Close Menu
    What's Hot

    ಕಾರ್ಕಳದಲ್ಲಿ ಮನೆಗಾಗಿ ತಂದೆ–ಮಗನ ನಡುವೆ ಗಲಾಟೆ; ಕತ್ತಿಯಿಂದ ಕಡಿದು ಕೊಲೆಗೆ ಯತ್ನ

    September 29, 2026

    ಮಂಗಳೂರು ಪಾಲಿಕೆಯ ಎಡಿಬಿ ಸಾಲಕ್ಕೆ 24ಕ್ಕೂ ಹೆಚ್ಚು ನೋಟಿಸ್; ಒಂದೇ ಕಂತೂ ಪಾವತಿಸದೆ ಬಡ್ಡಿ ಸೇರಿ ₹1,375 ಕೋಟಿಗೆ ಏರಿಕೆ

    September 29, 2026

    ಮಂಗಳೂರು: ಕೋರ್ಟ್‌ಗೆ ತೆರಳುತ್ತಿದ್ದ ನ್ಯಾಯಾಧೀಶರ ಕಾರಿಗೆ ಆಟೋ ಡಿಕ್ಕಿ; ಹಲವರಿಗೆ ಗಾಯ

    September 29, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ದೇಶದಲ್ಲಿ ಔಷಧಿಗಳ ಗುಣಮಟ್ಟದ ಮೇಲೆ ಕಳವಳ; 220 ಮಾದರಿಗಳು ನಿಗದಿತ ಮಾನದಂಡಕ್ಕೆ ಅನರ್ಹ
    ಅಪರಾಧ

    ದೇಶದಲ್ಲಿ ಔಷಧಿಗಳ ಗುಣಮಟ್ಟದ ಮೇಲೆ ಕಳವಳ; 220 ಮಾದರಿಗಳು ನಿಗದಿತ ಮಾನದಂಡಕ್ಕೆ ಅನರ್ಹ

    adminBy adminSeptember 22, 2026No Comments2 Mins Read

    ನವದೆಹಲಿ/ಬೆಂಗಳೂರು: ದೇಶದಲ್ಲಿ ಔಷಧಿಗಳ ಗುಣಮಟ್ಟದ ಕುರಿತು ಆತಂಕ ಮೂಡಿಸುವ ಮಾಹಿತಿಯೊಂದು ಹೊರಬಿದ್ದಿದೆ. ಆಗಸ್ಟ್‌ ತಿಂಗಳಲ್ಲಿ ನಡೆಸಲಾದ ಔಷಧಿ ಗುಣಮಟ್ಟ ಪರೀಕ್ಷೆಯಲ್ಲಿ 220 ಔಷಧಿ ಮಾದರಿಗಳು ನಿಗದಿತ ಗುಣಮಟ್ಟಕ್ಕೆ ಹೊಂದಿಕೆಯಾಗಿಲ್ಲ ಎಂದು ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ  ತನ್ನ ವರದಿಯಲ್ಲಿ ತಿಳಿಸಿದೆ.

    ಕೇಂದ್ರ ಹಾಗೂ ರಾಜ್ಯ ಮಟ್ಟದ ಡ್ರಗ್ ಟೆಸ್ಟಿಂಗ್ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಗಳ ಆಧಾರದ ಮೇಲೆ ಈ ವರದಿ ಸಿದ್ಧವಾಗಿದೆ. ಪರೀಕ್ಷೆಯಲ್ಲಿ 29 ಔಷಧಿ ಮಾದರಿಗಳು ನಿಗದಿತ ಗುಣಮಟ್ಟದ ಮಾನದಂಡಗಳನ್ನ ಪೂರೈಸಿಲ್ಲ ಎಂದು ವರದಿಯಾಗಿದೆ.

