Close Menu
    What's Hot

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026

    ವಿಮಾನ ಇಳಿಯುವ ಕ್ಷಣದಲ್ಲೇ 5.2 ತೀವ್ರತೆಯ ಭೂಕಂಪ; ಲ್ಯಾಂಡಿಂಗ್‌ಗೆ ಬಂದಿದ್ದ ವಿಮಾನ ವಾಪಸ್ ಮೇಲಕ್ಕೆ

    November 29, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಶೂ ವಾಸನೆ ನೋಡುತ್ತಿದ್ದ ಯುವಕ ಅರೆಸ್ಟ್
    ಅಂತರಾಷ್ಟ್ರೀಯ

    ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಶೂ ವಾಸನೆ ನೋಡುತ್ತಿದ್ದ ಯುವಕ ಅರೆಸ್ಟ್

    adminBy adminAugust 7, 2026No Comments2 Mins Read

    ಶಾ ಆಲಂ: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಕಳೆದ ಕೆಲವು ತಿಂಗಳುಗಳಿಂದ ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ, ತನ್ನ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎಂಬ ಭೀತಿಯಲ್ಲಿದ್ದಳು. ಆದರೆ, ತನ್ನ ಮನೆಯ ಹೊರಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆಕೆಗೆ ಎದುರಾದ ಸತ್ಯ ಆಘಾತಕಾರಿ ಮಾತ್ರವಲ್ಲ, ಅತ್ಯಂತ ವಿಚಿತ್ರವಾಗಿತ್ತು.

    ಯುವಕನೊಬ್ಬ ಅಪಾರ್ಟ್‌ಮೆಂಟ್ ಗ್ರಿಲ್ ಮೂಲಕ ಕೈಹಾಕಿ, ಆಕೆಯ ಶೂಗಳನ್ನು  ಹೊರತೆಗೆದು ವಾಸನೆ ನೋಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಮಲೇಷ್ಯಾದ ಶಾ ಅಲಂನಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾನಸಿಕ ವೈಪರೀತ್ಯ ಮತ್ತು ಸೈಬರ್ ಅಪರಾಧದ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ವಿಶ್ವವಿದ್ಯಾನಿಲಯದ 22 ವರ್ಷದ ವಿದ್ಯಾರ್ಥಿನಿಯೊಬ್ಬಳು ಏಪ್ರಿಲ್ ತಿಂಗಳಿನಿಂದ ತನಗೆ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ನಂಬಿದ್ದಳು.

    ಮನೆಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಕಪ್ಪು ಟಿ-ಶರ್ಟ್ ಧರಿಸಿದ್ದ ಯುವಕನೊಬ್ಬ ಬಂದು, ಶೂಗಳನ್ನು ಹಿಡಿದು ವಾಸನೆ ನೋಡುವ ದೃಶ್ಯ ವೈರಲ್ ಆಗಿದೆ. ಆತ ಅದೇ ವಿಶ್ವವಿದ್ಯಾನಿಲಯದ 20 ರಿಂದ 25 ವರ್ಷ ವಯಸ್ಸಿನ ಸಹ-ವಿದ್ಯಾರ್ಥಿ ಎಂದು ತಿಳಿದುಬಂದಿದೆ.

    ಆರೋಪಿ ಕೇವಲ ಶೂ ಮೂಸಿನೋಡುವುದಷ್ಟೇ ಅಲ್ಲದೆ, ಆ ದೃಶ್ಯಗಳನ್ನು ಸ್ವತಃ ವೀಡಿಯೊ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದದ್ದು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿತು.

    ಶಾ ಅಲಂ ಪೊಲೀಸ್ ಅಧಿಕಾರಿ ಸರುದಿನ್ ಸಮಾಹ್ ಪ್ರಕಾರ, ಬಂಧಿತ ಯುವಕನಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ ಹಾಗೂ ಕೃತ್ಯ ಎಸಗುವಾಗ ಆತ ಮದ್ಯ ಸೇವಿಸಿರಲಿಲ್ಲ. ಈ ರೀತಿಯ ವಿಚಿತ್ರ ನಡವಳಿಕೆಗಳು ಮಾನಸಿಕವಾಗಿ ‘ಫೆಟಿಷಿಸಂ’ ಆಗಿರಬಹುದು ಎಂದು ತಜ್ಞರು ಹೇಳಿದ್ದಾಗಿ ತಿಳಿಸಿದ್ದಾರೆ.

