Close Menu
    What's Hot

    ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಭವಿಷ್ಯದಲ್ಲಿ ಬ್ರೇಕ್ ಬೀಳತ್ತಾ?-ಆಟೋ ಕಂಪನಿಗಳಿಗೆ ಸೂಚನೆ ಕೊಟ್ಟ ಪ್ರಧಾನಮಂತ್ರಿ ಸಲಹೆಗಾರ..!

    September 4, 2026

    ಶಾಸಕ ಅಶೋಕ್ ರೈ ಆರೋಪ ನಿರಾಕರಿಸಿ ವರ್ಗಾವಣೆಗೆ ಕೆಆರ್‌ಐಡಿಎಲ್‌ ಎಂಜಿನಿಯರ್‌ಗಳ ಮನವಿ

    September 4, 2026

    ಹಾಸನ ಜೈಲಲ್ಲಿ ವಿಚಾರಣಾಧೀನ ಕೈದಿಗಳ ಭೀಕರ ಮಾರಾಮಾರಿ: ಜಗಳ ಬಿಡಿಸಲು ಹೋದ ಸಿಬ್ಬಂದಿಗೂ ಹಲ್ಲೆ

    September 4, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ಅಮೆರಿಕದ ‘ಮೋಸ್ಟ್ ವಾಂಟೆಡ್’ ಪಟ್ಟಿಗೆ ಭಾರತೀಯ ಮೂಲದ ವಂಚಕ: ಬಂಧನಕ್ಕೆ ₹1.25 ಕೋಟಿ ಬಹುಮಾನ
    ಅಂತರಾಷ್ಟ್ರೀಯ

    ಅಮೆರಿಕದ ‘ಮೋಸ್ಟ್ ವಾಂಟೆಡ್’ ಪಟ್ಟಿಗೆ ಭಾರತೀಯ ಮೂಲದ ವಂಚಕ: ಬಂಧನಕ್ಕೆ ₹1.25 ಕೋಟಿ ಬಹುಮಾನ

    adminBy adminSeptember 4, 2026No Comments2 Mins Read

    ವಾಷಿಂಗ್ಟನ್: ಅಮೆರಿಕ ಸರ್ಕಾರದ ಆಹಾರ ನೆರವು ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಆರೋಪ ಎದುರಿಸುತ್ತಿರುವ ಭಾರತೀಯ ಮೂಲದ ಮಂಜಿತ್ ಸಿಂಗ್ ಬೆಡಿ  ಎಂಬಾತನನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತನ್ನ ‘ಮೋಸ್ಟ್ ವಾಂಟೆಡ್ ಫ್ರಾಡ್‌ಸ್ಟರ್ಸ್’ ಪಟ್ಟಿಗೆ ಸೇರಿಸಿದೆ.

    $6,00,000 ಮೊತ್ತದ ‘ಕ್ಯಾಶ್-ಫಾರ್-ಬೆನಿಫಿಟ್ಸ್’ ವಂಚನೆ
    65 ವರ್ಷದ ಮಂಜಿತ್ ಸಿಂಗ್ ಬೆಡಿ ವಾಷಿಂಗ್ಟನ್ ರಾಜ್ಯದ ಟಕೋಮಾದಲ್ಲಿ ‘ಏಷ್ಯನ್ ಗ್ರೋಸರಿ ಸ್ಟೋರ್’ ಎಂಬ ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದನು.
    ಅಮೆರಿಕ ಸರ್ಕಾರದ ಪೂರಕ ಪೋಷಕಾಂಶ ನೆರವು ಕಾರ್ಯಕ್ರಮದ (SNAP) ಅಡಿಯಲ್ಲಿ ಬಡ ಕುಟುಂಬಗಳಿಗೆ ನೀಡಲಾಗುವ ಇಬಿಟಿ (Electronic Benefit Transfer) ಕಾರ್ಡ್‌ಗಳನ್ನು ಬಳಸಿಕೊಂಡು ಈತ ಅಕ್ರಮ ಎಸಗಿದ್ದಾನೆ. ಅಂಗಡಿಗೆ ಬರುವ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ನೀಡುವ ಬದಲಿಗೆ, ಅವರ ಕಾರ್ಡ್ ಸ್ವೈಪ್ ಮಾಡಿ ನಗದು ನೀಡುತ್ತಿದ್ದ. ಈ ರೀತಿ ಪಡೆದ ಹಣದಲ್ಲಿ ಶೇಕಡಾ 50 ರಷ್ಟು ಕಮಿಷನ್ ಅನ್ನು ತಾನೇ ಇಟ್ಟುಕೊಳ್ಳುತ್ತಿದ್ದ ಎಂದು ಎಫ್‌ಬಿಐ ಆರೋಪಿಸಿದೆ. ಮಾರ್ಚ್ 2024 ರಿಂದ ಜೂನ್ 2025 ರ ನಡುವೆ ಈತ ಕನಿಷ್ಠ 6 ಲಕ್ಷ ಯುಎಸ್ ಡಾಲರ್ (ಅಂದಾಜು ₹5 ಕೋಟಿಗೂ ಹೆಚ್ಚು) ಮೌಲ್ಯದ ಸರ್ಕಾರಿ ಹಣವನ್ನು ವಂಚಿಸಿದ್ದಾನೆ.

