Author: admin
ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ ಕೊಡಿಯಾಲ್ಬೈಲ್ ನಲ್ಲಿ ಆಷಾಢ ಮಾಸದ ವಿಶೇಷ ಅನ್ನಪ್ರಸಾದ ಸೇವೆ ; 14 ಬಗೆಯ ವಿಶೇಷ ಔತಣ
ಮಂಗಳೂರು: ಆಟಿ ತಿಂಗಳ ಅಂಗವಾಗಿ ಕೊಡಿಯಾಲ್‌ಬೈಲ್‌ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ಆಷಾಢ ಮಾಸದ ವಿಶೇಷ ಅನ್ನಪ್ರಸಾದ ಸೇವೆಯನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು. ಈ ವಿಶೇಷ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಆಟಿ ತಿಂಗಳ ಸಾಂಪ್ರದಾಯಿಕ 14 ಬಗೆಯ ವಿಶೇಷ ಔತಣವನ್ನು ಭಕ್ತರಿಗೆ ಪ್ರೀತಿಪೂರ್ವಕವಾಗಿ ಉಣಬಡಿಸಲಾಯಿತು. ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ಒಳಗೊಂಡ ಅನ್ನಪ್ರಸಾದವನ್ನು ಸಾವಿರಾರು ಭಕ್ತರು ಸವಿದು ಪ್ರಸಾದ ಸ್ವೀಕರಿಸಿದರು. ಸುಮಾರು 6,500ಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸೇವೆಯಲ್ಲಿ ಭಾಗವಹಿಸಿದ್ದು, ಕ್ಷೇತ್ರದಲ್ಲಿ ಭಕ್ತರ ಸಂಭ್ರಮ ಹಾಗೂ ಭಕ್ತಿಭಾವದ ವಾತಾವರಣ ಕಂಡುಬಂತು. ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆಯನ್ನು ಭಗವತಿ ತೀಯಾ ಸೇವಾ ಸಂಘ ಹಾಗೂ 13 ಗ್ರಾಮದವರ ಸಹಯೋಗದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ಅನ್ನಪ್ರಸಾದ ವಿತರಣೆ, ಭಕ್ತರ ವ್ಯವಸ್ಥೆ ಹಾಗೂ ಇತರೆ ಅಗತ್ಯ ಸೌಲಭ್ಯಗಳನ್ನು ಸುಸೂತ್ರವಾಗಿ ಕಲ್ಪಿಸಲಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ನವದೆಹಲಿ: ಇಎಂಐ ಪಾವತಿ ತಡವಾದರೆ ಬ್ಯಾಂಕ್ ಅಥವಾ ರಿಕವರಿ ಏಜೆಂಟ್‌ಗಳು ಗ್ರಾಹಕರಿಗೆ ರಾತ್ರಿ ಕರೆ ಮಾಡೋ ಹಾಗಿಲ್ಲ. ಸಾಲ ವಸೂಲಾತಿ ವೇಳೆ ಗ್ರಾಹಕರಿಗೆ ಕಿರುಕುಳ ಆಗದಂತೆ ಬ್ಯಾಂಕ್‌ಗಳು ಮತ್ತು ನಿಯಂತ್ರಿತ ಸಾಲದಾತರು ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು ಎಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ನಿಯಮ ಜಾರಿಗೊಳಿಸಲಿದೆ. ಈ ನಿಯಮ 2027 ಜನವರಿ 1ರಿಂದ ಜಾರಿಗೆ ಬರಲಿವೆ. ಹೊಸ ನಿಯಮದ ಪ್ರಕಾರ, ಬ್ಯಾಂಕ್‌ಗಳು ಮತ್ತು ರಿಕವರಿ ಏಜೆಂಟ್‌ಗಳು ಸಾಮಾನ್ಯವಾಗಿ ಬೆಳಗ್ಗೆ 8 ರಿಂದ ಸಂಜೆ 7 ರವರೆಗೆ ಮಾತ್ರ ಸಾಲಗಾರರನ್ನು ಸಂಪರ್ಕಿಸಬೇಕು. ಈ ಸಮಯ ಹೊರತುಪಡಿಸಿ ಕರೆ ಅಥವಾ ಭೇಟಿ ಮಾಡಬೇಕಾದರೆ ಸಾಲಗಾರರ ಮನವಿ ಅಥವಾ ಅನುಮತಿ ಇರಬೇಕು. ಅಷ್ಟೇ ಅಲ್ಲ, ಬೆದರಿಕೆ, ನಿಂದನೀಯ ಮಾತು, ಅವಮಾನ ಮಾಡುವ ರೀತಿಯ ಭಾಷೆ ಬಳಸುವಂತಿಲ್ಲ. ಅನಾಮಧೇಯವಾಗಿ ಕರೆ ಮಾಡಿ ಹೆದರಿಸುವುದು, ಪದೇ ಪದೇ ಕರೆ ಮಾಡುವುದು ಅಥವಾ ಆಸ್ತಿ ಜಪ್ತಿ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುವುದಕ್ಕೂ ಅವಕಾಶವಿಲ್ಲ. ಸಾಲಗಾರರ ಫೋಟೋ, ವಿಡಿಯೋ ಅಥವಾ ವೈಯಕ್ತಿಕ ಮಾಹಿತಿಯನ್ನು…
