Author: admin

ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಆಡಳಿತವು ವಿದೇಶಿ ಆಮದುಗಳ ಮೇಲೆ ವಿಧಿಸಿದ್ದ ಹೆಚ್ಚುವರಿ ಆಮದು ಸುಂಕಗಳನ್ನು  ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ, ಯುಎಸ್ ಸರ್ಕಾರವು ಕಂಪನಿಗಳಿಗೆ 100 ಶತಕೋಟಿ ಡಾಲರ್ ಮರುಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಅಮೆರಿಕ ಸುಪ್ರೀಂ ಕೋರ್ಟ್ ಟ್ರಂಪ್ ಅವರ ಸುಂಕ ನೀತಿಯನ್ನು ‘ಕಾನೂನುಬಾಹಿರ’ ಎಂದು ಘೋಷಿಸಿದ್ದು, ಒಟ್ಟು 166 ಬಿಲಿಯನ್ ಡಾಲರ್ ಧನಸಹಾಯ ಮತ್ತು ಮರುಪಾವತಿ ನೀಡುವಂತೆ ಆದೇಶಿಸಿದೆ. ಜುಲೈ ಅಂತ್ಯದ ವೇಳೆಗೆ ಮೊದಲ ಕಂತಿನ ಮರುಪಾವತಿ ಕಂಪನಿಗಳ ಬ್ಯಾಂಕ್ ಖಾತೆಗಳನ್ನು ತಲುಪಿದೆ. ಆಪಲ್ ಮತ್ತು ಅಮೆಜಾನ್‌ಗೆ ಬಿಲಿಯನ್‌ಗಟ್ಟಲೆ ಮರುಪಾವತಿ: ಟೆಕ್ ದೈತ್ಯ ಆಪಲ್ 2.2 ಬಿಲಿಯನ್ ಡಾಲರ್ ಹಾಗೂ ಅಮೆಜಾನ್ 600 ಮಿಲಿಯನ್ ಡಾಲರ್ ಮರುಪಾವತಿ ಪಡೆದಿವೆ. ಅಮೆಜಾನ್ ಈ ಹಣವನ್ನು ಗ್ರಾಹಕರಿಗೆ ಹಿಂತಿರುಗಿಸುವುದಾಗಿ ಹೇಳಿದ್ದರೆ, ಆಪಲ್ ಅಮೆರಿಕದಲ್ಲೇ ಉತ್ಪಾದನೆ ವಿಸ್ತರಿಸಲು ಬಳಸುವುದಾಗಿ ತಿಳಿಸಿದೆ. ವಾಲ್ಮಾರ್ಟ್ ಕಾಸ್ಟ್ಕೊ  ಹಾಗೂ ಪೆಪ್ಸಿ  ಕಂಪನಿಗಳು ಈ ಮರುಪಾವತಿ ಹಣದಿಂದ ಉತ್ಪನ್ನಗಳ ಬೆಲೆಗಳನ್ನು ಇಳಿಕೆ ಮಾಡಲು ಹಾಗೂ ಹೆಚ್ಚುತ್ತಿರುವ ಉತ್ಪಾದನಾ…

