Close Menu
    What's Hot

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026

    ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತೀರ್ಪು ನೀಡಲು ಜ್ಯೂರಿ ವಿಫಲ

    September 5, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಫರಂಗಿಪೇಟೆ ಬ್ಯಾಂಕ್ ದರೋಡೆ ಯತ್ನ ಪ್ರಕರಣಕ್ಕೆ ಮಹತ್ವದ ಸುಳಿವು; ತನಿಖೆ ಚುರುಕು
    ಅಪರಾಧ

    ಫರಂಗಿಪೇಟೆ ಬ್ಯಾಂಕ್ ದರೋಡೆ ಯತ್ನ ಪ್ರಕರಣಕ್ಕೆ ಮಹತ್ವದ ಸುಳಿವು; ತನಿಖೆ ಚುರುಕು

    adminBy adminJuly 22, 2026No Comments1 Min Read

    ಬಂಟ್ವಾಳ: ಫರಂಗಿಪೇಟೆಯ ಬ್ಯಾಂಕ್‌ನಲ್ಲಿ ನಡೆದ ಕಳ್ಳತನ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದ್ದು, ತನಿಖೆ ಚುರುಕುಗೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಬಂಟ್ವಾಳ ಹೆಚ್ಚುವರಿ ಪೊಲೀಸ್ ಅಧೀಕ್ಷಕರ (ಎಎಸ್‌ಪಿ) ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಆರೋಪಿಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

    ಜುಲೈ 12ರ ರಾತ್ರಿ ಫರಂಗಿಪೇಟೆಯ ಬ್ಯಾಂಕ್ ಶಾಖೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿತ್ತು. ದುಷ್ಕರ್ಮಿಗಳು ಕಟ್ಟಡದ ಮೇಲ್ಛಾವಣಿಯನ್ನು ಕೊರೆದು ಬ್ಯಾಂಕ್ ಒಳನುಗ್ಗಿದ್ದರು. ಆದರೆ ಬ್ಯಾಂಕ್‌ನ ಲಾಕರ್ ತೆರೆಯಲು ವಿಫಲರಾದ ಅವರು ಯಾವುದೇ ನಗದು ಅಥವಾ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡದೇ ಸ್ಥಳದಿಂದ ಪರಾರಿಯಾಗಿದ್ದರು.

    ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ನಡೆಸಿರುವ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯ ವೇಳೆ ಮಹತ್ವದ ಸುಳಿವು ದೊರೆತ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡವನ್ನು ರಚಿಸಿ ತನಿಖೆ ಮುಂದುವರಿಸಲಾಗಿದೆ.

    ಘಟನೆ ನಡೆದ ದಿನದ ಮರುದಿನ ಎರಡನೇ ಶನಿವಾರದ ರಜೆ ಹಿನ್ನೆಲೆ ಬ್ಯಾಂಕ್ ಮುಚ್ಚಲಾಗಿತ್ತು. ಹೀಗಾಗಿ ಶನಿವಾರ ರಾತ್ರಿ ಮತ್ತು ಭಾನುವಾರದ ನಡುವಿನ ಅವಧಿಯಲ್ಲಿ ಕಳ್ಳತನ ಯತ್ನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಹಿಂದೆ ನಡೆದ ತನಿಖೆಯಲ್ಲಿ ಆರೋಪಿಗಳು ಬ್ಯಾಂಕ್‌ನ ಅಲಾರಂ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕವನ್ನು ಕಡಿತಗೊಳಿಸಿದ್ದರೆಂಬುದು ಬೆಳಕಿಗೆ ಬಂದಿತ್ತು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖಕ್ಕೆ ಮಾಸ್ಕ್ ಹಾಗೂ ಕೈಗಳಿಗೆ ಗ್ಲೌಸ್ ಧರಿಸಿದ್ದ ವ್ಯಕ್ತಿಯ ಅಲ್ಪಾವಧಿಯ ಸಿಸಿಟಿವಿ ದೃಶ್ಯ ಮಾತ್ರ ಲಭ್ಯವಾಗಿದೆ. ಬ್ಯಾಂಕ್ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳು ಸ್ಪಷ್ಟವಾಗಿರದ ಕಾರಣ ಅಥವಾ ಸಮರ್ಪಕ ಮಾಹಿತಿಯನ್ನು ನೀಡದ ಕಾರಣ ಆರೋಪಿಗಳ ಗುರುತು ಪತ್ತೆ ಹಚ್ಚುವುದು ತನಿಖಾಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

    ಫರಂಗಿಪೇಟೆ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣದ ತನಿಖೆ ಸಾಗುತ್ತಿದ್ದ ಸಂದರ್ಭದಲ್ಲೇ ಬಿ.ಸಿ.ರೋಡ್‌ನಲ್ಲಿ ಯುವತಿಯೊಬ್ಬಳ ಹತ್ಯೆ ಪ್ರಕರಣವೂ ನಡೆದಿದ್ದು, ಪೊಲೀಸರು ಎರಡೂ ಪ್ರಕರಣಗಳ ತನಿಖೆಯನ್ನು ಏಕಕಾಲದಲ್ಲಿ ಮುಂದುವರಿಸುತ್ತಿದ್ದಾರೆ.

    #crime #dakshinakannada
    Previous Article₹2000 ಆಸೆಗೆ ಬ್ಯಾಂಕ್ ಖಾತೆ ಕೊಟ್ಟ ವಿದ್ಯಾರ್ಥಿ; ಸೈಬರ್ ಜಾಲ ಬಯಲು
    Next Article ಹಾರ್ಮುಜ್ ಜಲಸಂಧಿಯಲ್ಲಿ ಬಿಕ್ಕಟ್ಟು ; ಪೆಟ್ರೋಲ್-ಡೀಸೆಲ್ ದರ ಏರಿಕೆ ಆತಂಕ

    Related Posts

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026

    ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತೀರ್ಪು ನೀಡಲು ಜ್ಯೂರಿ ವಿಫಲ

    September 5, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026

    ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತೀರ್ಪು ನೀಡಲು ಜ್ಯೂರಿ ವಿಫಲ

    September 5, 2026

    ‘ಆಪರೇಷನ್ ಅಶ್‌ದಾರ್’ ಯಶಸ್ಸು: ಲಷ್ಕರ್ ಉಗ್ರ ಕಮಾಂಡರ್ ಯಾಸಿರ್ ಹತ್ಯೆ

    September 5, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಜೈಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೂಲಸೌಕರ್ಯಕ್ಕಾಗಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೈದಿ

    September 5, 2026

    ಪತ್ನಿಯ ಪ್ರಿಯಕರನಿಗೆ ಎಣ್ಣೆ ಪಾರ್ಟಿ ನೆಪದಲ್ಲಿ ಕರೆ: ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿದ ಪತಿ

    September 5, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.