ಬೆಂಗಳೂರು: ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳಿಗೆ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು ಶುಕ್ರವಾರ ಶಾಕ್ ನೀಡಿದ್ದಾರೆ. ಆಹಾರದ ಗುಣಮಟ್ಟ, ಸಂಸ್ಕರಣೆ ಮತ್ತು ಸ್ವಚ್ಛತೆ ಪರಿಶೀಲನೆಗಾಗಿ 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ವಿವಿಧ ಪಂಚತಾರಾ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಕೆಲ ಹೋಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ತರಕಾರಿಗಳು, ಕೊಳೆತ ಈರುಳ್ಳಿ ಹಾಗೂ ಆಲೂಗಡ್ಡೆ ಪತ್ತೆಯಾಗಿವೆ. ಆರೋಗ್ಯ ಸಚಿವ ಯುಟಿ ಖಾದರ್ ಸೂಚನೆ ಮೇರೆಗೆ ಕ್ರಮ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆ ಮೇರೆಗೆ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು ಬೆಂಗಳೂರಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ನಗರದ ಪಂಚತಾರಾ ಹೋಟೆಲ್‌ಗಳಿಗೆ ತೆರಳಿ ಆಹಾರದ ಗುಣಮಟ್ಟ, ಅಡುಗೆ ಪ್ರಕ್ರಿಯೆ, ಸ್ವಚ್ಛತೆ ಹಾಗೂ ಆಹಾರ ಸಂಗ್ರಹಣಾ ವ್ಯವಸ್ಥೆಯನ್ನು ಪರಿಶೀಲಿಸಿದೆ. ಶಾಂಗ್ರೀಲಾ ಹೋಟೆಲ್‌ನಲ್ಲಿ ಕಳಪೆ ತರಕಾರಿ ಪತ್ತೆ ಶಾಂಗ್ರೀಲಾ ಹೋಟೆಲ್‌ನಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಅಡುಗೆ ಕೋಣೆಯಲ್ಲಿನ ಕೆಲ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ. ಪರಿಶೀಲನೆ ವೇಳೆ…
ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ ಜೊತೆ ನಡೆದ ಸುದೀರ್ಘ ಮನವೊಲಿಕೆಯ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಆಗಸ್ಟ್ 14 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ತೀರ್ಮಾನಿಸಿದ್ದರು. ಈಗ ಯಾವುದೇ ಒತ್ತಡವಿಲ್ಲದೆ, ಸಂಪೂರ್ಣ ಸ್ವಇಚ್ಛೆಯಿಂದಲೇ ತಾವು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೊರಟ್ಟಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ನೂತನ ಸಭಾಪತಿ ಆಯ್ಕೆಯಾಗುವವರೆಗೆ ಬಸವರಾಜ ಹೊರಟ್ಟಿ ಅವರೇ ಹಂಗಾಮಿ ಸಭಾಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮೇಲ್ಮನೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಬಲ ಹೆಚ್ಚಿರುವುದರಿಂದ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್, ಉಪ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರ ಹೆಸರನ್ನು ಕಾಂಗ್ರೆಸ್ ವರಿಷ್ಠರು ಈಗಾಗಲೇ ಅಂತಿಮಗೊಳಿಸಿದ್ದಾರೆ.
