Close Menu
    What's Hot

    ಮಂಗಳೂರು: ಪಣಂಬೂರು ಬೀಚ್ ಸಮೀಪದ ರೆಸ್ಟೋರೆಂಟ್ ಮೇಲೆ ಪೊಲೀಸರ ದಾಳಿ; ಇಬ್ಬರು ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ

    November 14, 2026

    ಉಡುಪಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅಂಡರ್‌ವರ್ಲ್ಡ್ ಡಾನ್ ರವಿ ಪೂಜಾರಿಗೆ ನ್ಯಾಯಾಲಯದ ಅನುಮತಿ; ಪೊಲೀಸ್ ಭದ್ರತೆಯಲ್ಲಿ ಉಡುಪಿಗೆ ಪ್ರಯಾಣ

    November 14, 2026

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಂಗಳೂರು: ಆನ್‌ಲೈನ್ ಸಾಲದ ಕಿರುಕುಳಕ್ಕೆ ಮಹಿಳೆ ಕಂಗಾಲು; ಸಾಲ ತೀರಿಸಿದರೂ ಫೋಟೋ ಮಾರ್ಫ್ ಬೆದರಿಕೆ, ಲಕ್ಷಾಂತರ ರೂ. ವಸೂಲಿ
    ಅಪರಾಧ

    ಮಂಗಳೂರು: ಆನ್‌ಲೈನ್ ಸಾಲದ ಕಿರುಕುಳಕ್ಕೆ ಮಹಿಳೆ ಕಂಗಾಲು; ಸಾಲ ತೀರಿಸಿದರೂ ಫೋಟೋ ಮಾರ್ಫ್ ಬೆದರಿಕೆ, ಲಕ್ಷಾಂತರ ರೂ. ವಸೂಲಿ

    adminBy adminOctober 29, 2026Updated:October 29, 2026No Comments2 Mins Read

    ಮಂಗಳೂರು : ಆನ್‌ಲೈನ್ ಲೋನ್ ಆಪ್‌ಗಳ ಮೂಲಕ ತುರ್ತು ಸಾಲ ಪಡೆದು, ಪಡೆದ ಹಣವನ್ನೆಲ್ಲಾ ಬಡ್ಡಿ ಸಮೇತ ಪೂರ್ಣವಾಗಿ ಪಾವತಿಸಿ ಕ್ಲಿಯರ್ ಮಾಡಿದರೂ ಸಹ, ಮಹಿಳೆಯ ಫೋಟೋ ಮಾರ್ಫ್ ಮಾಡಿ ಕುಟುಂಬಸ್ಥರಿಗೆ ಕಳುಹಿಸುವುದಾಗಿ ಬೆದರಿಕೆಯೊಡ್ಡಿ ಬರೋಬ್ಬರಿ ₹2.90 ಲಕ್ಷಕ್ಕೂ ಅಧಿಕ ಹಣವನ್ನು ಎಗರಿಸಿ ವಂಚಿಸಿರುವ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
    ವಂಚನೆಗೊಳಗಾದ 37 ವರ್ಷದ ಮಹಿಳೆ ನೀಡಿದ ದೂರಿನನ್ವಯ ಸಿಇಎನ್  ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೂರುದಾರ ಮಹಿಳೆಗೆ ವೈಯಕ್ತಿಕ ಕಾರಣಗಳಿಂದ ಹಣದ ಅವಶ್ಯಕತೆ ಇದ್ದಿದ್ದರಿಂದ, ಮೇ 2026ರಲ್ಲಿ ಗೂಗಲ್‌ನಲ್ಲಿ ಸಾಲದ ಆಪ್‌ಗಳ ಬಗ್ಗೆ ಹುಡುಕಾಟ ನಡೆಸಿದ್ದರು. ಈ ವೇಳೆ ‘Prefer App’, ‘Credit App’ ಹಾಗೂ ‘Flexy b’ ಎಂಬ ಆನ್‌ಲೈನ್ ಲೋನ್ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ತಮ್ಮ ವೈಯಕ್ತಿಕ ದಾಖಲೆ ಹಾಗೂ ವಿಳಾಸಗಳನ್ನು ನಮೂದಿಸಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಮೇ 22, 2026ರಂದು ಮಹಿಳೆಯ ಎಸ್‌ಬಿಐ ಖಾತೆಗೆ ₹50,000 ಹಾಗೂ ಕೆನರಾ ಬ್ಯಾಂಕ್ ಖಾತೆಗೆ ₹1,50,000 ಸೇರಿದಂತೆ ಒಟ್ಟು ₹2,00,000 ಸಾಲದ ಹಣ ಜಮೆಯಾಗಿತ್ತು.