    ಭಾರತಕ್ಕೆ ಪರಾರಿಯಾದ ಆರೋಪಿ
    ವಂಚನೆ (Wire Fraud) ಹಾಗೂ ಸ್ನಾಪ್ ಯೋಜನೆ ವಂಚನೆ ಆರೋಪದಡಿ ನ್ಯಾಯಾಲಯದಲ್ಲಿ ದೋಷಾರೋಪಣೆ ಎದುರಿಸಿದ್ದ ಬೆಡಿಗೆ ಜೈಲಿಗೆ ಕಳುಹಿಸದೆ, ಜಾಮೀನಿನ ಮೇಲೆ ಹೊರಬರಲು ಅವಕಾಶ ನೀಡಲಾಗಿತ್ತು. ಆದರೆ ಆತನಿಗೆ ಪಾಸ್‌ಪೋರ್ಟ್ ಒಪ್ಪಿಸಲು ಮತ್ತು ವಾಷಿಂಗ್ಟನ್ ರಾಜ್ಯದಲ್ಲೇ ಇರಲು ನ್ಯಾಯಾಲಯ ಆದೇಶಿಸಿತ್ತು. ಆದರೆ ಈ ಆದೇಶವನ್ನು ಉಲ್ಲಂಘಿಸಿದ ಬೆಡಿ, ಕಾರಿನಲ್ಲಿ ಕೆನಡಾಗೆ ಪ್ರಯಾಣಿಸಿ, ಅಲ್ಲಿಂದ ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಎಫ್‌ಬಿಐ ತಿಳಿಸಿದೆ. ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಕಾರಣ ಮೇ 21 ರಂದು ಆತನ ವಿರುದ್ಧ ಫೆಡರಲ್ ಬಂಧನ ವಾರಂಟ್ ಹೊರಡಿಸಲಾಗಿದೆ.

    ಮಾಹಿತಿ ನೀಡಿದವರಿಗೆ 1.25 ಕೋಟಿ ಬಹುಮಾನ
    ಅಮೆರಿಕದ ಪೌರತ್ವ ಹೊಂದಿರುವ ಮಂಜಿತ್ ಸಿಂಗ್ ಬೆಡಿಯ ಬಂಧನಕ್ಕೆ ನಿಖರ ಮಾಹಿತಿ ನೀಡಿದವರಿಗೆ 1.5 ಲಕ್ಷ ಯುಎಸ್ ಡಾಲರ್ (ಸುಮಾರು ₹1.25 ಕೋಟಿ) ಬಹುಮಾನ ನೀಡುವುದಾಗಿ ಎಫ್‌ಬಿಐ ಘೋಷಿಸಿದೆ. ಎಫ್‌ಬಿಐ ಅಧಿಕಾರಿಗಳು ಪ್ರಸ್ತುತ ಬೆಡಿಯ ಕುಟುಂಬ ಸದಸ್ಯರ ಸಂಪರ್ಕದಲ್ಲಿದ್ದು, ಆತನನ್ನು ಮರಳಿ ಬಂದು ಕಾನೂನು ಪ್ರಕ್ರಿಯೆಯನ್ನು ಎದುರಿಸುವಂತೆ ಮನವೊಲಿಸಲು ತಿಳಿಸಿದ್ದಾರೆ. ಜೊತೆಗೆ, ತಲೆಮರೆಸಿಕೊಂಡಿರುವ ಆರೋಪಿಗೆ ನೆರವು ನೀಡುವ ಯಾವುದೇ ವ್ಯಕ್ತಿ ಕಾನೂನಾತ್ಮಕ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಫ್‌ಬಿಐ ಅಧಿಕಾರಿಗಳು ಎಚ್ಚರಿಸಿದ್ದಾರೆ.

