Close Menu
    What's Hot

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    October 1, 2026

    AI ಬಳಸಿ ನಕಲಿ ಪೊಲೀಸ್ ನೇಮಕಾತಿ ಹಾಲ್‌ಟಿಕೆಟ್‌ ಸೃಷ್ಟಿ; ಕಡಬದ ಯುವಕ ಅರೆಸ್ಟ್

    October 1, 2026

    ಕಾಕ್‌ಪಿಟ್‌ನಲ್ಲಿ ಪೈಲಟ್‌ಗೆ ಇರಿತ; ದುಬೈ–ಇಸ್ರೇಲ್ ವಿಮಾನ ದುರಂತ ತಪ್ಪಿಸಿ 180 ಜನರ ಜೀವ ಉಳಿಸಿದ ‘ಹೀರೋ’ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಪ್ರಯಾಣಿಕರಲ್ಲಿದ್ದ ದಂತವೈದ್ಯನಿಂದ ತಕ್ಷಣದ ಚಿಕಿತ್ಸೆ

    October 1, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ಕಾಕ್‌ಪಿಟ್‌ನಲ್ಲಿ ಪೈಲಟ್‌ಗೆ ಇರಿತ; ದುಬೈ–ಇಸ್ರೇಲ್ ವಿಮಾನ ದುರಂತ ತಪ್ಪಿಸಿ 180 ಜನರ ಜೀವ ಉಳಿಸಿದ ‘ಹೀರೋ’ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಪ್ರಯಾಣಿಕರಲ್ಲಿದ್ದ ದಂತವೈದ್ಯನಿಂದ ತಕ್ಷಣದ ಚಿಕಿತ್ಸೆ
    ಅಂತರಾಷ್ಟ್ರೀಯ

    ಕಾಕ್‌ಪಿಟ್‌ನಲ್ಲಿ ಪೈಲಟ್‌ಗೆ ಇರಿತ; ದುಬೈ–ಇಸ್ರೇಲ್ ವಿಮಾನ ದುರಂತ ತಪ್ಪಿಸಿ 180 ಜನರ ಜೀವ ಉಳಿಸಿದ ‘ಹೀರೋ’ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಪ್ರಯಾಣಿಕರಲ್ಲಿದ್ದ ದಂತವೈದ್ಯನಿಂದ ತಕ್ಷಣದ ಚಿಕಿತ್ಸೆ

    adminBy adminOctober 1, 2026No Comments2 Mins Read

    ಟೆಲ್​ ಅವೀವ್: ಫ್ಲೈದುಬೈ ವಿಮಾನವು ದುಬೈನಿಂದ ಇಸ್ರೇಲ್​ಗೆ ಹೊರಟಿತ್ತು, ಮಾರ್ಗ ಮಧ್ಯದಲ್ಲಿ ಇಬ್ಬರು ಪೈಲಟ್​ಗಳ ನಡುವೆ ನಡೆದ ವಾಗ್ವಾದದಲ್ಲಿ ಪೈಲಟ್​ ಸ್ಮಿತ್​ಗೆ ಮತ್ತೊಬ್ಬ ಪೈಲಟ್ ಕುತ್ತಿಗೆ, ಕೈಗೆ ಬಲವಾಗಿ ಇರಿದಿದ್ದರು. ಅದ್ಹೇಗೋ ಆತನಿಗೆ ತಿಳಿಯದಂತೆ ಸ್ಮಿತ್ ತುರ್ತು ಸಂದೇಶವನ್ನು ವಿಮಾನಯಾನ ಸಂಸ್ಥೆಗೆ ರವಾನಿಸಿದ್ದರು. ಅದಾದ ಬಳಿಕ ಕಾಕ್​ಪಿಟ್ ಬಾಗಿಲು ತೆರೆದು ಪ್ರಯಾಣಿಕರು ಒಳಗೆ ಬರುವಂತೆ ಮಾಡಿ ಕೊನೆಗೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಪೈಲಟ್​ಗೆ ರಕ್ತಸ್ರಾವವಾಗುತ್ತಿತ್ತು, ಆದರೆ 170 ಮಂದಿ ಪ್ರಯಾಣಿಕರ ಪೈಕಿ ಅಲ್ಲಿದ್ದಿದ್ದು ಒಬ್ಬರೇ ವೈದ್ಯ ಅದೂ ದಂತವೈದ್ಯ. ಕಾಕ್​ಪಿಟ್ ಬಾಗಿಲು ತೆರೆಯುತ್ತಿದ್ದಂತೆ ಒಳಗೆ ನುಗ್ಗಿದ್ದ ನಾಲ್ವರು ಪ್ರಯಾಣಿಕರಲ್ಲಿ ಈ ದಂತವೈದ್ಯರು ಕೂಡಾ ಇದ್ದರು.