    ಇದರ ಜೊತೆಗೆ, ಪರೀಕ್ಷಿಸಲಾದ 191 ಔಷಧಿ ಮಾದರಿಗಳು NSQ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಔಷಧಿಗಳ ಗುಣಮಟ್ಟ ಪರೀಕ್ಷೆಯ ವೇಳೆ ಕೆಲವು ಪ್ರಕರಣಗಳಲ್ಲಿ ಬೇರೆ ಕಂಪನಿಯ ಬ್ರಾಂಡ್ ಹೆಸರನ್ನ ಬಳಸಿಕೊಂಡು ಔಷಧಿಗಳನ್ನು ತಯಾರಿಸಿರುವ ಅಂಶವೂ ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

    ವರದಿಯಲ್ಲಿ ಏನಿದೆ?
    2026ರ ಆಗಸ್ಟ್‌ ಅವಧಿಯಲ್ಲಿ ಕೇಂದ್ರ ಔಷಧ ಪ್ರಯೋಗಾಲಯಗಳು  29 ಔಷಧ ಮಾದರಿಗಳು ಗುಣಮಟ್ಟ ಮಾನದಂಡ ಪೂರೈಸಿಲ್ಲ ಎಂಬುದನ್ನು ಗುರುತಿಸಿವೆ. ಇದೇ ವೇಳೆ, ರಾಜ್ಯ ಔಷಧ ಪರೀಕ್ಷಾ ಪ್ರಯೋಗಾಲಯಗಳು 191 ಔಷಧ ಮಾದರಿಗಳನ್ನು ನಿಗದಿತ ಗುಣಮಟ್ಟಕ್ಕೆ ಹೊಂದಿಕೆಯಾಗಿಲ್ಲ ಎಂಬುದನ್ನು ಪತ್ತೆ ಮಾಡಿವೆ.

    ಔಷಧ ಮಾದರಿಯು ನಿಗದಿಪಡಿಸಲಾದ ಗುಣಮಟ್ಟದ ಮಾನದಂಡಗಳಲ್ಲಿನ 1 ಅಥವಾ ಮತ್ತೊಂದು ಪರೀಕ್ಷಾ ಮಾನದಂಡದಲ್ಲಿ ವಿಫಲವಾದಾಗ ಅದನ್ನ NSQ ಎಂದು ಗುರುತಿಸಲಾಗುತ್ತದೆ. ಈ ವೈಫಲ್ಯವು ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾದ ನಿರ್ದಿಷ್ಟ ಔಷಧ ಉತ್ಪನ್ನದ ನಿರ್ದಿಷ್ಟ ಬ್ಯಾಚ್‌ಗೆ ಮಾತ್ರ ಅನ್ವಯಿಸುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಬ್ಯಾಚ್‌ಗಳ ಅಥವಾ ಇತರೆ ಔಷಧ ಉತ್ಪನ್ನಗಳ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದಿದೆ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ.

    ಇದಲ್ಲದೇ ಏನ್‌ಸಿಟಿ ದೆಹಲಿಯಿಂದ 01 ಔಷಧ ಮಾದರಿಯನ್ನ ನಕಲಿ ಔಷಧ ಎಂದು ಗುರುತಿಸಿದೆ. ಈ ಔಷಧವನ್ನು ಮತ್ತೊಂದು ಕಂಪನಿಯ ಮಾಲೀಕತ್ವದಲ್ಲಿರುವ ಬ್ರ್ಯಾಂಡ್ ಹೆಸರನ್ನ ಬಳಸಿಕೊಂಡು ಅನುಮತಿ ಇಲ್ಲದ ತಯಾರಕರು ತಯಾರಿಸಿರುವುದು ಕಂಡುಬಂದಿದೆ. ಈ ಪ್ರಕರಣದ ಕುರಿತು ಪ್ರಸ್ತುತ ತನಿಖೆ ನಡೆಯುತ್ತಿದ್ದು, ಸಂಬಂಧಿತ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.

