Close Menu
    What's Hot

    ಮಕ್ಕಳ ಪಾಸ್‌ಪೋರ್ಟ್‌ಗೆ ಸಂಬಂಧಿಸಿ ಕೇಂದ್ರದಿಂದ ಮಹತ್ವದ ನಿಯಮ ಜಾರಿ

    September 18, 2026

    ದೈವಾರಾಧನೆ ಪ್ರಚಾರದ ವಸ್ತುವಲ್ಲ; ಸಿಎಂ, ಯು.ಟಿ. ಖಾದರ್ ವಿರುದ್ಧ ಕಿಡಿ ಕಿಡಿಕಾರಿದ ಬಿಜೆಪಿ

    September 18, 2026

    ಜೈಲು ಜಾಮರ್ ಸಮಸ್ಯೆ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕಲು ಮುಂದಾದ ವಕೀಲರು; ಕೋರ್ಟ್ ಆವರಣದಲ್ಲೇ ಪೊಲೀಸ್ ವಶಕ್ಕೆ

    September 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಬಂಟ್ವಾಳದಲ್ಲಿ ಸರಣಿ ಕಳ್ಳತನ; ಚಿನ್ನದ ಸರ, ಬೈಕ್ ಕದ್ದು ಪರಾರಿಯಾದ ಖದೀಮರು
    ಅಪರಾಧ

    ಬಂಟ್ವಾಳದಲ್ಲಿ ಸರಣಿ ಕಳ್ಳತನ; ಚಿನ್ನದ ಸರ, ಬೈಕ್ ಕದ್ದು ಪರಾರಿಯಾದ ಖದೀಮರು

    adminBy adminJuly 27, 2026No Comments2 Mins Read

    ಬಂಟ್ವಾಳ: ಇಡ್ಕಿದು ಗ್ರಾಮದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡಿದ್ದು, ಸಮೀಪದ ಮತ್ತೊಂದು ಮನೆಯಿಂದ ದ್ವಿಚಕ್ರ ವಾಹನವನ್ನು ಕಳವು ಮಾಡಿದ್ದಾರೆ. ಗ್ರಾಮದಲ್ಲಿನ ನಡೆದ ಸರಣಿ ಕಳ್ಳತನ ಘಟನೆಯು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ.

    ಇಡ್ಕಿದು ಗ್ರಾಮದ ನಿವಾಸಿ ಹಾಗೂ ನಿವೃತ್ತ ವೈದ್ಯರಾದ ಕೆ. ಸೂರ್ಯನಾರಾಯಣ (79) ಅವರು ಮನೆಯಲ್ಲಿ ಮಲಗಿದ್ದ ವೇಳೆ, ತಡರಾತ್ರಿ ಅಪರಿಚಿತರು ಮನೆಯೊಳಗೆ ನುಗ್ಗಿದ್ದಾರೆ ಎನ್ನಲಾಗಿದೆ.ಶಬ್ದ ಕೇಳಿ ಎಚ್ಚರಗೊಂಡ ಸೂರ್ಯನಾರಾಯಣ ಅವರು ಮನೆಯೊಳಗೆ ಇಬ್ಬರು ಕಳ್ಳರು ಮನೆಗೆ ಪ್ರವೇಶಿಸಿರುವುದನ್ನು ಗಮನಿಸಿದ್ದಾರೆ. ಆರೋಪಿಗಳು ಅವರ ಹೊಟ್ಟೆಗೆ ಬಲವಾಗಿ ಹೊಡೆದು, ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ, ಅಂದಾಜು 2.60 ರೂ. ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ.ಮನೆಯ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಗೋಡೆಯಲ್ಲಿ ಬಿಟ್ಟಿದ್ದ ತೆರೆಯ ಮೂಲಕ ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದಿರಬಹುದು ಎಂದು ಶಂಕಿಸಲಾಗಿದೆ. ಈ ವೇಳೆ ಮನೆಯ ಮೇಲಂತಸ್ತಿನಲ್ಲಿ ಮಲಗಿದ್ದ ಸೂರ್ಯನಾರಾಯಣ ಅವರ ಪುತ್ರ, ಸೊಸೆ ಹಾಗೂ ಮೊಮ್ಮಗನಿಗೆ ಈ ಘಟನೆ ಕುರಿತು ಯಾವುದೇ ಮಾಹಿತಿ ಇರಲಿಲ್ಲ.ಚಿನ್ನದ ಸರ ದರೋಡೆಗೂ ಮುನ್ನ ಅಥವಾ ನಂತರ, ಕಳ್ಳರು ಸಮೀಪದ ಮತ್ತೊಂದು ಮನೆಗೆ ತೆರಳಿ ಅಲ್ಲಿ ಇದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಲು ಯತ್ನಿಸಿದ್ದಾರೆ. ಆದರೆ ಅದರ ಲಾಕ್ ತೆರೆಯಲು ಸಾಧ್ಯವಾಗದೆ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.ಭಾನುವಾರ ಬೆಳಗ್ಗೆ ಇಡ್ಕಿದು ಗ್ರಾಮದ ಕೊಡಂಚರಪಾಲು ನಿವಾಸಿ ಆನಂದ ಸಾಫಲ್ಯ ಅವರಿಗೆ ಸೇರಿದ ಸುಮಾರು 30,000ರೂ. ಮೌಲ್ಯದ ದ್ವಿಚಕ್ರ ವಾಹನ ಮನೆಯ ಮುಂಭಾಗದ ಅಂಗಳದಿಂದ ಕಳವಾಗಿರುವುದು ಬೆಳಕಿಗೆ ಬಂದಿದೆ.ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳವು ಚಿನ್ನದ ಸರ ಕಳವಾದ ಮನೆಯಿಂದ ಸುಳಿವು ಹಿಡಿದು ಅಂಗಳ, ತೋಟದ ಮೂಲಕ ರಸ್ತೆವರೆಗೆ ತೆರಳಿ, ನಂತರ ಬೈಕ್ ಕಳವಾದ ಸ್ಥಳದ ಸಮೀಪದವರೆಗೂ ಸಾಗಿರುವುದಾಗಿ ತಿಳಿದುಬಂದಿದೆ.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ, ವಿಟ್ಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಹಾಗೂ ಸಬ್-ಇನ್ಸ್‌ಪೆಕ್ಟರ್ ರಾಮಕೃಷ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಎರಡೂ ಕೃತ್ಯಗಳನ್ನು ಒಂದೇ ಕಳ್ಳರ ತಂಡ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




