Close Menu
    What's Hot

    ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ: 12 ವರ್ಷದ ಬಾಲಕನ ದಾರುಣ ಸಾವು

    September 15, 2026

    ‘ಮಾತೆರೆಗ್‌ಲ ಸೊಲ್ಮೆಲು’ ಎಂದ ಡಿಕೆಶಿ: ಸೆ.18ಕ್ಕೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ

    September 15, 2026

    ಮಹಿಳಾ ಬೈಕ್ ಸವಾರೆಗೆ ಡಿಕ್ಕಿ ಹೊಡೆದು ಪರಾರಿ ಪ್ರಕರಣ: ‘ಕೊಲೆ ಯತ್ನ’ ಕೇಸ್, ಆರೋಪಿಯ ಬಂಧನ

    September 15, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ಪಾಕ್ ಸಚಿವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿ ಸಮಾರಂಭಕ್ಕೆ ಗೈರಾದ ಟೀಮ್ ಭಾರತೀಯ ಮಹಿಳಾ ಕ್ರಿಕೆಟ್ ತಂಡ
    ಅಂತರಾಷ್ಟ್ರೀಯ

    ಪಾಕ್ ಸಚಿವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿ ಸಮಾರಂಭಕ್ಕೆ ಗೈರಾದ ಟೀಮ್ ಭಾರತೀಯ ಮಹಿಳಾ ಕ್ರಿಕೆಟ್ ತಂಡ

    adminBy adminSeptember 14, 2026Updated:September 14, 2026No Comments2 Mins Read

    ದುಬೈ : ಕಳೆದ ವರ್ಷ ಪುರುಷರ ಟಿ20 ಏಷ್ಯಾ ಕಪ್‌ನಲ್ಲಿ ನಡೆದ ಜಟಾಪಟಿಯಂತೆಯೇ, ಭಾನುವಾರ ನಡೆದ ಮಹಿಳಾ ಏಷ್ಯಾ ಕಪ್ ಫೈನಲ್ ಪಂದ್ಯದ ನಂತರವೂ ಭಾರೀ ಹೈಡ್ರಾಮಾ ನಡೆದಿದೆ. ಶ್ರೀಲಂಕಾವನ್ನು ಸೋಲಿಸಿ 8ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಹಾಗೂ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಸ್ಪಷ್ಟವಾಗಿ ನಿರಾಕರಿಸಿದೆ.

    ಪಹಲ್ಗಮ್ ಭಯೋತ್ಪಾದಕ ದಾಳಿ ಹಾಗೂ ಗಡಿ ಸಂಘರ್ಷಗಳ ಹಿನ್ನೆಲೆಯಲ್ಲಿ ಬಿಸಿಸಿಐ (BCCI) ತಳೆದ ಅಧಿಕೃತ ನಿಲುವಿಗೆ ಬದ್ಧವಾಗಿ ಭಾರತೀಯ ಆಟಗಾರ್ತಿಯರು ಈ ದಿಟ್ಟ ನಿರ್ಧಾರ ತಳೆದಿದ್ದಾರೆ. ಪಂದ್ಯ ಮುಕ್ತಾಯದ ವೇಳೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹಾಗೂ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಭಾರತೀಯ ತಂಡದೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ನಖ್ವಿ ಬದಲಿಗೆ ಎಸಿಸಿ ಉಪಾಧ್ಯಕ್ಷ ಖಾಲಿದ್ ಝರೂನಿ ಅವರಿಂದ ಟ್ರೋಫಿ ಕೊಡಿಸುವಂತೆ ಭಾರತೀಯ ಮಂಡಳಿ ಮನವಿ ಮಾಡಿತ್ತು. ಆದರೆ, ಮೊಹ್ಸಿನ್ ನಖ್ವಿ ತಾವೇ ಪ್ರಶಸ್ತಿ ನೀಡುವುದಾಗಿ ಪಟ್ಟು ಹಿಡಿದರು. ನಖ್ವಿ ಅವರ ಮೊಂಡುತನಕ್ಕೆ ಸೆಡ್ಡು ಹೊಡೆದ ಟೀಮ್ ಇಂಡಿಯಾ ಆಟಗಾರ್ತಿಯರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸದೆ ಡ್ರೆಸ್ಸಿಂಗ್ ರೂಮ್‌ನಲ್ಲೇ ಉಳಿದುಕೊಂಡರು.

    ಶ್ರೀಲಂಕಾ ಆಟಗಾರ್ತಿಯರಿಗೆ ರನ್ನರ್-ಅಪ್ ಪದಕ ವಿತರಿಸಿದ ನಂತರ, ಭಾರತೀಯ ತಂಡ ವೇದಿಕೆಗೆ ಬಾರದ ಕಾರಣ ನಿರೂಪಕರು ಸಮಾರಂಭವನ್ನು ಅಲ್ಲಿಗೇ ಮುಕ್ತಾಯಗೊಳಿಸಿದರು. ಸಾಮಾನ್ಯವಾಗಿ ವಿಜೇತ ನಾಯಕಿಯ ಸಂದರ್ಶನ ಕೊನೆಯಲ್ಲಿ ನಡೆಯಬೇಕಿತ್ತು, ಆದರೆ ಬ್ರಾಡ್‌ಕಾಸ್ಟರ್‌ಗಳು ಪಂದ್ಯ ಮುಗಿದ ತಕ್ಷಣವೇ ಹರ್ಮನ್‌ಪ್ರೀತ್ ಸಂದರ್ಶನ ನಡೆಸಿ ಮುಗಿಸಿದ್ದರು.

