Close Menu
    What's Hot

    ಮಗಳ ಮದುವೆ ಲಗ್ನಪತ್ರಿಕೆ ಹಂಚಲು ಹೋಗಿದ್ದ ದಂಪತಿಗೆ ಸಿಮೆಂಟ್ ಲಾರಿ ಡಿಕ್ಕಿ; ಪತ್ನಿ ಸಾವು, ಪತಿಯ ಕಾಲು ತುಂಡು

    November 13, 2026

    ಅಶ್ವಿನಿ ವೈಷ್ಣವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಪುತ್ತೂರಿನಲ್ಲಿ ವಂದೇ ಭಾರತ್‌ಗೆ ಚಾಲನೆ; ಕರಾವಳಿಗರ ಬಹುದಿನಗಳ ಕನಸು ನನಸು

    November 13, 2026

    ಅಸ್ಸಾಂನಲ್ಲಿ ಬೆಚ್ಚಿಬೀಳಿಸಿದ ರಸ್ತೆ ಅಪಘಾತ; ಮಿನಿ ಬಸ್ ಜಖಂಗೊಂಡು 23 ಮಂದಿ ದುರ್ಮರಣ

    November 13, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಂಗಳೂರು: ಎಲೆಕ್ಟ್ರಿಷಿಯನ್‌ಗೆ ಹಲ್ಲೆ ನಡೆಸಿ ಹಣ ಸುಲಿಗೆ ಆರೋಪ; ಮೂವರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು
    ಅಪರಾಧ

    ಮಂಗಳೂರು: ಎಲೆಕ್ಟ್ರಿಷಿಯನ್‌ಗೆ ಹಲ್ಲೆ ನಡೆಸಿ ಹಣ ಸುಲಿಗೆ ಆರೋಪ; ಮೂವರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

    adminBy adminNovember 6, 2026No Comments2 Mins Read

    ಮಂಗಳೂರು: ರಾತ್ರಿ ವೇಳೆ ಎಲೆಕ್ಟ್ರಿಷಿಯನ್ ಒಬ್ಬರನ್ನು ತಡೆದು ಹಲ್ಲೆ ನಡೆಸಿ, ಬೆದರಿಕೆ ಹಾಕಿ ಒಟ್ಟು 4,000 ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

    ವಿಟ್ಲ ಮುಡ್ನೂರು ಮೂಲದ ರವಿರಾಜ್ ದೂರು ನೀಡಿದವರಾಗಿದ್ದಾರೆ. ಅವರು ಪಾಂಡೇಶ್ವರದ ಶಿವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕಂಕನಾಡಿಯ ಖಾಸಗಿ ಸಂಸ್ಥೆಯೊಂದರಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.

    ದೂರಿನ ಪ್ರಕಾರ, ಮೊದಲ ಘಟನೆ ಆಗಸ್ಟ್ 25 ರಂದು ರಾತ್ರಿ ಸುಮಾರು 10 ಗಂಟೆಗೆ ನಡೆದಿದೆ. ರವಿರಾಜ್ ನೆಹರೂ ಮೈದಾನದಲ್ಲಿ ವಾಕಿಂಗ್ ಮುಗಿಸಿ ಬಾಡಿಗೆ ಮನೆಗೆ ಹಿಂತಿರುಗುತ್ತಿದ್ದಾಗ, ಆರ್‌ಟಿಒ ಕಚೇರಿ ಬಳಿ ಹೊಯ್ಸಳ ಗಸ್ತು ವಾಹನದಲ್ಲಿ ಬಂದ ಮೂವರು ಪೊಲೀಸ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಅವರನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಸೇರಿದ ಚಾಲಕ ಹಿರಣ್ಣ ಬೆನ್ನಿ, ಸಿಬ್ಬಂದಿಗಳಾದ ಶಿವರಾಜ್ ಮತ್ತು ಉಮಾಕಾಂತ್ ಎಂದು ಗುರುತಿಸಲಾಗಿದೆ.

    ಆರೋಪಿ ಸಿಬ್ಬಂದಿ ರವಿರಾಜ್ ಅವರ ಭುಜ ಮತ್ತು ಕಾಲಿಗೆ ಲಾಠಿಯಿಂದ ಹೊಡೆದು, ಅವರ ಮೊಬೈಲ್ ಫೋನ್ ಹಾಗೂ ಕವರ್‌ನಲ್ಲಿದ್ದ 300 ರೂಪಾಯಿ ನಗದನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಅಲ್ಲದೆ, ಅಸಭ್ಯ ಭಾಷೆಯಿಂದ ನಿಂದಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.

