Close Menu
    What's Hot

    ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತೀರ್ಪು ನೀಡಲು ಜ್ಯೂರಿ ವಿಫಲ

    September 5, 2026

    ‘ಆಪರೇಷನ್ ಅಶ್‌ದಾರ್’ ಯಶಸ್ಸು: ಲಷ್ಕರ್ ಉಗ್ರ ಕಮಾಂಡರ್ ಯಾಸಿರ್ ಹತ್ಯೆ

    September 5, 2026

    ಅವೈಜ್ಞಾನಿಕ ರಸ್ತೆಗೆ ಮತ್ತೊಂದು ಬಲಿ: ಬೈಕ್‌ನಿಂದ ಬಿದ್ದ ಮಹಿಳೆ ಕಾಲಿನ ಮೇಲೆ ಹರಿದ ಟಿಪ್ಪರ್

    September 5, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಶಾಸಕ ಅಶೋಕ್ ರೈ ಆರೋಪ ನಿರಾಕರಿಸಿ ವರ್ಗಾವಣೆಗೆ ಕೆಆರ್‌ಐಡಿಎಲ್‌ ಎಂಜಿನಿಯರ್‌ಗಳ ಮನವಿ
    ಕರಾವಳಿ ಸುದ್ದಿ

    ಶಾಸಕ ಅಶೋಕ್ ರೈ ಆರೋಪ ನಿರಾಕರಿಸಿ ವರ್ಗಾವಣೆಗೆ ಕೆಆರ್‌ಐಡಿಎಲ್‌ ಎಂಜಿನಿಯರ್‌ಗಳ ಮನವಿ

    adminBy adminSeptember 4, 2026No Comments2 Mins Read

    ಮಂಗಳೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ  ಕಾರ್ಯಪಾಲಕ ಎಂಜಿನಿಯರ್ ಎನ್. ವಿಜಯ್ ಮತ್ತು ಕಿರಿಯ ಎಂಜಿನಿಯರ್ ಪ್ರಜ್ವಲ್ ಆರ್. ವೈ ತೀವ್ರವಾಗಿ ನಿರಾಕರಿಸಿದ್ದಾರೆ.

    ಶಾಸಕರ ಈ ಆರೋಪಗಳಿಂದ ತಮಗೂ ಹಾಗೂ ತಮ್ಮ ಕುಟುಂಬಕ್ಕೂ ತೀವ್ರ ಮಾನಸಿಕ ಆಘಾತವಾಗಿದೆ ಎಂದು ತಿಳಿಸಿರುವ ಅಧಿಕಾರಿಗಳು, ತಮ್ಮನ್ನು ಬೇರೆಡೆಗೆ ವರ್ಗಾಯಿಸುವಂತೆ ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ (MD) ಪ್ರತ್ಯೇಕ ಪತ್ರ ಬರೆದು ಮನವಿ ಮಾಡಿದ್ದಾರೆ. ಪ್ರಜ್ವಲ್ ಅವರು ಸೆ. 1ರಂದು ಹಾಗೂ ವಿಜಯ್ ಅವರು ಸೆ. 2ರಂದು ಈ ಪತ್ರ ಬರೆದಿದ್ದು, ವಿಜಯ್ ಅವರು ತಮ್ಮನ್ನು ಮಂಗಳೂರು ವಿಭಾಗದಿಂದಲೇ ಬೇರೆಡೆಗೆ ವರ್ಗಾಯಿಸುವಂತೆ ಕೋರಿದ್ದಾರೆ.

    ಕೆಆರ್‌ಐಡಿಎಲ್‌ ಎಂಜಿನಿಯರ್‌ಗಳು ಗುತ್ತಿಗೆದಾರರಿಂದ ಮಾಸಿಕವಾಗಿ ಶೇ. 7ರಷ್ಟು ಹೆಚ್ಚುವರಿ ಕಮಿಷನ್ ಪಡೆದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಇಲಾಖಾ ಸಚಿವರಿಗೆ ನೀಡುತ್ತಿದ್ದಾರೆ ಎಂದು ಶಾಸಕ ಅಶೋಕ್ ರೈ ಅವರು ಆಗಸ್ಟ್ 25ರಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ಆರೋಪಿಸಿದ್ದರು. ಶಾಸಕರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಎಂಜಿನಿಯರ್‌ಗಳು, “ಸಂಸ್ಥೆಯ ನಿಯಮಾವಳಿಯಂತೆ ಕಾಮಗಾರಿಯ ಅಂದಾಜು ವೆಚ್ಚದಲ್ಲಿ ಎಸ್‌ಆರ್ (SR) ದರಕ್ಕೆ ಶೇ. 3ರಷ್ಟು ಸೇವಾ ಶುಲ್ಕ ಸೇರಿಸಲಾಗುತ್ತದೆ. ಇದರಲ್ಲಿ ಕೆಪಿಡಬ್ಲ್ಯುಡಿ ಗುತ್ತಿಗೆದಾರರ ಶೇ. 10ರಷ್ಟು ಉಳಿತಾಯವೂ ಸೇರಿರುತ್ತದೆ. ಈ ಮೊತ್ತದಲ್ಲಿ ಶೇ. 7ರಷ್ಟನ್ನು ಕಡಿತಗೊಳಿಸಿ ‘ಜಾಬ್ ಸೇವಿಂಗ್ಸ್’ ರೂಪದಲ್ಲಿ ನಿಗಮದ ಅಧಿಕೃತ ಖಾತೆಗೆ ಜಮೆ ಮಾಡಲಾಗುತ್ತದೆ ಹೊರತು ಯಾವುದೇ ವೈಯಕ್ತಿಕ ಕಮಿಷನ್ ಪಡೆದಿಲ್ಲ” ಎಂದು ವಿವರಿಸಿದ್ದಾರೆ.

