ಮಂಗಳೂರು: ಬುದ್ಧಿವಂತರ ಜಿಲ್ಲೆ ಎಂದು ಖ್ಯಾತಿ ಪಡೆದಿರುವ ಮಂಗಳೂರಿಗೇ ಬಂದು, ನಯವಾದ ಮಾತಿನಿಂದ ಜನರ ನಂಬಿಕೆ ಗಳಿಸಿ, ಈಗ ದುಬೈ, ಆಫ್ರಿಕಾ, ಆಸ್ಟ್ರೇಲಿಯಾದಲ್ಲಿದ್ದೇನೆ ಎನ್ನುತ್ತಾ ಜನರಿಗೆ ಟೋಪಿ ಹಾಕುತ್ತಿರುವ ವಂಚಕ ಲಂಚುಲಾಲ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇಂತಹ ವಂಚಕರಿಗೆ ಮೋಸ ಮಾಡಲು ಮಂಗಳೂರಿನ ಜನರೇ ಹೊಸ ದಾರಿ ಮಾಡಿಕೊಟ್ಟಂತಾಗಿದೆ.
ಕಮಿಷನರ್ಗೆ ದೂರು ನೀಡದೆ ಮೌನವೇಕೆ?
ಸ್ವತಃ ಪೊಲೀಸರೇ ವಂಚನೆಗೊಳಗಾದವರು ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮಾತು ನೀಡಿದರು ಕೂಡ ಬುದ್ದಿವಂತರ ಜಿಲ್ಲೆಯವರು ಕಂಪ್ಲೇಂಟ್ ನೀಡಲು ಹಿಂಜರಿಯುತ್ತಿದ್ದಾರೆ ಏಕೆ ? ಎಂದು ಈ ಒಂದು ಗುಂಪು ಕಂಪ್ಲೀಟ್ ನೀಡಲು ಸಿದ್ಧತೆ ಕೂಡ ನಡೆಸುತ್ತಿದೆ
ದುಬೈಗೆ ಪರಾರಿ? ಆಫ್ರಿಕಾ, ಆಸ್ಟ್ರೇಲಿಯಾ – ಎಲ್ಲಿದ್ದಾನೆ ವಂಚಕ?
ಅಸ್ತ್ರ ಮತ್ತು ಅಕ್ಷಯ ಪಾತ್ರೆ ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ ಲಂಚುಲಾಲ್ ದುಬೈಗೆ ಹೋಗಿದ್ದಾನೆ ಎಂಬ ಮಾಹಿತಿ ಹರಿದಾಡುತ್ತಿದೆ. ದುಬೈ ಮಾತ್ರವಲ್ಲ, ಆಸ್ಟ್ರೇಲಿಯಾ, ಆಫ್ರಿಕಾ – ಈ ಭೂಪ ನಿಜಕ್ಕೂ ಎಲ್ಲಿದ್ದಾನೆ ಎಂಬ ಕುತೂಹಲ ಜನರಲ್ಲಿ ಮೂಡಿದೆ.
ಈ ಹಿಂದೆ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗಿ, “ನಾನು ಎಲ್ಲಿಗೂ ಹೋಗಿಲ್ಲ, ಆಗಸ್ಟ್ ಅಥವಾ ಸೆಪ್ಟೆಂಬರ್ ಒಳಗೆ ಹಣ ಹಿಂದಿರುಗಿಸುತ್ತೇನೆ” ಎಂದು ಸುಳ್ಳು ಭರವಸೆ ನೀಡುತ್ತಿದ್ದ. ಈಗ ಅದೂ ಇಲ್ಲ! ಎಲ್ಲ ರೀತಿಯಲ್ಲೂ ನಂಬಿಕೆ ಹುಟ್ಟಿಸುತ್ತಿದ್ದ ವಂಚಕ ಲಂಚುಲಾಲ್ ಈಗ ಸಂಪೂರ್ಣ ಮಾಯವಾಗಿದ್ದಾನೆ.
