Close Menu
    What's Hot

    ಹೆದ್ದಾರಿ ಫಲಕದಲ್ಲಿ ಹಿಂದಿ ಹೆಸರು; ವಿವಾದದ ಬೆನ್ನಲ್ಲೇ ಇಬ್ಬರು ಅಧಿಕಾರಿಗಳ ಸಸ್ಪೆನ್ಷನ್

    October 2, 2026

    ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ

    October 2, 2026

    ಬಂದೂಕು ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆ; ಕೋಟದಲ್ಲಿ ಪರವಾನಿಗೆದಾರನ ವಿರುದ್ಧ ಕೇಸ್

    October 2, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ
    ಅಪರಾಧ

    ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ

    adminBy adminOctober 2, 2026No Comments1 Min Read

    ಕೊಲ್ಲೂರು : ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಅತ್ಯಂತ ಹಿಂಸಾತ್ಮಕವಾಗಿ ಎಳೆದುಕೊಂಡು ಬಿಳಿ ಬಣ್ಣದ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಕೊಲ್ಲೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ತೋಟದ ಮನೆ ನಿವಾಸಿ ಮೊಹಮ್ಮದ್ ಸಿನಾನ್ (20) ಬಂಧಿತ ಪ್ರಮುಖ ಆರೋಪಿ. ಕಳೆದ ಸೆಪ್ಟೆಂಬರ್ 29ರಂದು ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಅಪರಿಚಿತ ಕಳ್ಳರ ಗುಂಪೊಂದು ಕಾರಿನಲ್ಲಿ ಆಗಮಿಸಿ, ರಸ್ತೆ ಬದಿಯಲ್ಲಿದ್ದ ದನವನ್ನು ಬಲವಂತವಾಗಿ ಎಳೆದುಕೊಂಡು ಕಾರಿನೊಳಗೆ ತುಂಬಿಕೊಂಡು ಪರಾರಿಯಾಗಿತ್ತು. ಈ ಸಂಪೂರ್ಣ ಕೃತ್ಯವು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯಾವಳಿಗಳು ತೀವ್ರವಾಗಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದವು. ಈ ಬಗ್ಗೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದನ ಕಳ್ಳತನ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರನ್ನು ಪತ್ತೆಹಚ್ಚಿ, ಪ್ರಮುಖ ಆರೋಪಿ ಮೊಹಮ್ಮದ್ ಸಿನಾನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಬಂಧಿತ ಆರೋಪಿ ಸಿನಾನ್ ಕುಂದಾಪುರ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿರುವ ಐದು ಪ್ರತ್ಯೇಕ ದನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕೃತ್ಯದಲ್ಲಿ ಇನ್ನು ಇಬ್ಬರು ಆರೋಪಿಗಳು ಭಾಗಿಯಾಗಿರುವುದು ತಿಳಿದುಬಂದಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
    ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಮಾರ್ಗದರ್ಶನದಲ್ಲಿ ಹಾಗೂ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಉಸ್ತುವಾರಿಯಲ್ಲಿ ಕೊಲ್ಲೂರು ಠಾಣೆ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ, ಹೆಡ್‌ಕಾನ್‌ಸ್ಟೆಬಲ್ ನಾಗೇಂದ್ರ, ಕಾನ್‌ಸ್ಟೆಬಲ್‌ಗಳಾದ ರುದ್ರೇಶ, ನವೀನ್ ಕುಮಾರ್, ವಿಲಾಸ್ ರಾಠೋಡ ಹಾಗೂ ನಾಗರಾಜ ಅವರಿದ್ದ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದೆ.




    #crime #karnataka
    Previous Articleಬಂದೂಕು ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆ; ಕೋಟದಲ್ಲಿ ಪರವಾನಿಗೆದಾರನ ವಿರುದ್ಧ ಕೇಸ್
    Next Article ಹೆದ್ದಾರಿ ಫಲಕದಲ್ಲಿ ಹಿಂದಿ ಹೆಸರು; ವಿವಾದದ ಬೆನ್ನಲ್ಲೇ ಇಬ್ಬರು ಅಧಿಕಾರಿಗಳ ಸಸ್ಪೆನ್ಷನ್

    Related Posts

    ಹೆದ್ದಾರಿ ಫಲಕದಲ್ಲಿ ಹಿಂದಿ ಹೆಸರು; ವಿವಾದದ ಬೆನ್ನಲ್ಲೇ ಇಬ್ಬರು ಅಧಿಕಾರಿಗಳ ಸಸ್ಪೆನ್ಷನ್

    October 2, 2026

    ಬಂದೂಕು ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆ; ಕೋಟದಲ್ಲಿ ಪರವಾನಿಗೆದಾರನ ವಿರುದ್ಧ ಕೇಸ್

    October 2, 2026

    ಮತ್ತೆ ಸುದ್ದಿಯಾದ ಲಂಚುಲಾಲ್; ಲಾಸ್ಟ್ ಡ್ರಾಗೆ 85,000 ಮಂದಿ ಎದ್ದೇಳುವ ಭಯವೇ? ಡಿಸೆಂಬರ್‌ವರೆಗೆ ಕಾಯೋ ಆಟವೇ?

    October 2, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಹೆದ್ದಾರಿ ಫಲಕದಲ್ಲಿ ಹಿಂದಿ ಹೆಸರು; ವಿವಾದದ ಬೆನ್ನಲ್ಲೇ ಇಬ್ಬರು ಅಧಿಕಾರಿಗಳ ಸಸ್ಪೆನ್ಷನ್

    October 2, 2026

    ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ

    October 2, 2026

    ಬಂದೂಕು ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆ; ಕೋಟದಲ್ಲಿ ಪರವಾನಿಗೆದಾರನ ವಿರುದ್ಧ ಕೇಸ್

    October 2, 2026

    “ಹನುಮಾನ್ ಚಾಲೀಸಾ ಪಠಿಸಿದೆ” — ಸಂಕಷ್ಟದ ಕ್ಷಣ ನೆನೆದ ಪೈಲಟ್; ಮೋದಿ ಜೊತೆ ಮಾತುಕತೆ

    October 2, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ

    October 2, 2026

    ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ KSRTC ಬಸ್; ಮಹಿಳೆ ಸಾವು

    October 2, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.