Close Menu
    What's Hot

    ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್; ಮಂಗಳೂರು ಸೇರಿ ನಾಲ್ಕು ನಗರಗಳಲ್ಲಿ ಸಂಗ್ರಹಣಾ ಕೇಂದ್ರ ಸ್ಥಾಪನೆ

    November 12, 2026

    ಬೆಳ್ತಂಗಡಿಯಲ್ಲಿ ಭೀಕರ ಅಪಘಾತ; 15 ಅಡಿ ಆಳದ ಹೊಂಡಕ್ಕೆ ಉರುಳಿದ ಕಾರು,ಐವರಿಗೆ ಗಾಯ

    November 12, 2026

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಸುರತ್ಕಲ್: ₹4,000 ಆಮಿಷವೊಡ್ಡಿ ಸ್ನೇಹಿತನಿಂದಲೇ ಬ್ಯಾಂಕ್ ಖಾತೆ ದುರ್ಬಳಕೆ; ವಿವಿಧ ರಾಜ್ಯಗಳಲ್ಲಿ ಸೈಬರ್ ದೂರು, ಖಾತೆ ಫ್ರೀಜ್
    ಅಪರಾಧ

    ಸುರತ್ಕಲ್: ₹4,000 ಆಮಿಷವೊಡ್ಡಿ ಸ್ನೇಹಿತನಿಂದಲೇ ಬ್ಯಾಂಕ್ ಖಾತೆ ದುರ್ಬಳಕೆ; ವಿವಿಧ ರಾಜ್ಯಗಳಲ್ಲಿ ಸೈಬರ್ ದೂರು, ಖಾತೆ ಫ್ರೀಜ್

    adminBy adminNovember 10, 2026No Comments2 Mins Read

    ಮಂಗಳೂರು : ಬ್ಯಾಂಕ್ ಖಾತೆ ತೆರೆದುಕೊಟ್ಟರೆ ಹಣ ನೀಡುವುದಾಗಿ ನಂಬಿಸಿ ಯುವಕನೋರ್ವನ ಖಾತೆಯನ್ನು ಸೈಬರ್ ವಂಚನೆಯ ಹಣ ಅಕ್ರಮವಾಗಿ ವರ್ಗಾವಣೆ ಮಾಡಲು ಬಳಸಿಕೊಂಡ ಘಟನೆ ಸುರತ್ಕಲ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವಕ ತನ್ನ ಸ್ನೇಹಿತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸುರತ್ಕಲ್‌ನ ಕೃಷ್ಣಪುರ ನಿವಾಸಿ 21 ವರ್ಷದ ಯುವಕರೊಬ್ಬರು ನೀಡಿದ ದೂರಿನಂತೆ, ಕೃಷ್ಣಪುರ 7ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಹಮ್ರಾಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

    2025ರಲ್ಲಿ ದೂರುದಾರ ಯುವಕನಿಗೆ ಕೃಷ್ಣಪುರದಲ್ಲಿ ಮೊಹಮ್ಮದ್ ಹಮ್ರಾಜ್‌ನ ಪರಿಚಯವಾಗಿ, ಇಬ್ಬರೂ ಸ್ನೇಹಿತರಾಗಿದ್ದರು. ಮೇ 2025ರಲ್ಲಿ ಹಮ್ರಾಜ್, “ನನಗೆ ಟ್ರೇಡಿಂಗ್ ಮಾಡಲು ಹಣ ವರ್ಗಾವಣೆ ಮತ್ತು ಡ್ರಾ ಮಾಡಲು ಬ್ಯಾಂಕ್ ಖಾತೆಯ ಅಗತ್ಯವಿದೆ. ನೀನು ಖಾತೆ ತೆರೆದುಕೊಟ್ಟರೆ ₹4,000 ನೀಡುತ್ತೇನೆ” ಎಂದು ನಂಬಿಸಿದ್ದ. ಸ್ನೇಹಿತನ ಮಾತು ನಂಬಿದ ಯುವಕ, ಏಪ್ರಿಲ್‌ನಲ್ಲಿ ತಮ್ಮ ಕೆವೈಸಿ (KYC) ದಾಖಲೆಗಳನ್ನು ನೀಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದರು. ಬಳಿಕ ಖಾತೆಯ ಪಾಸ್‌ಬುಕ್ ಹಾಗೂ ಸಹಿ ಮಾಡಿದ ಚೆಕ್‌ಗಳನ್ನು ಬ್ಯಾಂಕ್ ಮುಂಭಾಗದಲ್ಲೇ ಹಮ್ರಾಜ್‌ಗೆ ಹಸ್ತಾಂತರಿಸಿದ್ದರು. ಈ ಖಾತೆಯ ಮೂಲಕ 2025ರ ಮೇ 14ರಂದು ₹4,10,000 ಹಾಗೂ 2026ರ ಮೇ 20ರಂದು ₹4,53,000 ಸೇರಿದಂತೆ ಒಟ್ಟು ₹8,63,000 ನಗದು ವಹಿವಾಟು ನಡೆಸಲಾಗಿತ್ತು. ಆದರೆ, ಮಾತುಕೊಟ್ಟಂತೆ ಹಮ್ರಾಜ್ ಯುವಕನಿಗೆ ₹4,000 ಹಣವನ್ನು ನೀಡದೆ ವಂಚಿಸಿದ್ದ.