    #crime #dakshinakannada
    Previous Articleಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಾಮಾಣಿಕತೆ ಮೆರೆದ ಭದ್ರತಾ ಸಿಬ್ಬಂದಿ; ಲಕ್ಷಾಂತರ ಮೌಲ್ಯದ ವಸ್ತುಗಳ ಹಸ್ತಾಂತರ
    Next Article ಸಿಯಾಟಲ್ ಫುಡ್ ಫೆಸ್ಟಿವಲ್‌ನಲ್ಲಿ ಗುಂಡಿನ ದಾಳಿ; ಇಬ್ಬರು ಬಲಿ, ಐವರಿಗೆ ಗಾಯ

    Related Posts

    ದೈವಾರಾಧನೆ ಪ್ರಚಾರದ ವಸ್ತುವಲ್ಲ; ಸಿಎಂ, ಯು.ಟಿ. ಖಾದರ್ ವಿರುದ್ಧ ಕಿಡಿ ಕಿಡಿಕಾರಿದ ಬಿಜೆಪಿ

    September 18, 2026

    ಜೈಲು ಜಾಮರ್ ಸಮಸ್ಯೆ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕಲು ಮುಂದಾದ ವಕೀಲರು; ಕೋರ್ಟ್ ಆವರಣದಲ್ಲೇ ಪೊಲೀಸ್ ವಶಕ್ಕೆ

    September 18, 2026

    ಮಂಗಳೂರು: ಸಚಿವರಿಗೆ ಎಸ್‌ಡಿಪಿಐ ಇಂದ ಕಪ್ಪುಬಾವುಟ ಪ್ರದರ್ಶನ; ಹಲವರು ಪೊಲೀಸ್ ವಶಕ್ಕೆ

    September 18, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಕ್ಕಳ ಪಾಸ್‌ಪೋರ್ಟ್‌ಗೆ ಸಂಬಂಧಿಸಿ ಕೇಂದ್ರದಿಂದ ಮಹತ್ವದ ನಿಯಮ ಜಾರಿ

    September 18, 2026

    ದೈವಾರಾಧನೆ ಪ್ರಚಾರದ ವಸ್ತುವಲ್ಲ; ಸಿಎಂ, ಯು.ಟಿ. ಖಾದರ್ ವಿರುದ್ಧ ಕಿಡಿ ಕಿಡಿಕಾರಿದ ಬಿಜೆಪಿ

    September 18, 2026

    ಜೈಲು ಜಾಮರ್ ಸಮಸ್ಯೆ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕಲು ಮುಂದಾದ ವಕೀಲರು; ಕೋರ್ಟ್ ಆವರಣದಲ್ಲೇ ಪೊಲೀಸ್ ವಶಕ್ಕೆ

    September 18, 2026

    ಮಂಗಳೂರು: ಸಚಿವರಿಗೆ ಎಸ್‌ಡಿಪಿಐ ಇಂದ ಕಪ್ಪುಬಾವುಟ ಪ್ರದರ್ಶನ; ಹಲವರು ಪೊಲೀಸ್ ವಶಕ್ಕೆ

    September 18, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸಚಿವ ಸಂಪುಟ ಸಭೆಗೆ ಮಂಗಳೂರು ಸಜ್ಜು; ಕರಾವಳಿ ಸಂಸ್ಕೃತಿಯ ಚಿತ್ರಗಳಿಂದ ಕಂಗೊಳಿಸಿದ ಪ್ರಜಾ ಸೌಧ

    September 18, 2026

    ಸಚಿವ ಸಂಪುಟ ಸಭೆ ಹಿನ್ನೆಲೆ ಮಂಗಳೂರಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಗೆ ಅದ್ದೂರಿಯ ಸ್ವಾಗತ

    September 18, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.