ಚಿಕ್ಕಬಳ್ಳಾಪುರ: ತಾಲೂಕಿನ ಚೊಕ್ಕಹಳ್ಳಿ ಗ್ರಾಮದಲ್ಲಿ 28 ವರ್ಷದ ಚೈತ್ರಾ ಎಂಬುವವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಗಂಡನ ಕಿರುಕುಳದಿಂದ ಬೇಸತ್ತು, ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದ ಚೈತ್ರಾ, ಮಂಚಿನಬೆಲೆ ಗ್ರಾಮದ ಶಬ್ಬೀರ್ ಎಂಬುವವರೊಂದಿಗೆ ಪ್ರೇಮಾಂಕುರವಾಗಿ, ಗಂಡ-ಹೆಂಡತಿಯಂತೆ ಬದುಕುತ್ತಿದ್ದರು. ಶಬ್ಬೀರ್ ಜೊತೆಗಿದ್ದಾಗಲೇ ಚೈತ್ರಾ ಮೃತಪಟ್ಟಿದ್ದು, ಅವರ ಕತ್ತಿನ ಭಾಗದಲ್ಲಿ ಹಗ್ಗದಿಂದ ಬಿಗಿದ ಗುರುತುಗಳು ಪತ್ತೆಯಾಗಿವೆ. ಚೈತ್ರಾ ಸಾವಿಗೀಡಾಗುತ್ತಿದ್ದಂತೆ, ಪ್ರಿಯಕರ ಶಬ್ಬೀರ್ ಆಕೆಯ ಫೋನ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಡೆದು ಹಲವು ದಿನಗಳಾದರೂ ಆತ ಪತ್ತೆಯಾಗಿಲ್ಲ. ಇದರಿಂದ ಪ್ರಿಯಕರನಿಂದಲೇ ಚೈತ್ರಾಳ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ








