Close Menu
    What's Hot

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಟ್ವಿಸ್ಟ್; ದೆಹಲಿಯಲ್ಲಿ ಮೊದಲ ಆರೋಪಿಯ ಬಂಧನ

    October 24, 2026

    ಸೆಪ್ಟೆಂಬರ್‌ನಿಂದ ನಾಪತ್ತೆಯಾಗಿದ್ದ ಪರ್ವೀಜ್ ಅಹಮದ್ ಪತ್ತೆ; ಪೊಲೀಸರಿಂದ ತೀವ್ರ ವಿಚಾರಣೆ

    October 24, 2026

    ಬಂಟ್ವಾಳದಲ್ಲಿ ಕೌಟುಂಬಿಕ ಕಲಹಕ್ಕೆ ಮಹಿಳೆ ಬಲಿ- ಪತಿ ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ

    October 24, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಬಂಟ್ವಾಳದಲ್ಲಿ ಕೌಟುಂಬಿಕ ಕಲಹಕ್ಕೆ ಮಹಿಳೆ ಬಲಿ- ಪತಿ ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ
    ಅಪರಾಧ

    ಬಂಟ್ವಾಳದಲ್ಲಿ ಕೌಟುಂಬಿಕ ಕಲಹಕ್ಕೆ ಮಹಿಳೆ ಬಲಿ- ಪತಿ ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ

    adminBy adminOctober 24, 2026No Comments1 Min Read

    ಬಂಟ್ವಾಳ: ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದ ಹಲ್ಲೆಗೊಳಗಾಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬಂಟ್ವಾಳದ ವಗ್ಗ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಬಾಗಲಕೋಟೆ, ಜಮಖಂಡಿ ಮೂಲದ ಆರೋಪಿ ಸಂಜೀವಕುಮಾರ್ (36) ಅವರ ಪತ್ನಿ ಸುನೀತಾ ಮಹಾದೇವ್ ದೇಸಂಗಿ (34) ಮೃತ ದುರ್ದೈವಿ. ಈ ದಂಪತಿ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ವಾಸವಾಗಿದ್ದರು.

    ಮೃತರ ಸಹೋದರ ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿ ಅರುಣ್ ಮಹಾದೇವ್ ದೇಸಂಗಿ (26) ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ದೂರಿನ ಪ್ರಕಾರ, ಸುನೀತಾ ಮತ್ತು ಆಕೆಯ ಪತಿಯ ನಡುವೆ ಮನಸ್ತಾಪಗಳಿದ್ದು, ಸಂಬಂಧಿಕರು ಮಧ್ಯಪ್ರವೇಶಿಸಿ ರಾಜಿ ಪಂಚಾಯಿತಿ ನಡೆಸಿದ್ದರು. ಹೆರಿಗೆಯ ಬಳಿಕ ಸುನೀತಾ ತಮ್ಮ ತವರು ಮನೆಯಲ್ಲಿದ್ದರು. ಅಕ್ಟೋಬರ್ 4 ರಂದು ಆರೋಪಿ ಪತಿ ಸಂಜೀವಕುಮಾರ್ ಆಕೆಯನ್ನು ಬಂಟ್ವಾಳದಲ್ಲಿದ್ದ ತಮ್ಮ ಮನೆಗೆ ಕರೆತಂದಿದ್ದರು.

    ಅಕ್ಟೋಬರ್ 22 ರಂದು ಸುನೀತಾ ತಮ್ಮ ಸಹೋದರನಿಗೆ ಕರೆ ಮಾಡಿ, ಪತಿ ತನಗೆ ಕಿರುಕುಳ ನೀಡುತ್ತಿದ್ದು, ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದಾನೆ ಎಂದು ತಿಳಿಸಿದ್ದರು. ಅಕ್ಟೋಬರ್ 23 ರ ಬೆಳಗ್ಗೆ ಸಂಜೀವಕುಮಾರ್ ದೂರುದಾರರಿಗೆ ಕರೆ ಮಾಡಿ, ಸುನೀತಾ ಅವರ ಆರೋಗ್ಯ ಕ್ಷೀಣಿಸಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು.

