Close Menu
    What's Hot

    ಸುರತ್ಕಲ್ ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು

    October 17, 2026

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026

    ‘ಲೆಹ್ರಾ ದೋ ತಿರಂಗಾ’ ರ‍್ಯಾಲಿಗೂ ಮುನ್ನ ಪೊಲೀಸ್ ಕ್ರಮ; ಸಿಜೆಪಿ ಸಂಸ್ಥಾಪಕನ ಬಂಧನ, ನೇಹಾ ಬೋರಾ ಬಿಡುಗಡೆ

    October 17, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ದೇಶವನ್ನೇ ಬೆಚ್ಚಿಬೀಳಿಸಿದ್ದ ನೀಲಿ ಡ್ರಮ್ ಹತ್ಯೆ ಪ್ರಕರಣಕ್ಕೆ ತೀರ್ಪು; ಇಬ್ಬರು ದೋಷಿಗಳಿಗೆ ಗಲ್ಲು ಶಿಕ್ಷೆ
    ಅಪರಾಧ

    ದೇಶವನ್ನೇ ಬೆಚ್ಚಿಬೀಳಿಸಿದ್ದ ನೀಲಿ ಡ್ರಮ್ ಹತ್ಯೆ ಪ್ರಕರಣಕ್ಕೆ ತೀರ್ಪು; ಇಬ್ಬರು ದೋಷಿಗಳಿಗೆ ಗಲ್ಲು ಶಿಕ್ಷೆ

    adminBy adminOctober 15, 2026No Comments2 Mins Read

    ಮೀರತ್ : ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಮಾಜಿ ನೌಕಾಪಡೆ ಅಧಿಕಾರಿ ಸೌರಭ್ ರಜಪೂತ್ ಹತ್ಯೆ ಪ್ರಕರಣದಲ್ಲಿ ಮೀರತ್‌ನ ಸ್ಥಳೀಯ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಮೃತರ ಪತ್ನಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ದೋಷಿಗಳು ಎಂದು ಎರಡು ವಾರಗಳ ಹಿಂದೆ ಘೋಷಿಸಲಾಗಿದ್ದು, ವಿಚಾರಣೆ ಪೂರ್ಣಗೊಳಿಸಿ ಬುಧವಾರ ಇಬ್ಬರಿಗೂ ಮರಣದಂಡನೆ ವಿಧಿಸಿ ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಆದೇಶ ಹೊರಡಿಸಿದ್ದಾರೆ.

