ಮಂಗಳೂರು: ಪೇಮೆಂಟ್ ಇನ್ನೂ ಬಾಕಿ ಉಳಿದಿದೆ ಎಂದು ಆರೋಪಿಸಿ ಹಲವರು ಮಂಗಳೂರಿನ ಅಸ್ತ್ರ ಗ್ರೂಪ್ ಸಂಸ್ಥೆಯ ಕಚೇರಿಗೆ ತೆರಳಿ ಹಣ ಪಾವತಿ ಕುರಿತು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಅಸ್ತ್ರ ಗ್ರೂಪ್ ವತಿಯಿಂದ ನಡೆಸಲಾಗಿದ್ದ ಯೋಜನೆಯಲ್ಲಿ ಹಣ ಹೂಡಿದ್ದ ಕೆಲವರಿಗೆ ನಿಗದಿತ ಮೊತ್ತ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೇಮೆಂಟ್ ಪಡೆಯಲು ಬಂದಿದ್ದ ಜನರು ಸಂಸ್ಥೆಯ ಕಚೇರಿ ಬಳಿ ಜಮಾಯಿಸಿ, ತಮ್ಮ ಹಣವನ್ನು ಯಾವಾಗ ಪಾವತಿಸಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಪೇಮೆಂಟ್ ವಿಳಂಬವಾಗಿರುವ ಕುರಿತು ಜನರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ವೇಳೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.








