Close Menu
    What's Hot

    ಚಾರ್ಮಾಡಿ ಘಾಟಿಯಲ್ಲಿ ಲಾರಿ ಮೇಲೆ ಕಲ್ಲು ತೂರಾಟ; ನಾಲ್ವರು ಯುವಕರು ಪೊಲೀಸ್ ವಶಕ್ಕೆ

    September 18, 2026

    ಮಕ್ಕಳ ಪಾಸ್‌ಪೋರ್ಟ್‌ಗೆ ಸಂಬಂಧಿಸಿ ಕೇಂದ್ರದಿಂದ ಮಹತ್ವದ ನಿಯಮ ಜಾರಿ

    September 18, 2026

    ದೈವಾರಾಧನೆ ಪ್ರಚಾರದ ವಸ್ತುವಲ್ಲ; ಸಿಎಂ, ಯು.ಟಿ. ಖಾದರ್ ವಿರುದ್ಧ ಕಿಡಿ ಕಿಡಿಕಾರಿದ ಬಿಜೆಪಿ

    September 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಮಕ್ಕಳ ಪಾಸ್‌ಪೋರ್ಟ್‌ಗೆ ಸಂಬಂಧಿಸಿ ಕೇಂದ್ರದಿಂದ ಮಹತ್ವದ ನಿಯಮ ಜಾರಿ
    ರಾಷ್ಟ್ರೀಯ

    ಮಕ್ಕಳ ಪಾಸ್‌ಪೋರ್ಟ್‌ಗೆ ಸಂಬಂಧಿಸಿ ಕೇಂದ್ರದಿಂದ ಮಹತ್ವದ ನಿಯಮ ಜಾರಿ

    adminBy adminSeptember 18, 2026No Comments2 Mins Read

    ನವದೆಹಲಿ: ವಿದೇಶಾಂಗ ಸಚಿವಾಲಯವು ಪಾಸ್‌ಪೋರ್ಟ್ ಕಾಯ್ದೆಗೆ ತಿದ್ದುಪಡಿ ತಂದಿದ್ದು, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಸ್‌ಪೋರ್ಟ್ ಸಿಂಧುತ್ವದ ನಿಯಮವನ್ನು ಬದಲಾಯಿಸಿದೆ. ಇನ್ನು ಮುಂದೆ ಮಗುವಿಗೆ 18 ವರ್ಷ ತುಂಬಿದ ತಕ್ಷಣ ಆ ಪಾಸ್‌ಪೋರ್ಟ್ ಅಮಾನ್ಯವಾಗಲಿದ್ದು, ನೂತನ ನಿಯಮ ತಕ್ಷಣದಿಂದಲೇ ಜಾರಿಗೆ ಬಂದಿದೆ.

    ಮಕ್ಕಳ ಪಾಸ್‌ಪೋರ್ಟ್ ಪಡೆಯಲು ಬಯಸುವ ಪೋಷಕರಿಗೆ ವಿದೇಶಾಂಗ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ. ಅಪ್ರಾಪ್ತರಿಗೆ ನೀಡುವ 26 ಪುಟಗಳ ಪಾಸ್‌ಪೋರ್ಟ್ ಸಿಂಧುತ್ವವನ್ನು ಗರಿಷ್ಠ 5 ವರ್ಷ ಅಥವಾ 18 ವರ್ಷ ವಯಸ್ಸಿನವರೆಗೆ ನಿಗದಿಪಡಿಸಲಾಗಿದ್ದು, ಅರ್ಜಿ ಶುಲ್ಕವನ್ನೂ ಪರಿಷ್ಕರಿಸಲಾಗಿದೆ.

    ಹೊಸ ಸಿಂಧುತ್ವ ನಿಯಮ: 1980 ರ ಪಾಸ್‌ಪೋರ್ಟ್ ನಿಯಮಾವಳಿಯ ರೂಲ್ 12 (1ಎ) ತಿದ್ದುಪಡಿ ಮಾಡಲಾಗಿದೆ. ಉದಾಹರಣೆಗೆ, ಮಕ್ಕಳ 14ನೇ ವಯಸ್ಸಿನಲ್ಲಿ ಪಾಸ್‌ಪೋರ್ಟ್ ನೀಡಿದರೆ, 5 ವರ್ಷದ ಲೆಕ್ಕಾಚಾರದ ಪ್ರಕಾರ ಅದು 19 ವರ್ಷದವರೆಗೆ ಇರಬೇಕಿತ್ತು. ಆದರೆ ಹೊಸ ನಿಯಮದ ಪ್ರಕಾರ ಮಕ್ಕಳಿಗೆ 18 ವರ್ಷ ತುಂಬಿದ ತಕ್ಷಣವೇ ಆ ಪಾಸ್‌ಪೋರ್ಟ್ ಅಮಾನ್ಯವಾಗಲಿದ್ದು, ವಯಸ್ಕರ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

