Close Menu
    What's Hot

    ಟಾಟಾ ಕುಟುಂಬದಲ್ಲಿ ಆಸ್ತಿ ಮತ್ತು ಅಧಿಕಾರದ ಸಂಘರ್ಷ; ನೋಯೆಲ್ ಟಾಟಾ ವಿರುದ್ಧ ಜಿಮ್ಮಿ ಟಾಟಾ ಅಸಮಾಧಾನ

    November 17, 2026

    ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    November 17, 2026

    ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು

    November 17, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು
    ರಾಷ್ಟ್ರೀಯ

    ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು

    adminBy adminNovember 17, 2026No Comments2 Mins Read

    ಚೆನ್ನೈ: ಟಿವಿಎಸ್ ಗ್ರೂಪ್‌ನ ಕುಟುಂಬದ ಆಸ್ತಿ ಹಂಚಿಕೆ ವಿಚಾರ ಇದೀಗ ಕಾನೂನು ಹೋರಾಟದ ಹಂತಕ್ಕೆ ತಲುಪಿದೆ. ಟಿವಿಎಸ್ ಕುಟುಂಬದ ಹಿರಿಯ ಉದ್ಯಮಿ ವೇಣು ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮಿ ವೇಣು, ತಮ್ಮ ತಂದೆಯ ಕುಟುಂಬದ ಶಾಖೆಗೆ ಸೇರಿದ ಜಂಟಿ ಕುಟುಂಬದ ಆಸ್ತಿಗಳನ್ನು ಕಾನೂನುಬದ್ಧವಾಗಿ ಹಂಚಿಕೆ ಮಾಡುವಂತೆ ಕೋರಿ ನೋಟಿಸ್ ನೀಡಿದ್ದಾರೆ.

    ತಂದೆಗೆ ಕಳುಹಿಸಿರುವ ಕಾನೂನು ನೋಟಿಸ್‌ನಲ್ಲಿ, ಕುಟುಂಬದ ಮುಖ್ಯಸ್ಥರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ, ಆಸ್ತಿಯನ್ನು ನ್ಯಾಯಯುತವಾಗಿ ಹಾಗೂ ಕಾನೂನಿನ ಪ್ರಕಾರ ಹಂಚಿಕೆ ಮಾಡಬೇಕು ಎಂದು ಲಕ್ಷ್ಮಿ ಮನವಿ ಮಾಡಿದ್ದಾರೆ.

    2005ರಲ್ಲಿ ತಿದ್ದುಪಡಿಯಾದ ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರ ಅಡಿಯಲ್ಲಿ ಜಂಟಿ ಕುಟುಂಬದ ಆಸ್ತಿಯಲ್ಲಿ ತಮಗೂ ಸಮಾನ ಪಾಲು ಪಡೆಯುವ ಹಕ್ಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಕಾಯ್ದೆಯ ಸೆಕ್ಷನ್ 6 ಅನ್ನು ಉಲ್ಲೇಖಿಸಿರುವ ಲಕ್ಷ್ಮಿ, ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರಿಯರಿಗೂ ಪುತ್ರರಷ್ಟೇ ಸಮಾನ ಹಕ್ಕಿದೆ ಮತ್ತು ಆಸ್ತಿ ವಿಭಜನೆಗೆ ಸ್ವತಂತ್ರವಾಗಿ ಕೋರಿಕೆ ಸಲ್ಲಿಸಬಹುದು ಎಂದು ಹೇಳಿದ್ದಾರೆ.

    ವಿವಾದಕ್ಕೆ ಸಂಬಂಧಿಸಿದ ಆಸ್ತಿಗಳಲ್ಲಿ ವಿಎಸ್ ಟ್ರಸ್ಟ್  ಹಾಗೂ ಇತರ ಹೋಲ್ಡಿಂಗ್ ಸಂಸ್ಥೆಗಳ ಮೂಲಕ ಹೊಂದಿರುವ ಕುಟುಂಬದ ಪಾಲುದಾರಿಕೆಗಳು ಸೇರಿವೆ. 2020ರಲ್ಲಿ ಟಿವಿಎಸ್ ಕುಟುಂಬದ ದೊಡ್ಡ ಮಟ್ಟದ ಆಸ್ತಿ ವ್ಯವಸ್ಥೆಯಡಿ ವೇಣು ಶ್ರೀನಿವಾಸನ್ ಅವರ ಕುಟುಂಬದ ಶಾಖೆಗೆ ಹಂಚಿಕೆಯಾಗಿದ್ದ ಟಿವಿಎಸ್ ಹೋಲ್ಡಿಂಗ್ಸ್, ಟಿವಿಎಸ್ ಮೋಟಾರ್ ಕಂಪನಿ, ಟಿವಿಎಸ್ ಕ್ರೆಡಿಟ್ ಸರ್ವಿಸಸ್ ಮತ್ತು ಸುಂದರಂ-ಕ್ಲೇಟನ್ ಸಂಸ್ಥೆಗಳಲ್ಲಿನ ಪಾಲುಗಳೂ ಇದರಲ್ಲಿ ಸೇರಿವೆ.