ಅಯೋಧ್ಯೆ: ಅಯೋಧ್ಯೆ ಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಬೃಹತ್ ಮಟ್ಟದ ಆರ್ಥಿಕ ಅಕ್ರಮ ಅಥವಾ ದೇಣಿಗೆ ಹಗರಣ ನಡೆದಿದೆ ಎಂಬ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಎಂದು ಸರ್ಕಾರಿ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಭಕ್ತರು ನೀಡಿದ 3,300 ಕೋಟಿ ರೂ. ದೇಣಿಗೆ ಹಣದ ಪ್ರತಿಯೊಂದು ಪೈಸೆಯೂ ಸುರಕ್ಷಿತವಾಗಿದ್ದು, ಸಂಪೂರ್ಣವಾಗಿ ಲೆಕ್ಕಪರಿಶೋಧನೆಗೊಳಪಟ್ಟಿದೆ ಎಂದು ತಿಳಿಸಲಾಗಿದೆ. ಟ್ರಸ್ಟ್‌ನ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಬದಲಿಗೆ ಹುಂಡಿಯಲ್ಲಿರುವ ನಗದು ಎಣಿಕೆ ಮಾಡುವ ಸಂದರ್ಭದಲ್ಲಿ ನಡೆದ ಪ್ರತ್ಯೇಕ ಕಳ್ಳತನ ಇದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಾರ್ವಜನಿಕರಿಂದ ಹರಿದುಬಂದಿರುವ 3,300 ಕೋಟಿ ರೂ. ದೇಣಿಗೆಯನ್ನು ‘ಮೆಸರ್ಸ್ ವಿ. ಶಂಕರ್ ಅಯ್ಯರ್ ಆ್ಯಂಡ್ ಕಂಪನಿ’ ಎಂಬ ಸ್ವತಂತ್ರ ಬಾಹ್ಯ ಆಡಿಟರ್ಸ್ ಸಂಸ್ಥೆಯು ಸಂಪೂರ್ಣವಾಗಿ ತಪಾಸಣೆ ಮಾಡಿದೆ. ದೇವಾಲಯ ನಿರ್ಮಾಣಕ್ಕಾಗಿ ಸುಮಾರು1,800 ಕೋಟಿ ರೂ. ಹಾಗೂ ಭೂ ಖರೀದಿಗಾಗಿ 400 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರತಿಯೊಂದು ವಹಿವಾಟನ್ನೂ…
ಸುಳ್ಯ:ಚೆಂಬು ಅರಣ್ಯ ವ್ಯಾಪ್ತಿಯಲ್ಲಿ ಕಾಡು ಪ್ರಾಣಿ ಯನ್ನು ಬೇಟೆಯಾಡಿ ಮಾಂಸ ಮಾಡಿದ ಆರೋಪದ ಮೇಲೆ ಕೊಡಗು ಕೊಯನಾಡು ಅರಣ್ಯ ಅಧಿಕಾರಿಗಳು ಬುಧವಾರ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಚೆಂಬುವಿನ ಗೌತಮ್, ಪೆರಾಜೆಯ ಶರತ್ ಮತ್ತು ಕಾಡುಪಂಜದ ಯತಿನ್ ಎಂದು ಗುರುತಿಸಲಾಗಿದೆ. ಅರಣ್ಯ ಅಧಿಕಾರಿಗಳ ಪ್ರಕಾರ, ಕೊಡಗು ಅರಣ್ಯ ವ್ಯಾಪ್ತಿಗೆ ಬರುವ ಚೆಂಬು ಕಾಡಿನ ಕಾಡುಪಂಜದಲ್ಲಿ ಆರೋಪಿಗಳು ಬಂದೂಕಿನಿಂದ ಕಾಡುಹಂದಿಯನ್ನು ಬೇಟೆಯಾಡಿ ಕೊಂದಿದ್ದಾರೆ. ನಂತರ ಅವರು ಮಾಂಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ಕೆಎ -12 ನೋಂದಾಯಿತ ಮಾರುತಿ ಇಕೊ ಕಾರಿನಲ್ಲಿ ಕಲ್ಲುಗುಂಡಿ ಬಳಿಯ ಕೈಪಡ್ಕ್‌ಗೆ ಸಾಗಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ವಾಹನವನ್ನು ತಡೆದು ಕಾಡುಹಂದಿ ಮಾಂಸ, ಅಪರಾಧಕ್ಕೆ ಬಳಸಿದ ಬಂದೂಕು ಮತ್ತು ಕಾರನ್ನು ವಶಪಡಿಸಿಕೊಂಡರು. ಗೌತಮ್ ಮತ್ತು ಶರತ್ ಅವರನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿ ಕಾಡುಪಂಜದ ಯಾತಿನ್ ತಲೆಮರೆಸಿಕೊಂಡಿದ್ದಾನೆ. ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್)…