    ಹಿಂದಿನ ನಿಯಮವೇನಿತ್ತು?: ಈ ಹಿಂದೆ 15 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತಿದ್ದ ಪಾಸ್‌ಪೋರ್ಟ್ 5 ವರ್ಷಗಳವರೆಗೆ ಅಥವಾ ಮಗುವಿಗೆ 15 ವರ್ಷ ತುಂಬುವವರೆಗೆ ಮಾತ್ರ ಮಾನ್ಯವಾಗಿರುತ್ತಿತ್ತು. ಈಗ ಆ ಮಿತಿಯನ್ನು 18 ವರ್ಷದವರೆಗೆ ವಿಸ್ತರಿಸಲಾಗಿದೆ.

    ಅರ್ಜಿ ಶುಲ್ಕ ಪರಿಷ್ಕರಣೆ: ನಿಯಮ 8 (1) ರ ತಿದ್ದುಪಡಿಯಂತೆ, ಎಲ್ಲಾ ವರ್ಗದ ಪಾಸ್‌ಪೋರ್ಟ್ ಅರ್ಜಿಗಳಿಗೆ ನಿಗದಿಪಡಿಸಲಾದ ನವೀಕೃತ ಶುಲ್ಕ ರಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಶೆಡ್ಯೂಲ್ IV ದರಗಳನ್ನು ಅನ್ವಯಿಸಲಾಗಿದೆ.

    ಪರಿಷ್ಕೃತ ಶುಲ್ಕದ ವಿವರ:

    ವಯಸ್ಕರ ಸಾಮಾನ್ಯ ಪಾಸ್‌ಪೋರ್ಟ್ (36 ಪುಟ): 1,500 ರೂ.ನಿಂದ 2,500 ರೂ.ಗೆ ಏರಿಕೆ.

    ವಯಸ್ಕರ ಜಂಬೋ ಪಾಸ್‌ಪೋರ್ಟ್ (60ಪುಟ): 2 ಸಾವಿರ ರೂ.ನಿಂದ 2,500 ರೂ.ಗೆ ಏರಿಕೆ.

    ತತ್ಕಾಲ್ 36 ಪುಟ: 3,500 ರೂ.ನಿಂದ 5 ಸಾವಿರ ರೂ.ಗೆ ಪರಿಷ್ಕರಣೆ.

    ತತ್ಕಾಲ್ 60 ಪುಟ: 4 ಸಾವಿರ ರೂ.ನಿಂದ 6 ಸಾವಿರ ರೂ.ಗೆ ಹೆಚ್ಚಳ

    ಫೋಟೋ ಬದಲಾವಣೆ ಮತ್ತು ಬಯೋಮೆಟ್ರಿಕ್ಸ್ ಅಗತ್ಯ: ಮಕ್ಕಳು ಬೆಳೆದಂತೆ ಅವರ ಮುಖಚಹರೆ ಮತ್ತು ದೈಹಿಕ ಲಕ್ಷಣಗಳು ವೇಗವಾಗಿ ಬದಲಾಗುವುದರಿಂದ ಅಂತಾರಾಷ್ಟ್ರೀಯ ವಲಸೆ ನಿಯಮಗಳ (ICAO) ಅಡಿಯಲ್ಲಿ ಗುರುತು ಪತ್ತೆ ಸುಲಭಗೊಳಿಸಲು ಈ 18 ವರ್ಷದ ಸ್ಪಷ್ಟ ಮಿತಿಯನ್ನು ನಿಗದಿಪಡಿಸಲಾಗಿದೆ. ಬಾಲಕ ಅಥವಾ ಬಾಲಕಿಯ ವಯಸ್ಸು 18 ವರ್ಷ ತುಂಬುತ್ತಿದ್ದಂತೆ ವಯಸ್ಕರ ವಿಭಾಗದಲ್ಲಿ ಬಯೋಮೆಟ್ರಿಕ್ ಮತ್ತು ಬೆರಳಚ್ಚು ನೀಡಿ ಹೊಸ ಪಾಸ್‌ಪೋರ್ಟ್ ಪಡೆಯುವುದು ಕಡ್ಡಾಯ.

