Close Menu
    What's Hot

    ಮಂಗಳೂರು ಪಾಲಿಕೆಯಲ್ಲಿ ಮನೆ ಪರವಾನಿಗೆ ವಿಳಂಬ ಆರೋಪ; ಟೌನ್ ಪ್ಲಾನಿಂಗ್ ವಿಭಾಗದ ಕಾರ್ಯವೈಖರಿ ಬಗ್ಗೆ ಆಕ್ಷೇಪ

    September 29, 2026

    ಮಂಗಳೂರು: ಕೋರ್ಟ್‌ಗೆ ತೆರಳುತ್ತಿದ್ದ ನ್ಯಾಯಾಧೀಶರ ಕಾರಿಗೆ ಆಟೋ ಡಿಕ್ಕಿ; ಹಲವರಿಗೆ ಗಾಯ

    September 29, 2026

    ಮಲ್ಪೆಯಲ್ಲಿ ನಿಗೂಢ ಕೊಲೆ; ಪ್ರತಿದಿನ ಮಲಗುತ್ತಿದ್ದ ಜಾಗದಲ್ಲೇ ವ್ಯಕ್ತಿ ಶವವಾಗಿ ಪತ್ತೆ

    September 29, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ವಿಟ್ಲದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಸ್ಫೋಟದ ತೀವ್ರತೆಗೆ ಅಡುಗೆಮನೆ ಧ್ವಂಸ, ಲಕ್ಷಾಂತರ ರೂ. ನಷ್ಟ
    ಕರಾವಳಿ ಸುದ್ದಿ

    ವಿಟ್ಲದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಸ್ಫೋಟದ ತೀವ್ರತೆಗೆ ಅಡುಗೆಮನೆ ಧ್ವಂಸ, ಲಕ್ಷಾಂತರ ರೂ. ನಷ್ಟ

    adminBy adminAugust 10, 2026No Comments1 Min Read

    ಬಂಟ್ವಾಳ: ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಅಡುಗೆಮನೆ ಸಂಪೂರ್ಣವಾಗಿ ಧ್ವಂಸಗೊಂಡಿರುವ ಘಟನೆ ವಿಟ್ಲದ ಕಸಬಾ ಗ್ರಾಮದ ಕುರುಂಬಳದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತು.

    ಕುರುಂಬಳ ನಿವಾಸಿ ಹಮೀದ್ ಅವರ ಮನೆಯಲ್ಲಿ ಬೆಳಗ್ಗೆ ಸುಮಾರು 11 ಗಂಟೆಗೆ ಈ ಘಟನೆ ಸಂಭವಿಸಿದೆ.

    ಘಟನೆ ನಡೆದ ಸಂದರ್ಭದಲ್ಲಿ ಹಮೀದ್ ಅವರು ಪಟ್ಟಣಕ್ಕೆ ತೆರಳಿದ್ದರು. ಅವರ ಪತ್ನಿ ಖೈರುನ್ನಿಸಾ ಅವರು ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಸಮೀಪ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

    ತಕ್ಷಣ ಖೈರುನ್ನಿಸಾ ಅವರು ಕೂಗಿ ನೆರವಿಗಾಗಿ ಕರೆ ಮಾಡಿದ್ದಾರೆ. ಅವರ ಕೂಗು ಕೇಳಿದ ನೆರೆಮನೆಯ ನಿವಾಸಿ ಉಮರ್ ಅವರು ಕೂಡಲೇ ಮನೆಗೆ ಧಾವಿಸಿ, ಕುಟುಂಬ ಸದಸ್ಯರನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ಅಂಗಳಕ್ಕೆ ಸ್ಥಳಾಂತರಿಸಲು ಸಹಾಯ ಮಾಡಿದ್ದಾರೆ. ಅವರು ಮನೆಯಿಂದ ಹೊರಗೆ ಬಂದ ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಛಿದ್ರವಾಗಿದೆ.

    ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಅಡುಗೆಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ಪ್ರಮುಖ ದಾಖಲೆಗಳು ಹಾಗೂ ಪೀಠೋಪಕರಣಗಳಿಗೂ ಸ್ಫೋಟದಿಂದ ಹಾನಿಯಾಗಿದೆ. ಒಟ್ಟಾರೆ ನಷ್ಟವು ಲಕ್ಷಾಂತರ ರೂಪಾಯಿ ಎಂದು ಅಂದಾಜಿಸಲಾಗಿದೆ.

    ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಟ್ಲದ ಇಂಡೇನ್ ಗ್ಯಾಸ್ ವಿತರಕ ಸಂಸ್ಥೆ ಸಾಯಿ ಗಣೇಶ್‌ನ ಮಾಲೀಕ ಸತೀಶ್ ಆಳ್ವ ಸೇರಿದಂತೆ ಇತರ ಪ್ರಮುಖರು ಕೂಡ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದರು.

     




    #dakshinakannada
    Previous Article2 ತಿಂಗಳ ಹಿಂದೆಯೇ ಉಡುಪಿಗೆ ಬಂದಿದ್ದರು: ಡೇವಿಡ್ ಹಂತಕರ ಬಗ್ಗೆ ಪೊಲೀಸರ ತನಿಖೆಯಲ್ಲಿ ಸ್ಫೋಟಕ ಮಾಹಿತಿ
    Next Article ರಸ್ತೆನಾ? ಕೆರೆಯಾ? ಮಂಗಳೂರು–ಕೇರಳ ಮಾರ್ಗದಲ್ಲಿ ಯುವಕರ ವಿಭಿನ್ನ ಪ್ರತಿಭಟನೆ..!

    Related Posts

    ಮಂಗಳೂರು ಪಾಲಿಕೆಯಲ್ಲಿ ಮನೆ ಪರವಾನಿಗೆ ವಿಳಂಬ ಆರೋಪ; ಟೌನ್ ಪ್ಲಾನಿಂಗ್ ವಿಭಾಗದ ಕಾರ್ಯವೈಖರಿ ಬಗ್ಗೆ ಆಕ್ಷೇಪ

    September 29, 2026

    ಮಂಗಳೂರು: ಕೋರ್ಟ್‌ಗೆ ತೆರಳುತ್ತಿದ್ದ ನ್ಯಾಯಾಧೀಶರ ಕಾರಿಗೆ ಆಟೋ ಡಿಕ್ಕಿ; ಹಲವರಿಗೆ ಗಾಯ

    September 29, 2026

    ಮಲ್ಪೆಯಲ್ಲಿ ನಿಗೂಢ ಕೊಲೆ; ಪ್ರತಿದಿನ ಮಲಗುತ್ತಿದ್ದ ಜಾಗದಲ್ಲೇ ವ್ಯಕ್ತಿ ಶವವಾಗಿ ಪತ್ತೆ

    September 29, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರು ಪಾಲಿಕೆಯಲ್ಲಿ ಮನೆ ಪರವಾನಿಗೆ ವಿಳಂಬ ಆರೋಪ; ಟೌನ್ ಪ್ಲಾನಿಂಗ್ ವಿಭಾಗದ ಕಾರ್ಯವೈಖರಿ ಬಗ್ಗೆ ಆಕ್ಷೇಪ

    September 29, 2026

    ಮಂಗಳೂರು: ಕೋರ್ಟ್‌ಗೆ ತೆರಳುತ್ತಿದ್ದ ನ್ಯಾಯಾಧೀಶರ ಕಾರಿಗೆ ಆಟೋ ಡಿಕ್ಕಿ; ಹಲವರಿಗೆ ಗಾಯ

    September 29, 2026

    ಮಲ್ಪೆಯಲ್ಲಿ ನಿಗೂಢ ಕೊಲೆ; ಪ್ರತಿದಿನ ಮಲಗುತ್ತಿದ್ದ ಜಾಗದಲ್ಲೇ ವ್ಯಕ್ತಿ ಶವವಾಗಿ ಪತ್ತೆ

    September 29, 2026

    ಸ್ನೇಹಿತನ ಮಾತು ನಂಬಿ ಸೌದಿ ಅರೇಬಿಯಾದಲ್ಲಿ ‘ಡೆತ್ ಟ್ರ್ಯಾಪ್’ಗೆ ಸಿಲುಕಿದ ಕೇರಳ ಮೂಲದ ವ್ಯಕ್ತಿ

    September 29, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕುಂದಾಪುರ: “ಸ್ವಲ್ಪ ನಿಧಾನವಾಗಿ ಮಾತನಾಡಿ” ಎಂದಿದ್ದಕ್ಕೆ ಸೋಡಾ ಬಾಟಲಿಯಿಂದ ಹಲ್ಲೆ; ನಾಲ್ವರ ವಿರುದ್ಧ ಕೇಸ್

    September 29, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.