    ಮಹಿಳೆಯು ಸುಮಾರು 3 ತಿಂಗಳುಗಳ ಕಾಲ ಮಾಸಿಕ ₹13,300 ಕಂತುಗಳನ್ನು ಪಾವತಿಸಿದ್ದರು. ಬಳಿಕ ಅಕ್ಟೋಬರ್ ತಿಂಗಳಲ್ಲಿ ಇಡೀ ಬಾಕಿ ಸಾಲವನ್ನು ಬಡ್ಡಿ ಸಮೇತ ಒಟ್ಟಿಗೆ ₹2,15,000 ಪಾವತಿಸಿ ಆಪ್‌ಗಳಲ್ಲಿ ಸಾಲವನ್ನು ಪೂರ್ಣವಾಗಿ ಕ್ಲಿಯರ್ ಮಾಡಿದ್ದರು. ಆದರೆ, ಸಾಲ ಕ್ಲಿಯರ್ ಆದ ಬಳಿಕ ಅಪರಿಚಿತ ವಂಚಕರು ಮಹಿಳೆಯ ಎಸ್‌ಬಿಐ ಖಾತೆಗೆ ಅವರ ಅನುಮತಿಯಿಲ್ಲದೆ ಹಂತ ಹಂತವಾಗಿ ₹5,000, ₹10,000 ಹಾಗೂ ₹30,000 ಹಣವನ್ನು ಬಲವಂತವಾಗಿ ಜಮೆ ಮಾಡಿದ್ದಾರೆ. ತಕ್ಷಣವೇ ‘8031462813’, ‘8216567489’ ಹಾಗೂ ‘+911600303452’ ಸಂಖ್ಯೆಗಳಿಂದ ಕರೆ ಮಾಡಿದ ಸೈಬರ್ ಅಪರಾಧಿಗಳು, “ನಿಮ್ಮ ಖಾತೆಗೆ ಹಣ ಜಮೆ ಮಾಡಲಾಗಿದೆ. ಅದಕ್ಕೆ ಭಾರೀ ಬಡ್ಡಿ ಸೇರಿಸಿ ಮರುಪಾವತಿಸಬೇಕು. ಇಲ್ಲವಾದರೆ ನಿಮ್ಮ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫ್ (Morph) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನಿಮ್ಮ ಕುಟುಂಬಸ್ಥರಿಗೆ ಕಳುಹಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ.

