Close Menu
    What's Hot

    ಟಾಟಾ ಕುಟುಂಬದಲ್ಲಿ ಆಸ್ತಿ ಮತ್ತು ಅಧಿಕಾರದ ಸಂಘರ್ಷ; ನೋಯೆಲ್ ಟಾಟಾ ವಿರುದ್ಧ ಜಿಮ್ಮಿ ಟಾಟಾ ಅಸಮಾಧಾನ

    November 17, 2026

    ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    November 17, 2026

    ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು

    November 17, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಕೆಪಿಎಸ್‌ಸಿ ನೇಮಕಾತಿ ಹಗರಣ ಬಯಲಿಗೆಳೆದ ಇಡಿ; ಕೋಟಿ ಕೋಟಿ ಹಣದ ಡೀಲ್ ಬಯಲು
    ಅಪರಾಧ

    ಕೆಪಿಎಸ್‌ಸಿ ನೇಮಕಾತಿ ಹಗರಣ ಬಯಲಿಗೆಳೆದ ಇಡಿ; ಕೋಟಿ ಕೋಟಿ ಹಣದ ಡೀಲ್ ಬಯಲು

    adminBy adminNovember 16, 2026No Comments1 Min Read

    ಬೆಂಗಳೂರು: ಕೆಪಿಎಸ್​ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಸಂಬಂಧ ಬೆಂಗಳೂರಿನ PMLA ವಿಶೇಷ ಕೋರ್ಟ್​ಗೆ ಇಡಿ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದೆ. ಕೆಪಿಎಸ್​ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ, ಸದಸ್ಯೆ ಗೀತಾ, KPSC ಪರೀಕ್ಷಾ ನಿಯಂತ್ರಕನಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಬಸವರಾಜ ಕನ್ನಾಳೆ ವಿರುದ್ಧ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆ ವೇಳೆ ನಡೆದಿದ್ದ ಡೀಲ್ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿದೆ.

    ’10 ಅಭ್ಯರ್ಥಿಗಳಿಂದ 3.20 ಕೋಟಿ ರೂಪಾಯಿಗೆ ಬೇಡಿಕೆ’

    ಪ್ರಶ್ನೆಪತ್ರಿಕೆ ಸೋರಿಕೆಗಾಗಿ 10 ಅಭ್ಯರ್ಥಿಗಳಿಂದ 3.20 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿತ್ತು. ಅದರಲ್ಲಿ 1.52 ಕೋಟಿ ಹಣ ವಸೂಲಿ‌ ಮಾಡಿರುವ ಬಗ್ಗೆ ದಾಖಲೆ ಪತ್ತೆಯಾಗಿದೆ. ಬ್ಯಾಂಕ್ ಖಾತೆ ಮೂಲಕ 92 ಲಕ್ಷ, ನಗದು ರೂಪದಲ್ಲಿ 60 ಲಕ್ಷ ಪಡೆದಿದ್ದರು. ಪರೀಕ್ಷೆಗೆ ಒಂದು ದಿನ ಮೊದಲು ಬೆಂಗಳೂರು ಹೊರವಲಯದ ವಿಲ್ಲಾಗಳಲ್ಲಿ ಅಭ್ಯರ್ಥಿಗಳಿಗೆ ಪ್ರಿಂಟ್​ಔಟ್ ನೀಡಲಾಗಿತ್ತು. 6 ಅಭ್ಯರ್ಥಿಗಳಿಗೆ ಕೀ ಉತ್ತರ, ಸಂದರ್ಶನದಲ್ಲಿ ಹೆಚ್ಚು ಅಂಕ ನೀಡಲು ಡೀಲ್ ಆಗಿತ್ತು ಎಂದು ಚಾರ್ಜ್​​ಶೀಟ್​​ನಲ್ಲಿ ಇಡಿ ತಿಳಿಸಿದೆ.