    ಕೇವಲ 126 ವಿಚಾರಣೆಗಳು ಹಾಗೂ 22 ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ಮುಸ್ಕಾನ್ ಹಾಗೂ ಸಾಹಿಲ್ ಇಬ್ಬರೂ ಸೇರಿ ಸೌರಭ್ ರಜಪೂತ್ ಅವರನ್ನು ವ್ಯವಸ್ಥಿತವಾಗಿ ಕೊಲೆಗೈದು, ಅವರ ಛಿದ್ರಗೊಂಡ ದೇಹದ ತುಂಡುಗಳನ್ನು ನೀಲಿ ಬಣ್ಣದ ಕೈಗಾರಿಕಾ ಡ್ರಮ್‌ನಲ್ಲಿ ಹಾಕಿ, ಕಾಂಕ್ರೀಟ್, ಮರಳು ಮತ್ತು ಸಿಮೆಂಟ್‌ನಿಂದ ಮುಚ್ಚಿ ಮರೆಮಾಚಿದ್ದರು. ಇಂತಹ ಕೃತ್ಯಗಳು ಸಮಾಜದಲ್ಲಿ ಭೀತಿಯನ್ನುಂಟುಮಾಡುತ್ತವೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ವಿಶೇಷವೆಂದರೆ, ಮುಸ್ಕಾನ್ ಪೋಷಕರೇ ಸೌರಭ್ “ತುಂಬಾ ಒಳ್ಳೆಯ ವ್ಯಕ್ತಿ” ಎಂದು ಬಣ್ಣಿಸಿ, ತಪ್ಪಿತಸ್ಥರಿಗೆ ಮರಣದಂಡನೆ ನೀಡಿದರೆ ತಾವು ಪ್ರತಿಭಟಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಮುಸ್ಕಾನ್ ಕುಟುಂಬವು ಜೈಲಿನಲ್ಲಿಯೂ ಆಕೆಯನ್ನು ಭೇಟಿಯಾಗಿರಲಿಲ್ಲ. ಪ್ರಾಸೂಷನ್ ವರದಿ ಪ್ರಕಾರ, ಮಾರ್ಚ್ 3, 2025 ರಂದು ಮುಸ್ಕಾನ್ ರಸ್ತೋಗಿ ತನ್ನ ಪತಿ ಸೌರಭ್ ಅವರಿಗೆ ಇಂದಿರಾ ನಗರದ ಮನೆಯಲ್ಲಿ ನೀಡಿದ ಆಹಾರದಲ್ಲಿ ನಿದ್ರಾಜನಕ ಮಾತ್ರೆ  ಬೆರೆಸಿ ಅರೆನಿದ್ರಾವಸ್ಥೆಗೆ ಜಾರುವಂತೆ ಮಾಡಿದ್ದರು. ಸ್ವಲ್ಪ ಸಮಯದಲ್ಲೇ ಅಲ್ಲಿಗೆ ಆಗಮಿಸಿದ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಸೌರಭ್ ಅವರನ್ನು ಇರಿದು ಕೊಲೆ ಮಾಡಿದ್ದರು. ಬಳಿಕ ಸ್ನಾನಗೃಹದಲ್ಲಿ ಶವವನ್ನು ಹಲವು ತುಂಡುಗಳಾಗಿ ಕತ್ತರಿಸಲಾಗಿತ್ತು.

    ಶವ ಕೊಳೆಯುವ ವಾಸನೆ ಹೊರಬರದಂತೆ ತಡೆಯಲು, ದೇಹದ ಭಾಗಗಳನ್ನು ದೊಡ್ಡ ನೀಲಿ ಪ್ಲಾಸ್ಟಿಕ್ ಡ್ರಮ್‌ಗೆ ಹಾಕಿ, ಹೊಸದಾಗಿ ಬೆರೆಸಿದ ಒದ್ದೆಯಾದ ಸಿಮೆಂಟ್ ಹಾಗೂ ಮರಳಿನ ಮಿಕ್ಸ್ ಮಾಡಿ ಮುಚ್ಚಿದ್ದರು. ಮರುದಿನವೇ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದರು. ಸೌರಭ್ ಅವರ ಮೊಬೈಲ್ ಬಳಸಿ ಅವರು ಜೀವಂತವಾಗಿದ್ದಾರೆ ಹಾಗೂ ವ್ಯವಹಾರ ನಿಮಿತ್ತ ಹೊರಗಿದ್ದಾರೆ ಎಂದು ಕುಟುಂಬಸ್ಥರಿಗೆ ನಕಲಿ ಸಂದೇಶಗಳನ್ನು ಕಳುಹಿಸಿ ವಂಚಿಸಿದ್ದರು.