    ಸಮಾರಂಭ ಮುಗಿದು ಎಲ್ಲರೂ ನಿರ್ಗಮಿಸಿದ ಬಳಿಕ, ಖಾಲಿ ಸ್ಟೇಡಿಯಂನಲ್ಲಿ ಭಾರತೀಯ ಆಟಗಾರ್ತಿಯರು ಹಾಗೂ ಕೋಚಿಂಗ್ ಸಿಬ್ಬಂದಿ ಒಟ್ಟಿಗೆ ಗ್ರೂಪ್ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ನಖ್ವಿ ಅವರಿಂದ ಟ್ರೋಫಿ ಪಡೆಯದಿರುವುದು ಬಿಸಿಸಿಐನ ಅಧಿಕೃತ ನಿರ್ಧಾರ ಎಂದು ಮುಖ್ಯ ಕೋಚ್ ಅಮೋಲ್ ಮುಜುಂದಾರ್ ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮುನ್ನ ನಡೆದ ಭರಪೂರ ರೋಚಕ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಅವರ ಬಿರುಸಿನ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ 72 ರನ್‌ಗಳ ಭರ್ಜರಿ ಗೆಲುವು ಸಾಧಿಸಿ, 8ನೇ ಬಾರಿಗೆ ಏಷ್ಯಾ ಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು.

     

     




    #national International
    Previous Article‘ಮುಂದಿನ ಜನ್ಮ ಅಂತಿದ್ರೆ ನಿನ್ನವನಾಗಿ ಹುಟ್ಟಿ ಬರುವೆ’: ಪ್ರೇಮ ವಿವಾಹದ ಬೆನ್ನಲ್ಲೇ ಯುವಕ ಸಾವು
    Next Article ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಕಿರಿಕ್: ಕೆಎಸ್‌ಆರ್‌ಟಿಸಿ ಕಂಡಕ್ಟರ್, ಚಾಲಕನ ಮೇಲೆ ಹಲ್ಲೆ

    Related Posts

    ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ: 12 ವರ್ಷದ ಬಾಲಕನ ದಾರುಣ ಸಾವು

    September 15, 2026

    ಮಹಿಳಾ ಬೈಕ್ ಸವಾರೆಗೆ ಡಿಕ್ಕಿ ಹೊಡೆದು ಪರಾರಿ ಪ್ರಕರಣ: ‘ಕೊಲೆ ಯತ್ನ’ ಕೇಸ್, ಆರೋಪಿಯ ಬಂಧನ

    September 15, 2026

    “ನನ್ನನ್ನು ಜೀವಂತವಾಗಿ ಸುಡಲು ಯತ್ನಿಸಿದರು” ಎಂದಿದ್ದ ಇನ್ಫ್ಲುಯೆನ್ಸರ್ ಸಾವು: ಕೊನೆಯ ವಿಡಿಯೋ ವೈರಲ್

    September 15, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ: 12 ವರ್ಷದ ಬಾಲಕನ ದಾರುಣ ಸಾವು

    September 15, 2026

    ‘ಮಾತೆರೆಗ್‌ಲ ಸೊಲ್ಮೆಲು’ ಎಂದ ಡಿಕೆಶಿ: ಸೆ.18ಕ್ಕೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ

    September 15, 2026

    ಮಹಿಳಾ ಬೈಕ್ ಸವಾರೆಗೆ ಡಿಕ್ಕಿ ಹೊಡೆದು ಪರಾರಿ ಪ್ರಕರಣ: ‘ಕೊಲೆ ಯತ್ನ’ ಕೇಸ್, ಆರೋಪಿಯ ಬಂಧನ

    September 15, 2026

    ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು: ಸಚಿವ ಸಂಪುಟದಲ್ಲಿ ನಿರ್ಣಯಕ್ಕೆ ಮಿಥುನ್ ರೈ ಒತ್ತಾಯ

    September 15, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ‘ಮಾತೆರೆಗ್‌ಲ ಸೊಲ್ಮೆಲು’ ಎಂದ ಡಿಕೆಶಿ: ಸೆ.18ಕ್ಕೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ

    September 15, 2026

    ಮನೆಯಲ್ಲೇ ರಕ್ತಸಿಕ್ತ ಸ್ಥಿತಿಯಲ್ಲಿ ವೃದ್ಧ ದಂಪತಿ ಪತ್ತೆ: ಪತಿ-ಪತ್ನಿ ಇಬ್ಬರೂ ಗುಂಡೇಟಿಗೆ ಬಲಿ

    September 15, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.