Close Menu
    What's Hot

    ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಪ್ರಾರ್ಥಿಸುತ್ತಿದ್ದಾಗಲೇ ವೃದ್ಧ ಸಾವು: ಕೆಲವೇ ಗಂಟೆಗಳ ಅಂತರದ ಸಾವಲ್ಲೂ ಒಂದಾದ ಜೋಡಿ

    September 16, 2026

    ಮಕ್ಕಾದಲ್ಲಿ ಮೊದಲ ಬಾರಿಗೆ ವಾಯುದಾಳಿ ಎಚ್ಚರಿಕೆ: ಹೌತಿ ಕ್ಷಿಪಣಿ, ಡ್ರೋನ್ ದಾಳಿ ಬೆನ್ನಲ್ಲೇ ಸೈರನ್

    September 16, 2026

    14 ದಿನಗಳಲ್ಲಿ 8 ಅಪ್ರಾಪ್ತ ಮಕ್ಕಳ ರಕ್ಷಣೆ: ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ವಿಶೇಷ ಕಾರ್ಯಾಚರಣೆ

    September 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»‘ನನ್ನನ್ನು ತಾಲಿಬಾನ್ ಬಂಧಿಸಿದೆ’ ಎಂದು ಆತಂಕ ಸೃಷ್ಟಿಸಿದ್ದ ಭಾರತೀಯ ಯೂಟ್ಯೂಬರ್ ಅರುಣಿಮಾ ಸೇಫ್
    ಅಂತರಾಷ್ಟ್ರೀಯ

    ‘ನನ್ನನ್ನು ತಾಲಿಬಾನ್ ಬಂಧಿಸಿದೆ’ ಎಂದು ಆತಂಕ ಸೃಷ್ಟಿಸಿದ್ದ ಭಾರತೀಯ ಯೂಟ್ಯೂಬರ್ ಅರುಣಿಮಾ ಸೇಫ್

    adminBy adminSeptember 16, 2026No Comments1 Min Read

    ನವದೆಹಲಿ: ಅಫ್ಘಾನಿಸ್ತಾನದಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದಾಗ ತಾಲಿಬಾನ್ ಆಡಳಿತದಿಂದ ಬಂಧನಕ್ಕೊಳಗಾಗಿದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಆತಂಕ ಸೃಷ್ಟಿಸಿದ್ದ ಭಾರತೀಯ ಏಕಾಂಗಿ ಪ್ರಯಾಣಿಕ ಅರುಣಿಮಾ ಐಪಿ ಮಂಗಳವಾರ ತಾನು ಸುರಕ್ಷಿತವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಟ್ಟಪಾಲಂ ಮೂಲದ ಅರುಣಿಮಾ, ಕಳೆದ ಆರು ವರ್ಷಗಳಿಂದ ಜಗತ್ತಿನಾದ್ಯಂತ ಬ್ಯಾಕ್‌ಪ್ಯಾಕಿಂಗ್ ಹಾಗೂ ಹಿಚ್‌ಹೈಕಿಂಗ್ ಮೂಲಕ ಏಕಾಂಗಿ ಪ್ರವಾಸ ಮಾಡುತ್ತಿರುವ ಪ್ರಸಿದ್ಧ ಯೂಟ್ಯೂಬರ್ ಆಗಿದ್ದಾರೆ.

    ಕಳೆದ ಆಗಸ್ಟ್ 27 ರಂದು ಅಫ್ಘಾನಿಸ್ತಾನಕ್ಕೆ ತಲುಪಿದ್ದ ಅರುಣಿಮಾ, ಅಲ್ಲಿನ ಕಠಿಣ ಪರಿಸ್ಥಿತಿಯ ನಡುವೆಯೂ ಪ್ರವಾಸ ಮುಂದುವರಿಸಿದ್ದರು. ಸೋಮವಾರ ಯೂಟ್ಯೂಬ್‌ನಲ್ಲಿ ವೀಡಿಯೊ ಹಂಚಿಕೊಂಡಿದ್ದ ಅವರು, “ಅಫ್ಘಾನಿಸ್ತಾನದ ಕಾನೂನಿನ ಪ್ರಕಾರ ಮಹಿಳೆಯರು ಒಂಟಿಯಾಗಿ ಪ್ರಯಾಣಿಸಲು ಅವಕಾಶವಿಲ್ಲ. ಹೀಗಾಗಿ ತಾಲಿಬಾನ್ ನನ್ನನ್ನು ಬಂಧಿಸಿದೆ. ದಯವಿಟ್ಟು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ನನಗೆ ಸಹಾಯ ಮಾಡಿ” ಎಂದು ಕಣ್ಣೀರಿಟ್ಟು ಸಹಾಯ ಕೋರಿದ್ದರು.