    ಆಗಸ್ಟ್ 27 ರಂದು ರವಿರಾಜ್ ಮತ್ತೆ ಅದೇ ಸ್ಥಳದಲ್ಲಿ ವಾಕಿಂಗ್ ಮಾಡುತ್ತಿದ್ದಾಗ, ಹಿರಣ್ಣ ಬೆನ್ನಿ ಮತ್ತು ಇತರ ಸಿಬ್ಬಂದಿ ಹೊಯ್ಸಳ ವಾಹನದಲ್ಲಿ ಬಂದು ಅವರ ಮೊಬೈಲ್ ಫೋನ್, ಕರ್ನಾಟಕ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್‌ನ ಎರಡು ಎಟಿಎಂ ಕಾರ್ಡ್‌ಗಳು, 1,000 ರೂಪಾಯಿ ನಗದು ಹಾಗೂ ದ್ವಿಚಕ್ರ ವಾಹನದ ಕೀಲಿಯನ್ನು ಕಸಿದುಕೊಂಡಿದ್ದಾರೆ. ಸ್ಥಳದಲ್ಲೇ ಇರಲು ಸೂಚಿಸಿ ಅವರು ತೆರಳಿದ್ದರು.

    ರಾತ್ರಿ 11:30 ರ ಸುಮಾರಿಗೆ ಮತ್ತೆ ಹೊಯ್ಸಳ ವಾಹನದಲ್ಲಿ ಬಂದ ಸಿಬ್ಬಂದಿ, ರವಿರಾಜ್ ಅವರನ್ನು ಬಲವಂತವಾಗಿ ವಾಹನದಲ್ಲಿ ಕುಳ್ಳಿರಿಸಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತಮ್ಮ ಬಳಿ ಎಟಿಎಂ ಕಾರ್ಡ್‌ಗಳು ಮಾತ್ರ ಇವೆ ಎಂದು ರವಿರಾಜ್ ಹೇಳಿದಾಗ, ಮೊಬೈಲ್ ಪಾಸ್‌ವರ್ಡ್ ಪಡೆದು ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದ್ದಾರೆ. ಖಾತೆಯಲ್ಲಿ ಸುಮಾರು 5,000 ರೂಪಾಯಿ ಇರುವುದನ್ನು ಕಂಡು, 2,000 ರೂಪಾಯಿ ನೀಡುವಂತೆ ಪಟ್ಟು ಹಿಡಿದಿದ್ದಾರೆ.

    ಹಣ ನೀಡದಿದ್ದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಣ ಸಾಲದ ಕಂತು ಪಾವತಿಗೆ ಮೀಸಲಿಟ್ಟಿದ್ದು, ತಾವೇನೂ ತಪ್ಪು ಮಾಡಿಲ್ಲ ಎಂದು ರವಿರಾಜ್ ಎಷ್ಟೇ ಹೇಳಿದರೂ ಸಿಬ್ಬಂದಿ ಕೇಳಲಿಲ್ಲ. ಬಳಿಕ ಅವರನ್ನು ಮಂಗಳಾದೇವಿ ದೇವಾಲಯದ ಬಳಿಯ ಎಸ್‌ಬಿಐ ಎಟಿಎಂಗೆಗೆ ಕರೆದೊಯ್ದು ಬಲವಂತವಾಗಿ ಹಣ ಡ್ರಾ ಮಾಡಿಸಿದ್ದಾರೆ. ಒಟ್ಟು 3,000 ರೂಪಾಯಿ ಪಡೆದುಕೊಂಡು ರವಿರಾಜ್ ಅವರನ್ನು ಅಲ್ಲೇ ಬಿಟ್ಟು ತೆರಳಿದ್ದಾರೆ.

    ಮತ್ತೊಂದು ಘಟನೆಯಲ್ಲಿ, ನವೆಂಬರ್ 4 ರಂದು ರವಿರಾಜ್ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಸಿಬ್ಬಂದಿ ವಾಹನದ ಕೀಲಿಯನ್ನು ಕಿತ್ತುಕೊಂಡು, ಹೊಯ್ಸಳ ವಾಹನದಲ್ಲಿ ಪಾಂಡೇಶ್ವರದ ಮಾಲ್ ಒಂದರವರೆಗೆ ಕರೆದೊಯ್ದಿದ್ದಾರೆ. ಮೊಬೈಲ್ ಫೋನ್ ಕಸಿದುಕೊಂಡು, ಠಾಣೆಗೆ ಬಂದು ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

    ಮೊದಲಿಗೆ ಮೊಬೈಲ್ ಹಿಂತಿರುಗಿಸಲು ದಂಡ ತೆರಬೇಕಾಗುತ್ತದೆ ಎಂದು ಹೇಳಿದ್ದ ಸಿಬ್ಬಂದಿ, ನಂತರ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲು ಸಾಧ್ಯವಿಲ್ಲ, ಠಾಣೆಗೆ ಬರುವುದಾಗಿ ರವಿರಾಜ್ ತಿಳಿಸಿದ್ದಾರೆ. ಆ ನಂತರ ಅದೇ ರಾತ್ರಿ ರವಿರಾಜ್ ಅವರಿಗೆ ಕರೆ ಮಾಡಿ ದ್ವಿಚಕ್ರ ವಾಹನವನ್ನು ಪಡೆದುಕೊಳ್ಳುವಂತೆ ಹೇಳಿದ್ದಾರೆ.

