Close Menu
    What's Hot

    ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್‌ ಕ್ಲಾಸ್: ₹2 ಕೋಟಿ ಠೇವಣಿಗೆ ಆದೇಶ

    September 16, 2026

    ಆನೆಗುಡ್ಡೆ ದೇವಸ್ಥಾನದಲ್ಲಿ ಕಳ್ಳಿಯರ ಕೈಚಳಕ: 75ರ ವೃದ್ಧೆಯ 2.5 ಲಕ್ಷ ರೂ. ಚಿನ್ನದ ಸರ ಕಳವು

    September 16, 2026

    ಗಣೇಶ ಚತುರ್ಥಿಯಂದೇ ಕುತ್ತಾರಿನಲ್ಲಿ ಅಪಘಾತ: 21ರ ಯುವಕನ ಅಂಗಾಂಗ ದಾನಕ್ಕೆ ಕುಟುಂಬ ನಿರ್ಧಾರ

    September 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಡ್ರಗ್ಸ್ ದಂಧೆಯಲ್ಲಿ ಮೂರನೇ ಶಿಕ್ಷಕಿ ಅರೆಸ್ಟ್; ಇನ್‌ಸ್ಟಾಗ್ರಾಮ್ ಮೂಲಕ ಹೈಟೆಕ್ ಜಾಲ ಬಯಲು
    ಅಪರಾಧ

    ಡ್ರಗ್ಸ್ ದಂಧೆಯಲ್ಲಿ ಮೂರನೇ ಶಿಕ್ಷಕಿ ಅರೆಸ್ಟ್; ಇನ್‌ಸ್ಟಾಗ್ರಾಮ್ ಮೂಲಕ ಹೈಟೆಕ್ ಜಾಲ ಬಯಲು

    adminBy adminJuly 29, 2026No Comments1 Min Read

    ಕೋಝಿಕೋಡ್ : ಕೇರಳದ ಕೋಝಿಕೋಡ್ ಗ್ರಾಮೀಣ ಪೊಲೀಸರ ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ಎಂಡಿಎಂಎ (MDMA) ಮಾದಕ ದ್ರವ್ಯ ಜಾಲದ ತನಿಖೆಯಲ್ಲಿ ಮತ್ತೊಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದ್ದು, ಪೆರಂಬ್ರಾ ಬಿಆರ್‌ಸಿಯ ಮೂರನೇ ವಿಶೇಷ ಶಿಕ್ಷಕಿ ವಿ.ಪಿ. ನೀಶ್ಮಾ (30) ಮಂಗಳವಾರ ಬಂಧನಕ್ಕೊಳಗಾಗಿದ್ದಾರೆ.

    ಆಟಿಸಂ ಕೇಂದ್ರದ ವಿಶೇಷ ಶಿಕ್ಷಕಿ ಅವಲಾ ಕುಟ್ಟೋತ್ ಮೂಲದ ವಿ.ಪಿ. ನೀಶ್ಮಾ ಬಂಧನದೊಂದಿಗೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಶಿಕ್ಷಕಿಯರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಈ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕಿ ಕೀರ್ತನಾ ಹಾಗೂ ಕಾವ್ಯಾ ಎಂಬವರನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಮೂವರೂ ಶಿಕ್ಷಕಿಯರು ನಿರಂತರವಾಗಿ ಮಾದಕ ದ್ರವ್ಯ (MDMA) ಸೇವನೆ ಮಾಡುತ್ತಿದ್ದುದಲ್ಲದೆ, ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ಗ್ರಾಹಕರನ್ನು ಸೆಳೆದು ಹೈಟೆಕ್ ದಂಧೆ ನಡೆಸುತ್ತಿದ್ದರು ಎಂದು ವಟಕರ ಇನ್ಸ್‌ಪೆಕ್ಟರ್ ಎ.ವಿ. ದಿನೇಶ್ ದೃಢಪಡಿಸಿದ್ದಾರೆ.

