ಬೆಂಗಳೂರು: ಬಹು ನಿರೀಕ್ಷಿತ ರಾಜ್ಯ ಸಂಪುಟ ವಿಸ್ತರಣೆಗೆ ಕಾಲಕೂಡಿಬಂದಿದೆ. ಸೋಮವಾರ (ಆ.03) ಸಂಜೆ ಡಿಕೆ ಶಿವಕುಮಾರ್ ಅವರ ಸಂಪುಟ ವಿಸ್ತರಣೆ ಆಗಲಿದೆ. 20 ಮಂದಿ ಶಾಸಕರಿಗೆ ಸಚಿವ ಸ್ಥಾನ ಒಲಿದಿದ್ದು, ಬಹುತೇಕ ಹೊಸಮುಖಗಳು ಪಟ್ಟಿಯಲ್ಲಿದೆ.
ಇತ್ತೀಚೆಗೆ ಹೈಕೋರ್ಟ್ ತೀರ್ಪಿನಿಂದಾಗಿ ಕೆಲವೇ ದಿನಗಳ ಹಿಂದೆ ಎಂಎಲ್‌ಸಿ ಸ್ಥಾನ ಪಡೆದಿದ್ದ ಗಾಯತ್ರಿ ಶಾಂತೇಗೌಡ ಅವರಿಗೆ ಇದೀಗ ಸಚಿವ ಸ್ಥಾನ ಒಲಿದು ಬಂದಿದೆ. ಈ ಪಟ್ಟಿಯಲ್ಲಿರುವ ಏಕೈಕ ಪರಿಷತ್ ಸದಸ್ಯೆ ಗಾಯತ್ರಿ.
ರೋಣ ಶಾಸಕ ಜಿ.ಎಸ್.ಪಾಟೀಲ್ ಅವರಿಗೆ ಸ್ಪೀಕರ್ ಸ್ಥಾನ ನೀಡಲಾಗಿದೆ. ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಉಪ ಸ್ಪೀಕರ್ ಸ್ಥಾನ ನೀಡಲಾಗಿದೆ.
ದಾವಣಗೆರೆಯ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರು ಅಚ್ಚರಿಯ ರೀತಿಯಲ್ಲಿ ನೂತನ ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಈ ಬಾರಿ ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿದ್ದ ಹಲವರು ಈ ಬಾರಿ ಸಚಿವ ಸ್ಥಾನ ತಪ್ಪಿಸಿಕೊಂಡಿದಾರೆ. ಎಚ್ ಸಿ ಮಹದೇವಪ್ಪ, ಎಂ ಸಿ ಸುಧಾಕರ್, ದಿನೇಶ್ ಗುಂಡೂರಾವ್, ಎಚ್ ಕೆ ಪಾಟಿಲ್, ಕೆ ವೆಂಕಟೇಶ್, ಲಕ್ಷ್ಮೀ ಹೆಬ್ಬಾಳಕರ್, ಶಿವಾನಂದ ಪಾಟೀಲ್, ಶರಣ ಬಸಪ್ಪ ದರ್ಶನಾಪುರಗೆ ಈ ಬಾರಿ ಸಚಿವಗಿರಿ ಲಭ್ಯವಾಗಿಲ್ಲ.
ನೂತನ ಸಚಿವರ ಪಟ್ಟಿ
- ಶ್ರೀ ಪಿ.ಎಂ. ನರೇಂದ್ರಸ್ವಾಮಿ
- ಶ್ರೀ ಶಿವರಾಜ್ ತಂಗಡಗಿ
- ಶ್ರೀ ರುದ್ರಪ್ಪ ಲಮಾಣಿ
- ಶ್ರೀ ಕೆ.ಎಸ್. ಬಸವನಗೌಡ
- ಶ್ರೀ ಬಿ. ನಾಗೇಂದ್ರ
- ಶ್ರೀ ಟಿ. ರಘುಮೂರ್ತಿ
- ಶ್ರೀ ಬಿ. ಝಮೀರ್ ಅಹ್ಮದ್ ಖಾನ್
- ಶ್ರೀ ರಿಜ್ವಾನ್ ಅರ್ಷದ್
- ಶ್ರೀ ಸಂತೋಷ್ ಲಾಡ್
- ಶ್ರೀ ಮಧು ಬಂಗಾರಪ್ಪ
- ಶ್ರೀ ಪುಟ್ಟರಂಗಶೆಟ್ಟಿ
- ಶ್ರೀ ಮಂಕಾಳ ವೈದ್ಯ
- ಡಾ. ಅಜಯ್ ಸಿಂಗ್
- ಶ್ರೀ ಎನ್. ಚಲುವರಾಯಸ್ವಾಮಿ
- ಶ್ರೀ ಕೆ.ಎಂ. ಶಿವಲಿಂಗೇಗೌಡ
- ಶ್ರೀ ಎಚ್.ಸಿ. ಬಾಲಕೃಷ್ಣ
- ಶ್ರೀಮತಿ ಗಾಯತ್ರಿ ಶಾಂತೇಗೌಡ
- ಶ್ರೀ ಬಸವರಾಜ ರಾಯರೆಡ್ಡಿ
- ಶ್ರೀ ವಿಜಯಾನಂದ ಕಾಶಪ್ಪನವರ್
- ಶ್ರೀ ಲಕ್ಷ್ಮಣ ಸವದಿ
ಹುದ್ದೆಗಳ ಪಟ್ಟಿ:
- ವಿಧಾನಸಭೆ ಸ್ಪೀಕರ್: ಶ್ರೀ ಜಿ.ಎಸ್. ಪಾಟೀಲ್
- ವಿಧಾನಸಭೆ ಉಪ ಸ್ಪೀಕರ್: ಶ್ರೀ ಎ.ಎಸ್. ಪೊನ್ನಣ್ಣ
- ವಿಧಾನ ಪರಿಷತ್ ಸಭಾಪತಿ: ಶ್ರೀ ಸಲೀಂ ಅಹ್ಮದ್
- ವಿಧಾನ ಪರಿಷತ್ ಉಪ ಸಭಾಪತಿ: ಶ್ರೀಮತಿ ಉಮಾಶ್ರೀ








