Close Menu
    What's Hot

    ಮಂಗಳೂರು: ಸಚಿವರಿಗೆ ಎಸ್‌ಡಿಪಿಐ ಇಂದ ಕಪ್ಪುಬಾವುಟ ಪ್ರದರ್ಶನ; ಹಲವರು ಪೊಲೀಸ್ ವಶಕ್ಕೆ

    September 18, 2026

    ಸಚಿವ ಸಂಪುಟ ಸಭೆಗೆ ಮಂಗಳೂರು ಸಜ್ಜು; ಕರಾವಳಿ ಸಂಸ್ಕೃತಿಯ ಚಿತ್ರಗಳಿಂದ ಕಂಗೊಳಿಸಿದ ಪ್ರಜಾ ಸೌಧ

    September 18, 2026

    ಸಚಿವ ಸಂಪುಟ ಸಭೆ ಹಿನ್ನೆಲೆ ಮಂಗಳೂರಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಗೆ ಅದ್ದೂರಿಯ ಸ್ವಾಗತ

    September 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಅಮಾನವೀಯ ಶಿಕ್ಷೆ; ಬಾಲಕನಿಗೆ ಬಿಸಿ ಚಾಕುವಿನಿಂದ ಹಿಂಸೆ
    ಅಪರಾಧ

    ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಅಮಾನವೀಯ ಶಿಕ್ಷೆ; ಬಾಲಕನಿಗೆ ಬಿಸಿ ಚಾಕುವಿನಿಂದ ಹಿಂಸೆ

    adminBy adminJuly 27, 2026No Comments1 Min Read

    ವಾರಣಾಸಿ : ಕ್ಲಾಸ್‌ರೂಮ್‌ನಲ್ಲಿ ಆಕಸ್ಮಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಕೋಪಗೊಂಡ ಪ್ಲೇ ಸ್ಕೂಲ್ ಶಿಕ್ಷಕಿಯೊಬ್ಬಳು 5 ವರ್ಷದ ಬಾಲಕನ ಖಾಸಗಿ ಭಾಗಗಳಿಗೆ ಬಿಸಿ ಚಾಕುವಿನಿಂದ ಸುಟ್ಟು ವಿಕೃತ ಕ್ರೌರ್ಯ ಮೆರೆದಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಘಟನೆ ಕುರಿತು ದೂರು ನೀಡಲು ಬಂದ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

    ವಾರಣಾಸಿಯ ಆಕಥಾ ಪ್ರದೇಶದಲ್ಲಿರುವ ಸೆರೆನ್ ಸೋನಿ ಪ್ಲೇ ಶಾಲೆಯಲ್ಲಿ ಜುಲೈ 24 ರಂದು ಈ ಭೀಕರ ಘಟನೆ ನಡೆದಿದೆ. 5 ವರ್ಷದ ಬಾಲಕ ತರಗತಿ ಶಿಕ್ಷಕಿಯಲ್ಲಿ ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ್ದ. ಆದರೆ ಶಿಕ್ಷಕಿ ಅನುಮತಿ ನೀಡದ ಕಾರಣ, ಮಗು ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿದೆ. ಇದರಿಂದ ಆಕ್ರೋಶಗೊಂಡ ಶಿಕ್ಷಕಿ, ಮಗುವನ್ನು ಪಕ್ಕದ ಕೋಣೆಗೆ ಎಳೆದೊಯ್ದು, ಗ್ಯಾಸ್ ಸ್ಟೌವ್ ಆನ್ ಮಾಡಿ ಚಾಕುವನ್ನು ಬಿಸಿ ಮಾಡಿ ಮಗುವಿನ ಖಾಸಗಿ ಭಾಗಕ್ಕೆ ಸುಟ್ಟಿದ್ದಾಳೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಗುವಿಗೆ ದೈಹಿಕ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾಳೆ.