    ಧೃತಿಗೆಡದೆ ಇಸ್ರೇಲಿ ದಂತವೈದ್ಯ ಮುಸೇವ್ ಶೋಟಾ, ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಸೌದಿ ಅರೇಬಿಯಾದ ತಬೂಕ್​ನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದಾಗ ವೈದ್ಯಕೀಯ ತಂಡ ಚಿಕಿತ್ಸೆ ಮುಂದುವರೆಸಿತು.

    ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಕಾಕ್‌ಪಿಟ್‌ನೊಳಗೆ ಕ್ಯಾಪ್ಟನ್ ಮತ್ತು ಸಹ-ಪೈಲಟ್ ನಡುವೆ ಗಂಭೀರ ಘರ್ಷಣೆ ನಡೆದಿದೆ. ವರದಿಗಳ ಪ್ರಕಾರ, ಓಮನ್ ಮೂಲದ ಸಹ-ಪೈಲಟ್ ಕ್ಯಾಪ್ಟನ್ ಮಚ್ಚರ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮಚ್ಚರ್ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಪ್ರಮಾಣದಲ್ಲಿ ರಕ್ತ ಕಳೆದುಕೊಂಡಿದ್ದರು. ತೀವ್ರ ಗಾಯಗಳ ನಡುವೆಯೂ ಕ್ಯಾಪ್ಟನ್ ಮಚ್ಚರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಕಾಕ್‌ಪಿಟ್‌ಗೆ ಪ್ರವೇಶಿಸಲು ಸಾಧ್ಯವಾಯಿತು.

    ಪ್ರಯಾಣಿಕರು ಮತ್ತು ವಿಮಾನದಲ್ಲಿದ್ದ ಇತರ ಪೈಲಟ್‌ಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ಕಡೆಗೆ ತಿರುಗಿಸಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ವಿಮಾನದಲ್ಲಿದ್ದ 174 ಪ್ರಯಾಣಿಕರು ಸುರಕ್ಷಿತವಾಗಿ ಉಳಿದರು. ವಿಮಾನದಲ್ಲಿ ಪ್ರಯಾಣಿಕರ ಪೈಕಿ ಇಬ್ಬರು ಪೈಲಟ್​ಗಳಿದ್ದ ಕಾರಣ ಅವರೇ ವಿಮಾನವನ್ನು ಕೆಳಗಿಳಿಸಲು ನೆರವಾದರು.

    ದಂತವೈದ್ಯರೇ ಮೊದಲ ಚಿಕಿತ್ಸೆ ನೀಡಿದರು

    ವಿಮಾನದಲ್ಲಿದ್ದ ಇಸ್ರೇಲಿ ದಂತವೈದ್ಯ ಮುಸೇವ್ ಶೋಟಾ ಗಾಯಗೊಂಡ ಪೈಲಟ್‌ಗೆ ಮೊದಲ ಚಿಕಿತ್ಸೆ ನೀಡಿದವರಲ್ಲಿ ಪ್ರಮುಖರಾಗಿದ್ದರು. ಅವರ ಪ್ರಕಾರ, ಮಚ್ಚರ್ ಅವರ ತಲೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ರಕ್ತಸ್ರಾವವಾಗುತ್ತಿತ್ತು. ತಕ್ಷಣವೇ ರಕ್ತಸ್ರಾವವನ್ನು ನಿಯಂತ್ರಿಸಲು ಅವರು ಪ್ರಯತ್ನಿಸಿದರು. ಪೈಲಟ್ ಪ್ರಜ್ಞೆಯಲ್ಲಿದ್ದು, ಪ್ರಯಾಣಿಕರೊಂದಿಗೆ ಮಾತನಾಡುತ್ತಿದ್ದರು ಎಂದು ದಂತವೈದ್ಯರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಕ್ಯಾಪ್ಟನ್ ಮಚ್ಚರ್ ಅವರನ್ನು ತಬೂಕ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರಂಭಿಕ ಮಾಹಿತಿಯಲ್ಲಿ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಕುತ್ತಿಗೆ ಹಾಗೂ ಕೈಯಿಂದ ತುಂಬಾ ರಕ್ತಸ್ರಾವವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