    ಆನ್‌ಲೈನ್ ಸಲ್ಲಿಕೆ ಪ್ರಕ್ರಿಯೆ: ಪೋಷಕರು ‘ಪಾಸ್‌ಪೋರ್ಟ್ ಸೇವಾ’ ಪೋರ್ಟಲ್ ಅಥವಾ ಆ್ಯಪ್ ಮೂಲಕ ಈ ಪರಿಷ್ಕೃತ ನಿಯಮಗಳನ್ವಯ ತಮ್ಮ ಅಪ್ರಾಪ್ತ ಮಕ್ಕಳಿಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜೊತೆಗೆ ಮಗುವಿನ ಜನನ ಪ್ರಮಾಣಪತ್ರ ಮತ್ತು ಪೋಷಕರ ಪಾಸ್‌ಪೋರ್ಟ್ ಪ್ರತಿಗಳನ್ನು ಲಗತ್ತಿಸುವುದು ಅಗತ್ಯವಾಗಿದೆ.




    #national
    Previous Articleದೈವಾರಾಧನೆ ಪ್ರಚಾರದ ವಸ್ತುವಲ್ಲ; ಸಿಎಂ, ಯು.ಟಿ. ಖಾದರ್ ವಿರುದ್ಧ ಕಿಡಿ ಕಿಡಿಕಾರಿದ ಬಿಜೆಪಿ
    Next Article ಚಾರ್ಮಾಡಿ ಘಾಟಿಯಲ್ಲಿ ಲಾರಿ ಮೇಲೆ ಕಲ್ಲು ತೂರಾಟ; ನಾಲ್ವರು ಯುವಕರು ಪೊಲೀಸ್ ವಶಕ್ಕೆ

    Related Posts

    ಮಹಿಳಾ ಬೈಕರ್‌ಗೆ ಕಾರು ಡಿಕ್ಕಿ ಪ್ರಕರಣ: ಮೂತ್ರ ವಿಸರ್ಜನೆ ನೆಪದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ

    September 16, 2026

    ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಪ್ರಾರ್ಥಿಸುತ್ತಿದ್ದಾಗಲೇ ವೃದ್ಧ ಸಾವು: ಕೆಲವೇ ಗಂಟೆಗಳ ಅಂತರದ ಸಾವಲ್ಲೂ ಒಂದಾದ ಜೋಡಿ

    September 16, 2026

    14 ದಿನಗಳಲ್ಲಿ 8 ಅಪ್ರಾಪ್ತ ಮಕ್ಕಳ ರಕ್ಷಣೆ: ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ವಿಶೇಷ ಕಾರ್ಯಾಚರಣೆ

    September 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಚಾರ್ಮಾಡಿ ಘಾಟಿಯಲ್ಲಿ ಲಾರಿ ಮೇಲೆ ಕಲ್ಲು ತೂರಾಟ; ನಾಲ್ವರು ಯುವಕರು ಪೊಲೀಸ್ ವಶಕ್ಕೆ

    September 18, 2026

    ಮಕ್ಕಳ ಪಾಸ್‌ಪೋರ್ಟ್‌ಗೆ ಸಂಬಂಧಿಸಿ ಕೇಂದ್ರದಿಂದ ಮಹತ್ವದ ನಿಯಮ ಜಾರಿ

    September 18, 2026

    ದೈವಾರಾಧನೆ ಪ್ರಚಾರದ ವಸ್ತುವಲ್ಲ; ಸಿಎಂ, ಯು.ಟಿ. ಖಾದರ್ ವಿರುದ್ಧ ಕಿಡಿ ಕಿಡಿಕಾರಿದ ಬಿಜೆಪಿ

    September 18, 2026

    ಜೈಲು ಜಾಮರ್ ಸಮಸ್ಯೆ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕಲು ಮುಂದಾದ ವಕೀಲರು; ಕೋರ್ಟ್ ಆವರಣದಲ್ಲೇ ಪೊಲೀಸ್ ವಶಕ್ಕೆ

    September 18, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಚಾರ್ಮಾಡಿ ಘಾಟಿಯಲ್ಲಿ ಲಾರಿ ಮೇಲೆ ಕಲ್ಲು ತೂರಾಟ; ನಾಲ್ವರು ಯುವಕರು ಪೊಲೀಸ್ ವಶಕ್ಕೆ

    September 18, 2026

    ಸಚಿವ ಸಂಪುಟ ಸಭೆಗೆ ಮಂಗಳೂರು ಸಜ್ಜು; ಕರಾವಳಿ ಸಂಸ್ಕೃತಿಯ ಚಿತ್ರಗಳಿಂದ ಕಂಗೊಳಿಸಿದ ಪ್ರಜಾ ಸೌಧ

    September 18, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.