Close Menu
    What's Hot

    ರಾಜ್ಯ ಪೊಲೀಸ್ ಇಲಾಖೆಯಲ್ಲಿ 31 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಎನ್. ಶಶಿಕುಮಾರ್ ನೇಮಕ

    November 18, 2026

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    November 18, 2026

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»Uncategorized»ರಾಜ್ಯ ಪೊಲೀಸ್ ಇಲಾಖೆಯಲ್ಲಿ 31 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಎನ್. ಶಶಿಕುಮಾರ್ ನೇಮಕ
    Uncategorized

    ರಾಜ್ಯ ಪೊಲೀಸ್ ಇಲಾಖೆಯಲ್ಲಿ 31 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಎನ್. ಶಶಿಕುಮಾರ್ ನೇಮಕ

    adminBy adminNovember 18, 2026No Comments2 Mins Read

    ಮಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಿರುವ ರಾಜ್ಯ ಸರ್ಕಾರ, ಬರೋಬ್ಬರಿ 31 ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.

    ಕರಾವಳಿ ಭಾಗದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಸ್ಥಳ ನಿರೀಕ್ಷಣೆಯಲ್ಲಿದ್ದ ಎನ್. ಶಶಿಕುಮಾರ್ ಅವರನ್ನು ಮಂಗಳೂರಿನ ಪಶ್ಚಿಮ ವಲಯದ ನೂತನ ಪೊಲೀಸ್ ಮಹಾನಿರೀಕ್ಷಕರಾಗಿ (ಐಜಿಪಿ) ನೇಮಿಸಲಾಗಿದೆ. ಇವರು ಈ ಹಿಂದೆ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ (ಎಡಿಜಿಪಿ) ಆರ್. ಹಿತೇಂದ್ರ ಅವರನ್ನು ಬೆಂಗಳೂರು ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿದೆ.

    ನಿರ್ಗಮಿತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

    ಬೆಂಗಳೂರು ಕಮಿಷನರೇಟ್‌ನಲ್ಲಿ ಹೊಸ ವಿಭಾಗಗಳ ಸೃಷ್ಟಿ:
    ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಬೆಂಗಳೂರಿನ ವಿವಿಧ ವಲಯಗಳಲ್ಲಿ ಹೊಸದಾಗಿ ಸೃಷ್ಟಿಸಲಾದ ಆಯುಕ್ತರ ಹುದ್ದೆಗಳಿಗೆ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ.

    ಹೇಮಂತ್ ಎಂ. ನಿಂಬಾಳ್ಕರ್: ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಸಂಚಾರ ವಿಭಾಗ (ಮೇಲ್ದರ್ಜೆಗೇರಿಸಲಾದ ರೌಡಿ ನಿಗ್ರಹ ದಳದ ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆಯೊಂದಿಗೆ).
    ಲಾಭು ರಾಮ್: ಪೊಲೀಸ್ ಆಯುಕ್ತರು, ಕೇಂದ್ರ ಬೆಂಗಳೂರು ನಗರ (ಹೊಸ ಹುದ್ದೆ).
    ಡಾ. ಪಿ. ಎಸ್. ಹರ್ಷ: ಪೊಲೀಸ್ ಆಯುಕ್ತರು, ಪೂರ್ವ ಬೆಂಗಳೂರು ನಗರ (ಹೊಸ ಹುದ್ದೆ).
    ವಿಕಾಸ್ ಕುಮಾರ್ ವಿಕಾಸ್: ಪೊಲೀಸ್ ಆಯುಕ್ತರು, ಪಶ್ಚಿಮ ಬೆಂಗಳೂರು ನಗರ (ಹೊಸ ಹುದ್ದೆ).
    ಡಾ. ಎಂ. ಬಿ. ಬೋರಲಿಂಗಯ್ಯ: ಪೊಲೀಸ್ ಆಯುಕ್ತರು, ಉತ್ತರ ಬೆಂಗಳೂರು ನಗರ (ಹೊಸ ಹುದ್ದೆ).
    ಸಿ. ವಂಶಿ ಕೃಷ್ಣ: ಜಂಟಿ ಪೊಲೀಸ್ ಆಯುಕ್ತರು (ಆಡಳಿತ), ಬೆಂಗಳೂರು ನಗರ (ದಕ್ಷಿಣ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆಯೊಂದಿಗೆ – ಹೊಸ ಹುದ್ದೆ).