    ಅಪರಿಚಿತರ ಬೆದರಿಕೆಯಿಂದ ತೀವ್ರ ಭೀತಿಗೆ ಒಳಗಾದ ಮಹಿಳೆ, ವಂಚಕರು ಕಳುಹಿಸಿದ ಪೇಮೆಂಟ್ ಲಿಂಕ್‌ಗಳಿಗೆ ಜುಲೈ 23, 2026 ರಿಂದ ಅಕ್ಟೋಬರ್ 02, 2026 ರ ನಡುವಿನ ಅವಧಿಯಲ್ಲಿ ತಮ್ಮ ಎಸ್‌ಬಿಐ ಖಾತೆಯಿಂದ ₹2,35,994 ಹಾಗೂ ಕೆನರಾ ಬ್ಯಾಂಕ್ ಖಾತೆಯಿಂದ ₹54,582 ಸೇರಿದಂತೆ ಒಟ್ಟು ₹2,90,576 (ಎರಡು ಲಕ್ಷದ ತೊಂಬತ್ತು ಸಾವಿರದ ಐನೂರು ಎಪ್ಪತ್ತಾರು ರೂಪಾಯಿ) ಹಣವನ್ನು ಹಂತ ಹಂತವಾಗಿ ವರ್ಗಾಯಿಸಿ ಮೋಸ ಹೋಗಿದ್ದಾರೆ. ತಮ್ಮಿಂದ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವುದು ಅರಿವಿಗೆ ಬಂದ ತಕ್ಷಣವೇ ಮಹಿಳೆ ಮಂಗಳೂರು ಸಿಇಎನ್ (CEN) ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act 2000) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS 2023) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕರೆ ಬಂದ ನಂಬರ್‌ಗಳು ಹಾಗೂ ಬ್ಯಾಂಕ್ ಖಾತೆಗಳ ಆಧರಿಸಿ ತನಿಖೆ ತೀವ್ರಗೊಳಿಸಿದ್ದಾರೆ.




    #crime #dakshinakannada
    Previous Articleಆರೆಸ್ಸೆಸ್ ಹಿರಿಯ ಕಾರ್ಯಕರ್ತ ಗುರುದಾಸ್ ಶೆಣೈ ಬಳಿಕ ಪ್ರದೀಪ್ ಕಾಂಚನ್ ಕೂಡ ಸಾವು; ಕೋಟ ಅಪಘಾತದಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿಕೆ
    Next Article ಉಡುಪಿ: ಠೇವಣಿ ಹಣದ ವಿವಾದ ವಿಕೋಪಕ್ಕೆ; ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ ಆಸಿಡ್ ದಾಳಿ

    Related Posts

    ಮಂಗಳೂರು: ಪಣಂಬೂರು ಬೀಚ್ ಸಮೀಪದ ರೆಸ್ಟೋರೆಂಟ್ ಮೇಲೆ ಪೊಲೀಸರ ದಾಳಿ; ಇಬ್ಬರು ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ

    November 14, 2026

    ಉಡುಪಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅಂಡರ್‌ವರ್ಲ್ಡ್ ಡಾನ್ ರವಿ ಪೂಜಾರಿಗೆ ನ್ಯಾಯಾಲಯದ ಅನುಮತಿ; ಪೊಲೀಸ್ ಭದ್ರತೆಯಲ್ಲಿ ಉಡುಪಿಗೆ ಪ್ರಯಾಣ

    November 14, 2026

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರು: ಪಣಂಬೂರು ಬೀಚ್ ಸಮೀಪದ ರೆಸ್ಟೋರೆಂಟ್ ಮೇಲೆ ಪೊಲೀಸರ ದಾಳಿ; ಇಬ್ಬರು ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ

    November 14, 2026

    ಉಡುಪಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅಂಡರ್‌ವರ್ಲ್ಡ್ ಡಾನ್ ರವಿ ಪೂಜಾರಿಗೆ ನ್ಯಾಯಾಲಯದ ಅನುಮತಿ; ಪೊಲೀಸ್ ಭದ್ರತೆಯಲ್ಲಿ ಉಡುಪಿಗೆ ಪ್ರಯಾಣ

    November 14, 2026

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026

    ಮಡಿಕೇರಿ: ಹಾರಂಗಿ ಹಿನ್ನೀರಿನಲ್ಲಿ ಪ್ರವಾಸಿಗರ ಬೋಟ್ ಪಲ್ಟಿ; ಇಬ್ಬರು ಮಕ್ಕಳು ಪಾರು, ದಂಪತಿ ಸಾವು

    November 14, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026

    ಮಡಿಕೇರಿ: ಹಾರಂಗಿ ಹಿನ್ನೀರಿನಲ್ಲಿ ಪ್ರವಾಸಿಗರ ಬೋಟ್ ಪಲ್ಟಿ; ಇಬ್ಬರು ಮಕ್ಕಳು ಪಾರು, ದಂಪತಿ ಸಾವು

    November 14, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.