Read More

ಕಾರ್ಕಳ: ರೆಂಜಾಳ ಗ್ರಾಮದ ಹೆಡ್ಮೆ ಪ್ರದೇಶದಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬುಧವಾರ ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ, ಬೆಂಗಳೂರಿನ ವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹರಿಪ್ರಸಾದ್‌, ಸುಮಿತ್ರಾ ಅವರ ಮನೆಯ ಸಮೀಪ ಗುಡ್ಡದ ಒಂದು ಭಾಗ ಕುಸಿದಿದ್ದು, ಮನೆಗೂ ಅಪಾಯ ಎದುರಾಗಿರುವ ಕಾರಣ ಜಿಲ್ಲಾಡಳಿತ ಈಗಾಗಲೇ ಕುಟುಂಬ ವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಮತ್ತಷ್ಟು ಭೂಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ. ಕೆ. ಅವರ ನಿರ್ದೇಶನದಂತೆ ಜಿಎಸ್‌ಐ ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿತ್ತು. ವಿಜ್ಞಾನಿಗಳ ತಂಡ ಸ್ಥಳದಲ್ಲಿ ಗುಡ್ಡದ ಇಳಿಜಾರು, ಮಣ್ಣಿನ ರಚನೆ, ಬಂಡೆಗಳ ಸ್ಥಿರತೆ, ಮಳೆ ನೀರಿನ ಹರಿವಿನ ದಿಕ್ಕು, ಭೂಮಿಯಲ್ಲಿ ಉಂಟಾಗಿರುವ ಬಿರುಕುಗಳು ಹಾಗೂ ಮುಂದಿನ ದಿನಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಗಳ ಕುರಿತು ತಾಂತ್ರಿಕವಾಗಿ ಪರಿಶೀಲನೆ ನಡೆಸಿತು. ಸ್ಥಳದ ವಿವಿಧ ಭಾಗಗಳಲ್ಲಿ ಮಾಹಿತಿ ಸಂಗ್ರಹಿಸಿ, ಮುಂದಿನ ಸುರಕ್ಷ ಕ್ರಮಗಳಿಗೆ ಅಗತ್ಯವಾಗುವ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು ಎಂದು ವಿಜ್ಞಾನಿಗಳ ತಂಡ ಮಾಹಿತಿ ನೀಡಿದೆ. ಪರಿಶೀಲನೆ…

Read More

ಮಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಮೋಸ್ಟ್‌ ವಾಂಟೆಡ್ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್.ನನ್ನು ಕೇರಳದ ಕೊಚ್ಚಿಯಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಎನ್‌ಐಎ ಮಾಹಿತಿ ಪ್ರಕಾರ, ಉಮ್ಮರ್ ಫಾರೂಕ್ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು. ಆತನ ಬಂಧನಕ್ಕೆ ರೂ. 4 ಲಕ್ಷ ಬಹುಮಾನವನ್ನೂ ಘೋಷಿಸಲಾಗಿತ್ತು. ತನಿಖೆ ಪ್ರಕಾರ, ಉಮ್ಮರ್ ಫಾರೂಕ್ ನಿಷೇಧಿತ ಪಿಎಫ್‌ಐ ಸಂಘಟನೆಯ ಕಚೇರಿಯಲ್ಲಿ ನಡೆದ ಸಂಚು ಸಭೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಅಲ್ಲದೆ, ಪ್ರವೀಣ್ ನೆಟ್ಟಾರು ಹತ್ಯೆಗೆ ಬಳಸಲಾದ ಆರೋಪಿಗಳಿಗೆ ಬೈಕ್ ಒದಗಿಸಿದ್ದ ಆರೋಪವೂ ಆತನ ಮೇಲಿದೆ. ಹತ್ಯೆ ಬಳಿಕ ಪ್ರಮುಖ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿರುವುದು ಹಾಗೂ ಪ್ರಕರಣದ ಸಾಕ್ಷಿದಾರನ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಭಾಗಿಯಾಗಿರುವ ಆರೋಪವನ್ನು ಎನ್‌ಐಎ ತನಿಖೆ ಉಲ್ಲೇಖಿಸಿದೆ.…

