Close Menu
    What's Hot

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    October 17, 2026

    ಮಂಗಳೂರಿನ ಎಂಆರ್‌ಪಿಎಲ್‌ ಘಟಕದಲ್ಲಿ ಬೆಂಕಿ ಅವಘಡ : ನಷ್ಟ ಮೊತ್ತದ ವರದಿ ಬಹಿರಂಗ

    October 17, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಮಂಗಳೂರಿನ ಎಂಆರ್‌ಪಿಎಲ್‌ ಘಟಕದಲ್ಲಿ ಬೆಂಕಿ ಅವಘಡ : ನಷ್ಟ ಮೊತ್ತದ ವರದಿ ಬಹಿರಂಗ
    ಕರಾವಳಿ ಸುದ್ದಿ

    ಮಂಗಳೂರಿನ ಎಂಆರ್‌ಪಿಎಲ್‌ ಘಟಕದಲ್ಲಿ ಬೆಂಕಿ ಅವಘಡ : ನಷ್ಟ ಮೊತ್ತದ ವರದಿ ಬಹಿರಂಗ

    adminBy adminOctober 17, 2026No Comments1 Min Read

    ಮಂಗಳೂರು: ಮಂಗಳೂರಿನ ಎಂಆರ್‌ಪಿಎಲ್‌ನ ಮೂರನೇ ಹಂತದ ವಿಸ್ತರಣಾ ಘಟಕದಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ ಅವಘಡದಿಂದ ₹118.76 ಕೋಟಿ ನಷ್ಟ ಉಂಟಾಗಿದೆ ಎಂದು ಕಂಪನಿಯ ತ್ರೈಮಾಸಿಕ ವರದಿಯಲ್ಲಿ ತಿಳಿಸಲಾಗಿದೆ.

    ನಿರ್ದೇಶಕ ಮಂಡಳಿಯ ಸಭೆಯ ಬಳಿಕ ಕಂಪನಿಯು ಈ ಸಂಬಂಧ ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ವರದಿ ಸಲ್ಲಿಸಿದೆ. ರಿಫೈನರಿ ಸಂಕೀರ್ಣದ ಮೂರನೇ ಹಂತದಲ್ಲಿರುವ ಕಾಕರ್ ಹೈಡ್ರೋಟ್ರೀಟರ್ ಘಟಕದಲ್ಲಿ (CHTU) ಈ ಘಟನೆ ನಡೆದಿತ್ತು. ಹಾನಿಗೊಳಗಾದ ಉತ್ಪಾದನಾ ಘಟಕಗಳು ಹಾಗೂ ಯಂತ್ರೋಪಕರಣಗಳ ಮೌಲ್ಯಮಾಪನದ ಆಧಾರದಲ್ಲಿ ನಷ್ಟವನ್ನು ಅಂದಾಜಿಸಲಾಗಿದೆ. ಹಾನಿಗೊಳಗಾದ ಆಸ್ತಿಗಳನ್ನು ಮರುಸ್ಥಾಪಿಸಲು ಸುಮಾರು ₹225 ಕೋಟಿ ವೆಚ್ಚವಾಗುವ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ. ಹಾನಿಗೊಳಗಾದ ಆಸ್ತಿಗಳಿಗೆ ವಿಮಾ ರಕ್ಷಣೆ ಇದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಸ್ಫೋಟದ ಬದಲು ಬೆಂಕಿ ಅವಘಡ ಎಂದು ವರದಿ

    ಘಟಕದಲ್ಲಿ ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಹರಿದಾಡಿದ್ದರೂ, ಕಂಪನಿಯ ವರದಿಯಲ್ಲಿ ಇದನ್ನು ಬೆಂಕಿ ಅವಘಡ ಎಂದು ದಾಖಲಿಸಲಾಗಿದೆ.

    ಇದೇ ವೇಳೆ, 2026-27ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಎಂಆರ್‌ಪಿಎಲ್‌ ₹1,881 ಕೋಟಿ ಆದಾಯ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಆದಾಯ ₹639 ಕೋಟಿ ಇತ್ತು. ಇದರಿಂದ ವಾರ್ಷಿಕ ಹೋಲಿಕೆಯಲ್ಲಿ ಆದಾಯದಲ್ಲಿ ಶೇ.194ರಷ್ಟು ಏರಿಕೆಯಾಗಿದೆ.

    ಅರ್ಧವಾರ್ಷಿಕ ಆದಾಯದಲ್ಲೂ ಏರಿಕೆ

    ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಎಂಆರ್‌ಪಿಎಲ್‌ ಒಟ್ಟು ₹35,590 ಕೋಟಿ ಆದಾಯ ಗಳಿಸಿದೆ. ಇದರಲ್ಲಿ ರಫ್ತು ವಹಿವಾಟಿನಿಂದ ಬಂದ ಆದಾಯವೂ ಸೇರಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಒಟ್ಟು ಆದಾಯ ₹25,953 ಕೋಟಿ ಆಗಿತ್ತು.

    ಉತ್ಪಾದನೆಯ ವಿಷಯದಲ್ಲಿ, ಪ್ರಸಕ್ತ ಅರ್ಧವಾರ್ಷಿಕ ಅವಧಿಯಲ್ಲಿ ಕಂಪನಿಯು 4.18 ಮಿಲಿಯನ್ ಟನ್ ಉತ್ಪಾದನೆ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಉತ್ಪಾದನೆಯ ಪ್ರಮಾಣ 4.43 ಮಿಲಿಯನ್ ಟನ್ ಆಗಿತ್ತು




    #dakshinakannada
    Previous Articleಅಜಯ್ ದೇವಗನ್ ಬಂಗಲೆಯಲ್ಲಿ ಅಕ್ರಮ ನಿರ್ಮಾಣ ಆರೋಪ : ಬಿಎಂಸಿ ಬುಲ್ಡೋಜರ್ ಕಾರ್ಯಾಚರಣೆ‌ಗೆ ಸಿದ್ಧತೆ
    Next Article ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    Related Posts

    ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    October 17, 2026

    ಸುರತ್ಕಲ್ ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು

    October 17, 2026

    ಪುತ್ತೂರಿನಲ್ಲಿ ಮಹಿಳೆಯ ಮೇಲಿನ ಹಲ್ಲೆ ಪ್ರಕರಣ: ಮೊದಲ ಆರೋಪಿಗೆ 2 ವರ್ಷ ಜೈಲು, ತಲಾ ₹5,000 ದಂಡ

    October 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    October 17, 2026

    ಮಂಗಳೂರಿನ ಎಂಆರ್‌ಪಿಎಲ್‌ ಘಟಕದಲ್ಲಿ ಬೆಂಕಿ ಅವಘಡ : ನಷ್ಟ ಮೊತ್ತದ ವರದಿ ಬಹಿರಂಗ

    October 17, 2026

    ಅಜಯ್ ದೇವಗನ್ ಬಂಗಲೆಯಲ್ಲಿ ಅಕ್ರಮ ನಿರ್ಮಾಣ ಆರೋಪ : ಬಿಎಂಸಿ ಬುಲ್ಡೋಜರ್ ಕಾರ್ಯಾಚರಣೆ‌ಗೆ ಸಿದ್ಧತೆ

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.