ಶಾ ಆಲಂ: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಕಳೆದ ಕೆಲವು ತಿಂಗಳುಗಳಿಂದ ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ, ತನ್ನ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎಂಬ ಭೀತಿಯಲ್ಲಿದ್ದಳು. ಆದರೆ, ತನ್ನ ಮನೆಯ ಹೊರಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆಕೆಗೆ ಎದುರಾದ ಸತ್ಯ ಆಘಾತಕಾರಿ ಮಾತ್ರವಲ್ಲ, ಅತ್ಯಂತ ವಿಚಿತ್ರವಾಗಿತ್ತು. ಯುವಕನೊಬ್ಬ ಅಪಾರ್ಟ್‌ಮೆಂಟ್ ಗ್ರಿಲ್ ಮೂಲಕ ಕೈಹಾಕಿ, ಆಕೆಯ ಶೂಗಳನ್ನು ಹೊರತೆಗೆದು ವಾಸನೆ ನೋಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಮಲೇಷ್ಯಾದ ಶಾ ಅಲಂನಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾನಸಿಕ ವೈಪರೀತ್ಯ ಮತ್ತು ಸೈಬರ್ ಅಪರಾಧದ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ವಿಶ್ವವಿದ್ಯಾನಿಲಯದ 22 ವರ್ಷದ ವಿದ್ಯಾರ್ಥಿನಿಯೊಬ್ಬಳು ಏಪ್ರಿಲ್ ತಿಂಗಳಿನಿಂದ ತನಗೆ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ನಂಬಿದ್ದಳು. ಮನೆಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಕಪ್ಪು ಟಿ-ಶರ್ಟ್ ಧರಿಸಿದ್ದ ಯುವಕನೊಬ್ಬ ಬಂದು, ಶೂಗಳನ್ನು ಹಿಡಿದು ವಾಸನೆ ನೋಡುವ ದೃಶ್ಯ ವೈರಲ್ ಆಗಿದೆ. ಆತ ಅದೇ ವಿಶ್ವವಿದ್ಯಾನಿಲಯದ 20 ರಿಂದ 25 ವರ್ಷ ವಯಸ್ಸಿನ ಸಹ-ವಿದ್ಯಾರ್ಥಿ…
ಮುಂಬೈ: ಪ್ರತಿಭಟನೆ ನಡೆಸುವ ಜೆನ್ ಝಿಗಳನ್ನು ದೇಶದ್ರೋಹಿಗಳು ಎಂದು ಕರೆಯಲು ಸಾಧ್ಯವಿಲ್ಲ, ಅವರು ನಮ್ಮದೇ ಮುಂದಿನ ಪೀಳಿಗೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮುಂಬೈನಲ್ಲಿ Gen Z ಮತ್ತು Gen Alpha ಪೀಳಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, Gen Z ಯುವಕರು ಯಾವುದಾದರೂ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡರೆ, ಅವರು ದೇಶದ್ರೋಹಿಗಳಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅವರು ನಮ್ಮದೇ ಜನರು, ನಮ್ಮ ಮುಂದಿನ ಪೀಳಿಗೆ ಎಂದು ತಿಳಿಸಿದರು. ಸಂವಾದ ನಡೆಯಬೇಕಾದರೆ ಪರಸ್ಪರ ಗೌರವ ಮತ್ತು ಅಪ್ಯಾಯತೆಯ ಭಾವನೆ ಅಗತ್ಯ. ನಾವಿಬ್ಬರೂ ಪರಸ್ಪರ ಗುರುತಿಸಿ ಗೌರವಿಸಿದಾಗ ಮಾತ್ರ ಅರ್ಥಪೂರ್ಣ ಸಂವಾದ ಸಾಧ್ಯ. ಆಗ ಮಾತ್ರ ಅವರ ಕಳವಳಗಳು ನಮಗೆ ಮತ್ತು ನಮ್ಮ ದೃಷ್ಟಿಕೋನ ಅವರಿಗೆ ಅರ್ಥವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನಡೆಯಬೇಕಾದದ್ದು ಇದೇ ರೀತಿ ಎಂದರು. ಇಂದಿನ ಯುವಪೀಳಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈಗಿನ ಯುವಜನತೆ ಹಾಲಿ ಪೀಳಿಗೆಗಿಂತ ಹೆಚ್ಚು ಪ್ರಾಮಾಣಿಕವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಪೀಳಿಗೆ ದೇಶದ ಬಗ್ಗೆ ಪ್ರಾಮಾಣಿಕತೆ,…
ಬಂಟ್ವಾಳ: ಕಾರು ಪಲ್ಟಿಯಾಗಿ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರು ಸಣ್ಣಪುಟ್ಟ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಸೂರಿಕುಮೇರು ಬಳಿ ಗುರುವಾರ ಸಂಜೆ ನಡೆದಿದೆ. ವರದಿ ಪ್ರಕಾರ, ಕುಟುಂಬವು ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ಪ್ರಯಾಣಿಸುತ್ತಿದ್ದಾಗ, ಸೂರಿಕುಮೇರುವಿನ ಹಿಂದೂಸ್ತಾನ್ ಪೆಟ್ರೋಲಿಯಂ ಇಂಧನ ಕೇಂದ್ರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಆರು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಹೆದ್ದಾರಿಯಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ ಮತ್ತು ಕಳಪೆ ರಸ್ತೆ ಪರಿಸ್ಥಿತಿಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಸಮರ್ಪಕ ರಸ್ತೆ ವಿನ್ಯಾಸದಿಂದಾಗಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಉಡುಪಿ: ಮಲ್ಪೆ ಕಲ್ಮಾಡಿಯ ಯುವತಿಯೊರ್ವಳು ನೇಣಿಗೆ ಶರಣಾದ ಘಟನೆ ಬುಧವಾರ ನಡೆದಿದೆ. ಹೊಟೇಲ್‌ನ ಉದ್ಯೋಗಿ, ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಕೃತಿ ಬಂಗೇರ(27) ಆತ್ಮಹತ್ಯೆ ಮಾಡಿಕೊಂಡ ಯುವತಿ. ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಕಲ್ಮಾಡಿಯ ಮನೆಯಲ್ಲಿ ವಾಸವಾಗಿದ್ದ ಕೃತಿ ಇಂದು ಮನೆಯ ಕೊಠಡಿಯಲ್ಲಿ ಚೂಡಿದಾರದ ಶಾಲಿನಲ್ಲಿ ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಕಳೆದ ಕೆಲವು ದಿನಗಳಲ್ಲಿ ಒತ್ತಡ ರೀತಿಯಲ್ಲಿ ವರ್ತಿಸುತ್ತಿದ್ದಳು ಎಂದು ಮನೆಯವರು ತಿಳಿಸಿದ್ದಾರೆ. ಸಹೋದರಿ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



