Close Menu
    What's Hot

    ಎಂಆರ್‌ಪಿಎಲ್ ಸ್ಫೋಟ: ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ; ಕಾರ್ಗೊ ಗೇಟ್ ಬಳಿ ಬೃಹತ್ ಧರಣಿ

    October 1, 2026

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    October 1, 2026

    AI ಬಳಸಿ ನಕಲಿ ಪೊಲೀಸ್ ನೇಮಕಾತಿ ಹಾಲ್‌ಟಿಕೆಟ್‌ ಸೃಷ್ಟಿ; ಕಡಬದ ಯುವಕ ಅರೆಸ್ಟ್

    October 1, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»AI ಬಳಸಿ ನಕಲಿ ಪೊಲೀಸ್ ನೇಮಕಾತಿ ಹಾಲ್‌ಟಿಕೆಟ್‌ ಸೃಷ್ಟಿ; ಕಡಬದ ಯುವಕ ಅರೆಸ್ಟ್
    ಅಪರಾಧ

    AI ಬಳಸಿ ನಕಲಿ ಪೊಲೀಸ್ ನೇಮಕಾತಿ ಹಾಲ್‌ಟಿಕೆಟ್‌ ಸೃಷ್ಟಿ; ಕಡಬದ ಯುವಕ ಅರೆಸ್ಟ್

    adminBy adminOctober 1, 2026No Comments2 Mins Read

    ಮಂಗಳೂರು/ಕಡಬ : ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಲು ಕೃತಕ ಬುದ್ಧಿಮತ್ತೆ  ತಂತ್ರಜ್ಞಾನ ಹಾಗೂ ಡಿಜಿಟಲ್ ಎಡಿಟಿಂಗ್ ಬಳಸಿ ನಕಲಿ ಪ್ರವೇಶ ಪತ್ರ ಸೃಷ್ಟಿಸಿದ ಕಡಬ ಮೂಲದ ಯುವಕನೊಬ್ಬನನ್ನು ಮಂಗಳೂರು ನಗರದ ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಬೆದ್ರಾಜೆ ನಿವಾಸಿ ಯಜ್ಞೇಶ್ ಬಿ.ಜೆ. ರೈ (22) ಎಂದು ಗುರುತಿಸಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ–2026ರ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯು ಸೆಪ್ಟೆಂಬರ್ 28ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು. ಈ ವೇಳೆ ನೋಂದಣಿ ಡೆಸ್ಕ್‌ನಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಸಿಬ್ಬಂದಿ ಪರಿಶೀಲಿಸುತ್ತಿದ್ದರು. ಆರೋಪಿ ಯಜ್ಞೇಶ್ ರೈ CPC5225446 ಸಂಖ್ಯೆಯ ಪ್ರವೇಶ ಪತ್ರವನ್ನು ಹಾಜರುಪಡಿಸಿದ್ದನು. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ಒದಗಿಸಿದ್ದ ತಂತ್ರಾಂಶದಲ್ಲಿ ಪರಿಶೀಲಿಸಿದಾಗ, 1:5 ಅರ್ಹತಾ ಪಟ್ಟಿಯಲ್ಲಿ ಈತನ ಹೆಸರಾಗಲಿ ಅಥವಾ ಅರ್ಜಿ ಸಂಖ್ಯೆಯಾಗಲಿ ಕಂಡುಬರಲಿಲ್ಲ. ಅನುಮಾನಗೊಂಡ ಸಿಬ್ಬಂದಿ ದಾಖಲೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ನಕಲಿ ಪ್ರವೇಶ ಪತ್ರ ಎಂಬುದು ಬಯಲಿಗೆ ಬಂದಿದೆ.

    ಪೊಲೀಸರ ತನಿಖೆಯಲ್ಲಿ, ಯಜ್ಞೇಶ್ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆಯದೇ ಇರುವುದು ಬೆಳಕಿಗೆ ಬಂದಿದೆ. ಆದಾಗ್ಯೂ ದೈಹಿಕ ಪರೀಕ್ಷೆಗೆ ಹಾಜರಾಗುವ ದುರುದ್ದೇಶದಿಂದ, ಅರ್ಹತೆ ಪಡೆದಿದ್ದ ಮತ್ತೊಬ್ಬ ಅಭ್ಯರ್ಥಿಯ ಅಸಲಿ ಹಾಲ್‌ಟಿಕೆಟ್‌ ಪಡೆದುಕೊಂಡಿದ್ದನು. ನಂತರ ಎಐ ಬಳಸಿ ಅದಲ್ಲಿದ್ದ ಹೆಸರು ಹಾಗೂ ವಿವರಗಳನ್ನು ಬದಲಾಯಿಸಿ, ತನ್ನ ಹೆಸರಿಗೆ ನಕಲಿ ಹಾಲ್‌ಟಿಕೆಟ್ ಸಿದ್ಧಪಡಿಸಿಕೊಂಡಿದ್ದನು.
    ಆರೋಪಿಯ ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ, ನಕಲಿ ಹಾಲ್‌ಟಿಕೆಟ್ ಸೃಷ್ಟಿಸಲು ಬಳಸಿದ ಡಿಜಿಟಲ್ ಪುರಾವೆಗಳು ಹಾಗೂ ಎಡಿಟಿಂಗ್ ಪ್ರಕ್ರಿಯೆಯ ಮಾಹಿತಿಗಳು ಪತ್ತೆಯಾಗಿವೆ.

    ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಪ್ರಕಾಶ್ ರುದ್ರಪ್ಪ ಹೂವಿನ ಅವರು ನೀಡಿದ ದೂರಿನ ಆಧಾರದ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ (ಅ.ಕ್ರ. 87/2026) ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)–2023ರ ಕಲಂ 336(1), 336(3) ಹಾಗೂ 318(4) ರ ಅಡಿ ನಕಲಿ ದಾಖಲೆ ಸೃಷ್ಟಿ ಮತ್ತು ವಂಚನೆ ಪ್ರಕರಣ ದಾಖಲಿಸಲಾಗಿದೆ.
    ನಕಲಿ ಹಾಲ್‌ಟಿಕೆಟ್‌ನ ಪ್ರಿಂಟ್‌‌ಔಟ್ ಪಡೆದ ಸ್ಥಳವನ್ನು ಪತ್ತೆಹಚ್ಚಲು ಬರ್ಕೆ ಠಾಣೆಯ ತನಿಖಾ ತಂಡವು ಕಡಬಕ್ಕೆ ಭೇಟಿ ನೀಡಿ, ಸ್ಥಳೀಯ ಸೈಬರ್/ಜೆರಾಕ್ಸ್ ಅಂಗಡಿಯೊಂದರಲ್ಲಿ ಪರಿಶೀಲನೆ ಹಾಗೂ ಮಹಜರು ನಡೆಸಿದೆ. ಈ ಕೃತ್ಯದಲ್ಲಿ ಇತರರ ಪಾತ್ರವಿದೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ. ನ್ಯಾಯಾಲಯಕ್ಕೆ ಹಾಜರು: ಬಂಧಿತ ಯಜ್ಞೇಶನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಬರ್ಕೆ ಠಾಣಾ ಪೊಲೀಸರು ಮುಂದುವರಿಸಿದ್ದಾರೆ.

     




    #crime #dakshinakannada
    Previous Articleಕಾಕ್‌ಪಿಟ್‌ನಲ್ಲಿ ಪೈಲಟ್‌ಗೆ ಇರಿತ; ದುಬೈ–ಇಸ್ರೇಲ್ ವಿಮಾನ ದುರಂತ ತಪ್ಪಿಸಿ 180 ಜನರ ಜೀವ ಉಳಿಸಿದ ‘ಹೀರೋ’ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಪ್ರಯಾಣಿಕರಲ್ಲಿದ್ದ ದಂತವೈದ್ಯನಿಂದ ತಕ್ಷಣದ ಚಿಕಿತ್ಸೆ
    Next Article ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    Related Posts

    ಎಂಆರ್‌ಪಿಎಲ್ ಸ್ಫೋಟ: ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ; ಕಾರ್ಗೊ ಗೇಟ್ ಬಳಿ ಬೃಹತ್ ಧರಣಿ

    October 1, 2026

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    October 1, 2026

    ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ; ಸಂಸ್ಥೆ ಹಾಗೂ ಘಟಕದ ಮುಖ್ಯಸ್ಥರ ನಿರ್ಲಕ್ಷ್ಯ ಆರೋಪಿಸಿ ಎಫ್ಐಆರ್

    October 1, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಎಂಆರ್‌ಪಿಎಲ್ ಸ್ಫೋಟ: ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ; ಕಾರ್ಗೊ ಗೇಟ್ ಬಳಿ ಬೃಹತ್ ಧರಣಿ

    October 1, 2026

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    October 1, 2026

    AI ಬಳಸಿ ನಕಲಿ ಪೊಲೀಸ್ ನೇಮಕಾತಿ ಹಾಲ್‌ಟಿಕೆಟ್‌ ಸೃಷ್ಟಿ; ಕಡಬದ ಯುವಕ ಅರೆಸ್ಟ್

    October 1, 2026

    ಕಾಕ್‌ಪಿಟ್‌ನಲ್ಲಿ ಪೈಲಟ್‌ಗೆ ಇರಿತ; ದುಬೈ–ಇಸ್ರೇಲ್ ವಿಮಾನ ದುರಂತ ತಪ್ಪಿಸಿ 180 ಜನರ ಜೀವ ಉಳಿಸಿದ ‘ಹೀರೋ’ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಪ್ರಯಾಣಿಕರಲ್ಲಿದ್ದ ದಂತವೈದ್ಯನಿಂದ ತಕ್ಷಣದ ಚಿಕಿತ್ಸೆ

    October 1, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    October 1, 2026

    ಸೌಜನ್ಯಾ ಪ್ರಕರಣ ಮರುತನಿಖೆ: SITಯಿಂದ ಹಿಂದೆ ಸರಿಯಲು ಎಎಸ್‌ಪಿ ವೆಂಕಟೇಶ್ ಪ್ರಸನ್ನ ಮನವಿ

    October 1, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.