    ಮಾದಕ ದ್ರವ್ಯದ ಜಾಲದ ಕೊಂಡಿ ಗಲ್ಫ್ ದೇಶದ ಸಂಖ್ಯೆಗೆ ಲಿಂಕ್ ಆಗಿದ್ದು, ಗಲ್ಫ್ ಸಂಖ್ಯೆಯ ಮೂಲಕ ವಾಟ್ಸಾಪ್/ಸಂದೇಶ ಕಳುಹಿಸಿ ಬುಕಿಂಗ್ ಮಾಡಲಾಗುತ್ತಿತ್ತು. ಹಣ ಪಾವತಿಗೆ ಕೀರ್ತನಾ ಅವರ ಕ್ಯೂಆರ್ ಕೋಡ್ ಬಳಸಲಾಗುತ್ತಿತ್ತು. ಪಾವತಿಯಾದ ತಕ್ಷಣ ಡ್ರಗ್ಸ್ ಅಡಗಿಸಿಟ್ಟ ಸ್ಥಳದ ಫೋಟೋ ಕಳುಹಿಸಿ ಡೆಲಿವರಿ ನೀಡಲಾಗುತ್ತಿತ್ತು. ಕೀರ್ತನಾ ಖಾತೆಗೆ ₹14 ಲಕ್ಷ ಹಾಗೂ ಕಾವ್ಯಾ ಖಾತೆಗೆ ಕೇವಲ 5 ತಿಂಗಳಲ್ಲಿ ₹9 ಲಕ್ಷ ಜಮೆಯಾಗಿರುವುದು ಪತ್ತೆಯಾಗಿದೆ. ತಿಂಗಳಿಗೆ ಕೇವಲ ₹12,000 ಗುತ್ತಿಗೆ ವೇತನ ಪಡೆಯುತ್ತಿದ್ದ ಈ ಶಿಕ್ಷಕಿಯರಿಗೆ ಮಂಗಳೂರಿನ ಸ್ನೇಹಿತನೊಬ್ಬ ಈ ಜಾಲಕ್ಕೆ ಪರಿಚಯಿಸಿದ್ದ ಎನ್ನಲಾಗಿದ್ದು, ಇವರು ಬೆಂಗಳೂರಿಗೆ ನಡೆಸಿದ ಸರಣಿ ಪ್ರವಾಸ ಹಾಗೂ ಖರೀದಿಸಿದ ಐಷಾರಾಮಿ ಕಾರಿನ ಮೂಲದ ಕುರಿತು ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ.

    #crime #nation
    Previous Articleಕೆಪಿಎಸ್‌ಸಿ ಹಗರಣಕ್ಕೆ ಸಿಎಂ ಉತ್ತರಿಸಬೇಕು; ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ ಆಗ್ರಹ
    Next Article ಮಂಗಳೂರು–ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಒಂದೇ ಕುಟುಂಬದ ಐವರಿಗೆ ಗಾಯ

    Related Posts

    ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್‌ ಕ್ಲಾಸ್: ₹2 ಕೋಟಿ ಠೇವಣಿಗೆ ಆದೇಶ

    September 16, 2026

    ಆನೆಗುಡ್ಡೆ ದೇವಸ್ಥಾನದಲ್ಲಿ ಕಳ್ಳಿಯರ ಕೈಚಳಕ: 75ರ ವೃದ್ಧೆಯ 2.5 ಲಕ್ಷ ರೂ. ಚಿನ್ನದ ಸರ ಕಳವು

    September 16, 2026

    6 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ವಾರಂಟ್ ಆರೋಪಿ: ಮಂಗಳೂರು ಏರ್‌ಪೋರ್ಟ್‌ನಲ್ಲಿ ಅರೆಸ್ಟ್

    September 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್‌ ಕ್ಲಾಸ್: ₹2 ಕೋಟಿ ಠೇವಣಿಗೆ ಆದೇಶ

    September 16, 2026

    ಆನೆಗುಡ್ಡೆ ದೇವಸ್ಥಾನದಲ್ಲಿ ಕಳ್ಳಿಯರ ಕೈಚಳಕ: 75ರ ವೃದ್ಧೆಯ 2.5 ಲಕ್ಷ ರೂ. ಚಿನ್ನದ ಸರ ಕಳವು

    September 16, 2026

    ಗಣೇಶ ಚತುರ್ಥಿಯಂದೇ ಕುತ್ತಾರಿನಲ್ಲಿ ಅಪಘಾತ: 21ರ ಯುವಕನ ಅಂಗಾಂಗ ದಾನಕ್ಕೆ ಕುಟುಂಬ ನಿರ್ಧಾರ

    September 16, 2026

    6 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ವಾರಂಟ್ ಆರೋಪಿ: ಮಂಗಳೂರು ಏರ್‌ಪೋರ್ಟ್‌ನಲ್ಲಿ ಅರೆಸ್ಟ್

    September 16, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಆನೆಗುಡ್ಡೆ ದೇವಸ್ಥಾನದಲ್ಲಿ ಕಳ್ಳಿಯರ ಕೈಚಳಕ: 75ರ ವೃದ್ಧೆಯ 2.5 ಲಕ್ಷ ರೂ. ಚಿನ್ನದ ಸರ ಕಳವು

    September 16, 2026

    ಹಾಸನ : ಲಾಡ್ಜ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ಯುವತಿ ಅನುಮಾನಾಸ್ಪದ ಸಾವು

    September 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.