    ವಿಮಾನವು ತುರ್ತು ಪರಿಸ್ಥಿತಿಯಲ್ಲಿ ತಬೂಕ್‌ನಲ್ಲಿ ಇಳಿದ ಬಳಿಕ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಈ ಘಟನೆಯ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸುತ್ತಿದ್ದಾರೆ. ದಾಳಿಯ ಉದ್ದೇಶದ ಬಗ್ಗೆ ಅಂತಿಮ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆಯಲ್ಲಿ ಕ್ಯಾಪ್ಟನ್ ಮಚ್ಚರ್ ಮಾತ್ರವಲ್ಲದೆ, ಗಾಯಗೊಂಡ ಪೈಲಟ್‌ಗೆ ಚಿಕಿತ್ಸೆ ನೀಡಿದ ದಂತವೈದ್ಯ, ಕಾಕ್‌ಪಿಟ್‌ಗೆ ತೆರಳಿ ಸಹಾಯ ಮಾಡಿದ ಪ್ರಯಾಣಿಕರು ಮತ್ತು ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ನೆರವಾದ ಇತರ ಪೈಲಟ್‌ಗಳ ಪಾತ್ರವೂ ಪ್ರಮುಖವಾಗಿದೆ.




    #national International
    Previous Articleಎಂಆರ್‌ಪಿಎಲ್‌ ಸ್ಫೋಟ ಪ್ರಕರಣ; ಸಂಸ್ಥೆ ಹಾಗೂ ಘಟಕದ ಮುಖ್ಯಸ್ಥರ ನಿರ್ಲಕ್ಷ್ಯ ಆರೋಪಿಸಿ ಎಫ್ಐಆರ್
    Next Article AI ಬಳಸಿ ನಕಲಿ ಪೊಲೀಸ್ ನೇಮಕಾತಿ ಹಾಲ್‌ಟಿಕೆಟ್‌ ಸೃಷ್ಟಿ; ಕಡಬದ ಯುವಕ ಅರೆಸ್ಟ್

    Related Posts

    ವಿಮಾನದಲ್ಲೇ ಪೈಲಟ್‌ಗಳ ನಡುವೆ ಗಲಾಟೆ; ತುರ್ತು ಸಂಕೇತದ ಬಳಿಕ ದುಬೈ-ಇಸ್ರೇಲ್ ವಿಮಾನ ಸೌದಿಯಲ್ಲಿ ಲ್ಯಾಂಡ್

    September 30, 2026

    ‘ಏಕಪಕ್ಷೀಯ ನಿರ್ಧಾರ’ ಆರೋಪ; ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಮ್ಮತಿ

    September 29, 2026

    ಸಿನಿಮಾ ಯೋಜನೆಗಳ ಹೆಸರಿನಲ್ಲಿ ಹಣ ವರ್ಗಾವಣೆ ಆರೋಪ; ರಕುಲ್ ಪ್ರೀತ್ ಸಿಂಗ್‌ಗೆ ಸೇರಿದ ಸ್ಥಳಗಳಲ್ಲಿ ಐಟಿ ಪರಿಶೋಧನೆ

    September 29, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    October 1, 2026

    AI ಬಳಸಿ ನಕಲಿ ಪೊಲೀಸ್ ನೇಮಕಾತಿ ಹಾಲ್‌ಟಿಕೆಟ್‌ ಸೃಷ್ಟಿ; ಕಡಬದ ಯುವಕ ಅರೆಸ್ಟ್

    October 1, 2026

    ಕಾಕ್‌ಪಿಟ್‌ನಲ್ಲಿ ಪೈಲಟ್‌ಗೆ ಇರಿತ; ದುಬೈ–ಇಸ್ರೇಲ್ ವಿಮಾನ ದುರಂತ ತಪ್ಪಿಸಿ 180 ಜನರ ಜೀವ ಉಳಿಸಿದ ‘ಹೀರೋ’ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಪ್ರಯಾಣಿಕರಲ್ಲಿದ್ದ ದಂತವೈದ್ಯನಿಂದ ತಕ್ಷಣದ ಚಿಕಿತ್ಸೆ

    October 1, 2026

    ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ; ಸಂಸ್ಥೆ ಹಾಗೂ ಘಟಕದ ಮುಖ್ಯಸ್ಥರ ನಿರ್ಲಕ್ಷ್ಯ ಆರೋಪಿಸಿ ಎಫ್ಐಆರ್

    October 1, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    October 1, 2026

    ಸೌಜನ್ಯಾ ಪ್ರಕರಣ ಮರುತನಿಖೆ: SITಯಿಂದ ಹಿಂದೆ ಸರಿಯಲು ಎಎಸ್‌ಪಿ ವೆಂಕಟೇಶ್ ಪ್ರಸನ್ನ ಮನವಿ

    October 1, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.