Close Menu
    What's Hot

    ಕುಡಿಯುವ ನೀರಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ: ಪಂಚಾಯಿತಿ ಅಧ್ಯಕ್ಷನ ಹತ್ಯೆ

    September 5, 2026

    ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: 40 ಕೆಜಿ ಎಕ್ಸ್‌ಪೈರ್ಡ್ ಮೆಣಸಿನಕಾಯಿ ಪತ್ತೆ, ಕ್ಲಬ್‌ಗೆ ಬೀಗ

    September 5, 2026

    3 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ: ಪರಿಚಿತ ನೆರೆಮನೆಯ ವ್ಯಕ್ತಿ ಬಂಧನ

    September 5, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಸಮುದ್ರದ ಅಲೆಗಳ ಅಬ್ಬರ; ದೋಣಿ ಮಗುಚಿ ಐವರು ಮೀನುಗಾರರು ಪಾರು
    ಕರಾವಳಿ ಸುದ್ದಿ

    ಸಮುದ್ರದ ಅಲೆಗಳ ಅಬ್ಬರ; ದೋಣಿ ಮಗುಚಿ ಐವರು ಮೀನುಗಾರರು ಪಾರು

    adminBy adminJuly 20, 2026No Comments1 Min Read

    ಬೈಂದೂರು: ಪ್ರಬಲ ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ದೋಣಿಯೊಂದು ಮಗುಚಿ ಬಿದ್ದಿದ್ದು, ಅದರಲ್ಲಿದ್ದ ಐವರು ಮೀನುಗಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಶಿರೂರು ಸಮೀಪದ ಸಮುದ್ರ ತೀರದಲ್ಲಿ ನಡೆದಿದೆ.

    ರಕ್ಷಿಸಲ್ಪಟ್ಟ ಮೀನುಗಾರರನ್ನು ಪಡುವರಿ ಗ್ರಾಮದ ತರಪತಿ ಅಳ್ವೆಕೋಡಿಯ ನಿವಾಸಿಗಳಾದ ನಾಗರಾಜ ಖಾರ್ವಿ, ಯೋಗೀಶ್ ಖಾರ್ವಿ, ರಾಜು ಖಾರ್ವಿ, ಮಂಜುನಾಥ್ ಖಾರ್ವಿ ಹಾಗೂ ನಾಗರಾಜ ಖಾರ್ವಿ ಎಂದು ಗುರುತಿಸಲಾಗಿದೆ.

    ಮಾಹಿತಿಯ ಪ್ರಕಾರ, ಮಲ್ಪೆಯಲ್ಲಿ ಮೀನುಗಾರಿಕೆ ಮುಗಿಸಿ ಭಟ್ಕಳದತ್ತ ಹಿಂದಿರುಗುತ್ತಿದ್ದ ವೇಳೆ ಶಿರೂರು ಸಮುದ್ರ ತೀರದ ಕೋಕ್ಲೇರಕಲ್ಲು ಪ್ರದೇಶದ ಬಳಿ ಬಿರುಗಾಳಿ ಹಾಗೂ ಮಳೆಯ ಪರಿಣಾಮ ಉಂಟಾದ ಬೃಹತ್ ಅಲೆಯೊಂದು ದೋಣಿಗೆ ಅಪ್ಪಳಿಸಿತು. ಪರಿಣಾಮ ದೋಣಿ ಮಗುಚಿಬಿದ್ದಿದೆ.

    ದೋಣಿಯಲ್ಲಿದ್ದ ಐವರು ಮೀನುಗಾರರು ಜೀವ ರಕ್ಷಕ ಜಾಕೆಟ್ ಧರಿಸಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಇದೇ ವೇಳೆ ಸಮೀಪದಲ್ಲೇ ಮೀನುಗಾರಿಕೆಯಲ್ಲಿ ತೊಡಗಿದ್ದ ಶೇಖರ್ ಖಾರ್ವಿ ಘಟನೆ ಗಮನಿಸಿ ತಕ್ಷಣ ಸ್ಥಳಕ್ಕೆ ಧಾವಿಸಿ, ಸಮುದ್ರದಲ್ಲಿ ಸಿಲುಕಿದ್ದ ಐವರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

    ಅಪಘಾತದಲ್ಲಿ ಮೀನುಗಾರಿಕಾ ದೋಣಿ ಸಂಪೂರ್ಣ ಹಾನಿಗೊಳಗಾಗಿದೆ. ದೋಣಿಯ ಎಂಜಿನ್, ಜಿಪಿಎಸ್ ಸಾಧನ, ಫಿಶ್ ಫೈಂಡರ್, ಐದು ಸೆಟ್ ಮೀನುಗಾರಿಕಾ ಬಲೆಗಳು ಹಾಗೂ 30,000 ರೂ. ನಗದು ಸಮುದ್ರ ಪಾಲಾಗಿದೆ. ಘಟನೆಯಿಂದ 7 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

    ಘಟನಾ ಸ್ಥಳಕ್ಕೆ ಕರಾವಳಿ ಭದ್ರತಾ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.




    #karnataka
    Previous Articleಮಲ್ಪೆ ಬಂದರಿನಲ್ಲಿ ನೀರಿಗೆ ಬಿದ್ದ ಮೀನುಗಾರನ ಮೃತದೇಹ ಎರಡು ದಿನಗಳ ಬಳಿಕ ಪತ್ತೆ
    Next Article ನ್ಯಾಯಕ್ಕಾಗಿ ಮಧ್ಯರಾತ್ರಿ ಸಮಾಧಿ ಅಗೆದ ಮಕ್ಕಳು; ದಾವಣಗೆರೆಯಲ್ಲಿ ಬೆಚ್ಚಿಬೀಳಿಸಿದ ಘಟನೆ

    Related Posts

    ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: 40 ಕೆಜಿ ಎಕ್ಸ್‌ಪೈರ್ಡ್ ಮೆಣಸಿನಕಾಯಿ ಪತ್ತೆ, ಕ್ಲಬ್‌ಗೆ ಬೀಗ

    September 5, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026

    ಅಷ್ಟಮಿ ಭಜನೆ ವೇಳೆ ದುರಂತ: ಭಜನೆ ಮಾಡುತ್ತಲೇ ಕುಸಿದು ಬಿದ್ದ ಯುವಕ, ಹೃದಯಾಘಾತದಿಂದ ಸಾವು

    September 5, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕುಡಿಯುವ ನೀರಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ: ಪಂಚಾಯಿತಿ ಅಧ್ಯಕ್ಷನ ಹತ್ಯೆ

    September 5, 2026

    ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: 40 ಕೆಜಿ ಎಕ್ಸ್‌ಪೈರ್ಡ್ ಮೆಣಸಿನಕಾಯಿ ಪತ್ತೆ, ಕ್ಲಬ್‌ಗೆ ಬೀಗ

    September 5, 2026

    3 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ: ಪರಿಚಿತ ನೆರೆಮನೆಯ ವ್ಯಕ್ತಿ ಬಂಧನ

    September 5, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: 40 ಕೆಜಿ ಎಕ್ಸ್‌ಪೈರ್ಡ್ ಮೆಣಸಿನಕಾಯಿ ಪತ್ತೆ, ಕ್ಲಬ್‌ಗೆ ಬೀಗ

    September 5, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.