ಮಂಗಳೂರು: ಮಂಗಳೂರಿನ ಖ್ಯಾತ ಮಹೇಶ್ ಮೋಟರ್ಸ್ ಬಸ್ ಸಂಸ್ಥೆಯ ಮಾಲಕರಾದ ಮಹೇಶ್ ಶೇಖ(46) ಅವರು ಇಂದು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಸಾರಿಗೆ ಕ್ಷೇತ್ರದಲ್ಲಿ ಹಾಗೂ ಅಪಾರ ಸ್ನೇಹಿತರು, ಹಿತೈಷಿಗಳ ವಲಯದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ.
ಮಹೇಶ್ ಶೇಖರ್ ಅವರು ಹಲವು ವರ್ಷಗಳಿಂದ ಮಹೇಶ್ ಮೋಟರ್ಸ್ ಮೂಲಕ ಕರಾವಳಿ ಭಾಗದ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುತ್ತಿದ್ದು, ಸಾರಿಗೆ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು.
ಇದೀಗ ಅವರ ನಿಧನವು ಕುಟುಂಬಕ್ಕೆ ಅಪಾರ ದುಃಖವನ್ನುಂಟು ಮಾಡಿದೆ. ಈಗಾಗಲೇ ಸುಮಾರು ಎರಡು ವರ್ಷಗಳ ಹಿಂದೆ ಸಹೋದರ ಪ್ರಕಾಶ್ ಶೇಖ ರವರ ಅಕಾಲಿಕ ಅಗಲಿಕೆಯ ನೋವನ್ನು ಅನುಭವಿಸಿದ್ದ ಹಿನ್ನೆಲೆ, ಮಹೇಶ್ ಶೇಖರ್ ಅವರ ನಿಧನ ಕುಟುಂಬದವರಿಗೆ ಮತ್ತೊಂದು ದೊಡ್ಡ ಆಘಾತವಾಗಿದೆ.