    #crime #national International
    Previous Articleಬಡ್ಡಿ ಹಣ ಕೊಡದ ಮಹಿಳೆಯ ಕಿಡ್ನಾಪ್: ನಗ್ನಗೊಳಿಸಿ ಹಲ್ಲೆ, ವಿಡಿಯೋ ವೈರಲ್ ಮಾಡುವ ಬೆದರಿಕೆ-ಆರೋಪಿಗಳ ಬಂಧನ
    Next Article ಹಾಸನ ಜೈಲಲ್ಲಿ ವಿಚಾರಣಾಧೀನ ಕೈದಿಗಳ ಭೀಕರ ಮಾರಾಮಾರಿ: ಜಗಳ ಬಿಡಿಸಲು ಹೋದ ಸಿಬ್ಬಂದಿಗೂ ಹಲ್ಲೆ

    Related Posts

    ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಭವಿಷ್ಯದಲ್ಲಿ ಬ್ರೇಕ್ ಬೀಳತ್ತಾ?-ಆಟೋ ಕಂಪನಿಗಳಿಗೆ ಸೂಚನೆ ಕೊಟ್ಟ ಪ್ರಧಾನಮಂತ್ರಿ ಸಲಹೆಗಾರ..!

    September 4, 2026

    ಹಾಸನ ಜೈಲಲ್ಲಿ ವಿಚಾರಣಾಧೀನ ಕೈದಿಗಳ ಭೀಕರ ಮಾರಾಮಾರಿ: ಜಗಳ ಬಿಡಿಸಲು ಹೋದ ಸಿಬ್ಬಂದಿಗೂ ಹಲ್ಲೆ

    September 4, 2026

    ಬಡ್ಡಿ ಹಣ ಕೊಡದ ಮಹಿಳೆಯ ಕಿಡ್ನಾಪ್: ನಗ್ನಗೊಳಿಸಿ ಹಲ್ಲೆ, ವಿಡಿಯೋ ವೈರಲ್ ಮಾಡುವ ಬೆದರಿಕೆ-ಆರೋಪಿಗಳ ಬಂಧನ

    September 4, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಭವಿಷ್ಯದಲ್ಲಿ ಬ್ರೇಕ್ ಬೀಳತ್ತಾ?-ಆಟೋ ಕಂಪನಿಗಳಿಗೆ ಸೂಚನೆ ಕೊಟ್ಟ ಪ್ರಧಾನಮಂತ್ರಿ ಸಲಹೆಗಾರ..!

    September 4, 2026

    ಶಾಸಕ ಅಶೋಕ್ ರೈ ಆರೋಪ ನಿರಾಕರಿಸಿ ವರ್ಗಾವಣೆಗೆ ಕೆಆರ್‌ಐಡಿಎಲ್‌ ಎಂಜಿನಿಯರ್‌ಗಳ ಮನವಿ

    September 4, 2026

    ಹಾಸನ ಜೈಲಲ್ಲಿ ವಿಚಾರಣಾಧೀನ ಕೈದಿಗಳ ಭೀಕರ ಮಾರಾಮಾರಿ: ಜಗಳ ಬಿಡಿಸಲು ಹೋದ ಸಿಬ್ಬಂದಿಗೂ ಹಲ್ಲೆ

    September 4, 2026

    ಅಮೆರಿಕದ ‘ಮೋಸ್ಟ್ ವಾಂಟೆಡ್’ ಪಟ್ಟಿಗೆ ಭಾರತೀಯ ಮೂಲದ ವಂಚಕ: ಬಂಧನಕ್ಕೆ ₹1.25 ಕೋಟಿ ಬಹುಮಾನ

    September 4, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಾಸನ ಜೈಲಲ್ಲಿ ವಿಚಾರಣಾಧೀನ ಕೈದಿಗಳ ಭೀಕರ ಮಾರಾಮಾರಿ: ಜಗಳ ಬಿಡಿಸಲು ಹೋದ ಸಿಬ್ಬಂದಿಗೂ ಹಲ್ಲೆ

    September 4, 2026

    ಬಡ್ಡಿ ಹಣ ಕೊಡದ ಮಹಿಳೆಯ ಕಿಡ್ನಾಪ್: ನಗ್ನಗೊಳಿಸಿ ಹಲ್ಲೆ, ವಿಡಿಯೋ ವೈರಲ್ ಮಾಡುವ ಬೆದರಿಕೆ-ಆರೋಪಿಗಳ ಬಂಧನ

    September 4, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.