ಬೆಂಗಳೂರು: ಒಂದೇ ಕುಟುಂಬದ ಏಳು ಜನರ ಭೀಕರ ಹತ್ಯೆ ಪ್ರಕರಣದಲ್ಲಿ ಆರೋಪಿ ಇಂದುಶೇಖರ್ಗೆ ಪಿಯುಸಿ ಓದುತ್ತಿರುವ ಮಗಳು ಕೂಡ ಸಾಥ್ ನೀಡಿರುವ ಶಂಕೆ ವ್ಯಕ್ತವಾಗಿದೆ. ಮಗಳನ್ನು ಮಾತ್ರ ಬಿಟ್ಟು ಉಳಿದವರೆಲ್ಲರನ್ನೂ ಆರೋಪಿ ಕೊಲೆ ಮಾಡಿದ್ದು, 20 ದಿನಗಳಿಂದ ಕೊಲೆ ನಡೆಯುತ್ತಿದ್ದರೂ ಮಗಳು ಮೌನವಾಗಿದ್ದಳು. ಕಳೆದ 4 ದಿನಗಳಿಂದ ಮನೆ ಬಳಿಯೇ ಓಡಾಟ ನಡೆಸುತ್ತಿದ್ದಳು. ಹೀಗಾಗಿ ತಂದೆಯ ಕೊಲೆ ಕೃತ್ಯಕ್ಕೆ ಆಕೆಯೂ ಸಹಕಾರ ನೀಡಿದ್ದಳಾ? ಇಬ್ಬರೂ ಪ್ಲ್ಯಾನ್ ಮಾಡಿ ಕುಟುಂಬವನ್ನೇ ಮುಗಿಸಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೆ ಮಗಳ ಮೂಲಕವೇ ಒಬ್ಬೊಬ್ಬರನ್ನೇ ಮನೆಗೆ ಕರೆಸಿಕೊಂಡು ಇಂದುಶೇಖರ್ ಕೊಲೆ ಮಾಡಿರೋದು ಕೂಡ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.