    ಅರುಣ್ ತಕ್ಷಣ ಆಗಮಿಸಿ ತಮ್ಮ ಸಹೋದರಿಯನ್ನು ಪರಿಶೀಲಿಸಿದಾಗ ಆಕೆ ಮೃತಪಟ್ಟಿರುವುದು ಕಂಡುಬಂದಿದೆ. ಮೃತದೇಹವನ್ನು ಪರಿಶೀಲಿಸಿದಾಗ ಹಲ್ಲೆಯಿಂದ ಉಂಟಾದ ಗಾಯದ ಗುರುತುಗಳು ಹಾಗೂ ರಕ್ತದ ಕಲೆಗಳು ಕಂಡುಬಂದಿವೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಕ್ಟೋಬರ್ 22 ರ ರಾತ್ರಿ ಮತ್ತು ಅಕ್ಟೋಬರ್ 23 ರ ಮುಂಜಾನೆ ವೇಳೆ ಸಂಜೀವಕುಮಾರ್ ಸುನೀತಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 142/2026, ಕಲಂ:103 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

    ಆರೋಪಿ ಸಂಜೀವಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ




    #crime #dakshinakannada
    Previous Articleಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್ ಸ್ಟಿಂಗ್ ಪ್ರಕರಣಕ್ಕೆ ಹೊಸ ತಿರುವು; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾಗೆ ಶೋಕಾಸ್ ನೋಟಿಸ್
    Next Article ಸೆಪ್ಟೆಂಬರ್‌ನಿಂದ ನಾಪತ್ತೆಯಾಗಿದ್ದ ಪರ್ವೀಜ್ ಅಹಮದ್ ಪತ್ತೆ; ಪೊಲೀಸರಿಂದ ತೀವ್ರ ವಿಚಾರಣೆ

    Related Posts

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಟ್ವಿಸ್ಟ್; ದೆಹಲಿಯಲ್ಲಿ ಮೊದಲ ಆರೋಪಿಯ ಬಂಧನ

    October 24, 2026

    ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್ ಸ್ಟಿಂಗ್ ಪ್ರಕರಣಕ್ಕೆ ಹೊಸ ತಿರುವು; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾಗೆ ಶೋಕಾಸ್ ನೋಟಿಸ್

    October 24, 2026

    ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ

    October 24, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಟ್ವಿಸ್ಟ್; ದೆಹಲಿಯಲ್ಲಿ ಮೊದಲ ಆರೋಪಿಯ ಬಂಧನ

    October 24, 2026

    ಸೆಪ್ಟೆಂಬರ್‌ನಿಂದ ನಾಪತ್ತೆಯಾಗಿದ್ದ ಪರ್ವೀಜ್ ಅಹಮದ್ ಪತ್ತೆ; ಪೊಲೀಸರಿಂದ ತೀವ್ರ ವಿಚಾರಣೆ

    October 24, 2026

    ಬಂಟ್ವಾಳದಲ್ಲಿ ಕೌಟುಂಬಿಕ ಕಲಹಕ್ಕೆ ಮಹಿಳೆ ಬಲಿ- ಪತಿ ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ

    October 24, 2026

    ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್ ಸ್ಟಿಂಗ್ ಪ್ರಕರಣಕ್ಕೆ ಹೊಸ ತಿರುವು; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾಗೆ ಶೋಕಾಸ್ ನೋಟಿಸ್

    October 24, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸೆಪ್ಟೆಂಬರ್‌ನಿಂದ ನಾಪತ್ತೆಯಾಗಿದ್ದ ಪರ್ವೀಜ್ ಅಹಮದ್ ಪತ್ತೆ; ಪೊಲೀಸರಿಂದ ತೀವ್ರ ವಿಚಾರಣೆ

    October 24, 2026

    ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್ ಸ್ಟಿಂಗ್ ಪ್ರಕರಣಕ್ಕೆ ಹೊಸ ತಿರುವು; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾಗೆ ಶೋಕಾಸ್ ನೋಟಿಸ್

    October 24, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.