Read More

ಮಂಗಳೂರು: ಕಿರಿಯ ವಿದ್ಯಾರ್ಥಿಗಳ ಮೇಲೆ ‘ಡ್ರೆಸ್ ಕೋಡ್’ ಹೇರಲು ಯತ್ನಿಸಿ, ಶೂ ಧರಿಸಿದ್ದಕ್ಕಾಗಿ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ರ‍್ಯಾಗಿಂಗ್ ಎಸಗಿದ್ದ ದ್ವಿತೀಯ ವರ್ಷದ ಐವರು ವಿದ್ಯಾರ್ಥಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ನಗರದ ಗುಜ್ಜರಕೆರೆಯ ಚಹಾ ಅಂಗಡಿಯೊಂದರ ಬಳಿ ಈ ಘಟನೆ ನಡೆದಿದೆ. ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳು ಶೂ ಧರಿಸಿ ಬಂದಿದ್ದರೆಂಬ ಕಾರಣಕ್ಕೆ ಅದೇ ಕಾಲೇಜಿನ ದ್ವಿತೀಯ ವರ್ಷದ ಆರು ಮಂದಿ ವಿದ್ಯಾರ್ಥಿಗಳ ಗುಂಪು ಅವರ ಮೇಲೆ ಏಕಾಏಕಿ ದಾಳಿ ನಡೆಸಿ ಹಲ್ಲೆ ನಡೆಸಿದೆ. ಬಂಧಿತರು ಹಾಗೂ ಗಾಯಾಳುಗಳಿಬ್ಬರೂ ಮೂಲತಃ ಕೇರಳ ರಾಜ್ಯದ ವಿದ್ಯಾರ್ಥಿಗಳಾಗಿದ್ದು, ಗಾಯಗೊಂಡ ಜೂನಿಯರ್‌ ವಿಧ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, “ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಡ್ರೆಸ್‌ ಕೋಡ್‌ ಹೇರಲು ಯತ್ನಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಹಲ್ಲೆಯಲ್ಲಿ ಪಾಲ್ಗೊಂಡ ಆರು ಮಂದಿಯ ಪೈಕಿ…

Read More

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿ ದರ್ಶನ್‌ಗೆ ಅತಿದೊಡ್ಡ ಸಂಕಷ್ಟ ಎದುರಾಗಿದೆ. ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಎ-14 ಪ್ರದೋಷ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ನಾನು ಸತ್ಯವನ್ನೇ ಹೇಳುತ್ತೇನೆ.. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಆರೋಪಿ ಪ್ರದೋಷ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಇಂದು ಮಧ್ಯಾಹ್ನ 12 ಗಂಟೆಗೆ ನ್ಯಾಯಾಧೀಶರ ಮುಂದೆ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆರೋಪಿಯನ್ನು ವಿಚಾರಣೆಗೆ ಹಾಜರುಪಡಿಸಲಾಗುವುದು. ನ್ಯಾಯಾಧೀಶರ ಮುಂದೆ ಹಾಜರಾಗಿ ಪ್ರಕರಣದಲ್ಲಿ ಘಟನಾವಳಿಗಳ ಬಗ್ಗೆ ಆರೋಪಿ ಹೇಳಲಿದ್ದಾನೆ. ಈ ಹಿಂದೆ ವಿನಯ್ ಕುಲಕರ್ಣಿ ಪ್ರಕರಣದಲ್ಲಿ ಬಸವರಾಜ್ ಮುತ್ತಗಿ ಮಾಫಿ ಸಾಕ್ಷಿಯಾಗಿದ್ದ. ಹೀಗಾಗಿ, ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಆಗಿತ್ತು. ಈಗ ದರ್ಶನ್ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಿದ್ದಾನೆ. ಸ್ಟೋನಿ ಬ್ರೂಕ್‌ನಿಂದ ಬಂದ ದರ್ಶನ್ ಜೊತೆ ಪ್ರದೋಷ್ ಶೆಡ್‌ಗೆ ಹೋಗಿದ್ದ.‌ ಹಲ್ಲೆ ಮಾಡುವಾಗ ಸ್ಥಳದಲ್ಲಿಯೇ ಆರೋಪಿ ಇದ್ದ. ರೇಣುಕಾಸ್ವಾಮಿಯು ʼಹೊಡೆಯೋದು ಸಾಕು ನಿಲ್ಲಿಸಿ ಸತ್ತು ಹೋಗ್ತಾನೆ ಎಂದಿದ್ದʼ( ಪೊಲೀಸರ ಹೇಳಿಕೆಯಲ್ಲಿ…