    ಮಲೇಷ್ಯಾದಲ್ಲಿ ಮೇ 2023 ರಿಂದ ಅನುಷ್ಠಾನಕ್ಕೆ ಬಂದಿರುವ ‘ಸೆಕ್ಷನ್507 ಎ’ ಅಡಿಯಲ್ಲಿ, ಅನುಮತಿಯಿಲ್ಲದೆ ಯಾರನ್ನಾದರೂ ಹಿಂಬಾಲಿಸುವುದು , ಕಿರುಕುಳ ನೀಡುವುದು ಅಥವಾ ವೈಯಕ್ತಿಕ ಗೌಪ್ಯತೆಗೆ ಧಕ್ಕೆ ತರುವುದು ಗಂಭೀರ ಅಪರಾಧ. ಈ ಕಾಯ್ದೆಯಡಿ ತಪ್ಪಿತಸ್ಥರೆಂದು ಸಾಬೀತಾದರೆ ಆರೋಪಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.

    ವಿದ್ಯಾರ್ಥಿಗಳ ಸುರಕ್ಷತೆ:

    ಈ ಘಟನೆಯ ನಂತರ ವಿಶ್ವವಿದ್ಯಾನಿಲಯದ ಆವರಣ ಮತ್ತು ಹಾಸ್ಟೆಲ್‌ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಿಸಿಟಿವಿ ಕಾವಲು ಹೆಚ್ಚಿಸಲಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:

    ಇಂಟರ್ನೆಟ್‌ನಲ್ಲಿ ಈ ವೀಡಿಯೊ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ವೈಯಕ್ತಿಕ ವಸ್ತುಗಳನ್ನು ಮುಟ್ಟುವುದು ಮತ್ತು ಖಾಸಗಿತನವನ್ನು ಹಾಳು ಮಾಡುವುದು ಮಾನಸಿಕ ಕಿರುಕುಳದ ಭಾಗವಾಗಿದೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.




    #crime International
    Previous Article“ಪ್ರತಿಭಟನೆ ಮಾಡುವ Gen Z ದೇಶದ್ರೋಹಿಗಳಲ್ಲ” – ಮೋಹನ್ ಭಾಗವತ್
    Next Article ಕಾಡುಪ್ರಾಣಿ ಬೇಟೆ ಪ್ರಕರಣದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ; ಶಸ್ತ್ರಾಸ್ತ್ರ ಸಹಿತ ಸಿಕ್ಕಿಬಿದ್ದ ಆರೋಪಿಗಳು

    Related Posts

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026

    ವಿಮಾನ ಇಳಿಯುವ ಕ್ಷಣದಲ್ಲೇ 5.2 ತೀವ್ರತೆಯ ಭೂಕಂಪ; ಲ್ಯಾಂಡಿಂಗ್‌ಗೆ ಬಂದಿದ್ದ ವಿಮಾನ ವಾಪಸ್ ಮೇಲಕ್ಕೆ

    November 29, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026

    ವಿಮಾನ ಇಳಿಯುವ ಕ್ಷಣದಲ್ಲೇ 5.2 ತೀವ್ರತೆಯ ಭೂಕಂಪ; ಲ್ಯಾಂಡಿಂಗ್‌ಗೆ ಬಂದಿದ್ದ ವಿಮಾನ ವಾಪಸ್ ಮೇಲಕ್ಕೆ

    November 29, 2026

    ಉಡುಪಿ: ಆಟೋಗೆ ಡಿಕ್ಕಿ ಹೊಡೆದು ಚರಂಡಿಗೆ ಉರುಳಿದ ಕಾರು; ಕ್ಷಣಾರ್ಧದಲ್ಲಿ ಬೆಂಕಿಗಾಹುತಿ, ಮೂವರಿಗೆ ಗಂಭೀರ ಗಾಯ

    November 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.