    ಇದೀಗ ತಮ್ಮ ಮೇಲಿನ ಹಲ್ಲೆ, ಬೆದರಿಕೆ, ಕಿರುಕುಳ ಮತ್ತು ಸುಲಿಗೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ರವಿರಾಜ್ ಮೂವರೂ ಪೊಲೀಸ್ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾರೆ.




    #crime #dakshinakannada
    Previous Articleಸಿಜೆಐ ವಿರುದ್ಧದ ಪೋಸ್ಟ್ ವಿವಾದ; ಕೇರಳ ಕಾಂಗ್ರೆಸ್ ಪದಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್
    Next Article ಬಿಸಿಲೆ ಘಾಟ್‌ನಲ್ಲಿ ಯುವತಿ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಆರೋಪ; ಕೊಲೆ ಯತ್ನದ ಆರೋಪದಲ್ಲಿ ವ್ಯಕ್ತಿಯ ಬಂಧನ

    Related Posts

    ಅಶ್ವಿನಿ ವೈಷ್ಣವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಪುತ್ತೂರಿನಲ್ಲಿ ವಂದೇ ಭಾರತ್‌ಗೆ ಚಾಲನೆ; ಕರಾವಳಿಗರ ಬಹುದಿನಗಳ ಕನಸು ನನಸು

    November 13, 2026

    ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆ ಪ್ರಕರಣ; 6 ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

    November 13, 2026

    ಬಂಟ್ವಾಳದಲ್ಲಿ ಮನೆಯ ಹಿಂಬದಿ ಬಾಗಿಲು ಮುರಿದು ಚಿನ್ನಾಭರಣ ಕಳವು ಪ್ರಕರಣ; ಆರೋಪಿ ನ್ಯಾಯಾಲಯಕ್ಕೆ ಶರಣು

    November 13, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಗಳ ಮದುವೆ ಲಗ್ನಪತ್ರಿಕೆ ಹಂಚಲು ಹೋಗಿದ್ದ ದಂಪತಿಗೆ ಸಿಮೆಂಟ್ ಲಾರಿ ಡಿಕ್ಕಿ; ಪತ್ನಿ ಸಾವು, ಪತಿಯ ಕಾಲು ತುಂಡು

    November 13, 2026

    ಅಶ್ವಿನಿ ವೈಷ್ಣವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಪುತ್ತೂರಿನಲ್ಲಿ ವಂದೇ ಭಾರತ್‌ಗೆ ಚಾಲನೆ; ಕರಾವಳಿಗರ ಬಹುದಿನಗಳ ಕನಸು ನನಸು

    November 13, 2026

    ಅಸ್ಸಾಂನಲ್ಲಿ ಬೆಚ್ಚಿಬೀಳಿಸಿದ ರಸ್ತೆ ಅಪಘಾತ; ಮಿನಿ ಬಸ್ ಜಖಂಗೊಂಡು 23 ಮಂದಿ ದುರ್ಮರಣ

    November 13, 2026

    ಬೆಂಗಳೂರು–ಮಂಗಳೂರು–ಗೋವಾ ವಂದೇ ಭಾರತ್‌ಗೆ ಪ್ರಧಾನಿ ಮೋದಿ ಚಾಲನೆ; ಪ್ರಯಾಣದ ಅವಧಿ 7 ಗಂಟೆಗೆ ಇಳಿಕೆ

    November 13, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಮಗಳ ಮದುವೆ ಲಗ್ನಪತ್ರಿಕೆ ಹಂಚಲು ಹೋಗಿದ್ದ ದಂಪತಿಗೆ ಸಿಮೆಂಟ್ ಲಾರಿ ಡಿಕ್ಕಿ; ಪತ್ನಿ ಸಾವು, ಪತಿಯ ಕಾಲು ತುಂಡು

    November 13, 2026

    ಬೆಂಗಳೂರು–ಮಂಗಳೂರು–ಗೋವಾ ವಂದೇ ಭಾರತ್‌ಗೆ ಪ್ರಧಾನಿ ಮೋದಿ ಚಾಲನೆ; ಪ್ರಯಾಣದ ಅವಧಿ 7 ಗಂಟೆಗೆ ಇಳಿಕೆ

    November 13, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.