗೂ ಬಿಎಲ್‌ಒಗಳ ಜೊತೆಗೂಡಿ ಮನೆಮನೆಗೆ ಹೋಗಿದ್ದಾರೆ. ಮನೆಯಲ್ಲಿರುವುದು ತಿಳಿದೂ ಅಲ್ಪಸಂಖ್ಯಾತರ ಮತಗಳನ್ನ ಮತಪಟ್ಟಿಯಿಂದ ಡಿಲೀಟ್​​ಗೆ ಅರ್ಜಿ ಸಲ್ಲಿಸಿದ್ದಾರೆ. ಎಲೆಕ್ಟ್ರಾನಿಕ್ ದಾಖಲೆಗಳ ನಾಶ ತಡೆಗೆ ತನಿಖೆ ಅಗತ್ಯ. ತನಿಖೆ ವೇಳೆ ಅರ್ಜಿದಾರರನ್ನು ಬಂಧಿಸುವುದಿಲ್ಲ. ಹೀಗಾಗಿ ತಡೆಯಾಜ್ಞೆ ತೆರವಿಗೆ’ ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು.

    ಹೈಕೋರ್ಟ್ ಸಾಲು ಸಾಲು ಪ್ರಶ್ನೆ

    ಫಾರಂ ನಂ.7 ಸಲ್ಲಿಸಿದಾಗ ಆಕ್ಷೇಪಣೆಗೆ ಅವಕಾಶ ಕೊಡುವುದಿಲ್ಲವೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ದೇಶದೆಲ್ಲೆಡೆ ಎಸ್‌ಐಆರ್ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರತಿ ಮತದಾರರಿಗೂ ಜವಾಬ್ದಾರಿ ಇರುತ್ತದಲ್ಲವೇ? ಮತದಾರರು ಅಲ್ಲಿ ವಾಸಿಸುತ್ತಿದ್ದಾರಾ, ಇಲ್ವಾ ಯಾರು ತೀರ್ಮಾನಿಸುತ್ತಾರೆ? ಫಾರಂ ನಂ.7 ಬಗ್ಗೆ ಪೊಲೀಸರು ನಿರ್ಧರಿಸುತ್ತಾರಾ ಅಥವಾ ಕಾಯ್ದೆಯಲ್ಲಿರುವ ಅಧಿಕಾರಿಗಳು ನಿರ್ಧರಿಸುತ್ತಾರಾ ಎಂದು ಹೈಕೋರ್ಟ್ ಸಾಲು ಸಾಲು ಪ್ರಶ್ನೆ ಮಾಡಿದೆ.

    ‘ವಿವಾಹ ನೋಂದಣಿಯಂತೆ ಪ್ರಕ್ರಿಯೆ ಅನುಸರಿಸಲಾಗುತ್ತಿದೆ. ಫಾರಂ 7 ಬಗ್ಗೆ ಕಚೇರಿಯಲ್ಲಿ ಅಂಟಿಸಲಾಗುತ್ತದೆ. ಬಹುತೇಕ ಸಂದರ್ಭದಲ್ಲಿ ಮತದಾರರಿಗೆ ಮಾಹಿತಿ ತಿಳಿಯುವುದಿಲ್ಲ. ಡಿಲೀಟ್ ಮಾಡುವ ಬಗ್ಗೆ ಅಧಿಕಾರಿಗಳಿಗೆ ವಿವೇಚನಾಧಿಕಾರವಿದೆ. ಆಕ್ಷೇಪಣೆ ಬಳಿಕ ಅಂಗೀಕರಿಸುವ, ತಿರಸ್ಕರಿಸುವ ವಿವೇಚನಾಧಿಕಾರವಿದೆ. ದುರುದ್ದೇಶದಿಂದ ಫಾರಂ 7 ನೀಡಿರುವ ಬಗ್ಗೆ ತನಿಖೆ ಅಗತ್ಯವಿದೆ’ ಎಂದು ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದರು.

    ವರದಿ ನೀಡುತ್ತೇವೆ, ಆಗ ಹೈಕೋರ್ಟ್ ತೀರ್ಮಾನಿಸಲಿ ಎಂದ ಎಜಿ 

    ಈ ವೇಳೆ ಚುನಾವಣಾಧಿಕಾರಿ ತೀರ್ಮಾನಿಸಿದ ಬಳಿಕ ಕ್ರಮ ಕೈಗೊಳ್ಳಬಹುದಲ್ಲವೇ, ಪೊಲೀಸರಿಂದ ಸಮಾನಾಂತರ ತನಿಖೆ ಅಗತ್ಯವಿದೆಯೇ ಎಂದು ಸರ್ಕಾರಕ್ಕೆ ನ್ಯಾ. ಅನಂತ್ ರಾಮನಾಥ್ ಹೆಗ್ಡೆ ಪ್ರಶ್ನೆ ಮಾಡಿದರು. ಮತದಾರರನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಲಾಗುತ್ತಿದೆ. ಆಯೋಗ, ಪೊಲೀಸರ ವಿಚಾರಣೆಗಳ ವರದಿಯನ್ನು ಮುಂದಿಡುತ್ತೇವೆ. ಆಗ ಹೈಕೋರ್ಟ್ ಈ ಬಗ್ಗೆ ತೀರ್ಮಾನಿಸಲಿ ಎಂದು ಎಜಿ ವಾದಿಸಿದರು.

    ಡಿಲೀಟ್ ಆದ ಮತದಾರರಿಗೂ ಮೇಲ್ಮನವಿಯ ಹಕ್ಕಿದೆ: ವಕೀಲ ವಿವೇಕ್ ರೆಡ್ಡಿ ವಾದ

    ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದಿಸಿದ್ದು, ‘ಡಿಲೀಟ್ ಆದ ಮತದಾರರಿಗೂ ಮೇಲ್ಮನವಿಯ ಹಕ್ಕಿದೆ. ಎರಡು ಹಂತದ ಮೇಲ್ಮನವಿ ಸಲ್ಲಿಸಬಹುದು. ಈ ಹಂತದಲ್ಲೇ ಪೊಲೀಸ್ ದೂರು ನೀಡುವ ಅಗತ್ಯವಿಲ್ಲ’ ಎಂದರು. ಆದರೆ ವಿವೇಕ್ ರೆಡ್ಡಿ ವಾದಕ್ಕೆ ಎಜಿ ಶಶಿಕಿರಣ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದು, ಪಿಕ್‌ಪಾಕೆಟ್​​​ಗೆ ಆದರೂ ಪೊಲೀಸ್ ದೂರು ನೀಡಬಹುದು. ಮತದಾನದ ಹಕ್ಕು ಹರಣವಾದರೆ ದೂರು ನೀಡಲಾಗುವುದೆ’ ಎಂದು ಪ್ರಶ್ನಿಸಿದರು. ‘ಪಿಕ್​ಪಾಕೆಟ್​​ಗೆ ದೂರು ನೀಡುವುದು ಒಂದೇ ಮಾರ್ಗ, ಆದರೆ ಮತದಾರರ ಪಟ್ಟಿ ಬಗ್ಗೆ ಪರ್ಯಾಯ ಆಯ್ಕೆಗಳಿವೆ’ ಎಂದು ಈ ವೇಳೆ ಹೈಕೋರ್ಟ್ ಹೇಳಿದೆ.




    #crime #karnataka
    Previous Articleವರದಕ್ಷಿಣೆ ಕಿರುಕುಳದ ಆರೋಪ: ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕಾಲುವೆಗೆ ಹಾರಿದ ತಾಯಿ
    Next Article ಬ್ಯಾಂಕ್ ಆಫ್ ಬರೋಡಾ ವಿರುದ್ಧ ಬಿ.ಆರ್. ಶೆಟ್ಟಿ ಕಾನೂನು ಸಮರ; ಷೇರು ಬೆಲೆ ಶೇ. 3ರಷ್ಟು ಇಳಿಕೆ

    Related Posts

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026

    ಗೂಗಲ್ ಮ್ಯಾಪ್ ಎಡವಟ್ಟು: ದಟ್ಟ ಕಾಡಿನಲ್ಲಿ ಸಿಲುಕಿದ 9 ಟೆಕ್ಕಿಗಳು; ಬೆಳಗ್ಗೆ ಪೊಲೀಸರಿಂದ ರಕ್ಷಣೆ

    October 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026

    ಸುರತ್ಕಲ್ ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು

    October 17, 2026

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026

    ‘ಲೆಹ್ರಾ ದೋ ತಿರಂಗಾ’ ರ‍್ಯಾಲಿಗೂ ಮುನ್ನ ಪೊಲೀಸ್ ಕ್ರಮ; ಸಿಜೆಪಿ ಸಂಸ್ಥಾಪಕನ ಬಂಧನ, ನೇಹಾ ಬೋರಾ ಬಿಡುಗಡೆ

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.