Close Menu
    What's Hot

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಅಂತಾರಾಜ್ಯ ನಂಟು; ಕೃಪಾ ಆಳ್ವಾ ಸಂಪರ್ಕದಲ್ಲಿದ್ದ ವ್ಯಕ್ತಿಗೆ ಪೊಲೀಸರ ನೋಟಿಸ್

    November 28, 2026

    ಕಡಬದಲ್ಲಿ ಕಾರು–ಸ್ಕೂಟರ್ ಮುಖಾಮುಖಿ ಡಿಕ್ಕಿ; ಗಂಭೀರ ಗಾಯಗೊಂಡ 31 ವರ್ಷದ ಯುವಕ ಮೃತ್ಯು

    November 28, 2026

    20 ವರ್ಷಗಳ ಹಿಂದಿನ ಮನೋಹರ್ ಶೆಟ್ಟಿ ಕೊಲೆ ಪ್ರಕರಣ; ದುಬೈನಿಂದ ಮೋಸ್ಟ್ ವಾಂಟೆಡ್ ಆರೋಪಿ ರಾಜೇಶ್ ಆಚಾರ್ಯ ಗಡಿಪಾರು

    November 28, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಶಿರ್ವ: ದೇವಸ್ಥಾನದ ದೀಪೋತ್ಸವಕ್ಕೆ ಬಂದಿದ್ದ ವೃದ್ಧನಿಗೆ ಸುತ್ತಿಗೆಯಿಂದ ಹಲ್ಲೆ; ಎರಡು ಚಿನ್ನದ ಸರ ದೋಚಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್
    ಅಪರಾಧ

    ಶಿರ್ವ: ದೇವಸ್ಥಾನದ ದೀಪೋತ್ಸವಕ್ಕೆ ಬಂದಿದ್ದ ವೃದ್ಧನಿಗೆ ಸುತ್ತಿಗೆಯಿಂದ ಹಲ್ಲೆ; ಎರಡು ಚಿನ್ನದ ಸರ ದೋಚಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್

    adminBy adminNovember 26, 2026No Comments1 Min Read

    ಶಿರ್ವ: ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದ 68 ವರ್ಷದ ವೃದ್ಧರೊಬ್ಬರನ್ನು ಪರಿಚಯಸ್ಥ ವ್ಯಕ್ತಿಯೇ ಮಾತುಕತೆಯ ನೆಪದಲ್ಲಿ ಹೊರಗೆ ಕರೆದೊಯ್ದು, ಕಾರಿನಲ್ಲಿ ಸುತ್ತಿಗೆಯಿಂದ ಹಲ್ಲೆ ನಡೆಸಿ ₹4.50 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ಕುಂಜಾರುಗಿರಿಯಲ್ಲಿ ನಡೆದಿದೆ. ಬೆಳ್ಳೆ ಗ್ರಾಮದ ಪಡುಬೆಳ್ಳೆ ನಿವಾಸಿ ಬಿ. ರಾಜಮೂರ್ತಿ ಭಟ್ (68) ಹಲ್ಲೆಗೊಳಗಾಗಿ ಚಿನ್ನಾಭರಣ ಕಳೆದುಕೊಂಡವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಮಂಗಳವಾರ ನವೆಂಬರ್ 24 ಸಂಜೆ ರಾಜಮೂರ್ತಿ ಭಟ್ ಅವರು ಕುರ್ಕಾಲು ಗ್ರಾಮದ ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಗೆ ಬಂದಿದ್ದ ಅವರ ಪರಿಚಯಸ್ಥ ಆರೋಪಿಯು ರಾತ್ರಿ 8.30ರ ಸುಮಾರಿಗೆ ಭಟ್ ಅವರ ಬಳಿ ಬಂದು, ‘‘ನಿಮ್ಮೊಂದಿಗೆ ಸ್ವಲ್ಪ ಮಾತನಾಡುವುದಿದೆ’’ ಎಂದು ಹೇಳಿ ದೇವಸ್ಥಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ತನ್ನ ಕಾರಿನಲ್ಲಿ ಅವರನ್ನು ಕುಳ್ಳಿರಿಸಿಕೊಂಡ ಆರೋಪಿ, ‘‘ನಾನು ಸುಮಾರು 60 ಎಕರೆ ಜಾಗದಲ್ಲಿ ಭತ್ತದ ಬೇಸಾಯ ಮಾಡುತ್ತಿದ್ದೇನೆ. ಅದನ್ನು 200 ಎಕರೆಗೆ ವಿಸ್ತರಿಸಲು ₹25 ಲಕ್ಷ ಹಣದ ಅಗತ್ಯವಿದೆ, ಸಹಾಯ ಮಾಡಿ’’ ಎಂದು ಕೇಳಿದ್ದಾನೆ. ಇದಕ್ಕೆ ರಾಜಮೂರ್ತಿ ಭಟ್ ನಿರಾಕರಿಸಿದ್ದಾರೆ.

