Close Menu
    What's Hot

    ಅಂಗನವಾಡಿ ಮಕ್ಕಳ ಆಹಾರದ ಗುಣಮಟ್ಟಕ್ಕೆ ಖಾದರ್ ಕಟ್ಟುನಿಟ್ಟಿನ ಕ್ರಮ: ಆಹಾರ ಮಾದರಿ ಲ್ಯಾಬ್‌ಗೆ ರವಾನೆ

    September 16, 2026

    ಮದುವೆಯಾಗಿ ತಿಂಗಳಲ್ಲೇ ಅಂತ್ಯ: ಹಿಟ್ ಆ್ಯಂಡ್ ರನ್‌ಗೆ ದಂಪತಿ ಸಾವು

    September 16, 2026

    ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಪ್ರಾರ್ಥಿಸುತ್ತಿದ್ದಾಗಲೇ ವೃದ್ಧ ಸಾವು: ಕೆಲವೇ ಗಂಟೆಗಳ ಅಂತರದ ಸಾವಲ್ಲೂ ಒಂದಾದ ಜೋಡಿ

    September 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ಮಕ್ಕಾದಲ್ಲಿ ಮೊದಲ ಬಾರಿಗೆ ವಾಯುದಾಳಿ ಎಚ್ಚರಿಕೆ: ಹೌತಿ ಕ್ಷಿಪಣಿ, ಡ್ರೋನ್ ದಾಳಿ ಬೆನ್ನಲ್ಲೇ ಸೈರನ್
    ಅಂತರಾಷ್ಟ್ರೀಯ

    ಮಕ್ಕಾದಲ್ಲಿ ಮೊದಲ ಬಾರಿಗೆ ವಾಯುದಾಳಿ ಎಚ್ಚರಿಕೆ: ಹೌತಿ ಕ್ಷಿಪಣಿ, ಡ್ರೋನ್ ದಾಳಿ ಬೆನ್ನಲ್ಲೇ ಸೈರನ್

    adminBy adminSeptember 16, 2026No Comments1 Min Read

    ರಿಯಾದ್: ಯೆಮೆನ್‌ನ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಸೌದಿ ಅರೇಬಿಯಾ ಮೇಲಿನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿರುವ ಬೆನ್ನಲ್ಲೇ, ಪವಿತ್ರ ನಗರ ಮಕ್ಕಾದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ‘ವಾಯುದಾಳಿ ಎಚ್ಚರಿಕೆ’  ನೀಡಿ ಸೈರನ್ ಬಜಾಯಿಸಲಾಗಿದೆ.

    ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯವು ಮಂಗಳವಾರ ಮಕ್ಕಾ, ಜಿದ್ದಾ ಹಾಗೂ ತಾಯಿಫ್ ಸೇರಿದಂತೆ ಪಶ್ಚಿಮ ಸೌದಿ ಅರೇಬಿಯಾದ ಪ್ರಮುಖ ನಗರಗಳಲ್ಲಿ ಜಾಗರೂಕರಾಗಿರುವಂತೆ ತುರ್ತು ಎಚ್ಚರಿಕೆ ನೀಡಿತು. ಆದರೆ, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ‘ಮಕ್ಕಾ ನಗರದಲ್ಲಿನ ಅಪಾಯ ದೂರವಾಗಿದೆ’ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿತು.

    ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯವು ಸಾಮಾಜಿಕ ಜಾಲತಾಣ ‘X’ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾರ್ವಜನಿಕರು ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಹೊರಾಂಗಣದಲ್ಲಿ ಗುಂಪುಗೂಡುವುದು ಮತ್ತು ವೀಡಿಯೊ ಚಿತ್ರೀಕರಣ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಹಾಗೂ ಯಾವುದೇ ತುರ್ತು ಸಂದರ್ಭದಲ್ಲಿ 911 ಸಂಖ್ಯೆಗೆ ಕರೆ ಮಾಡಬೇಕೆಂದು ಖಡಕ್ ಸೂಚನೆ ನೀಡಿದೆ.