    ಶಿವಶಂಕರಪ್ಪ ಸಾಹುಕಾರ್ 4.17 ಕೋಟಿ, ಜ್ಞಾನೇಂದ್ರ ಕುಮಾರ್ 1.52 ಕೋಟಿ, ಬಸವರಾಜ್ ಕನ್ನಾಳೆ 1.52 ಕೋಟಿ ಮತ್ತು ಗೀತಾ 1.18 ಕೋಟಿ ಹಣವನ್ನು ಅಕ್ರಮ ಹಣಸಂಪಾದನೆ ಮಾಡಿರುವುದು ಪತ್ತೆಯಾಗಿದೆ. ನಾಲ್ವರು ಪ್ರಮುಖ ಆರೋಪಿಗಳ ಬಂಧನವಾಗಿದ್ದು, 1.22 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಕೆಪಿಎಸ್​ಸಿ ಸದಸ್ಯೆ ಗೀತಾ ಶಿವಮೂರ್ತಿ, ಪುತ್ರಿ ಹೆಸರಲ್ಲಿ ಪ್ರಾಪರ್ಟಿ ಪತ್ತೆಯಾಗಿದೆ. ರಿಯಲ್ ಎಸ್ಟೇಟ್, ಶಹಾಪುರದಲ್ಲಿ ಶಾಲೆ, ಕನ್ವೆನ್ಷನ್ ಹಾಲ್ ನಿರ್ಮಾಣದ ಬಗ್ಗೆಯೂ ಗೊತ್ತಾಗಿದೆ. ಜ್ಞಾನೇಂದ್ರ ಕೂಡ ಸ್ನೇಹಿತರ ಹೆಸರಿನಲ್ಲಿ 52.30 ಲಕ್ಷ ಮೌಲ್ಯದ ಚಿನ್ನ-ವಜ್ರ ಖರೀದಿಸಿದ್ದಾರೆ ಎಂದು ಇಡಿ ತಿಳಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಚಾರ್ಜ್​​ಶೀಟ್​​ನಲ್ಲಿ ಉಲ್ಲೇಖಿಸಿದೆ.




    #crime #karnataka
    Previous Articleಬೆಟ್ಟದ ಕಡಿದಾದ ಪ್ರದೇಶದಲ್ಲಿ ಸಿಲುಕಿದ ಯೂಟ್ಯೂಬರ್; ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ಒಂದು ಗಂಟೆಯ ಕಾರ್ಯಾಚರಣೆಯಲ್ಲಿ ರಕ್ಷಣೆ
    Next Article ತನಿಷ್ಕ್ ದರೋಡೆ ಪ್ರಕರಣ ಬಯಲು; ₹25 ಕೋಟಿ ಚಿನ್ನಾಭರಣ ದರೋಡೆ ಪ್ರಕರಣದ ಪ್ರಮುಖ ಆರೋಪಿಯ ಕೂಡ ಬಂಧನ

    Related Posts

    ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ

    November 17, 2026

    ಮೊಟ್ಟೆ ಸಾಗಾಟದ ವಾಹನದಲ್ಲಿ ದನಗಳ ಅಕ್ರಮ ಸಾಗಾಟ; ಮಂಗಳೂರಿನಲ್ಲಿ ಇಬ್ಬರು ಆರೋಪಿಗಳ ಬಂಧನ

    November 17, 2026

    ಸೌಜನ್ಯ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು; ಶವ ಪತ್ತೆಯಾದ ಸ್ಥಳ ಪರಿಶೀಲನೆಗೆ ಮೆಡಿಕಲ್ ಬೋರ್ಡ್ ಸಿದ್ಧತೆ

    November 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಟಾಟಾ ಕುಟುಂಬದಲ್ಲಿ ಆಸ್ತಿ ಮತ್ತು ಅಧಿಕಾರದ ಸಂಘರ್ಷ; ನೋಯೆಲ್ ಟಾಟಾ ವಿರುದ್ಧ ಜಿಮ್ಮಿ ಟಾಟಾ ಅಸಮಾಧಾನ

    November 17, 2026

    ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    November 17, 2026

    ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು

    November 17, 2026

    ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ

    November 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ

    November 17, 2026

    ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಾಕ್ಷ್ಯ ಸಂಗ್ರಹವೇ ಸವಾಲು; ಮೊಬೈಲ್ ನೀಡದೆ ಕೃಪಾ ಆಳ್ವ ಕಾಲಹರಣ

    November 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.