Close Menu
    What's Hot

    ಹಣ ಕೊಟ್ಟರೆ ಪರೀಕ್ಷೆಯಲ್ಲಿ ಫುಲ್ ಫ್ರೀಡಂ : ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ಅಕ್ರಮದ ಆರೋಪ

    October 23, 2026

    ಹಿರಿಯ ನಾಗರಿಕನನ್ನೇ ಟಾರ್ಗೆಟ್ ಮಾಡಿದ ಸೈಬರ್ ಖದೀಮರು : ಒಂದೇ ದಿನದಲ್ಲಿ ₹2.24 ಲಕ್ಷ ಲೂಟಿ

    October 23, 2026

    ಮಂಗಳೂರು: ಫ್ಲ್ಯಾಟ್ ನೀಡದೆ ಜಾಗದ ಮಾಲೀಕರಿಗೆ ವಂಚನೆ ಆರೋಪ; ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಕೇಸ್ ದಾಖಲು

    October 23, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಹಿರಿಯ ನಾಗರಿಕನನ್ನೇ ಟಾರ್ಗೆಟ್ ಮಾಡಿದ ಸೈಬರ್ ಖದೀಮರು : ಒಂದೇ ದಿನದಲ್ಲಿ ₹2.24 ಲಕ್ಷ ಲೂಟಿ
    ಅಪರಾಧ

    ಹಿರಿಯ ನಾಗರಿಕನನ್ನೇ ಟಾರ್ಗೆಟ್ ಮಾಡಿದ ಸೈಬರ್ ಖದೀಮರು : ಒಂದೇ ದಿನದಲ್ಲಿ ₹2.24 ಲಕ್ಷ ಲೂಟಿ

    adminBy adminOctober 23, 2026No Comments1 Min Read

    ಕುಂದಾಪುರ : ಹಿರಿಯ ನಾಗರಿಕರೊಬ್ಬರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ನೀಡುವುದಾಗಿ ನಂಬಿಸಿ, ಎಪಿಕೆ ಫೈಲ್ ಡೌನ್‌ಲೋಡ್ ಮಾಡಲು ತಿಳಿಸಿ ಅವರ ಕ್ರೆಡಿಟ್ ಕಾರ್ಡ್‌ಗಳಿಂದ ಒಟ್ಟು ₹2.24 ಲಕ್ಷಕ್ಕೂ ಅಧಿಕ ಹಣವನ್ನು ಸೈಬರ್ ವಂಚಕರು ದೋಚಿಕೊಂಡಿರುವ ಘಟನೆ ವರದಿಯಾಗಿದೆ. ಕುಂದಾಪುರ ನಿವಾಸಿ ಶೇಖರ (68) ಎಂಬುವವರೇ ಈ ಸೈಬರ್ ವಂಚನೆಗೆ ಒಳಗಾದ ಹಿರಿಯ ನಾಗರಿಕರು.

    ಅಕ್ಟೋಬರ್ 21ರಂದು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಶೇಖರ ಅವರ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ. “ನೀವು ಹಿರಿಯ ನಾಗರಿಕರಾಗಿರುವುದರಿಂದ ನಿಮಗೆ ಪಿಎನ್‌ಬಿ ಬ್ಯಾಂಕ್‌ನಿಂದ ಕ್ರೆಡಿಟ್ ಕಾರ್ಡ್ ನೀಡಲಾಗುತ್ತಿದೆ” ಎಂದು ನಂಬಿಸಿ ಅವರ ವೈಯಕ್ತಿಕ ಹಾಗೂ ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದುಕೊಂಡಿದ್ದಾನೆ. ಬಳಿಕ PNB CREDIT CARD.apk ಫೈಲ್ ಅನ್ನು ಕಳುಹಿಸಿ, ಬ್ಯಾಂಕ್ ಆಫ್ ಬರೋಡಾಕ್ಕೆ ಸಂಬಂಧಿಸಿದ ವಿವರಗಳನ್ನೂ ಕೇಳಿ ಪಡೆದಿದ್ದಾನೆ.