    ಯೆಮೆನ್‌ನಿಂದ ಹೌದಿ ಬಂಡುಕೋರರು ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಿಂದ ಸೌದಿಯ ತೈಲ ಘಟಕಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಕನಿಷ್ಠ 73 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಸೌದಿ ಅರೇಬಿಯಾದ ಖಮಿಸ್ ಮುಶೈತ್‌ನಲ್ಲಿರುವ ‘ಕಿಂಗ್ ಖಾಲಿದ್ ವಾಯುನೆಲೆ’ ಮೇಲೆ ಡಜನ್‌ಗಟ್ಟಲೆ ಕ್ಷಿಪಣಿಗಳನ್ನು ಬಳಸಿ ಬೃಹತ್ ದಾಳಿ ನಡೆಸಿರುವುದಾಗಿ ಹೌದಿಗಳು ಹೇಳಿಕೊಂಡಿದ್ದಾರೆ.
    ದಾಳಿಯ ಭೀತಿಯಿಂದಾಗಿ ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲಝೀಝ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ  ವಿಮಾನ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.




    International
    Previous Article14 ದಿನಗಳಲ್ಲಿ 8 ಅಪ್ರಾಪ್ತ ಮಕ್ಕಳ ರಕ್ಷಣೆ: ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ವಿಶೇಷ ಕಾರ್ಯಾಚರಣೆ
    Next Article ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಪ್ರಾರ್ಥಿಸುತ್ತಿದ್ದಾಗಲೇ ವೃದ್ಧ ಸಾವು: ಕೆಲವೇ ಗಂಟೆಗಳ ಅಂತರದ ಸಾವಲ್ಲೂ ಒಂದಾದ ಜೋಡಿ

    Related Posts

    ‘ನನ್ನನ್ನು ತಾಲಿಬಾನ್ ಬಂಧಿಸಿದೆ’ ಎಂದು ಆತಂಕ ಸೃಷ್ಟಿಸಿದ್ದ ಭಾರತೀಯ ಯೂಟ್ಯೂಬರ್ ಅರುಣಿಮಾ ಸೇಫ್

    September 16, 2026

    “ಎಐ ನಮ್ಮೆಲ್ಲರನ್ನೂ ಕೊಲ್ಲುವ ಸಾಮರ್ಥ್ಯ ಹೊಂದಿದೆ” ಎಂದ ಗೂಗಲ್ ಡೀಪ್‌ಮೈಂಡ್ ಸುರಕ್ಷತಾ ಸಂಶೋಧಕ ರಾಜೀನಾಮೆ

    September 15, 2026

    ಪಾಕ್ ಸಚಿವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿ ಸಮಾರಂಭಕ್ಕೆ ಗೈರಾದ ಟೀಮ್ ಭಾರತೀಯ ಮಹಿಳಾ ಕ್ರಿಕೆಟ್ ತಂಡ

    September 14, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಅಂಗನವಾಡಿ ಮಕ್ಕಳ ಆಹಾರದ ಗುಣಮಟ್ಟಕ್ಕೆ ಖಾದರ್ ಕಟ್ಟುನಿಟ್ಟಿನ ಕ್ರಮ: ಆಹಾರ ಮಾದರಿ ಲ್ಯಾಬ್‌ಗೆ ರವಾನೆ

    September 16, 2026

    ಮದುವೆಯಾಗಿ ತಿಂಗಳಲ್ಲೇ ಅಂತ್ಯ: ಹಿಟ್ ಆ್ಯಂಡ್ ರನ್‌ಗೆ ದಂಪತಿ ಸಾವು

    September 16, 2026

    ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಪ್ರಾರ್ಥಿಸುತ್ತಿದ್ದಾಗಲೇ ವೃದ್ಧ ಸಾವು: ಕೆಲವೇ ಗಂಟೆಗಳ ಅಂತರದ ಸಾವಲ್ಲೂ ಒಂದಾದ ಜೋಡಿ

    September 16, 2026

    ಮಕ್ಕಾದಲ್ಲಿ ಮೊದಲ ಬಾರಿಗೆ ವಾಯುದಾಳಿ ಎಚ್ಚರಿಕೆ: ಹೌತಿ ಕ್ಷಿಪಣಿ, ಡ್ರೋನ್ ದಾಳಿ ಬೆನ್ನಲ್ಲೇ ಸೈರನ್

    September 16, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಮದುವೆಯಾಗಿ ತಿಂಗಳಲ್ಲೇ ಅಂತ್ಯ: ಹಿಟ್ ಆ್ಯಂಡ್ ರನ್‌ಗೆ ದಂಪತಿ ಸಾವು

    September 16, 2026

    14 ದಿನಗಳಲ್ಲಿ 8 ಅಪ್ರಾಪ್ತ ಮಕ್ಕಳ ರಕ್ಷಣೆ: ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ವಿಶೇಷ ಕಾರ್ಯಾಚರಣೆ

    September 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.