ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ದಿವಂಗತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಕುರಿತಾದ ಅಮೆರಿಕದ ಸಂಸತ್ತಿನ ಸಮಿತಿಯ (ಯುಎಸ್ ಹೌಸ್ ಓವರ್‌ಸೈಟ್ ಕಮಿಟಿ) ತನಿಖೆಯ ವೇಳೆ ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ತಮಗೆ ಇದ್ದ ಕೆಲವು ವಿವಾಹೇತರ ಸಂಬಂಧಗಳ ಬಗ್ಗೆ ಎಪ್ಸ್ಟೀನ್‌ಗೆ ತಿಳಿದಿತ್ತು ಮತ್ತು ಆ ಮಾಹಿತಿಯನ್ನು ಬಳಸಿಕೊಂಡು ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಅವನು ಯೋಜಿಸಿದ್ದಿರಬಹುದು ಎಂದು ಬಿಲ್ ಗೇಟ್ಸ್ ಒಪ್ಪಿಕೊಂಡಿದ್ದಾರೆ.
ಜೂನ್ 10 ರಂದು ನಡೆದ ಮುಚ್ಚಿದ ಬಾಗಿಲಿನ ವಿಚಾರಣೆಯ ಈ ಸಾಕ್ಷ್ಯದ ಪ್ರತಿಗಳು ಮಂಗಳವಾರ ಸಾರ್ವಜನಿಕವಾಗಿ ಬಿಡುಗಡೆಯಾಗಿವೆ.
ವಿಚಾರಣೆಯ ಸಂದರ್ಭದಲ್ಲಿ ಬಿಲ್ ಗೇಟ್ಸ್ ಅವರು ರಷ್ಯಾದ ಬ್ರಿಡ್ಜ್ ಆಟಗಾರ್ತಿ ಮಿಲಾ ಆಂಟೊನೊವಾ, ಪರಮಾಣು ಭೌತವಿಜ್ಞಾನಿ ಕರಿಮಾ ನಿಗ್ಮತುಲಿನಾ ಮತ್ತು ವೈದ್ಯಕೀಯ ಉದ್ಯಮಿ ಅಲೈಸ್ ಜೇಕಬ್ಸ್ ನೆಸ್ಸೆಲ್ರೋಡ್ ಸೇರಿದಂತೆ ಮೂವರು ಮಹಿಳೆಯರೊಂದಿಗೆ ತಮಗೆ ಇದ್ದ ವಿವಾಹೇತರ ಸಂಬಂಧಗಳನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧಗಳಿಗೂ ಎಪ್ಸ್ಟೀನ್ ಜೊತೆಗಿನ ತಮ್ಮ ವ್ಯವಹಾರಗಳಿಗೂ ಯಾವುದೇ ಸಂಬಂಧವಿರಲಿಲ್ಲ, ಆದರೆ ಇವು ತಮ್ಮ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದ್ದವು ಎಂದು ಗೇಟ್ಸ್ ಹೇಳಿದ್ದಾರೆ. ಎಪ್ಸ್ಟೀನ್ ತಮ್ಮ ಈ ತಪ್ಪುಗಳನ್ನು ಮತ್ತು ಅದರ ಜೊತೆಗೆ ಕೆಲವು ಸುಳ್ಳುಗಳನ್ನು ಸೇರಿಸಿ, ತನ್ನೊಂದಿಗೆ ಮತ್ತೆ ವ್ಯವಹಾರವನ್ನು ಮುಂದುವರಿಸುವಂತೆ ಒತ್ತಡ ಹೇರಲು ಸಂಚು ಹೂಡಿದ್ದ ಎಂದು ಬಿಲ್ ಗೇಟ್ಸ್ ತಿಳಿಸಿದ್ದಾರೆ.
ಎಪ್ಸ್ಟೀನ್ ಬರೆದಿದ್ದ 2013 ರ ಇಮೇಲ್ ಡ್ರಾಫ್ಟ್ ಒಂದನ್ನು ಆಧರಿಸಿ ಸಂಸದರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಗೇಟ್ಸ್, ಆತ ನೇರವಾಗಿ ತಮಗೆ ಎಂದೂ ಬ್ಲ್ಯಾಕ್‌ಮೇಲ್ ಮಾಡದಿದ್ದರೂ, ಇಮೇಲ್‌ನಲ್ಲಿದ್ದ ವಿಷಯಗಳನ್ನು ಗಮನಿಸಿದರೆ ಆತ ಬ್ಲ್ಯಾಕ್‌ಮೇಲ್ ಮಾಡಲು ಗಂಭೀರವಾಗಿ ಯೋಚಿಸುತ್ತಿದ್ದ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಕೇವಲ ದಾನಧರ್ಮ ಹಾಗೂ ಲೋಕೋಪಕಾರದ ಉದ್ದೇಶಗಳಿಗಾಗಿ ಮಾತ್ರ ತಾವು ಎಪ್ಸ್ಟೀನ್‌ನನ್ನು ಭೇಟಿಯಾಗುತ್ತಿದ್ದುದ್ದಾಗಿ ಪುನರುಚ್ಚರಿಸಿದ ಬಿಲ್ ಗೇಟ್ಸ್, ಒಬ್ಬ ಅಪರಾಧಿ ಎಂದು ತಿಳಿದಿದ್ದರೂ ಆತನನ್ನು ಭೇಟಿಯಾಗಿದ್ದು ತಾವು ಮಾಡಿದ ಬಹುದೊಡ್ಡ ತಪ್ಪು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಪ್ಸ್ಟೀನ್ ನಡೆಸುತ್ತಿದ್ದ ಯಾವುದೇ ಕಾನೂನುಬಾಹಿರ ಹಾಗೂ ಅಪರಾಧ ಕೃತ್ಯಗಳಲ್ಲಿ ತಮ್ಮ ಪಾತ್ರವಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.