    ವಿವಾದಕ್ಕೆ ಕಾರಣವೇನು?

    2020ರಲ್ಲಿ ಟಿವಿಎಸ್‌ನ ವಿಸ್ತೃತ ಕುಟುಂಬದ ನಡುವೆ ನಡೆದ ಆಸ್ತಿ ವ್ಯವಸ್ಥೆಯು ತಮ್ಮ ತಂದೆಯ ಕುಟುಂಬದೊಳಗಿನ ಆಸ್ತಿ ವಿಭಜನೆಗೆ ಸಮಾನವಲ್ಲ ಎಂಬುದು ಲಕ್ಷ್ಮಿ ಅವರ ವಾದವಾಗಿದೆ. ವೇಣು ಶ್ರೀನಿವಾಸನ್ ಅವರ ಕುಟುಂಬದೊಳಗೆ ಆಸ್ತಿ ಹಂಚಿಕೆ ಅಥವಾ ಇತ್ಯರ್ಥ ಪ್ರಕ್ರಿಯೆ ಆರಂಭವಾಗಿಲ್ಲ, ಪೂರ್ಣಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

    ಕುಟುಂಬದ ಉದ್ಯಮಗಳನ್ನು ನಿರ್ವಹಿಸುವುದರಿಂದ ಒಬ್ಬ ಸದಸ್ಯರಿಗೆ ಮಾತ್ರ ಆಸ್ತಿಯ ಸಂಪೂರ್ಣ ಮಾಲೀಕತ್ವ ಸಿಗುವುದಿಲ್ಲ. ಹಾಗೆಯೇ ಇತರ ಕುಟುಂಬ ಸದಸ್ಯರ ಕಾನೂನುಬದ್ಧ ಹಕ್ಕುಗಳೂ ರದ್ದಾಗುವುದಿಲ್ಲ ಎಂದು ಲಕ್ಷ್ಮಿ ಪ್ರತಿಪಾದಿಸಿದ್ದಾರೆ.

    ತಮ್ಮ ಸಹೋದರ ಸುದರ್ಶನ್ ಅವರಿಗೆ ಕುಟುಂಬದ ಆಸ್ತಿಗಳ ಮೇಲಿನ ಲಾಭದಾಯಕ ಹಕ್ಕುಗಳನ್ನು ಕೇಂದ್ರೀಕರಿಸಲಾಗಿದ್ದು, ಇದರಿಂದ ತಮ್ಮ ಪಾಲಿನ ಹಕ್ಕಿಗೆ ಧಕ್ಕೆಯಾಗಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಪುತ್ರಿಯರ ಆಸ್ತಿ ಹಕ್ಕುಗಳನ್ನು ಏಕಪಕ್ಷೀಯ ನಿರ್ಧಾರಗಳು ಅಥವಾ ಕಂಪನಿಗಳ ನಡುವಿನ ವ್ಯವಸ್ಥೆಗಳ ಮೂಲಕ ಕಡೆಗಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

    ಈ ವಿಚಾರವನ್ನು ಕೇವಲ ಕಾನೂನು ವಿವಾದವಷ್ಟೇ ಅಲ್ಲದೆ, ನಂಬಿಕೆ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದ ವಿಷಯವಾಗಿಯೂ ಲಕ್ಷ್ಮಿ ಬಣ್ಣಿಸಿದ್ದಾರೆ. ಆದರೂ ಕುಟುಂಬದ ಎಲ್ಲ ಸದಸ್ಯರ ಹಕ್ಕು ಮತ್ತು ಗೌರವವನ್ನು ಕಾಪಾಡುವ ರೀತಿಯಲ್ಲಿ ಮಾತುಕತೆ ಮೂಲಕ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ತಾವು ಬಯಸುವುದಾಗಿ ತಿಳಿಸಿದ್ದಾರೆ.