    ಹಣ ನೀಡಲು ಒಪ್ಪದಿದ್ದಾಗ ಆರೋಪಿಯು ಅವರ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ದೋಚುವ ಉದ್ದೇಶದಿಂದ ಕಾರಿನಲ್ಲಿದ್ದ ಸುತ್ತಿಗೆಯಿಂದ ಭಟ್ ಅವರ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಭಯಭೀತರಾದ ಭಟ್ ಅವರು ಕಾರಿನಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಬೆನ್ನಟ್ಟಿ ಅವರನ್ನು ಕೆಳಕ್ಕೆ ದೂಡಿದ್ದಾನೆ. ಬಳಿಕ ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಸರ ಹಾಗೂ 28 ಗ್ರಾಂ ತೂಕದ ತುಳಸಿ ಮಣಿಗಳಿರುವ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಕಾರು ಸಮೇತ ಪರಾರಿಯಾಗಿದ್ದಾನೆ. ದೋಚಲಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ ₹4.50 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.  ಇದೀಗ  ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ. ಪಡುಬೆಳ್ಳೆ ನಿವಾಸಿ ಮುರಳಿಕೃಷ್ಣ ಉಪಾಧ್ಯಾಯ (47) ಬಂಧಿತ ಆರೋಪಿ.




    #crime #udupi
    Previous Articleಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ರಿಲೀಫ್; ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂ
    Next Article ಸೌಜನ್ಯಾ ಪ್ರಕರಣದ ಕುರಿತು ಕಟ್ಟುಕಥೆ ಪ್ರಸಾರ ಮಾಡಬೇಡಿ; ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

    Related Posts

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಅಂತಾರಾಜ್ಯ ನಂಟು; ಕೃಪಾ ಆಳ್ವಾ ಸಂಪರ್ಕದಲ್ಲಿದ್ದ ವ್ಯಕ್ತಿಗೆ ಪೊಲೀಸರ ನೋಟಿಸ್

    November 28, 2026

    ಕಡಬದಲ್ಲಿ ಕಾರು–ಸ್ಕೂಟರ್ ಮುಖಾಮುಖಿ ಡಿಕ್ಕಿ; ಗಂಭೀರ ಗಾಯಗೊಂಡ 31 ವರ್ಷದ ಯುವಕ ಮೃತ್ಯು

    November 28, 2026

    20 ವರ್ಷಗಳ ಹಿಂದಿನ ಮನೋಹರ್ ಶೆಟ್ಟಿ ಕೊಲೆ ಪ್ರಕರಣ; ದುಬೈನಿಂದ ಮೋಸ್ಟ್ ವಾಂಟೆಡ್ ಆರೋಪಿ ರಾಜೇಶ್ ಆಚಾರ್ಯ ಗಡಿಪಾರು

    November 28, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಅಂತಾರಾಜ್ಯ ನಂಟು; ಕೃಪಾ ಆಳ್ವಾ ಸಂಪರ್ಕದಲ್ಲಿದ್ದ ವ್ಯಕ್ತಿಗೆ ಪೊಲೀಸರ ನೋಟಿಸ್

    November 28, 2026

    ಕಡಬದಲ್ಲಿ ಕಾರು–ಸ್ಕೂಟರ್ ಮುಖಾಮುಖಿ ಡಿಕ್ಕಿ; ಗಂಭೀರ ಗಾಯಗೊಂಡ 31 ವರ್ಷದ ಯುವಕ ಮೃತ್ಯು

    November 28, 2026

    20 ವರ್ಷಗಳ ಹಿಂದಿನ ಮನೋಹರ್ ಶೆಟ್ಟಿ ಕೊಲೆ ಪ್ರಕರಣ; ದುಬೈನಿಂದ ಮೋಸ್ಟ್ ವಾಂಟೆಡ್ ಆರೋಪಿ ರಾಜೇಶ್ ಆಚಾರ್ಯ ಗಡಿಪಾರು

    November 28, 2026

    ಹೆಣ್ಣುಮಕ್ಕಳ ಪಿಜಿಗಳನ್ನೇ ಟಾರ್ಗೆಟ್ ಮಾಡಿ ಅತ್ಯಾಚಾರ ಯತ್ನ, ಮೊಬೈಲ್ ಕಳವು; ಆರೋಪಿಗೆ ಗುಂಡೇಟು

    November 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಅಂತಾರಾಜ್ಯ ನಂಟು; ಕೃಪಾ ಆಳ್ವಾ ಸಂಪರ್ಕದಲ್ಲಿದ್ದ ವ್ಯಕ್ತಿಗೆ ಪೊಲೀಸರ ನೋಟಿಸ್

    November 28, 2026

    ಹೆಣ್ಣುಮಕ್ಕಳ ಪಿಜಿಗಳನ್ನೇ ಟಾರ್ಗೆಟ್ ಮಾಡಿ ಅತ್ಯಾಚಾರ ಯತ್ನ, ಮೊಬೈಲ್ ಕಳವು; ಆರೋಪಿಗೆ ಗುಂಡೇಟು

    November 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.