Read More

ಸುಳ್ಯದ ಸೂರ್ತಿಲದಲ್ಲಿ ವಿವಾಹಿತ ಮಹಿಳೆಯೋರ್ವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಪೀಡಿಸಿದ ಆರೋಪದಲ್ಲಿ ಆಟೋ ಚಾಲಕ ಗೋಪಾಲಕೃಷ್ಣ ಜಯನಗರ ಎಂಬವರ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ತನಿಖೆ ಮತ್ತು ಸ್ಥಳ ಮಹಜರು ನಡೆಸಿದ ಬಳಿಕ ಸುಳ್ಯ ಪೊಲೀಸರು ಆರೋಪಿ ಗೋಪಾಲಕೃಷ್ಣರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು ಸುಳ್ಯ ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ‘ನಾನು ಹಾವೇರಿ ಜಿಲ್ಲೆಯವಳಾಗಿದ್ದು, ಸುಳ್ಯದ ಸೂರ್ತಿಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ನಾನು ಬಾಣಂತಿಯರನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಗೋಪಾಲಕೃಷ್ಣರ ಪರಿಚಯವಾಗಿದೆ. ಬಳಿಕ ಆತ ನನ್ನೊಂದಿಗೆ ಸಲುಗೆಯಾಗಿ ವರ್ತಿಸುತ್ತಿದ್ದ. 2025ನೇ ಜೂನ್ ತಿಂಗಳಲ್ಲಿ ಆತನ ಮನೆಗೆ ಬರುವಂತೆ ಒತ್ತಾಯಿಸಿ ಬಳಿಕ ನನ್ನನ್ನು ಆತನ ಮನೆಗೆ ಕರೆದೊಯ್ದು ಮದ್ಯವನ್ನು ಸೇವನೆ ಮಾಡಿಸಿ ಬಲಾತ್ಕಾರವಾಗಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆ ಘಟನೆಯನ್ನು ಆತ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಬಳಿಕ ಆಗಾಗ ನನಗೆ ಫೋನ್…

Read More

ಸುರತ್ಕಲ್: ವಾಲಿಬಾಲ್ ಆಡುತ್ತಿದ್ದ ಬಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಸೂರಿಂಜೆಯಲ್ಲಿ ಆ.5ರ ಬುಧವಾರ ಸಂಭವಿಸಿದೆ. ಮಾಧವ ಅಮೀನ್ ಅವರ ಪುತ್ರ ಲಿಖಿತ್ ಅಮೀನ್ (15) ಮೃತ ಬಾಲಕ. ಈತ ಸೂರಿಂಜೆ ಕೋಟೆ ಬೋಳ್ಳಾರು ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಸ್ನೇಹಿತರೊಂದಿಗೆ ಸೂರಿಂಜೆ ಮೈದಾನದಲ್ಲಿ ಆಡುತ್ತಿದ್ದ ವೇಳೆ ಕುಸಿದು ಬಿದ್ದಾಗ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಎನ್ನಲಾಗಿದೆ.

Read More

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸುಮಾರು ಐದು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಬೆಂಗಳೂರು ನಿವಾಸಿ ಮೂರ್ತಿ ಅಲಿಯಾಸ್ ಪಿಂಟು (37) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 64/2017ರಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 395, 397 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಸುಮಾರು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದರಿಂದ ನ್ಯಾಯಾಲಯವು ಆತನ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ವಾರಂಟ್ ಆಧರಿಸಿ ಕಾರ್ಯಾಚರಣೆ ನಡೆಸಿದ ಧರ್ಮಸ್ಥಳ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವೃಷಭ ಮತ್ತು ಚರಣ್ ರಾಜ್ ಅವರು ಬೆಂಗಳೂರಿನಲ್ಲಿ ಆರೋಪಿಯ ಸುಳಿವು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತನನ್ನು ಆಗಸ್ಟ್ 5ರಂದು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Read More