    ಗುಣಮಟ್ಟ ಕಡಿಮೆ ಇರುವ ಮತ್ತು ನಕಲಿ ಔಷಧಿಗಳನ್ನು ಗುರುತಿಸಿ, ಅವು ಮಾರುಕಟ್ಟೆಗೆ ಬರದಂತೆ ತಡೆಯುವುದನ್ನ ಖಚಿತಪಡಿಸಿಕೊಳ್ಳಲು ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳ ಸಹಯೋಗದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ




    #crime #national
    Previous Articleಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಕೊಲೆ; ಪತ್ನಿ, ಮಗನಿಗಾಗಿ ಶೋಧ
    Next Article ಮೂಡುಬಿದಿರೆ ಬಿಜೆಪಿ ಯುವ ಮುಖಂಡ ಪ್ರತೀಕ್ ಶೆಟ್ಟಿ ನಿಧನ; ಸ್ಥಳೀಯ ಮುಖಂಡರಿಂದ ಸಂತಾಪ

    Related Posts

    ಕಾರ್ಕಳದಲ್ಲಿ ಮನೆಗಾಗಿ ತಂದೆ–ಮಗನ ನಡುವೆ ಗಲಾಟೆ; ಕತ್ತಿಯಿಂದ ಕಡಿದು ಕೊಲೆಗೆ ಯತ್ನ

    September 29, 2026

    ಮಂಗಳೂರು ಪಾಲಿಕೆಯ ಎಡಿಬಿ ಸಾಲಕ್ಕೆ 24ಕ್ಕೂ ಹೆಚ್ಚು ನೋಟಿಸ್; ಒಂದೇ ಕಂತೂ ಪಾವತಿಸದೆ ಬಡ್ಡಿ ಸೇರಿ ₹1,375 ಕೋಟಿಗೆ ಏರಿಕೆ

    September 29, 2026

    ಮಂಗಳೂರು: ಕೋರ್ಟ್‌ಗೆ ತೆರಳುತ್ತಿದ್ದ ನ್ಯಾಯಾಧೀಶರ ಕಾರಿಗೆ ಆಟೋ ಡಿಕ್ಕಿ; ಹಲವರಿಗೆ ಗಾಯ

    September 29, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕಾರ್ಕಳದಲ್ಲಿ ಮನೆಗಾಗಿ ತಂದೆ–ಮಗನ ನಡುವೆ ಗಲಾಟೆ; ಕತ್ತಿಯಿಂದ ಕಡಿದು ಕೊಲೆಗೆ ಯತ್ನ

    September 29, 2026

    ಮಂಗಳೂರು ಪಾಲಿಕೆಯ ಎಡಿಬಿ ಸಾಲಕ್ಕೆ 24ಕ್ಕೂ ಹೆಚ್ಚು ನೋಟಿಸ್; ಒಂದೇ ಕಂತೂ ಪಾವತಿಸದೆ ಬಡ್ಡಿ ಸೇರಿ ₹1,375 ಕೋಟಿಗೆ ಏರಿಕೆ

    September 29, 2026

    ಮಂಗಳೂರು: ಕೋರ್ಟ್‌ಗೆ ತೆರಳುತ್ತಿದ್ದ ನ್ಯಾಯಾಧೀಶರ ಕಾರಿಗೆ ಆಟೋ ಡಿಕ್ಕಿ; ಹಲವರಿಗೆ ಗಾಯ

    September 29, 2026

    ಮಲ್ಪೆಯಲ್ಲಿ ನಿಗೂಢ ಕೊಲೆ; ಪ್ರತಿದಿನ ಮಲಗುತ್ತಿದ್ದ ಜಾಗದಲ್ಲೇ ವ್ಯಕ್ತಿ ಶವವಾಗಿ ಪತ್ತೆ

    September 29, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕುಂದಾಪುರ: “ಸ್ವಲ್ಪ ನಿಧಾನವಾಗಿ ಮಾತನಾಡಿ” ಎಂದಿದ್ದಕ್ಕೆ ಸೋಡಾ ಬಾಟಲಿಯಿಂದ ಹಲ್ಲೆ; ನಾಲ್ವರ ವಿರುದ್ಧ ಕೇಸ್

    September 29, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.