    ಮನೆಗೆ ಮರಳಿದ ಮಗು ಕಣ್ಣೀಡುತ್ತಾ ಪೋಷಕರಿಗೆ ವಿಷಯ ತಿಳಿಸಿದೆ. ಆತಂಕಗೊಂಡ ಪೋಷಕರು ಶಾಲೆಯ ಪ್ರಾಂಶುಪಾಲರಾದ ಹೇಮಲತಾ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು ಸಹಕರಿಸುವ ಬದಲಿಗೆ ಬೆದರಿಕೆ ಹಾಕಿದ್ದಾರೆ. ಮರುದಿನ ಶಾಲೆಗೆ ತೆರಳಿದಾಗಲೂ ಮ್ಯಾನೇಜ್‌ಮೆಂಟ್ ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸಿದೆ. ಮಗುವಿನ ದೈಹಿಕ ಗಾಯ ಹಾಗೂ ಆಘಾತ ಕಂಡು ತಂದೆ ಪೋಲಿಸರಿಗೆ ದೂರು ನೀಡಿದ್ದು, ಲಾಲ್‌ಪುರ್-ಪಾಂಡೇಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ಅತುಲ್ ಸಿಂಗ್ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.




    #crime #nation
    Previous Articleಟೈಮಿಂಗ್ ಜಗಳಕ್ಕೆ ಕಾಪುವಿನಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳ ಕದನ: ಎರಡು ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು
    Next Article ವಿದ್ಯುತ್ ತಂತಿಗೆ ಬಲಿಯಾದ ವ್ಯಕ್ತಿ; ಶವ ಮುಚ್ಚಿಟ್ಟು ಪುರಾವೆ ನಾಶಕ್ಕೆ ಯತ್ನಿಸಿದ ಮೂವರು ಬಂಧನ

    Related Posts

    ಆಸ್ತಿ ಪಾಲಿಗೆ ಅರ್ಜಿ ಸಲ್ಲಿಸಲು ಬಂದ ತಂದೆ-ಮಗಳು ಗ್ರಾಮ ಪಂಚಾಯಿತಿಯಲ್ಲೇ ಬರ್ಬರ ಹತ್ಯೆ

    September 16, 2026

    ಸಾರ್ವಜನಿಕವಾಗಿ ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನ ಬಂಧನ: ಅಕ್ಕ ಪಡೆಯ ಕಾರ್ಯಾಚರಣೆ

    September 16, 2026

    ಮಹಿಳಾ ಬೈಕರ್‌ಗೆ ಕಾರು ಡಿಕ್ಕಿ ಪ್ರಕರಣ: ಮೂತ್ರ ವಿಸರ್ಜನೆ ನೆಪದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ

    September 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರು: ಸಚಿವರಿಗೆ ಎಸ್‌ಡಿಪಿಐ ಇಂದ ಕಪ್ಪುಬಾವುಟ ಪ್ರದರ್ಶನ; ಹಲವರು ಪೊಲೀಸ್ ವಶಕ್ಕೆ

    September 18, 2026

    ಸಚಿವ ಸಂಪುಟ ಸಭೆಗೆ ಮಂಗಳೂರು ಸಜ್ಜು; ಕರಾವಳಿ ಸಂಸ್ಕೃತಿಯ ಚಿತ್ರಗಳಿಂದ ಕಂಗೊಳಿಸಿದ ಪ್ರಜಾ ಸೌಧ

    September 18, 2026

    ಸಚಿವ ಸಂಪುಟ ಸಭೆ ಹಿನ್ನೆಲೆ ಮಂಗಳೂರಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಗೆ ಅದ್ದೂರಿಯ ಸ್ವಾಗತ

    September 18, 2026

    ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಗಣ್ಯರ ಸಂಚಾರಕ್ಕೆ ಸಿದ್ಧತೆ, ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಸೂಚನೆ

    September 16, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸಚಿವ ಸಂಪುಟ ಸಭೆಗೆ ಮಂಗಳೂರು ಸಜ್ಜು; ಕರಾವಳಿ ಸಂಸ್ಕೃತಿಯ ಚಿತ್ರಗಳಿಂದ ಕಂಗೊಳಿಸಿದ ಪ್ರಜಾ ಸೌಧ

    September 18, 2026

    ಸಚಿವ ಸಂಪುಟ ಸಭೆ ಹಿನ್ನೆಲೆ ಮಂಗಳೂರಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಗೆ ಅದ್ದೂರಿಯ ಸ್ವಾಗತ

    September 18, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.