    ಸೋಮವಾರ ಸಂಜೆ ಟ್ರಕ್ ಹತ್ತಿ ಬಾಮಿಯಾನ್ ತಲುಪಿದ ವೇಳೆ, ರಾತ್ರಿ ವೇಳೆಯಲ್ಲಿ ಒಂಟಿ ಮಹಿಳೆಯನ್ನು ಕಂಡು ಸ್ಥಳೀಯರು ಹಾಗೂ ತಾಲಿಬಾನ್ ಪಡೆಗಳು ಸುತ್ತುವರಿದಿದ್ದವು. “ಅಫ್ಘಾನ್‌ನಲ್ಲಿ ಪ್ರತಿಯೊಬ್ಬ ತಾಲಿಬಾನ್ ಸದಸ್ಯನೂ ಪೊಲೀಸ್ ಅಧಿಕಾರಿಯಂತೆ. ಪುರುಷ ಸಂಗಾತಿ (ಮಹ್ರಮ್) ಅಥವಾ ಗೈಡ್ ಇಲ್ಲದೆ ಪ್ರಯಾಣಿಸಲು ಅನುಮತಿ ನೀಡಲು ಜಲಾಲಾಬಾದ್ ಅಧಿಕಾರಿಗಳು ನಿರಾಕರಿಸಿದ್ದರು. ನಿಯಮ ಉಲ್ಲಂಘಿಸಿದ್ದಕ್ಕೆ ಬಂಧಿಸುವುದಾಗಿ ಹೇಳಿದ್ದರು. ಆ ಸಮಯ ಅತ್ಯಂತ ಭಯಾನಕವಾಗಿತ್ತು, ಜೀವ ಉಳಿಯುವುದಿಲ್ಲ ಎಂದುಕೊಂಡಿದ್ದೆ” ಎಂದು ಅರುಣಿಮಾ ವಿವರಿಸಿದ್ದಾರೆ.

    ಆತಂಕದ ಗಂಟೆಗಳ ಬಳಿಕ ಭಾರತೀಯ ರಾಯಭಾರ ಕಚೇರಿ ಹಾಗೂ ಸ್ಥಳೀಯರ ನೆರವಿನಿಂದ ಪ್ರಕರಣ ತಿಳಿಯಾಗಿದೆ. ಮಂಗಳವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅರುಣಿಮಾ, “ನಾನು ಈಗ ಸಂಪೂರ್ಣ ಸುರಕ್ಷಿತವಾಗಿದ್ದೇನೆ” ಎಂದು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಅಫ್ಘಾನಿಸ್ತಾನದ ಸಾಹಸವನ್ನು ಮುಗಿಸಿ 500 ಕಿ.ಮೀ ದೂರದಲ್ಲಿರುವ ಉಜ್ಬೇಕಿಸ್ತಾನ್‌ ಗಡಿಯತ್ತ ತೆರಳುತ್ತಿದ್ದು, ಮಾರ್ಗಮಧ್ಯದ ಚೆಕ್‌ಪೋಸ್ಟ್‌ಗಳನ್ನು ದಾಟುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

     




    #national International
    Previous Articleನಕ್ಸಲ್ ಹೆಸರಿನಲ್ಲಿ ಗ್ರಾಮಸ್ಥರಿಗೆ ಬೆದರಿಕೆ: ‘ಸುಡೋ ನಕ್ಸಲ್’ ವೆಂಕಟೇಶ್ ಕೊನೆಗೂ ಪೊಲೀಸರ ಬಲೆಗೆ
    Next Article ಮನೆಯವರು ಗೃಹಪ್ರವೇಶಕ್ಕೆ ಹೋಗಿದ್ದೇ ತಡ: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದರು

    Related Posts

    ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಪ್ರಾರ್ಥಿಸುತ್ತಿದ್ದಾಗಲೇ ವೃದ್ಧ ಸಾವು: ಕೆಲವೇ ಗಂಟೆಗಳ ಅಂತರದ ಸಾವಲ್ಲೂ ಒಂದಾದ ಜೋಡಿ

    September 16, 2026

    ಮಕ್ಕಾದಲ್ಲಿ ಮೊದಲ ಬಾರಿಗೆ ವಾಯುದಾಳಿ ಎಚ್ಚರಿಕೆ: ಹೌತಿ ಕ್ಷಿಪಣಿ, ಡ್ರೋನ್ ದಾಳಿ ಬೆನ್ನಲ್ಲೇ ಸೈರನ್

    September 16, 2026

    14 ದಿನಗಳಲ್ಲಿ 8 ಅಪ್ರಾಪ್ತ ಮಕ್ಕಳ ರಕ್ಷಣೆ: ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ವಿಶೇಷ ಕಾರ್ಯಾಚರಣೆ

    September 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಪ್ರಾರ್ಥಿಸುತ್ತಿದ್ದಾಗಲೇ ವೃದ್ಧ ಸಾವು: ಕೆಲವೇ ಗಂಟೆಗಳ ಅಂತರದ ಸಾವಲ್ಲೂ ಒಂದಾದ ಜೋಡಿ

    September 16, 2026

    ಮಕ್ಕಾದಲ್ಲಿ ಮೊದಲ ಬಾರಿಗೆ ವಾಯುದಾಳಿ ಎಚ್ಚರಿಕೆ: ಹೌತಿ ಕ್ಷಿಪಣಿ, ಡ್ರೋನ್ ದಾಳಿ ಬೆನ್ನಲ್ಲೇ ಸೈರನ್

    September 16, 2026

    14 ದಿನಗಳಲ್ಲಿ 8 ಅಪ್ರಾಪ್ತ ಮಕ್ಕಳ ರಕ್ಷಣೆ: ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ವಿಶೇಷ ಕಾರ್ಯಾಚರಣೆ

    September 16, 2026

    ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್‌ ಕ್ಲಾಸ್: ₹2 ಕೋಟಿ ಠೇವಣಿಗೆ ಆದೇಶ

    September 16, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    14 ದಿನಗಳಲ್ಲಿ 8 ಅಪ್ರಾಪ್ತ ಮಕ್ಕಳ ರಕ್ಷಣೆ: ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ವಿಶೇಷ ಕಾರ್ಯಾಚರಣೆ

    September 16, 2026

    ಆನೆಗುಡ್ಡೆ ದೇವಸ್ಥಾನದಲ್ಲಿ ಕಳ್ಳಿಯರ ಕೈಚಳಕ: 75ರ ವೃದ್ಧೆಯ 2.5 ಲಕ್ಷ ರೂ. ಚಿನ್ನದ ಸರ ಕಳವು

    September 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.