ಕಾಸರಗೋಡು: ಉಪ್ಪಳದ ಕೊಂಡೆವೂರಿನ ನಿವಾಸಿ ಹಾಗೂ ಬಿಜೆಪಿ ಕಾರ್ಯಕರ್ತ ಸಂದೀಪ್ ಶೆಟ್ಟಿ ಅಲಿಯಾಸ್ ಅಣ್ಣು (44) ಅವರ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಕೆಲಸಕ್ಕೆ ತೆರಳಿದ್ದ ಸಂದೀಪ್ ಶೆಟ್ಟಿ ಅವರು ನಾಪತ್ತೆಯಾಗಿದ್ದ ಹಿನ್ನೆಲೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅವರು ಉಪ್ಪಳದ ಶಾರದಾ ನಗರದಲ್ಲಿರುವ ಸೋಡಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಎಂದಿನಂತೆ ಸೋಡಾ ಕಾರ್ಖಾನೆಗೆ ಕೆಲಸಕ್ಕೆ ತೆರಳಿದ್ದ ಸಂದೀಪ್ ಶೆಟ್ಟಿ ಮನೆಗೆ ಮರಳಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಮನೆಯ ತೋಟದಲ್ಲಿರುವ ಕೆರೆಯ ಸಮೀಪ ಅವರ ಅಂಗಿ ಪತ್ತೆಯಾಗಿದ್ದು, ಅವರು ಕೆರೆಗೆ ಬಿದ್ದಿರಬಹುದೆಂಬ ಅನುಮಾನ ವ್ಯಕ್ತವಾಗಿತ್ತು. ಮಾಹಿತಿ ತಿಳಿದ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಸಂದೀಪ್ ಅವರ ಮೃತದೇಹವನ್ನು ಹೊರತೆಗೆದರು. ಕೆರೆಯಲ್ಲಿ ಅಳವಡಿಸಿದ್ದ ಮೋಟಾರ್ ಪಂಪ್‌ನ ಫುಟ್ ವಾಲ್ವ್ ದುರಸ್ತಿ ಮಾಡಲು ಪ್ರಯತ್ನಿಸುವಾಗ ಆಕಸ್ಮಿಕವಾಗಿ…

Read More

ಹರಿಯಾಣ: ಇಡೀ ದೇಶವನ್ನೇ ನಡುಗಿಸಿದ ಫರಿದಾಬಾದ್‌ನ 28 ವರ್ಷದ ಶಿಕ್ಷಕಿ ಸಂಧ್ಯಾ ಶರ್ಮಾ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಘಾತಕಾರಿ ಸತ್ಯಗಳನ್ನು ಹೊರಹಾಕಿದ್ದಾರೆ. ಆರೋಪಿ 21 ವರ್ಷದ ಅಮಿತ್, ಸುಮಾರು ಎರಡು ತಿಂಗಳ ಮೊದಲೇ ಈ ಕೊಲೆಗೆ ಸಂಚು ರೂಪಿಸಿ, ವಿಶೇಷವಾಗಿ ಚಾಕುವನ್ನು ಖರೀದಿಸಿ ಕೃತ್ಯ ಎಸಗಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಸಿಕ್ರೋನಾ ಗ್ರಾಮದ ಶಾಲೆಯಲ್ಲಿ ಸೋಮವಾರ ಬೆಳಿಗ್ಗೆ 9:30 ರ ಸುಮಾರಿಗೆ ಬಂದ ಆರೋಪಿ ಅಮಿತ್, ತಾನು ಸಂಧ್ಯಾ ಅವರ ಪತಿಯ ಕಡೆಯವನೆಂದು ಸುಳ್ಳು ಹೇಳಿ, ಗಂಡನ ಹೆಸರು ಪ್ರಸ್ತಾಪಿಸಿ ಆಕೆಯನ್ನು ತರಗತಿಯಿಂದ ಹೊರಗೆ ಕರೆಸಿದ್ದ. ಸಂಧ್ಯಾ ಕೊಠಡಿಯಿಂದ ಹೊರಗೆ ಬಂದ ತಕ್ಷಣ ಆಕೆಯ ಕೂದಲನ್ನು ಹಿಡಿದು ಕುತ್ತಿಗೆ ಹಾಗೂ ಎದೆಗೆ ಸತತ 27ಕ್ಕೂ ಹೆಚ್ಚು ಬಾರಿ ಇರಿದು ಸ್ಥಳದಲ್ಲೇ ಭೀಕರವಾಗಿ ಹತ್ಯೆ ಮಾಡಿದ್ದ. “ಚಾಕು ಬಾಗುವಷ್ಟರ ಮಟ್ಟಿಗೆ ಆರೋಪಿ ಕೋಪದಿಂದ ದಾಳಿ ನಡೆಸಿದ್ದ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಯ ವೇಳೆ ಆರೋಪಿ ಅಮಿತ್,…

Read More