Close Menu
    What's Hot

    ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    October 17, 2026

    ಮಂಗಳೂರಿನ ಎಂಆರ್‌ಪಿಎಲ್‌ ಘಟಕದಲ್ಲಿ ಬೆಂಕಿ ಅವಘಡ : ನಷ್ಟ ಮೊತ್ತದ ವರದಿ ಬಹಿರಂಗ

    October 17, 2026

    ಅಜಯ್ ದೇವಗನ್ ಬಂಗಲೆಯಲ್ಲಿ ಅಕ್ರಮ ನಿರ್ಮಾಣ ಆರೋಪ : ಬಿಎಂಸಿ ಬುಲ್ಡೋಜರ್ ಕಾರ್ಯಾಚರಣೆ‌ಗೆ ಸಿದ್ಧತೆ

    October 17, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಅಜಯ್ ದೇವಗನ್ ಬಂಗಲೆಯಲ್ಲಿ ಅಕ್ರಮ ನಿರ್ಮಾಣ ಆರೋಪ : ಬಿಎಂಸಿ ಬುಲ್ಡೋಜರ್ ಕಾರ್ಯಾಚರಣೆ‌ಗೆ ಸಿದ್ಧತೆ
    ರಾಷ್ಟ್ರೀಯ

    ಅಜಯ್ ದೇವಗನ್ ಬಂಗಲೆಯಲ್ಲಿ ಅಕ್ರಮ ನಿರ್ಮಾಣ ಆರೋಪ : ಬಿಎಂಸಿ ಬುಲ್ಡೋಜರ್ ಕಾರ್ಯಾಚರಣೆ‌ಗೆ ಸಿದ್ಧತೆ

    adminBy adminOctober 17, 2026No Comments1 Min Read

    ಬಾಲಿವುಡ್ ನಟ ಅಜಯ್ ದೇವಗನ್  ಅವರ ಮುಂಬೈನ ಜುಹು ಬಂಗಲೆಯಲ್ಲಿ ನಡೆಯುತ್ತಿರುವ ಅನಧಿಕೃತ ನಿರ್ಮಾಣ ಕಾಮಗಾರಿಗೆ ಮುಂಬೈ ಬಿಎಂಸಿ ಬ್ರೇಕ್‌ ಹಾಕಿದೆ.

    ನಿರ್ಮಾಣಕ್ಕೆ ನಾಗರಿಕ ಪ್ರಾಧಿಕಾರದ ಅನುಮತಿ ಇದೆ ಎಂಬುದನ್ನು ದೃಢಪಡಿಸುವ ದಾಖಲೆಗಳನ್ನು ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ, ಮಾಲೀಕರು ನೀಡಿದ್ದ ಉತ್ತರವನ್ನು ಬಿಎಂಸಿ ತಿರಸ್ಕರಿಸಿದೆ. ಅಲ್ಲದೆ, ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ಅನಧಿಕೃತವೆಂದು ಪರಿಗಣಿಸಿದೆ.

    ಜುಹುವಿನ ಕಪೋಲ್ ಸಹಕಾರಿ ವಸತಿ ಸಂಘದಲ್ಲಿರುವ ಈ ಬಂಗಲೆ ನಟ ಅಜಯ್ ದೇವಗನ್ ಮತ್ತು ಅವರ ತಾಯಿ ವೀಣಾ ದೇವಗನ್ ಅವರ ಒಡೆತನದಲ್ಲಿದೆ.

    ಅನುಮತಿ ದಾಖಲೆ ಸಲ್ಲಿಸಲು ವಿಫಲ
    ಅಕ್ಟೋಬರ್ 6ರಂದು ಹೊರಡಿಸಿದ ಆದೇಶದಲ್ಲಿ, ಬಿಎಂಸಿಯ ಕೆ/ವೆಸ್ಟ್ ವಾರ್ಡ್ ಕಚೇರಿಯು ಈ ವಿಚಾರವನ್ನು ಉಲ್ಲೇಖಿಸಿದೆ. ಸೆಪ್ಟೆಂಬರ್ 15ರಂದು ಮಾಲೀಕರು ಸಲ್ಲಿಸಿದ್ದ ಉತ್ತರದಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ಇದೆ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳು ಅಥವಾ ಸಕ್ಷಮ ಪ್ರಾಧಿಕಾರ ನೀಡಿದ ಅನುಮತಿಯ ಪ್ರತಿಯನ್ನು ಒದಗಿಸಿರಲಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ

    ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಸೆಕ್ಷನ್ 354A ಅಡಿಯಲ್ಲಿ ಸೆಪ್ಟೆಂಬರ್ 10ರಂದು ಬಿಎಂಸಿ ಕಾಮಗಾರಿ ಸ್ಥಗಿತಗೊಳಿಸುವ ನೋಟಿಸ್ ನೀಡಿತ್ತು. ಜುಹುವಿನ ಕಪೋಲ್ ಸಿಎಚ್‌ಎಸ್ ಲಿಮಿಟೆಡ್‌ನಲ್ಲಿರುವ ಸಿಟಿಎಸ್ ಸಂಖ್ಯೆ 841, ಪ್ಲಾಟ್ ಸಂಖ್ಯೆ 10ರ ಬಂಗಲೆಯಲ್ಲಿ ಸಿಪೋರೆಕ್ಸ್ ಬ್ಲಾಕ್‌ಗಳನ್ನು ಬಳಸಿ ಅನಧಿಕೃತ ಸೇರ್ಪಡೆ ಮತ್ತು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿತ್ತು.

    ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಿ, 24 ಗಂಟೆಗಳ ಒಳಗೆ ಸಂಬಂಧಿತ ಅನುಮತಿ ದಾಖಲೆಗಳನ್ನು ಸಲ್ಲಿಸುವಂತೆ ಬಿಎಂಸಿ ಮಾಲೀಕರು ಸೂಚಿಸಿತ್ತು. ಸೂಚನೆಗಳನ್ನು ಪಾಲಿಸದಿದ್ದರೆ, ಅನಧಿಕೃತ ನಿರ್ಮಾಣ ಮತ್ತು ಕಟ್ಟಡ ಸಾಮಗ್ರಿಗಳನ್ನು ಮಾಲೀಕರ ಅಪಾಯ ಹಾಗೂ ವೆಚ್ಚದಲ್ಲಿ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

    ಅಗತ್ಯವಿದ್ದಲ್ಲಿ ಸ್ಥಳದಲ್ಲಿ ಪೊಲೀಸರು ನಿಗಾ ವಹಿಸಲು ಹಾಗೂ ಕಾಮಗಾರಿ ನಡೆಸುತ್ತಿರುವವರನ್ನು ಅಲ್ಲಿಂದ ತೆರವುಗೊಳಿಸಲು ಸಹ ಕ್ರಮ ಕೈಗೊಳ್ಳಬಹುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು

    ಅಗತ್ಯ ಅನುಮತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಬಿಎಂಸಿ ಮಾಲೀಕರ ಉತ್ತರವನ್ನು ತಿರಸ್ಕರಿಸಿದ್ದು, ಬಂಗಲೆಯಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ತೆರವುಗೊಳಿಸಲಾಗಿದೆ




    #national
    Previous Articleರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್
    Next Article ಮಂಗಳೂರಿನ ಎಂಆರ್‌ಪಿಎಲ್‌ ಘಟಕದಲ್ಲಿ ಬೆಂಕಿ ಅವಘಡ : ನಷ್ಟ ಮೊತ್ತದ ವರದಿ ಬಹಿರಂಗ

    Related Posts

    ‘ಲೆಹ್ರಾ ದೋ ತಿರಂಗಾ’ ರ‍್ಯಾಲಿಗೂ ಮುನ್ನ ಪೊಲೀಸ್ ಕ್ರಮ; ಸಿಜೆಪಿ ಸಂಸ್ಥಾಪಕನ ಬಂಧನ, ನೇಹಾ ಬೋರಾ ಬಿಡುಗಡೆ

    October 17, 2026

    ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

    October 17, 2026

    16 ಅಡಿ ಆಳದ ಬಾವಿಯಲ್ಲಿ 50 ನಿಮಿಷಗಳ ಹೋರಾಟ; 62 ವರ್ಷದ ಮಹಿಳೆಗೆ ಮರುಜೀವ ನೀಡಿದ ಚಾಲಕ

    October 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    October 17, 2026

    ಮಂಗಳೂರಿನ ಎಂಆರ್‌ಪಿಎಲ್‌ ಘಟಕದಲ್ಲಿ ಬೆಂಕಿ ಅವಘಡ : ನಷ್ಟ ಮೊತ್ತದ ವರದಿ ಬಹಿರಂಗ

    October 17, 2026

    ಅಜಯ್ ದೇವಗನ್ ಬಂಗಲೆಯಲ್ಲಿ ಅಕ್ರಮ ನಿರ್ಮಾಣ ಆರೋಪ : ಬಿಎಂಸಿ ಬುಲ್ಡೋಜರ್ ಕಾರ್ಯಾಚರಣೆ‌ಗೆ ಸಿದ್ಧತೆ

    October 17, 2026

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.