    ಮಾರ್ಚ್ 17, 2025 ರಂದು ಅನುಮಾನಗೊಂಡ ಸಂಬಂಧಿಕರು ಸ್ಥಳೀಯ ಅಧಿಕಾರಿಗಳೊಂದಿಗೆ ಮನೆಗೆ ಭೇಟಿ ನೀಡಿದಾಗ ಈ ಘೋರ ರಹಸ್ಯ ಬಯಲಾಗಿದೆ. ಸೌರಭ್ ಮತ್ತು ಮುಸ್ಕಾನ್ ದಂಪತಿಯ 6 ವರ್ಷದ ಪುತ್ರಿ, ನೆರೆಹೊರೆಯವರಿಗೆ ಮುಗ್ಧವಾಗಿ “ಅಪ್ಪ ಡ್ರಮ್‌ನಲ್ಲಿದ್ದಾರೆ” ಎಂದು ಹೇಳಿದ್ದಳು. ಈ ಸುಳಿವಿನ ಮೇರೆಗೆ ಪೊಲೀಸರು ಒಳಗೆ ಮುಚ್ಚಿದ್ದ ನೀಲಿ ಡ್ರಮ್ ಅನ್ನು ಕತ್ತರಿಸಿ ಪರಿಶೀಲಿಸಿದಾಗ ಸೌರಭ್ ಅವರ ಅವಶೇಷಗಳು ಪತ್ತೆಯಾಗಿದ್ದು, ಎರಡು ದಿನಗಳ ಬಳಿಕ ಮುಸ್ಕಾನ್ ಹಾಗೂ ಸಾಹಿಲ್ ಅವರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಪೊಲೀಸರು ಅಂಗಡಿಯವರಿಂದ ಡ್ರಮ್, ಸಿಮೆಂಟ್, ಮರಳು ಖರೀದಿಸಿದ ರಶೀದಿಗಳು, ಕಾಲ್ ಡಿಟೇಲ್ ರೆಕಾರ್ಡ್ಸ್ (CDR) ಹಾಗೂ ಮೊಬೈಲ್ ಟವರ್ ಲೊಕೇಷನ್‌ನಂತಹ ಬಲವಾದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲೂ ಇಬ್ಬರೂ ಸೇರಿ ಚೂರಿಯಿಂದ ಇರಿದು ಹತ್ಯೆ ಮಾಡಿರುವುದು ವೈಜ್ಞಾನಿಕವಾಗಿ ದೃಢಪಟ್ಟಿತ್ತು.

     




    #crime #nation #national
    Previous Articleಮಂಗಳೂರಿನಲ್ಲಿ ಅಕ್ರಮ ಮರಳು ಸಾಗಾಟ; ಮರಳು ಸಹಿತ ಪಿಕಪ್ ವಶಕ್ಕೆ
    Next Article ಮಂಗಳೂರಿನ ಧರ್ಮಗುರು ವಿರುದ್ಧ 50ಕ್ಕೂ ಹೆಚ್ಚು ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ; ನಿಷ್ಪಕ್ಷಪಾತ ತನಿಖೆಗೆ ಆಗ್ರಹ

    Related Posts

    ‘ಲೆಹ್ರಾ ದೋ ತಿರಂಗಾ’ ರ‍್ಯಾಲಿಗೂ ಮುನ್ನ ಪೊಲೀಸ್ ಕ್ರಮ; ಸಿಜೆಪಿ ಸಂಸ್ಥಾಪಕನ ಬಂಧನ, ನೇಹಾ ಬೋರಾ ಬಿಡುಗಡೆ

    October 17, 2026

    ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

    October 17, 2026

    ಪುತ್ತೂರಿನಲ್ಲಿ ಮಹಿಳೆಯ ಮೇಲಿನ ಹಲ್ಲೆ ಪ್ರಕರಣ: ಮೊದಲ ಆರೋಪಿಗೆ 2 ವರ್ಷ ಜೈಲು, ತಲಾ ₹5,000 ದಂಡ

    October 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸುರತ್ಕಲ್ ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು

    October 17, 2026

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026

    ‘ಲೆಹ್ರಾ ದೋ ತಿರಂಗಾ’ ರ‍್ಯಾಲಿಗೂ ಮುನ್ನ ಪೊಲೀಸ್ ಕ್ರಮ; ಸಿಜೆಪಿ ಸಂಸ್ಥಾಪಕನ ಬಂಧನ, ನೇಹಾ ಬೋರಾ ಬಿಡುಗಡೆ

    October 17, 2026

    ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026

    ಗೂಗಲ್ ಮ್ಯಾಪ್ ಎಡವಟ್ಟು: ದಟ್ಟ ಕಾಡಿನಲ್ಲಿ ಸಿಲುಕಿದ 9 ಟೆಕ್ಕಿಗಳು; ಬೆಳಗ್ಗೆ ಪೊಲೀಸರಿಂದ ರಕ್ಷಣೆ

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.