ಕಡಬ: ಬಾಡಿಗೆ ಹಣ ವಿಚಾರಕ್ಕೆ ಸಂಬಂಧಿಸಿದಂತೆ ಜನರ ಗುಂಪೊಂದು ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ನವೆಂಬರ್ 4 ರ ರಾತ್ರಿ ಕುರಿಯಾಳಕೊಪ್ಪದಲ್ಲಿ ನಡೆದಿದೆ.
ಕಡಬದ ಕೋಡಿಂಬಾಳ ನಿವಾಸಿ ಬೇಬಿ ಕೃಷ್ಣ (49) ಸಲ್ಲಿಸಿದ ದೂರಿನ ಪ್ರಕಾರ, ಅವರು ಆಟೋರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಾರೆ ಮತ್ತು ಕಡಬ ಎರಡನೇ ಆಟೋರಿಕ್ಷಾ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಾರೆ.
ನವೆಂಬರ್ 4 ರಂದು, ಅವರು ಆಟೋ ಸ್ಟ್ಯಾಂಡ್ ನಲ್ಲಿರುವಾಗ ಓರ್ವ ಅಪರಿಚಿತ ಹಿಂದಿ ಮಾತನಾಡುವ ವ್ಯಕ್ತಿಯೊಬ್ಬರು ಕುರಿಯಾಳಕೊಪ್ಪಕ್ಕೆ ಪ್ರಯಾಣಿಸಲು ತಮ್ಮ ಆಟೋರಿಕ್ಷಾವನ್ನು ಬಾಡಿಗೆಗೆ ಕರೆದಿದ್ದು ಆತನನ್ನು ಕೂರಿಸಿಕೊಂಡು ಕುರಿಯಾಳಕೊಪ್ಪಕ್ಕೆ ತೆರಳಿದಾಗ ವ್ಯಕ್ತಿಯು ಬಾಡಿಗೆ ಹಣ ನೀಡುವುದಾಗಿ ಕಾಯಲು ಹೇಳಿ ಬರಲಿಲ್ಲ. ಬಳಿಕ ಆಟೋ ಚಾಲಕ ಆತನಿದ್ದ ಟೆಂಟ್ ತೆರಳಿ ಹಣವನ್ನು ಕೇಳಿದಾಗ ಹಣ ನೀಡದೇ ಸತಾಯಿಸಿದ್ದು
ಬಳಿಕ ಆರೋಪಿತ ಹಾಗೂ ಇತರೆ 3-4 ಜನ ಬಂದು ರಿಕ್ಷಾ ಹೋಗದಂತೆ ತಡೆದು ಎಲ್ಲರೂ ಸೇರಿ ಅಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ದೂರಿನ ಆಧಾರದ ಮೇಲೆ, ಕಡಬ ಪೊಲೀಸರು ಅಪರಾಧ ಸಂಖ್ಯೆ 129/2026 ರಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), 2023 ರ ಸೆಕ್ಷನ್ 126(2), 115(2) ಜೊತೆಗೆ ಸೆಕ್ಷನ್ 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ.