    ಇತರ ಪ್ರಮುಖ ಅಧಿಕಾರಿಗಳ ವರ್ಗಾವಣೆ ವಿವರ:
    ಬಿಜಯ್ ಕುಮಾರ್ ಸಿಂಗ್: ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ (ಈ ಹಿಂದೆ ಸಿಐಡಿಯಲ್ಲಿದ್ದರು).
    ಎಸ್. ಮುರುಗನ್: ಎಡಿಜಿಪಿ, ಲೋಕಾಯುಕ್ತ.
    ಮನೀಶ್ ಖರ್ಬಿಕರ್: ಎಡಿಜಿಪಿ, ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗ, ಬೆಂಗಳೂರು.
    ಅನುಪಮ್ ಅಗರವಾಲ್: ಐಜಿಪಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ).
    ಡಾ. ಶರಣಪ್ಪ ಎಸ್. ಡಿ: ಡಿಐಜಿಪಿ, ರೈಲ್ವೆ ವಿಭಾಗ (ಈ ಹಿಂದೆ ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿದ್ದರು).
    ಕುಲದೀಪ್ ಕುಮಾರ್ ಆರ್. ಜೈನ್: ಡಿಐಜಿಪಿ ಮತ್ತು ಕಲಬುರಗಿ ನಗರ ಪೊಲೀಸ್ ಆಯುಕ್ತರು.
    ಎಂ. ಪುಟ್ಟಮಾದಯ್ಯ: ಡಿಐಜಿಪಿ, ದಕ್ಷಿಣ ವಲಯ, ಮೈಸೂರು.
    ಡಾ. ಎಂ. ಅಶ್ವಿನಿ: ಡಿಐಜಿಪಿ, ನೇಮಕಾತಿ ವಿಭಾಗ, ಬೆಂಗಳೂರು.
    ಜೆ. ಕೆ. ರಶ್ಮಿ: ಡಿಐಜಿಪಿ, ಜಾಗೃತ ದಳ, ಜಲಸಂಪನ್ಮೂಲ ಇಲಾಖೆ.

