Close Menu
    What's Hot

    ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ: 12 ವರ್ಷದ ಬಾಲಕನ ದಾರುಣ ಸಾವು

    September 15, 2026

    ‘ಮಾತೆರೆಗ್‌ಲ ಸೊಲ್ಮೆಲು’ ಎಂದ ಡಿಕೆಶಿ: ಸೆ.18ಕ್ಕೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ

    September 15, 2026

    ಮಹಿಳಾ ಬೈಕ್ ಸವಾರೆಗೆ ಡಿಕ್ಕಿ ಹೊಡೆದು ಪರಾರಿ ಪ್ರಕರಣ: ‘ಕೊಲೆ ಯತ್ನ’ ಕೇಸ್, ಆರೋಪಿಯ ಬಂಧನ

    September 15, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು: ಸಚಿವ ಸಂಪುಟದಲ್ಲಿ ನಿರ್ಣಯಕ್ಕೆ ಮಿಥುನ್ ರೈ ಒತ್ತಾಯ
    ಕರಾವಳಿ ಸುದ್ದಿ

    ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು: ಸಚಿವ ಸಂಪುಟದಲ್ಲಿ ನಿರ್ಣಯಕ್ಕೆ ಮಿಥುನ್ ರೈ ಒತ್ತಾಯ

    adminBy adminSeptember 15, 2026No Comments1 Min Read

    ಮಂಗಳೂರು: ತುಳುನಾಡಿನ ಹೆಮ್ಮೆಯ ಕರಾವಳಿ ಹೆಬ್ಬಾಗಿಲಾಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮರವೀರರಾದ ಕೋಟಿ-ಚೆನ್ನಯರ ಹೆಸರನ್ನು ನಾಮಕರಣ ಮಾಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಒತ್ತಾಯಿಸಿದ್ದಾರೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿರುವ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ಈ ಕುರಿತು ಅಧಿಕೃತ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸುವಂತೆ ಮನವಿ ಮಾಡಿದ್ದಾರೆ. ಕೋಟಿ-ಚೆನ್ನಯರು ಕೇವಲ ಐತಿಹಾಸಿಕ ನಾಯಕರಲ್ಲ, ತುಳುನಾಡಿನ ಸ್ವಾಭಿಮಾನ, ಸಾಮಾಜಿಕ ನ್ಯಾಯ, ಸತ್ಯ, ಧರ್ಮ, ಶೌರ್ಯ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಸಂಕೇತವಾಗಿದ್ದಾರೆ. ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ಕರಾವಳಿಯ ಜನತೆಗೆ ನೀಡುವ ಬಹುದೊಡ್ಡ ಗೌರವವಾಗಲಿದೆ ಎಂದು ಮಿಥುನ್ ರೈ ಪತ್ರದಲ್ಲಿ ತಿಳಿಸಿದ್ದಾರೆ.

    ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡುವ ಬೇಡಿಕೆಯ ಸುದೀರ್ಘ ಹೋರಾಟದ ಬಗ್ಗೆಯೂ ಮಿಥುನ್ ರೈ ನೆನಪಿಸಿದ್ದಾರೆ. ತಾವು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2010ರ ಡಿಸೆಂಬರ್ 10ರಂದು ಕೆ.ಪಿ.ಟಿ ವೃತ್ತದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಬೃಹತ್ ‘ಪಂಜಿನ ಮೆರವಣಿಗೆ’ಯನ್ನು ಮುನ್ನಡೆಸಿ, ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡುವಂತೆ ಒತ್ತಾಯಿಸಿದ್ದಾಗಿ ತಿಳಿಸಿದ್ದಾರೆ. ಈ ಬೇಡಿಕೆಗೆ ಕರಾವಳಿಯ ಸಮಸ್ತ ಜನತೆಯ ಬೆಂಬಲವಿದ್ದು, ದಶಕಗಳ ಹೋರಾಟದ ಹಿನ್ನೆಲೆಯಿದೆ ಎಂದು ಅವರು ಹೇಳಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯ ಮಹತ್ವದ ಸಂದರ್ಭದಲ್ಲೇ, ಮಂಗಳೂರು ವಿಮಾನ ನಿಲ್ದಾಣವನ್ನು ‘ಕೋಟಿ-ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಸಂಪುಟದಲ್ಲಿ ಅನುಮೋದಿಸಬೇಕು. ಬಳಿಕ ಕೇಂದ್ರ ಸರ್ಕಾರಕ್ಕೆ ಅಂತಿಮ ಶಿಫಾರಸು ಕಳುಹಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವಿಸುವಂತೆ ಮಿಥುನ್ ರೈ ಅವರು ಸಚಿವ ಯು.ಟಿ. ಖಾದರ್ ಅವರನ್ನು ಕೋರಿದ್ದಾರೆ.




