Close Menu
    What's Hot

    ಕುಂಪಲ ಬೈಪಾಸ್‌ನಲ್ಲಿ ಭೀಕರ ಅಪಘಾತ; ಎರಡು ಕಾರುಗಳ ನಡುವೆ ಸಿಲುಕಿ 68 ವರ್ಷದ ವ್ಯಕ್ತಿ ಸಾವು

    September 30, 2026

    ವಿಮಾನದಲ್ಲೇ ಪೈಲಟ್‌ಗಳ ನಡುವೆ ಗಲಾಟೆ; ತುರ್ತು ಸಂಕೇತದ ಬಳಿಕ ದುಬೈ-ಇಸ್ರೇಲ್ ವಿಮಾನ ಸೌದಿಯಲ್ಲಿ ಲ್ಯಾಂಡ್

    September 30, 2026

    ಜೋಕಟ್ಟೆ ಎಂಆರ್‌ಪಿಎಲ್‌ ಘಟಕದಲ್ಲಿ ಸ್ಫೋಟ; ಗುತ್ತಿಗೆ ಕಾರ್ಮಿಕ ಸಾವು, ತನಿಖೆಗೆ ಆದೇಶ

    September 30, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಅತಿ ವೇಗವೇ ಜೀವಕ್ಕೆ ಮುಳುವು; ಅತೀಕ್ ಅಹ್ಮದ್ ಪುತ್ರ ಅಬಾನ್ ರಸ್ತೆ ಅಪಘಾತದಲ್ಲಿ ಮೃತ್ಯು
    ರಾಷ್ಟ್ರೀಯ

    ಅತಿ ವೇಗವೇ ಜೀವಕ್ಕೆ ಮುಳುವು; ಅತೀಕ್ ಅಹ್ಮದ್ ಪುತ್ರ ಅಬಾನ್ ರಸ್ತೆ ಅಪಘಾತದಲ್ಲಿ ಮೃತ್ಯು

    adminBy adminAugust 6, 2026No Comments1 Min Read

    ಝಾನ್ಸಿ: ಗ್ಯಾಂಗ್​ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ ಕಿರಿಯ ಮಗ ಅಬಾನ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಝಾನ್ಸಿ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಝಾನ್ಸಿ ಜೈಲಿನಲ್ಲಿರುವ ತಮ್ಮ ಸಹೋದರ ಅಲಿ ಅಹ್ಮದ್ ಅವರನ್ನು ಭೇಟಿಯಾಗಿ ವಾಪಸ್ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದಾಗ ಝಾನ್ಸಿ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯ ಪೂಂಚ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.

    ಅಬಾನ್ ಹಾಗೂ ಅವರ ಸಹಚರರು ಪ್ರಯಾಣಿಸುತ್ತಿದ್ದ ಬಿಳಿ ಬಣ್ಣದ ಹುಂಡೈ ಕ್ರೆಟಾ ಕಾರು ಅತಿ ವೇಗದಲ್ಲಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ (Divider) ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅಬಾನ್ ಹಾಗೂ ಅವರ ಸ್ನೇಹಿತ ಸೋನು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರ ಮೂವರು ಯುವಕರು ತೀವ್ರವಾಗಿ ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ತಕ್ಷಣವೇ ಮಾತ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಝಾನ್ಸಿ ಜೈಲಿನಲ್ಲಿ ಬಂಧಿಯಾಗಿರುವ ಅತೀಕ್ ಅಹ್ಮದ್ ಅವರ ಹಿರಿಯ ಮಗ ಅಲಿ ಅಹ್ಮದ್ ಅವರನ್ನು ಭೇಟಿ ಮಾಡಲು ಅಬಾನ್ ಪ್ರಯಾಗ್‌ರಾಜ್‌ನಿಂದ ಬಂದಿದ್ದರು.

    ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಹಾಗೂ ಝಾನ್ಸಿ ಜೈಲಿನ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಪೊಲೀಸರು ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಾಫಿಯಾ ನಾಯಕ ಹಾಗೂ ಮಾಜಿ ಸಂಸದ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು 2023 ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದಾಗ ಕ್ಯಾಮೆರಾಗಳ ಎದುರಲ್ಲೇ ಗುಂಡಿಕ್ಕಿ ಕೊಲ್ಲಲಾಗಿತ್ತು.

