ಮಂಡ್ಯ : ಮುತ್ತತ್ತಿಯ ಮುತ್ತೆತ್ತರಾಯ ದೇವಸ್ಥಾನಕ್ಕೆ ಚನ್ನಪಟ್ಟಣ ಮೂಲದ ಕುಟುಂಬವೊಂದು ಬಂದಿದ್ದು ದೇವರ ದರ್ಶನ ಪಡೆದ ನಂತರ ಕಾವೇರಿ ನದಿಗಿಳಿದು ಫೋಟೋ ತೆಗೆದುಕೊಳ್ಳುವಾಗ ಐವರು ನೀರುಪಾಲಾಗಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಇಂದು ಸಂಜೆ 5 ಗಂಟೆಗೆ ಘಟನೆ ನಡೆದಿದೆ. ಚೈತ್ರ (20), ಶ್ವೇತಾ (38), ವಿಜಯಮ್ಮ (50), ಪ್ರಿಯಾಂಕಾ (28), ಮಹೇಶ್ ಮೃತಪಟ್ಟವರು. ಮೃತರು ಚನ್ನಪಟ್ಟಣ ಮೂಲದವರು. ಮುತ್ತತ್ತಿಯ ಮುತ್ತೆತ್ತರಾಯ ದೇಗುಲಕ್ಕೆ ಕುಟುಂಬಸ್ಥರು ಬಂದಿದ್ದರು. ಈ ವೇಳೆ ಕಾವೇರಿ ನದಿಗಿಳಿದು ಪೋಟೊ ತೆಗೆದುಕೊಳ್ಳುವಾಗ ದುರ್ಘಟನೆ ನಡೆದಿದೆ. ಸದ್ಯ ಐವರ ಮೃತದೇಹವನ್ನ ಹೊರತೆಗೆದಿರುವ ಪೊಲೀಸರು, ಅಗ್ನಿಶಾಮಕದಳ ಸಿಬ್ಬಂದಿ ಹೊರತೆಗೆದಿದ್ದಾರೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