    ಡಿಸಿಪಿ ಮಟ್ಟದ ಬದಲಾವಣೆಗಳು:
    ಡಾ. ಅನೂಪ್ ಎ. ಶೆಟ್ಟಿ: ಡಿಸಿಪಿ (ಸಂಚಾರ), ಪೂರ್ವ ಬೆಂಗಳೂರು ನಗರ.
    ಲಕ್ಷ್ಮಣ ನಿಂಬರಗಿ: ಡಿಸಿಪಿ, ನಗರ ಸಶಸ್ತ್ರ ಮೀಸಲು ಪಡೆ (ಕೇಂದ್ರ ಬೆಂಗಳೂರು ಕೇಂದ್ರ ಕಚೇರಿ).
    ಚನ್ನಬಸವಣ್ಣ ಲಂಗೋಟಿ: ಡಿಸಿಪಿ, ಇಂದಿರಾನಗರ, ಕೇಂದ್ರ ಬೆಂಗಳೂರು ನಗರ.
    ನಾಗೇಶ್ ಡಿ. ಎಲ್: ಡಿಸಿಪಿ, ಯಶವಂತಪುರ, ಉತ್ತರ ಬೆಂಗಳೂರು ನಗರ.
    ಲೋಕೇಶ್ ಭರಮಪ್ಪ ಜಗಲಾಸರ್: ಡಿಸಿಪಿ (ಸಂಚಾರ), ಕೇಂದ್ರ ಬೆಂಗಳೂರು ನಗರ.
    ಯತೀಶ್ ಎನ್: ಡಿಸಿಪಿ, ಕೆಂಗೇರಿ (ನೈಋತ್ಯ), ಪಶ್ಚಿಮ ಬೆಂಗಳೂರು ನಗರ.
    ಸೈದುಲು ಅಡಾವತ್: ಎಸ್‌ಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು.
    ಶ್ರೀಹರಿ ಬಾಬು ಬಿ. ಎಲ್: ಡಿಸಿಪಿ, ವೈಟ್‌ಫೀಲ್ಡ್, ಪೂರ್ವ ಬೆಂಗಳೂರು ನಗರ.
    ಡಾ. ಗೀತಾ ಎಂ. ಎಸ್: ಡಿಸಿಪಿ, ಪೂರ್ವ ಬೆಂಗಳೂರು ನಗರ.
    ರಂಜಿತ್ ಕುಮಾರ್ ಬಂಡಾರು: ಡಿಸಿಪಿ (ಆಡಳಿತ), ಬೆಂಗಳೂರು ನಗರ.
    ಅಶೋಕ್ ಕೆ. ವಿ: ಡಿಸಿಪಿ, ಪೀಣ್ಯ, ಪಶ್ಚಿಮ ಬೆಂಗಳೂರು ನಗರ.
    ಅಮಟೆ ವಿಕ್ರಮ್: ಡಿಸಿಪಿ, ಉತ್ತರ ಬೆಂಗಳೂರು ನಗರ.
    ಲಕ್ಷ್ಮಿ ಗಣೇಶ್ ಕೆ: ಡಿಸಿಪಿ, ಗಾಂಧಿನಗರ, ಕೇಂದ್ರ ಬೆಂಗಳೂರು ನಗರ.
    ಪಿ. ವಿ. ಸ್ನೇಹಾ: ಡಿಸಿಪಿ (ಸಂಚಾರ), ಪಶ್ಚಿಮ ಬೆಂಗಳೂರು ನಗರ.




    Previous Articleಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    Related Posts

    ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ಚುರುಕು; ಕೊನೆಯದಾಗಿ ನೋಡಿದ್ದ ಐವರು ಪ್ರಮುಖ ಸಾಕ್ಷಿಗಳ ಹೇಳಿಕೆ ದಾಖಲು

    November 14, 2026

    ನಂದಿನಿ ಹಾಲಿನಲ್ಲಿ ಜೇಡ ಪತ್ತೆ ಆರೋಪ; ಡಾ. ಅಬ್ದುಲ್ ಕಲಾಂ ಸಂಬಂಧಿ ನೀಡಿದ ದೂರಿನ ಬೆನ್ನಲ್ಲೇ ಪರಿಶೀಲನೆ

    November 10, 2026

    NH-48ರಲ್ಲಿ ಭೀಕರ ಅಪಘಾತ; ಕಾರು ನಜ್ಜುಗುಜ್ಜಾಗಿ ಮೂವರು ಸಾವು, ಇಬ್ಬರಿಗೆ ಗಂಭೀರ ಗಾಯ

    October 7, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ರಾಜ್ಯ ಪೊಲೀಸ್ ಇಲಾಖೆಯಲ್ಲಿ 31 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಎನ್. ಶಶಿಕುಮಾರ್ ನೇಮಕ

    November 18, 2026

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    November 18, 2026

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026

    7 ಜನರ ಹತ್ಯೆ ಪ್ರಕರಣ; ಕೊಲೆಯಿಂದ ಶವ ಸಾಗಾಟದವರೆಗೆ ಆರೋಪಿ ಇಂದುಶೇಖರ್‌ನಿಂದ ಕ್ರೈಂ ಸೀನ್ ರಿಕ್ರಿಯೇಟ್

    November 18, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    November 18, 2026

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.