    ಬಳಿಕ ಯುವಕ ಹಮ್ರಾಜ್‌ನೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು. ಇತ್ತೀಚೆಗೆ ತಮ್ಮ ಬ್ಯಾಂಕ್ ಖಾತೆಯ ಮೇಲೆ ಸಾಲು ಸಾಲು ಆನ್‌ಲೈನ್ ದೂರುಗಳು ದಾಖಲಾಗಿರುವ ವಿಷಯ ತಿಳಿದು ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಸೈಬರ್ ವಂಚನೆಯಿಂದ ದೋಚಲಾದ ಹಣವನ್ನು ಈ ಯುವಕನ ಖಾತೆಗೆ ವರ್ಗಾಯಿಸಿ, ಬಳಿಕ ಚೆಕ್ ಮೂಲಕ ಡ್ರಾ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ ವಿವಿಧ ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ಸೈಬರ್ ದೂರುಗಳು ದಾಖಲಾಗಿ, ಬ್ಯಾಂಕ್ ಖಾತೆಯನ್ನು ಫ್ರೀಜ್ (Freeze) ಮಾಡಿರುವುದು ತಿಳಿದುಬಂದಿದೆ. ತಮ್ಮ ಖಾತೆಯನ್ನು ದುರ್ಬಳಕೆ ಮಾಡಿಕೊಂಡು ಸೈಬರ್ ವಂಚನೆ ಎಸಗಿರುವ ಮೊಹಮ್ಮದ್ ಹಮ್ರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಯುವಕ ದೂರಿನಲ್ಲಿ ಒತ್ತಾಯಿಸಿದ್ದಾರೆ




    #crime #dakshinakannada
    Previous Articleನಂದಿನಿ ಹಾಲಿನಲ್ಲಿ ಜೇಡ ಪತ್ತೆ ಆರೋಪ; ಡಾ. ಅಬ್ದುಲ್ ಕಲಾಂ ಸಂಬಂಧಿ ನೀಡಿದ ದೂರಿನ ಬೆನ್ನಲ್ಲೇ ಪರಿಶೀಲನೆ
    Next Article ಕಾಪು: ಗೂಗಲ್ ಪೇ ಖಾತೆಗೆ ಅಪರಿಚಿತ ಸಂದೇಶ; ಕೆಲವೇ ಗಂಟೆಗಳಲ್ಲಿ ಬ್ಯಾಂಕ್ ಖಾತೆಯಿಂದ ₹2.49 ಲಕ್ಷ ದೋಚಿದ ವಂಚಕರು

    Related Posts

    ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್; ಮಂಗಳೂರು ಸೇರಿ ನಾಲ್ಕು ನಗರಗಳಲ್ಲಿ ಸಂಗ್ರಹಣಾ ಕೇಂದ್ರ ಸ್ಥಾಪನೆ

    November 12, 2026

    ಬೆಳ್ತಂಗಡಿಯಲ್ಲಿ ಭೀಕರ ಅಪಘಾತ; 15 ಅಡಿ ಆಳದ ಹೊಂಡಕ್ಕೆ ಉರುಳಿದ ಕಾರು,ಐವರಿಗೆ ಗಾಯ

    November 12, 2026

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್; ಮಂಗಳೂರು ಸೇರಿ ನಾಲ್ಕು ನಗರಗಳಲ್ಲಿ ಸಂಗ್ರಹಣಾ ಕೇಂದ್ರ ಸ್ಥಾಪನೆ

    November 12, 2026

    ಬೆಳ್ತಂಗಡಿಯಲ್ಲಿ ಭೀಕರ ಅಪಘಾತ; 15 ಅಡಿ ಆಳದ ಹೊಂಡಕ್ಕೆ ಉರುಳಿದ ಕಾರು,ಐವರಿಗೆ ಗಾಯ

    November 12, 2026

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026

    ಮಣಿಪಾಲ ಎಂಐಟಿ ಹಾಸ್ಟೆಲ್‌ನಲ್ಲಿ ಬಿಟೆಕ್ ವಿದ್ಯಾರ್ಥಿನಿ ಶವವಾಗಿ ಪತ್ತೆ; ಪ್ರಕರಣ ದಾಖಲು

    November 12, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026

    ನಿರಪರಾಧಿಗೆ ಜೈಲು ಶಿಕ್ಷೆ; ಎರಡೂವರೆ ವರ್ಷಗಳ ಬಳಿಕ ಜೀವಂತವಾಗಿ ಪ್ರತ್ಯಕ್ಷವಾದ ಕೊಲೆಯಾದ ಮಹಿಳೆ

    November 12, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.