ಮೊದಲ ಸ್ಕೀಮ್ ಹಣ ಬಾಕಿ, ಅಷ್ಟರಲ್ಲೇ ಎರಡನೇ ಬಲೆ
ಮೊದಲ ಸ್ಕೀಮ್ನ ಪಾವತಿಗಳು ಬಾಕಿ ಇರುವಾಗಲೇ ಎರಡನೇ ಯೋಜನೆಯ ಜಾಲವನ್ನು ಚಿಕ್ಕಮಂಗಳೂರು ಜಿಲ್ಲೆಗೂ ವಿಸ್ತರಿಸಲಾಗಿತ್ತು. ಯೋಜನೆಯ ಅವಧಿ ಮುಗಿದರೂ ಹಣ ಮರಳಿಸಿಲ್ಲ ಎಂದು ಚಿಕ್ಕಮಂಗಳೂರಿನ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡನೇ ಸ್ಕೀಮ್ನ ಹಣ ವಿತ್ಡ್ರಾ ಮಾಡುವ ಸಮಯ ಬರುತ್ತಿದ್ದಂತೆ ವಂಚಕ ಲಂಚುಲಾಲ್ ಬಾಯಿಗೆ ಬೀಗ ಹಾಕಿಕೊಂಡು ಮೌನಕ್ಕೆ ಶರಣಾಗಿದ್ದಾನೆ.
ನಂಬಿಕೆ ಹುಟ್ಟಿಸುತ್ತಿದ್ದವರೂ ಎಸ್ಕೇಪ್: ಇದು ಪೂರ್ವನಿಯೋಜಿತ ಸಂಚೇ?
ಈತನ ಜೊತೆ ನಂಬಿಕೆ ಮೂಡಿಸಲು ಗುಂಪಿನಲ್ಲಿ ಓಡಾಡುತ್ತಿದ್ದವರೂ ಈಗ ಎಸ್ಕೇಪ್ ಆಗಿದ್ದಾರೆ. ಹಾಗಾದರೆ ಇದು ಪೂರ್ವನಿಯೋಜಿತ ಸಂಚೇ ಎಂಬ ಅನುಮಾನ ಬಲವಾಗಿದೆ. ಮಂಗಳೂರಿನಲ್ಲಿ ಸ್ವಂತ ಮನೆಯೂ ಇಲ್ಲದ ಲಂಚುಲಾಲ್, ಬೇರೆ ರಾಜ್ಯದಿಂದ ಬಂದು ಬುದ್ಧಿವಂತ ಊರಿನ ಜನರಿಗೇ ಟೋಪಿ ಹಾಕಿರುವುದು ದೊಡ್ಡ ವಿಪರ್ಯಾಸ.
ಬಡವರ ಬೆವರಿನ ಹಣಕ್ಕೆ ಕನ್ನ ಹಾಕಿದ ವಂಚಕ
ಈ ಯೋಜನೆಯಲ್ಲಿ ಹಣ ಹೂಡಿದವರಲ್ಲಿ ಅಂಗಡಿ, ಹೋಟೆಲ್ ಕೆಲಸಗಾರರು, ಕೂಲಿ ಕಾರ್ಮಿಕರು, ಮೇಸ್ತ್ರಿಗಳು ಸೇರಿದಂತೆ ಸಣ್ಣಪುಟ್ಟ ಉದ್ಯೋಗ ಮಾಡುವ ಶ್ರಮಜೀವಿಗಳೇ ಹೆಚ್ಚು. ಹಣ ಮರಳದಿರುವುದು ಮತ್ತು ಕಚೇರಿಗಳಿಗೆ ಬೀಗ ಬಿದ್ದಿರುವುದರಿಂದ ಹೂಡಿಕೆದಾರರಲ್ಲಿ ಆತಂಕ ಮನೆಮಾಡಿದೆ. ಆದರೂ ದೂರು ನೀಡದೆ, ತನಿಖೆ ಮತ್ತು ಕಾನೂನು ಕ್ರಮಕ್ಕೆ ದಾರಿ ಮಾಡಿಕೊಡದಿರುವುದೇ ಇಂತಹ ವಂಚಕರಿಗೆ ಇನ್ನಷ್ಟು ಪ್ರೇರಣೆ ನೀಡಿದಂತಿದೆ.