    #dakshinakannada
    Previous Articleಮನೆಯಲ್ಲೇ ರಕ್ತಸಿಕ್ತ ಸ್ಥಿತಿಯಲ್ಲಿ ವೃದ್ಧ ದಂಪತಿ ಪತ್ತೆ: ಪತಿ-ಪತ್ನಿ ಇಬ್ಬರೂ ಗುಂಡೇಟಿಗೆ ಬಲಿ
    Next Article ಮಹಿಳಾ ಬೈಕ್ ಸವಾರೆಗೆ ಡಿಕ್ಕಿ ಹೊಡೆದು ಪರಾರಿ ಪ್ರಕರಣ: ‘ಕೊಲೆ ಯತ್ನ’ ಕೇಸ್, ಆರೋಪಿಯ ಬಂಧನ

    Related Posts

    ಮಂಗಳೂರು: ಅರವಿಂದ್ ಬೋಳಾರ್ ನ ವಿವಾದ್ಮತಕ ಹೇಳಿಕೆ; ಆಕ್ರೋಶಗೊಂಡ ವ್ಯಕ್ತಿಯೊಂದಿಗಿನ ಮಾತುಕತೆಯ ಆಡಿಯೋ ವೈರಲ್

    September 15, 2026

    ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ರಮ ಮರ ಕಡಿದು ಸಾಗಿಸಲು ಯತ್ನ: ₹10 ಲಕ್ಷಕ್ಕೂ ಅಧಿಕ ಮೌಲ್ಯದ ಮರಗಳ ಸಾಗಾಟ ವಿಫಲ

    September 15, 2026

    ಅಶ್ಲೀಲ ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ್‌ಮೇಲ್: 19 ವರ್ಷದ ಯುವಕನಿಂದ ₹5.24 ಲಕ್ಷ ವಸೂಲಿ

    September 15, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ: 12 ವರ್ಷದ ಬಾಲಕನ ದಾರುಣ ಸಾವು

    September 15, 2026

    ‘ಮಾತೆರೆಗ್‌ಲ ಸೊಲ್ಮೆಲು’ ಎಂದ ಡಿಕೆಶಿ: ಸೆ.18ಕ್ಕೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ

    September 15, 2026

    ಮಹಿಳಾ ಬೈಕ್ ಸವಾರೆಗೆ ಡಿಕ್ಕಿ ಹೊಡೆದು ಪರಾರಿ ಪ್ರಕರಣ: ‘ಕೊಲೆ ಯತ್ನ’ ಕೇಸ್, ಆರೋಪಿಯ ಬಂಧನ

    September 15, 2026

    ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು: ಸಚಿವ ಸಂಪುಟದಲ್ಲಿ ನಿರ್ಣಯಕ್ಕೆ ಮಿಥುನ್ ರೈ ಒತ್ತಾಯ

    September 15, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ‘ಮಾತೆರೆಗ್‌ಲ ಸೊಲ್ಮೆಲು’ ಎಂದ ಡಿಕೆಶಿ: ಸೆ.18ಕ್ಕೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ

    September 15, 2026

    ಮನೆಯಲ್ಲೇ ರಕ್ತಸಿಕ್ತ ಸ್ಥಿತಿಯಲ್ಲಿ ವೃದ್ಧ ದಂಪತಿ ಪತ್ತೆ: ಪತಿ-ಪತ್ನಿ ಇಬ್ಬರೂ ಗುಂಡೇಟಿಗೆ ಬಲಿ

    September 15, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.