Close Menu
    What's Hot

    ಮಂಗಳೂರು: ಪಣಂಬೂರು ಬೀಚ್ ಸಮೀಪದ ರೆಸ್ಟೋರೆಂಟ್ ಮೇಲೆ ಪೊಲೀಸರ ದಾಳಿ; ಇಬ್ಬರು ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ

    November 14, 2026

    ಉಡುಪಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅಂಡರ್‌ವರ್ಲ್ಡ್ ಡಾನ್ ರವಿ ಪೂಜಾರಿಗೆ ನ್ಯಾಯಾಲಯದ ಅನುಮತಿ; ಪೊಲೀಸ್ ಭದ್ರತೆಯಲ್ಲಿ ಉಡುಪಿಗೆ ಪ್ರಯಾಣ

    November 14, 2026

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ಸ್ಕೂಟರ್‌ಗೆ ಟಿಪ್ಪರ್‌ಗಳ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ, ಎಫ್‌ಐಆರ್ ದಾಖಲು
    ಕರ್ನಾಟಕ

    ಸ್ಕೂಟರ್‌ಗೆ ಟಿಪ್ಪರ್‌ಗಳ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ, ಎಫ್‌ಐಆರ್ ದಾಖಲು

    adminBy adminOctober 31, 2026Updated:October 31, 2026No Comments2 Mins Read

    ಕುಂದಾಪುರ: ಬಳ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಅತಿವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ಬಲಬಾಗಕ್ಕೆ ಚಲಾಯಿಸಿಕೊಂಡು ಬಂದ ಟಿಪ್ಪರ್‌ಗಳು ಸ್ಕೂಟರ್‌ಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ, ಸ್ಕೂಟರ್ ಸವಾರರಿಬ್ಬರು ಗಂಭೀರ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.

    ಅಪಘಾತ ಮಾತ್ರವಲ್ಲದೆ, ಯಾವುದೇ ಅಧಿಕೃತ ಪರವಾನಗಿ  ಇಲ್ಲದೆ ಅಕ್ರಮವಾಗಿ ಕೊಜೆ ಮಣ್ಣು ಸಾಗಿಸುತ್ತಿದ್ದದ್ದು ಮತ್ತು ಅಪಘಾತದ ಬಳಿಕ ಸಾಕ್ಷಿ ನಾಶಪಡಿಸಲು ಯತ್ನಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS 2023) ಹಾಗೂ ಎಂಎಂಆರ್‌ಡಿ (MMRD) ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಾಗಿದೆ.
    ದೂರುದಾರರಾದ ಕಾವ್ರಾಡಿಯ ಕೆ. ಜಾವೇದ್ (38) ಅವರು ಅಕ್ಟೋಬರ್ 30 ರ ಬೆಳಿಗ್ಗೆ 08:45 ರ ಸುಮಾರಿಗೆ ತಮ್ಮ ಮೋಟಾರು ಸೈಕಲ್‌ನಲ್ಲಿ ಬಸ್ರೂರಿಗೆ ಪೆಟ್ರೋಲ್ ಹಾಕಿಸಲು ತೆರಳುತ್ತಿದ್ದರು. ಆ ಸಮಯದಲ್ಲಿ ಬಳ್ಕೂರು ವಿಷ್ಣುಮೂರ್ತಿ ದೇವಸ್ಥಾನದಿಂದ 100 ಮೀಟರ್ ಹಿಂದೆ, ಎದುರಿನಲ್ಲಿ ಕುಂದಾಪುರದಿಂದ ಕಂಡ್ಲೂರು ಕಡೆಗೆ ಹೋಗುತ್ತಿದ್ದ ಬಸ್‌ವೊಂದು ನಿಧಾನವಾಗಿ ಸಾಗುತ್ತಿತ್ತು.