    ಮಗಳು ಲಕ್ಷ್ಮಿ ಪರ ತಾಯಿ ಮಲ್ಲಿಕಾ ಶ್ರೀನಿವಾಸನ್ ಬೆಂಬಲ

    ಈ ಬೆಳವಣಿಗೆಯ ಬೆನ್ನಲ್ಲೇ ಲಕ್ಷ್ಮಿ ಅವರ ತಾಯಿ ಮಲ್ಲಿಕಾ ಶ್ರೀನಿವಾಸನ್ ಕೂಡ ಪುತ್ರಿಯ ಹಕ್ಕಿನ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಕುಟುಂಬದ ಆಸ್ತಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ನಡೆಸಿದ ಪ್ರಯತ್ನಗಳು ಇದುವರೆಗೆ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎಂದು ಅವರು ಹೇಳಿದ್ದಾರೆ.

    ಮಗ ಮತ್ತು ಮಗಳಿಗೆ ಕುಟುಂಬದ ವಿಚಾರಗಳಲ್ಲಿ ಸಮಾನ ಹಕ್ಕು ಇರಬೇಕು ಎಂದು ಪ್ರತಿಪಾದಿಸಿರುವ ಮಲ್ಲಿಕಾ, “ತಾಯಿಯಾಗಿ ನನಗೆ ಮಗ ಮತ್ತು ಮಗಳು ಎಲ್ಲ ರೀತಿಯಲ್ಲೂ ಸಮಾನರು. ಸುದರ್ಶನ್‌ಗೆ ಇರುವ ಪಾಲಿಗೆ ಕಡಿಮೆಯಿಲ್ಲದಷ್ಟು ಸಮಾನ ಪಾಲು ಪಡೆಯಲು ಲಕ್ಷ್ಮಿಗೆ ಕಾನೂನುಬದ್ಧ ಹಕ್ಕಿದೆ ಎಂದು ನಾನು ನಂಬುತ್ತೇನೆ” ಎಂದು ಹೇಳಿದ್ದಾರೆ.

    ಎಲ್ಲ ಪಾಲುದಾರರ ಹಿತದೃಷ್ಟಿಯಿಂದ ಪಾರದರ್ಶಕ ಮಾತುಕತೆ ನಡೆಸಿ, ನ್ಯಾಯಸಮ್ಮತತೆ, ಸ್ಪಷ್ಟತೆ ಮತ್ತು ಪರಸ್ಪರ ತಿಳುವಳಿಕೆಯ ಆಧಾರದ ಮೇಲೆ ವಿವಾದವನ್ನು ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. “ಗೌರವ ಮತ್ತು ಘನತೆಯನ್ನು ಕಾಪಾಡಿಕೊಂಡು ಸಕಾರಾತ್ಮಕವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಪ್ರಾಮಾಣಿಕವಾಗಿ ಆಶಿಸುತ್ತೇನೆ” ಎಂದು ಮಲ್ಲಿಕಾ ತಿಳಿಸಿದ್ದಾರೆ.




    #national
    Previous Articleಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ
    Next Article ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    Related Posts

    ಟಾಟಾ ಕುಟುಂಬದಲ್ಲಿ ಆಸ್ತಿ ಮತ್ತು ಅಧಿಕಾರದ ಸಂಘರ್ಷ; ನೋಯೆಲ್ ಟಾಟಾ ವಿರುದ್ಧ ಜಿಮ್ಮಿ ಟಾಟಾ ಅಸಮಾಧಾನ

    November 17, 2026

    ದೆಹಲಿಯಲ್ಲಿ ಕಟ್ಟಡ ಕುಸಿತದ ದುರಂತ; ಮೂರು ವರ್ಷದ ಮಗು ಸೇರಿ ಇಬ್ಬರು ದುರ್ಮರಣ, ಆರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ

    November 17, 2026

    ಸೈಬರ್ ದಾಳಿ ಸಾಧ್ಯವಾಗದಿದ್ದರೆ ವ್ಯಕ್ತಿಗಳೇ ಟಾರ್ಗೆಟ್; ವಿದೇಶಿ ಗೂಢಚಾರರ ತಂತ್ರ ಬಿಚ್ಚಿಟ್ಟ ವಾಯುಪಡೆ ಮುಖ್ಯಸ್ಥ

    November 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಟಾಟಾ ಕುಟುಂಬದಲ್ಲಿ ಆಸ್ತಿ ಮತ್ತು ಅಧಿಕಾರದ ಸಂಘರ್ಷ; ನೋಯೆಲ್ ಟಾಟಾ ವಿರುದ್ಧ ಜಿಮ್ಮಿ ಟಾಟಾ ಅಸಮಾಧಾನ

    November 17, 2026

    ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    November 17, 2026

    ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು

    November 17, 2026

    ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ

    November 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ

    November 17, 2026

    ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಾಕ್ಷ್ಯ ಸಂಗ್ರಹವೇ ಸವಾಲು; ಮೊಬೈಲ್ ನೀಡದೆ ಕೃಪಾ ಆಳ್ವ ಕಾಲಹರಣ

    November 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.