    ಅದೇ ದಿನ ಸಂಜೆ 4:00 ಗಂಟೆಗೆ ಪಿರ್ಯಾದಿದಾರರು ತಮ್ಮ ಮೊಬೈಲ್ ಇನ್‌ಬಾಕ್ಸ್ ಪರಿಶೀಲಿಸಿದಾಗ, ಒಟಿಪಿ (OTP) ಶೇರ್ ಆಗಿರುವುದು ಬೆಳಕಿಗೆ ಬಂದಿದೆ. ವಂಚಕರು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ನಿಂದ ₹1,30,490, ₹22,167, ₹10,000 ಹಾಗೂ ಆರ್‌ಬಿಎಲ್ (RBL) ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ₹3,468.34, ₹20,000 ಮತ್ತು ₹37,999 ಸೇರಿದಂತೆ ಒಟ್ಟು ₹2,24,124.34 ಹಣವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ.

    ಈ ಕುರಿತು ಸಂತ್ರಸ್ತ ಶೇಖರ ಅವರು ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2026, ಕಲಂ 66(C), 66(D) ಐಟಿ ಕಾಯ್ದೆ (IT Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸೈಬರ್ ಅಪರಾಧಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




    #crime #kundapura
    Previous Articleಮಂಗಳೂರು: ಫ್ಲ್ಯಾಟ್ ನೀಡದೆ ಜಾಗದ ಮಾಲೀಕರಿಗೆ ವಂಚನೆ ಆರೋಪ; ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಕೇಸ್ ದಾಖಲು
    Next Article ಹಣ ಕೊಟ್ಟರೆ ಪರೀಕ್ಷೆಯಲ್ಲಿ ಫುಲ್ ಫ್ರೀಡಂ : ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ಅಕ್ರಮದ ಆರೋಪ

    Related Posts

    ಹಣ ಕೊಟ್ಟರೆ ಪರೀಕ್ಷೆಯಲ್ಲಿ ಫುಲ್ ಫ್ರೀಡಂ : ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ಅಕ್ರಮದ ಆರೋಪ

    October 23, 2026

    ಮಂಗಳೂರು: ಫ್ಲ್ಯಾಟ್ ನೀಡದೆ ಜಾಗದ ಮಾಲೀಕರಿಗೆ ವಂಚನೆ ಆರೋಪ; ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಕೇಸ್ ದಾಖಲು

    October 23, 2026

    ಕುತ್ತಿಗೆಗೆ ಸುತ್ತಿಕೊಂಡ ಗಾಳಿಪಟದ ಮಾರಕ ಮಾಂಜಾ ದಾರ : ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಸಾವು

    October 23, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಹಣ ಕೊಟ್ಟರೆ ಪರೀಕ್ಷೆಯಲ್ಲಿ ಫುಲ್ ಫ್ರೀಡಂ : ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ಅಕ್ರಮದ ಆರೋಪ

    October 23, 2026

    ಹಿರಿಯ ನಾಗರಿಕನನ್ನೇ ಟಾರ್ಗೆಟ್ ಮಾಡಿದ ಸೈಬರ್ ಖದೀಮರು : ಒಂದೇ ದಿನದಲ್ಲಿ ₹2.24 ಲಕ್ಷ ಲೂಟಿ

    October 23, 2026

    ಮಂಗಳೂರು: ಫ್ಲ್ಯಾಟ್ ನೀಡದೆ ಜಾಗದ ಮಾಲೀಕರಿಗೆ ವಂಚನೆ ಆರೋಪ; ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಕೇಸ್ ದಾಖಲು

    October 23, 2026

    ಕುತ್ತಿಗೆಗೆ ಸುತ್ತಿಕೊಂಡ ಗಾಳಿಪಟದ ಮಾರಕ ಮಾಂಜಾ ದಾರ : ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಸಾವು

    October 23, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಣ ಕೊಟ್ಟರೆ ಪರೀಕ್ಷೆಯಲ್ಲಿ ಫುಲ್ ಫ್ರೀಡಂ : ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ಅಕ್ರಮದ ಆರೋಪ

    October 23, 2026

    ಕುತ್ತಿಗೆಗೆ ಸುತ್ತಿಕೊಂಡ ಗಾಳಿಪಟದ ಮಾರಕ ಮಾಂಜಾ ದಾರ : ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಸಾವು

    October 23, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.