    ಬಸ್ಸಿನ ಹಿಂದಿನಿಂದ ಬಿ.ಎಚ್. ಕಡೆಯಿಂದ ಕಂಡ್ಲೂರು ಕಡೆಗೆ ಎರಡು ಟಿಪ್ಪರ್‌ಗಳು ಒಂದರ ಹಿಂದೆ ಮತ್ತೊಂದು ಅತಿ ವೇಗವಾಗಿ ಬಂದಿವೆ. ಮೊದಲ ಟಿಪ್ಪರ್ ಚಾಲಕ ನಾಗರಾಜ್ ಶೆಟ್ಟಿ ತನ್ನ ವಾಹನವನ್ನು ನಿಧಾನಗೊಳಿಸಿದರೆ, ಹಿಂದಿನ ಟಿಪ್ಪರ್ ಚಾಲಕ ರತ್ವೀಜ್ ಎದುರಿನಲ್ಲಿ ಬಸ್ ಹಾಗೂ ಟಿಪ್ಪರ್ ಇರುವುದನ್ನು ನೋಡಿದರೂ ಸಹ, ಉದ್ದೇಶಪೂರ್ವಕವಾಗಿ ತನ್ನ ಟಿಪ್ಪರ್ ಅನ್ನು ರಸ್ತೆಯ ತೀರ ಬಲಕ್ಕೆ (Wrong Side) ಚಲಾಯಿಸಿಕೊಂಡು ಹೋಗಿ, ಎದುರಿನಿಂದ ಬಸ್ರೂರು ಕಡೆಗೆ ಬರುತ್ತಿದ್ದ ಸ್ಕೂಟರ್‌ಗೆ ಭೀಕರವಾಗಿ ಢಿಕ್ಕಿ ಹೊಡೆದಿದ್ದಾನೆ.

    ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರರಿಬ್ಬರೂ ಟಿಪ್ಪರ್ ಅಡಿಭಾಗದಲ್ಲಿ ಸಿಲುಕಿಹಾಕಿಕೊಂಡಿದ್ದು, ಸ್ಥಳೀಯರು ಹಾಗೂ ದೂರುದಾರರು ಅವರನ್ನು ಹೊರತೆಗೆದು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಮಣಿಪಾಲ ಕೆಎಂಸಿ (KMC) ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಸವಾರರಿಗೆ ತಲೆ, ಹೊಟ್ಟೆ, ಮೈ ಹಾಗೂ ಕೈ-ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಎರಡೂ ಟಿಪ್ಪರ್‌ಗಳಲ್ಲಿ ‘ಕೊಜೆ ಮಣ್ಣು’ (Soft Clay) ಲೋಡ್ ಮಾಡಲಾಗಿತ್ತು. ವಿಶೇಷವೆಂದರೆ, ಟಿಪ್ಪರ್ ಚಾಲಕ ರತ್ವೀಜ್ ಅಪಘಾತವಾದ ತಕ್ಷಣವೇ ಸ್ಥಳದಲ್ಲೇ ಗಾಯಾಳುಗಳಿಗೆ ಸಹಾಯ ಮಾಡುವ ಬದಲು, ಟಿಪ್ಪರ್ ಅನ್ನು ಕಂಡ್ಲೂರಿಗೆ ಓಡಿಸಿಕೊಂಡು ಹೋಗಿ ಅಲ್ಲಿ ಮಣ್ಣನ್ನು ಖಾಲಿ ಮಾಡಿ, ಬಳಿಕ ಖಾಲಿ ಟಿಪ್ಪರ್ ಅನ್ನು ವಾಪಸ್ ತಂದು ನಿಲ್ಲಿಸುವ ಮೂಲಕ ಸಾಕ್ಷಿ ನಾಶಪಡಿಸಲು (Destruction of Evidence) ಯತ್ನಿಸಿರುವುದು ತನಿಖೆಯಿಂದ ತಿಳಿದುಬಂದಿದೆ.

