Close Menu
    What's Hot

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026

    ವಿಮಾನ ಇಳಿಯುವ ಕ್ಷಣದಲ್ಲೇ 5.2 ತೀವ್ರತೆಯ ಭೂಕಂಪ; ಲ್ಯಾಂಡಿಂಗ್‌ಗೆ ಬಂದಿದ್ದ ವಿಮಾನ ವಾಪಸ್ ಮೇಲಕ್ಕೆ

    November 29, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಹಾಸ್ಟೆಲ್‌ನಲ್ಲಿ ವಿಷಪೂರಿತ ಹಾವು ಕಡಿತ: ಮೂವರು ವಿದ್ಯಾರ್ಥಿನಿಯರು ಸಾವು, ಮೂವರು ಗಂಭೀರ
    ರಾಷ್ಟ್ರೀಯ

    ಹಾಸ್ಟೆಲ್‌ನಲ್ಲಿ ವಿಷಪೂರಿತ ಹಾವು ಕಡಿತ: ಮೂವರು ವಿದ್ಯಾರ್ಥಿನಿಯರು ಸಾವು, ಮೂವರು ಗಂಭೀರ

    adminBy adminAugust 11, 2026No Comments1 Min Read

    ಮಹಾರಾಷ್ಟ್ರ  : ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಸರ್ಕಾರಿ ಅನುದಾನಿತ ಬುಡಕಟ್ಟು ವಸತಿ ಶಾಲೆಯೊಂದರಲ್ಲಿ ಮಧ್ಯರಾತ್ರಿ ವಿಷಪೂರಿತ ಹಾವು ಕಚ್ಚಿ ಮೂವರು ವಿದ್ಯಾರ್ಥಿನಿಯರು ದಾರುಣವಾಗಿ ಮೃತಪಟ್ಟಿದ್ದು, ಮತ್ತೂ ಮೂವರು ಬಾಲಕಿಯರು ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಜಿಲ್ಲೆಯ ಧನೋರಾ ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಜಪ್ತಲೈ ಗ್ರಾಮದ ಅನುದಾನಿತ ಬುಡಕಟ್ಟು ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಭಾನುವಾರ ಮಧ್ಯರಾತ್ರಿ ಈ ಭೀಕರ ದುರಂತ ಸಂಭವಿಸಿದೆ. ಹಾಸ್ಟೆಲ್‌ನ ಕೊಠಡಿಯಲ್ಲಿ ನೆಲದ ಮೇಲೆ ಮಲಗಿದ್ದಾಗ ಬಾಲಕಿಯರಿಗೆ ವಿಷಪೂರಿತ ಹಾವು ಕಚ್ಚಿದೆ. ಹಾವು ಕಡಿತಕ್ಕೆ ಒಳಗಾದವರ ಪೈಕಿ 8, 12 ಮತ್ತು 14 ವರ್ಷದ ಮೂವರು ಬುಡಕಟ್ಟು ಬಾಲಕಿಯರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 11 ರಿಂದ 14 ವರ್ಷದೊಳಗಿನ ಮತ್ತೂ ಮೂವರು ಬಾಲಕಿಯರಿಗೆ ಹಾವು ಕಚ್ಚಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಬೆನ್ನಲ್ಲೇ ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ. “ಘಟನೆ ಹೇಗೆ ಸಂಭವಿಸಿತು, ವಿದ್ಯಾರ್ಥಿನಿಯರು ವಾಸಿಸುತ್ತಿದ್ದ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಹಾಗೂ ಶಾಲಾ ಆಡಳಿತ ಮಂಡಳಿಯು ಮುನ್ನೆಚ್ಚರಿಕೆಯ ನಿಯಮಗಳನ್ನು ಪಾಲಿಸಿತ್ತೇ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು” ಎಂದು ಗಡ್ಚಿರೋಲಿ ಜಿಲ್ಲಾಧಿಕಾರಿ ಅವಿಷ್ಯಂತ್ ಪಾಂಡಾ ತಿಳಿಸಿದ್ದಾರೆ.
    ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ತಕ್ಷಣವೇ ಹಾವು ವಿಷ ನಿರೋಧಕ  ಔಷಧಿ ನೀಡಲಾಗಿದ್ದು, ವೈದ್ಯಕೀಯ ತಂಡಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿವೆ. ಗಾಯಾಳುಗಳಿಗೆ ಯಾವುದೇ ಕೊರತೆಯಾಗದಂತೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.




    #nation #national
    Previous Articleಉಡುಪಿ: ಸಾಯಿರಾಜ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಿಇಒ ಸಚಿನ್ ಶೆಟ್ಟಿ ಆತ್ಮಹತ್ಯೆ
    Next Article ಸುರತ್ಕಲ್: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ; ಸಂದೀಪ್ ನಾಯಕ್ ಸಾಹಸದಿಂದ ಪಾರು

    Related Posts

    ಸುಪ್ರೀಂ ಕೋರ್ಟ್ ಆದೇಶದಂತೆ ದೀಪ ಬೆಳಗಿಸಲು ಸಿದ್ಧತೆ; ದರ್ಗಾದಲ್ಲಿ ಮುಸ್ಲಿಂ ಭಕ್ತರಿಂದ ವಿಶೇಷ ಪ್ರಾರ್ಥನೆ, ದೇವಸ್ಥಾನ–ದರ್ಗಾಕ್ಕೆ ಸಿಆರ್‌ಪಿಎಫ್ ಬಿಗಿ ಭದ್ರತೆ

    November 28, 2026

    ತಿರುಪ್ಪರಂಕುಂಡ್ರಂ ಬೆಟ್ಟದ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಿಸಲು ವಿಫಲವಾದ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ; ದೇವಾಲಯದ ಟ್ರಸ್ಟ್ ಅಮಾನತು

    November 27, 2026

    ಅಮಿತಾಭ್ ಬಚ್ಚನ್ ಮನೆ, ಮುಂಬೈ ಮೇಯರ್ ಕಚೇರಿಗೆ ಬಾಂಬ್ ಬೆದರಿಕೆ; ಹೈ ಅಲರ್ಟ್ ಘೋಷಣೆ

    November 26, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026

    ವಿಮಾನ ಇಳಿಯುವ ಕ್ಷಣದಲ್ಲೇ 5.2 ತೀವ್ರತೆಯ ಭೂಕಂಪ; ಲ್ಯಾಂಡಿಂಗ್‌ಗೆ ಬಂದಿದ್ದ ವಿಮಾನ ವಾಪಸ್ ಮೇಲಕ್ಕೆ

    November 29, 2026

    ಉಡುಪಿ: ಆಟೋಗೆ ಡಿಕ್ಕಿ ಹೊಡೆದು ಚರಂಡಿಗೆ ಉರುಳಿದ ಕಾರು; ಕ್ಷಣಾರ್ಧದಲ್ಲಿ ಬೆಂಕಿಗಾಹುತಿ, ಮೂವರಿಗೆ ಗಂಭೀರ ಗಾಯ

    November 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.