Close Menu
    What's Hot

    ಮಂಗಳೂರು: ಕೋರ್ಟ್‌ಗೆ ತೆರಳುತ್ತಿದ್ದ ನ್ಯಾಯಾಧೀಶರ ಕಾರಿಗೆ ಆಟೋ ಡಿಕ್ಕಿ; ಹಲವರಿಗೆ ಗಾಯ

    September 29, 2026

    ಮಲ್ಪೆಯಲ್ಲಿ ನಿಗೂಢ ಕೊಲೆ; ಪ್ರತಿದಿನ ಮಲಗುತ್ತಿದ್ದ ಜಾಗದಲ್ಲೇ ವ್ಯಕ್ತಿ ಶವವಾಗಿ ಪತ್ತೆ

    September 29, 2026

    ಸ್ನೇಹಿತನ ಮಾತು ನಂಬಿ ಸೌದಿ ಅರೇಬಿಯಾದಲ್ಲಿ ‘ಡೆತ್ ಟ್ರ್ಯಾಪ್’ಗೆ ಸಿಲುಕಿದ ಕೇರಳ ಮೂಲದ ವ್ಯಕ್ತಿ

    September 29, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಎರಡು ಲೆಡ್ಜರ್, ನಕಲಿ ಸಹಿ, ಲಕ್ಷಾಂತರ ಹಣ ಗುಳುಂ..! ಹೆಬ್ರಿಯಲ್ಲಿ ಆರ್ಥಿಕ ಅಕ್ರಮ ಬಯಲು
    ಅಪರಾಧ

    ಎರಡು ಲೆಡ್ಜರ್, ನಕಲಿ ಸಹಿ, ಲಕ್ಷಾಂತರ ಹಣ ಗುಳುಂ..! ಹೆಬ್ರಿಯಲ್ಲಿ ಆರ್ಥಿಕ ಅಕ್ರಮ ಬಯಲು

    adminBy adminAugust 8, 2026No Comments1 Min Read

    ಹೆಬ್ರಿ : ತಾಲೂಕು ಪಂಚಾಯತ್ ವ್ಯಾಪ್ತಿಯ ‘ಧನಲಕ್ಷ್ಮಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ’ದಲ್ಲಿ ಕಳೆದ ಆರು ವರ್ಷಗಳಿಂದ ಲಕ್ಷಾಂತರ ರೂಪಾಯಿ ಹಣ ದುರುಪಯೋಗಪಡಿಸಿಕೊಂಡು, ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿರುವ ಭಾರಿ ಆರ್ಥಿಕ ಅಕ್ರಮ ಪ್ರಕರಣ ಬೆಳಕಿಗೆ ಬಂದಿದೆ.

    ಹೆಬ್ರಿ ತಾಲೂಕು ಪಂಚಾಯತ್‌ನ ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಉಮಾ ಅವರು ನೀಡಿದ ದೂರಿನನ್ವಯ, ಧನಲಕ್ಷ್ಮಿ ಸಂಜೀವಿನಿ ಒಕ್ಕೂಟದಲ್ಲಿ ಕಳೆದ 8 ವರ್ಷಗಳಿಂದ ಮುಖ್ಯ ಪುಸ್ತಕ ಬರಹಗಾರ್ತಿಯಾಗಿ (ಬುಕ್ ಕೀಪರ್) ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ನಂದಿನಿ ಎಂಬುವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆರೋಪಿತೆ ನಂದಿನಿ ಅವರು 2020 ರಿಂದ 2026ರ ಅವಧಿಯಲ್ಲಿ ಒಕ್ಕೂಟದ ಸದಸ್ಯತ್ವ ಹೊಂದಿರುವ ವಿವಿಧ ಸ್ವ-ಸಹಾಯ ಸಂಘಗಳ ಸದಸ್ಯರು ಮರುಪಾವತಿಸಿದ್ದ ಸಾಲದ ಹಣವನ್ನು ಒಕ್ಕೂಟದ ಅಧಿಕೃತ ಬ್ಯಾಂಕ್ ಖಾತೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಈ ಅಕ್ರಮ ಎಸಗಲು ಅವರು ಎರಡೆರಡು ಖಾತೆ ಪುಸ್ತಕ (ಲೆಡ್ಜರ್) ಹಾಗೂ ರಶೀದಿ ಪುಸ್ತಕಗಳನ್ನು ನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲದೆ, ಒಕ್ಕೂಟದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ನಕಲಿ ಸಹಿಗಳನ್ನು ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಒಟ್ಟು ₹28,19,489 (ಇಪ್ಪತ್ತೆಂಟು ಲಕ್ಷದ ಹತ್ತೊಂಬತ್ತು ಸಾವಿರದ ನಾಲ್ಕು ನೂರು ಎಂಭತ್ತೊಂಬತ್ತು ರೂಪಾಯಿ) ಮೊತ್ತವನ್ನು ಸ್ವಂತಕ್ಕೆ ಬಳಸಿಕೊಂಡು ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ಈ ಬೃಹತ್ ವಂಚನೆಗೆ ಸಂಬಂಧಿಸಿದಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 316(4), 318(2), 336(3), ಮತ್ತು 340(2) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.