    ಬೆಳಗ್ಗಿನ ಸಮಯದಲ್ಲಿ ಶಾಲಾ ಮಕ್ಕಳು ಹಾಗೂ ವಾಹನಗಳ ಭಾರಿ ದಟ್ಟಣೆ ಇರುತ್ತದೆ ಎಂಬ ಅರಿವಿದ್ದರೂ, ಪ್ರಾಣಾಪಾಯವಾಗಬಹುದು ಎಂದು ತಿಳಿದಿದ್ದರೂ ಯಾವುದೇ ರಕ್ಷಣೆ ಇಲ್ಲದೆ ಈ ಕೃತ್ಯ ಎಸಗಲಾಗಿದೆ.
    ಸ್ಥಳೀಯರು ವಿಚಾರಿಸಿದಾಗ, ಪೇತ್ರಿ ಎಂಬಲ್ಲಿನ ಕ್ವಾರೆಯಿಂದ ಗಣಿ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೆ, ಸರ್ಕಾರಕ್ಕೆ ರಾಜಧನ (Royalty) ಪಾವತಿಸದೆ, ಕೊಜೆ ಮಣ್ಣನ್ನು ಅಕ್ರಮವಾಗಿ ಕಳವು ಮಾಡಿ ಸಾಗಿಸುತ್ತಿರುವುದು ಬಯಲಾಗಿದೆ. ಟಿಪ್ಪರ್ ವಾಹನಗಳ ಆರ್‌ಸಿ ಮಾಲೀಕರು ಹಾಗೂ ಮಣ್ಣಿನ ಮಾಲೀಕರು ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/2026 ರಡಿ ಈ ಕೆಳಗಿನ ಕಠಿಣ ಕಾನೂನು ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ:




    #karnataka
    Previous Articleಉಡುಪಿಯಲ್ಲಿ ಯುವಕನ ಆತ್ಮಹತ್ಯೆ ಪ್ರಕರಣ; ಯುವತಿ, ಸಹೋದರರು ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು
    Next Article ಸೌಜನ್ಯ ಪ್ರಕರಣ ಮರುತನಿಖೆ ಚುರುಕು; ಮೃತದೇಹ ಪತ್ತೆಯಾದ ಸ್ಥಳಕ್ಕೆ ಎಸ್‌ಐಟಿ ಭೇಟಿ

    Related Posts

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026

    ಮಡಿಕೇರಿ: ಹಾರಂಗಿ ಹಿನ್ನೀರಿನಲ್ಲಿ ಪ್ರವಾಸಿಗರ ಬೋಟ್ ಪಲ್ಟಿ; ಇಬ್ಬರು ಮಕ್ಕಳು ಪಾರು, ದಂಪತಿ ಸಾವು

    November 14, 2026

    ಮಗಳ ಮದುವೆ ಲಗ್ನಪತ್ರಿಕೆ ಹಂಚಲು ಹೋಗಿದ್ದ ದಂಪತಿಗೆ ಸಿಮೆಂಟ್ ಲಾರಿ ಡಿಕ್ಕಿ; ಪತ್ನಿ ಸಾವು, ಪತಿಯ ಕಾಲು ತುಂಡು

    November 13, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರು: ಪಣಂಬೂರು ಬೀಚ್ ಸಮೀಪದ ರೆಸ್ಟೋರೆಂಟ್ ಮೇಲೆ ಪೊಲೀಸರ ದಾಳಿ; ಇಬ್ಬರು ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ

    November 14, 2026

    ಉಡುಪಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅಂಡರ್‌ವರ್ಲ್ಡ್ ಡಾನ್ ರವಿ ಪೂಜಾರಿಗೆ ನ್ಯಾಯಾಲಯದ ಅನುಮತಿ; ಪೊಲೀಸ್ ಭದ್ರತೆಯಲ್ಲಿ ಉಡುಪಿಗೆ ಪ್ರಯಾಣ

    November 14, 2026

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026

    ಮಡಿಕೇರಿ: ಹಾರಂಗಿ ಹಿನ್ನೀರಿನಲ್ಲಿ ಪ್ರವಾಸಿಗರ ಬೋಟ್ ಪಲ್ಟಿ; ಇಬ್ಬರು ಮಕ್ಕಳು ಪಾರು, ದಂಪತಿ ಸಾವು

    November 14, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026

    ಮಡಿಕೇರಿ: ಹಾರಂಗಿ ಹಿನ್ನೀರಿನಲ್ಲಿ ಪ್ರವಾಸಿಗರ ಬೋಟ್ ಪಲ್ಟಿ; ಇಬ್ಬರು ಮಕ್ಕಳು ಪಾರು, ದಂಪತಿ ಸಾವು

    November 14, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.