    ಅಲ್ಲದೆ, ಕೆಆರ್‌ಐಡಿಎಲ್‌ ನೇರವಾಗಿ ಕೂಲಿ ಕಾರ್ಮಿಕರು ಹಾಗೂ ಸಾಮಗ್ರಿ ಪೂರೈಸುವ ಗ್ರೂಪ್ ಲೀಡರ್‌ಗಳನ್ನು ಗುರುತಿಸಿ ಕಾಮಗಾರಿ ನಡೆಸುವುದರಿಂದ ಮಧ್ಯವರ್ತಿ ಗುತ್ತಿಗೆದಾರರ ಅಗತ್ಯವಿರುವುದಿಲ್ಲ. ಗುಣಮಟ್ಟ ಹಾಗೂ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದರೆ ಎಂಜಿನಿಯರ್‌ಗಳೇ ನೇರ ಹೊಣೆಯಾಗುತ್ತಾರೆ ಎಂದು ತಿಳಿಸಿದ್ದಾರೆ.

    ಪುತ್ತೂರು ಕ್ಷೇತ್ರದಲ್ಲಿ ಅನುಮೋದಿತ ಪಟ್ಟಿಯಂತೆಯೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕೆಲ ಗ್ರೂಪ್ ಲೀಡರ್‌ಗಳು ನೀಡಿದ ಸುಳ್ಳು ದೂರುಗಳನ್ನು ನಂಬಿ ಶಾಸಕರು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರು ಖುದ್ದು ಸ್ಥಳಕ್ಕೆ ಆಗಮಿಸಿ ಕಾಮಗಾರಿಗಳನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳು ಆಗ್ರಹಿಸಿದ್ದಾರೆ. ಮಾಧ್ಯಮಗಳಲ್ಲಿ ಬಂದ ಸುಳ್ಳು ವರದಿಗಳಿಂದ ತೀವ್ರ ಮಾನಸಿಕ ಖಿನ್ನತೆ ಉಂಟಾಗಿದ್ದು, ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.




    #dakshinakannada
    Previous Articleಹಾಸನ ಜೈಲಲ್ಲಿ ವಿಚಾರಣಾಧೀನ ಕೈದಿಗಳ ಭೀಕರ ಮಾರಾಮಾರಿ: ಜಗಳ ಬಿಡಿಸಲು ಹೋದ ಸಿಬ್ಬಂದಿಗೂ ಹಲ್ಲೆ
    Next Article ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಭವಿಷ್ಯದಲ್ಲಿ ಬ್ರೇಕ್ ಬೀಳತ್ತಾ?-ಆಟೋ ಕಂಪನಿಗಳಿಗೆ ಸೂಚನೆ ಕೊಟ್ಟ ಪ್ರಧಾನಮಂತ್ರಿ ಸಲಹೆಗಾರ..!

    Related Posts

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026

    ಅಷ್ಟಮಿ ಭಜನೆ ವೇಳೆ ದುರಂತ: ಭಜನೆ ಮಾಡುತ್ತಲೇ ಕುಸಿದು ಬಿದ್ದ ಯುವಕ, ಹೃದಯಾಘಾತದಿಂದ ಸಾವು

    September 5, 2026

    ಪುತ್ತೂರು: ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಕೇರಳದ ಆರೋಪಿಯ ಬಂಧನ

    September 4, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತೀರ್ಪು ನೀಡಲು ಜ್ಯೂರಿ ವಿಫಲ

    September 5, 2026

    ‘ಆಪರೇಷನ್ ಅಶ್‌ದಾರ್’ ಯಶಸ್ಸು: ಲಷ್ಕರ್ ಉಗ್ರ ಕಮಾಂಡರ್ ಯಾಸಿರ್ ಹತ್ಯೆ

    September 5, 2026

    ಅವೈಜ್ಞಾನಿಕ ರಸ್ತೆಗೆ ಮತ್ತೊಂದು ಬಲಿ: ಬೈಕ್‌ನಿಂದ ಬಿದ್ದ ಮಹಿಳೆ ಕಾಲಿನ ಮೇಲೆ ಹರಿದ ಟಿಪ್ಪರ್

    September 5, 2026

    ‘ಚಂದ್ರನತ್ತ ತಲುಪಿದ ಭಾರತ, ಜಾತಿ ಪಿಡುಗಿನಿಂದ ಇನ್ನೂ ಮುಕ್ತವಾಗಿಲ್ಲ’: ಬಾಂಬೆ ಹೈಕೋರ್ಟ್

    September 5, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಅವೈಜ್ಞಾನಿಕ ರಸ್ತೆಗೆ ಮತ್ತೊಂದು ಬಲಿ: ಬೈಕ್‌ನಿಂದ ಬಿದ್ದ ಮಹಿಳೆ ಕಾಲಿನ ಮೇಲೆ ಹರಿದ ಟಿಪ್ಪರ್

    September 5, 2026

    ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: 40 ಕೆಜಿ ಎಕ್ಸ್‌ಪೈರ್ಡ್ ಮೆಣಸಿನಕಾಯಿ ಪತ್ತೆ, ಕ್ಲಬ್‌ಗೆ ಬೀಗ

    September 5, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.