    #crime #karnataka
    Previous Articleಸೋಶಿಯಲ್ ಮೀಡಿಯಾ ಮೂಲಕ ಪಾಕ್ ಹ್ಯಾಂಡ್ಲರ್‌ಗಳ ಬಲೆ; ಐಎಎಫ್ ಅಧಿಕಾರಿ ಬಂಧನ
    Next Article 2 ತಿಂಗಳ ಹಿಂದೆಯೇ ಉಡುಪಿಗೆ ಬಂದಿದ್ದರು: ಡೇವಿಡ್ ಹಂತಕರ ಬಗ್ಗೆ ಪೊಲೀಸರ ತನಿಖೆಯಲ್ಲಿ ಸ್ಫೋಟಕ ಮಾಹಿತಿ

    Related Posts

    ಮಂಗಳೂರು: ಕೋರ್ಟ್‌ಗೆ ತೆರಳುತ್ತಿದ್ದ ನ್ಯಾಯಾಧೀಶರ ಕಾರಿಗೆ ಆಟೋ ಡಿಕ್ಕಿ; ಹಲವರಿಗೆ ಗಾಯ

    September 29, 2026

    ಮಲ್ಪೆಯಲ್ಲಿ ನಿಗೂಢ ಕೊಲೆ; ಪ್ರತಿದಿನ ಮಲಗುತ್ತಿದ್ದ ಜಾಗದಲ್ಲೇ ವ್ಯಕ್ತಿ ಶವವಾಗಿ ಪತ್ತೆ

    September 29, 2026

    ಸ್ನೇಹಿತನ ಮಾತು ನಂಬಿ ಸೌದಿ ಅರೇಬಿಯಾದಲ್ಲಿ ‘ಡೆತ್ ಟ್ರ್ಯಾಪ್’ಗೆ ಸಿಲುಕಿದ ಕೇರಳ ಮೂಲದ ವ್ಯಕ್ತಿ

    September 29, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರು: ಕೋರ್ಟ್‌ಗೆ ತೆರಳುತ್ತಿದ್ದ ನ್ಯಾಯಾಧೀಶರ ಕಾರಿಗೆ ಆಟೋ ಡಿಕ್ಕಿ; ಹಲವರಿಗೆ ಗಾಯ

    September 29, 2026

    ಮಲ್ಪೆಯಲ್ಲಿ ನಿಗೂಢ ಕೊಲೆ; ಪ್ರತಿದಿನ ಮಲಗುತ್ತಿದ್ದ ಜಾಗದಲ್ಲೇ ವ್ಯಕ್ತಿ ಶವವಾಗಿ ಪತ್ತೆ

    September 29, 2026

    ಸ್ನೇಹಿತನ ಮಾತು ನಂಬಿ ಸೌದಿ ಅರೇಬಿಯಾದಲ್ಲಿ ‘ಡೆತ್ ಟ್ರ್ಯಾಪ್’ಗೆ ಸಿಲುಕಿದ ಕೇರಳ ಮೂಲದ ವ್ಯಕ್ತಿ

    September 29, 2026

    ಕುಂದಾಪುರ: “ಸ್ವಲ್ಪ ನಿಧಾನವಾಗಿ ಮಾತನಾಡಿ” ಎಂದಿದ್ದಕ್ಕೆ ಸೋಡಾ ಬಾಟಲಿಯಿಂದ ಹಲ್ಲೆ; ನಾಲ್ವರ ವಿರುದ್ಧ ಕೇಸ್

    September 29, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕುಂದಾಪುರ: “ಸ್ವಲ್ಪ ನಿಧಾನವಾಗಿ ಮಾತನಾಡಿ” ಎಂದಿದ್ದಕ್ಕೆ ಸೋಡಾ ಬಾಟಲಿಯಿಂದ ಹಲ್ಲೆ; ನಾಲ್ವರ ವಿರುದ್ಧ ಕೇಸ್

    September 29, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.