    ಅತೀಕ್ ಅವರ ಮತ್ತೊಬ್ಬ ಮಗ ಅಸದ್ 2023 ರ ಏಪ್ರಿಲ್‌ನಲ್ಲಿ ಝಾನ್ಸಿಯಲ್ಲೇ ನಡೆದ ಯುಪಿ ಎಸ್‌ಟಿಎಫ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದ. ಅಲಿ ಮತ್ತು ಉಮರ್ ಜೈಲಿನಲ್ಲಿದ್ದರೆ, ಕಿರಿಯ ಮಗ ಅಬಾನ್ ಈಗ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ




    #dakshinakannada
    Previous Articleಶೇರು ಮಾರುಕಟ್ಟೆ ಲಾಭದ ಆಸೆ; ಮಂಗಳೂರಿನ ಮಹಿಳೆಗೆ ₹10.50 ಲಕ್ಷ ಆನ್‌ಲೈನ್ ವಂಚನೆ
    Next Article ನಕಲಿ ಚಿನ್ನ ಅಡವಿಟ್ಟು ₹1.53 ಕೋಟಿ ಸಾಲ; ಬ್ಯಾಂಕ್ ಉದ್ಯೋಗಿಯ ಭಾರೀ ವಂಚನೆ

    Related Posts

    ಕುಂಪಲ ಬೈಪಾಸ್‌ನಲ್ಲಿ ಭೀಕರ ಅಪಘಾತ; ಎರಡು ಕಾರುಗಳ ನಡುವೆ ಸಿಲುಕಿ 68 ವರ್ಷದ ವ್ಯಕ್ತಿ ಸಾವು

    September 30, 2026

    ಜೋಕಟ್ಟೆ ಎಂಆರ್‌ಪಿಎಲ್‌ ಘಟಕದಲ್ಲಿ ಸ್ಫೋಟ; ಗುತ್ತಿಗೆ ಕಾರ್ಮಿಕ ಸಾವು, ತನಿಖೆಗೆ ಆದೇಶ

    September 30, 2026

    ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ; ಎಂಟು ಮಂದಿಗೆ ಗಾಯ, ಬೆಂಕಿ ನಂದಿಸುವಲ್ಲಿ ಯಶಸ್ಸು

    September 30, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕುಂಪಲ ಬೈಪಾಸ್‌ನಲ್ಲಿ ಭೀಕರ ಅಪಘಾತ; ಎರಡು ಕಾರುಗಳ ನಡುವೆ ಸಿಲುಕಿ 68 ವರ್ಷದ ವ್ಯಕ್ತಿ ಸಾವು

    September 30, 2026

    ವಿಮಾನದಲ್ಲೇ ಪೈಲಟ್‌ಗಳ ನಡುವೆ ಗಲಾಟೆ; ತುರ್ತು ಸಂಕೇತದ ಬಳಿಕ ದುಬೈ-ಇಸ್ರೇಲ್ ವಿಮಾನ ಸೌದಿಯಲ್ಲಿ ಲ್ಯಾಂಡ್

    September 30, 2026

    ಜೋಕಟ್ಟೆ ಎಂಆರ್‌ಪಿಎಲ್‌ ಘಟಕದಲ್ಲಿ ಸ್ಫೋಟ; ಗುತ್ತಿಗೆ ಕಾರ್ಮಿಕ ಸಾವು, ತನಿಖೆಗೆ ಆದೇಶ

    September 30, 2026

    ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ; ಎಂಟು ಮಂದಿಗೆ ಗಾಯ, ಬೆಂಕಿ ನಂದಿಸುವಲ್ಲಿ ಯಶಸ್ಸು

    September 30, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    25ಕ್ಕೂ ಹೆಚ್ಚು ದೂರುಗಳ ಬೆನ್ನಲ್ಲೇ ನಕಲಿ ಲೇಡಿ PSI ಅರೆಸ್ಟ್; ಚಿನ್ನ, ಕಾರು, ಹಣ ವಂಚನೆ ಆರೋಪ

    September 30, 2026

    ಕೊಲೆಯತ್ನ ಕೇಸ್‌ನಲ್ಲಿ A1, A2 ಆರೋಪಿಗಳಾಗಿದ್ದ ಪತಿ–ಮಹಿಳೆ ಇಬ್ಬರ ಮೃತದೇಹ ಸೌಪರ್ಣಿಕಾ ನದಿ ಬಳಿ ಪತ್ತೆ

    September 30, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.