Close Menu
    What's Hot

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026

    ವಿಮಾನ ಇಳಿಯುವ ಕ್ಷಣದಲ್ಲೇ 5.2 ತೀವ್ರತೆಯ ಭೂಕಂಪ; ಲ್ಯಾಂಡಿಂಗ್‌ಗೆ ಬಂದಿದ್ದ ವಿಮಾನ ವಾಪಸ್ ಮೇಲಕ್ಕೆ

    November 29, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಅಡಿಕೆ, ತೆಂಗು, ಕೋಕೋ ಬೆಳೆಗಳಿಗೆ ಹೊಸ ವಿಮೆ; ಲೋಕಸಭೆಯಲ್ಲಿ ಚೌಟ ಬ್ರಿಜೇಶ್ ಒತ್ತಾಯ
    ರಾಷ್ಟ್ರೀಯ

    ಅಡಿಕೆ, ತೆಂಗು, ಕೋಕೋ ಬೆಳೆಗಳಿಗೆ ಹೊಸ ವಿಮೆ; ಲೋಕಸಭೆಯಲ್ಲಿ ಚೌಟ ಬ್ರಿಜೇಶ್ ಒತ್ತಾಯ

    adminBy adminAugust 11, 2026No Comments2 Mins Read

    ನವದೆಹಲಿ : ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳು ಎದುರಿಸುತ್ತಿರುವ ನಾನಾ ರೀತಿಯ ಹವಾಮಾನ ಸವಾಲುಗಳಿಗೆ ತಕ್ಕಂತೆ ‘ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ’ (RWBCIS) ರೂಪಿಸಬೇಕೆಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ನಿಯಮ 377ರಡಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.

    ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸಂಸದರು, ಬಹು ವಾರ್ಷಿಕ ತೋಟಗಾರಿಕಾ ಬೆಳೆಗಳು ಸಾಮಾನ್ಯ ಋತುಮಾನದ ಬೆಳೆಗಳಿಗಿಂತ ಬಹಳ ವಿಭಿನ್ನ ಆಪತ್ತು ಎದುರಿಸುತ್ತವೆ. ನಿರಂತರ ಮಳೆ, ಆರ್ದ್ರತೆ, ರೋಗಬಾಧೆ ಹಾಗೂ ಪಾತಿಯಲ್ಲಿ ನೀರು ನಿಲ್ಲುವಿಕೆ ಮುಂತಾದ ಸ್ಥಳೀಯ ಹವಾಮಾನ ವ್ಯತ್ಯಾಸಗಳಿಂದ ಬೆಳೆಗಳಿಗೆ ಹಾನಿಯಾಗುತ್ತದೆ. ಹತ್ತಿರದ ಹವಾಮಾನ ಕೇಂದ್ರದಲ್ಲಿ ನಿಯಮಿತ ಮಳೆ ಅಥವಾ ತಾಪಮಾನದ ಮಿತಿ ದಾಟದಿದ್ದರೂ, ತೋಟಗಳಲ್ಲಿ ಬೆಳೆ ಸಂಪೂರ್ಣ ನಾಶವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ತೋಟಗಾರಿಕಾ ಬೆಳೆಗಳ ನೈಜ ನಷ್ಟದ ಸ್ವರೂಪಕ್ಕೆ ತಕ್ಕಂತೆ ವಿಮಾ ಯೋಜನೆಗಳನ್ನು ರೂಪಿಸುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

    ಸಂಸದರು ಸದನದಲ್ಲಿ ಮಂಡಿಸಿದ ವಿಷಯಗಳ ಪ್ರಕಾರ, ಕೇಂದ್ರ ಕೃಷಿ ಸಚಿವಾಲಯವು ಕೃಷಿ ವಿಜ್ಞಾನಿಗಳು ಹಾಗೂ ವಿಮಾ ಆಡಿಟರ್‌ಗಳ ಜಂಟಿ ಸಮಿತಿಯನ್ನು ರಚಿಸಿ, ಹವಾಮಾನ ಕೇಂದ್ರಗಳ ಸಾಂದ್ರತೆ, ಅಧಿಸೂಚಿತ ಯೂನಿಟ್‌ಗಳ ಗಾತ್ರ, ಮಳೆ-ಆರ್ದ್ರತೆಯ ಮಾನಿಟರಿಂಗ್‌ ವ್ಯವಸ್ಥೆ, ವಿಮಾ ಮೊತ್ತ ಮತ್ತು ಪರಿಹಾರ ಪಾವತಿಯ ಕಾಲಮಿತಿಗಳಂತಹ ತಾಂತ್ರಿಕ ಅಂಶಗಳನ್ನು ಒಳಗೊಂಡಂತೆ RWBCIS ಯೋಜನೆಯ ರೂಪುರೇಷೆ ಸಿದ್ಧಪಡಿಸಬೇಕು; ಈ ಪ್ರಕ್ರಿಯೆಯಲ್ಲಿ ICAR ಸಂಸ್ಥೆಗಳು, ಕೃಷಿ/ತೋಟಗಾರಿಕಾ ವಿಶ್ವವಿದ್ಯಾಲಯಗಳು, ವಿಮಾ ಕಂಪನಿಗಳು, ಕರ್ನಾಟಕ ಸರ್ಕಾರ ಹಾಗೂ ಬೆಳೆಗಾರರ ಒಕ್ಕೂಟಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಹವಾಮಾನ ಆಧಾರಿತ ಈ ಬೆಳೆ ವಿಮಾ ವ್ಯವಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುವ ಮುನ್ನ ಕರಾವಳಿ ಮತ್ತು ಮಲೆನಾಡಿನ ಆಯ್ದ ಜಿಲ್ಲೆಗಳಲ್ಲಿ ಇದನ್ನು ಬೆಳೆ ನಾಶ ಆಧರಿಸಿ ಅನುಷ್ಠಾನಗೊಳಿಸುವುದರ ಜೊತೆಗೆ ಟ್ರಿಗರ್ ಆಧಾರಿತ ಪಾವತಿಯ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಕಟಿಸಬೇಕು. ಅಲ್ಲದೆ ರಾಜ್ಯ ಸರ್ಕಾರಗಳಿಗೆ ಸೂಕ್ತ ತೋಟಗಾರಿಕಾ ಬೆಳೆಗಳನ್ನು ವಿಮೆ ವ್ಯಾಪ್ತಿಗೆ ತರಲು ಮಾದರಿ ಅಧಿಸೂಚನೆ ಟೆಂಪ್ಲೇಟ್‌ ಮತ್ತು ಕಾಲಮಿತಿಯನ್ನು ಒದಗಿಸಿ ಕೊಡಬೇಕೆಂದು ಅವರು ಸಲಹೆ ನೀಡಿದ್ದಾರೆ.




    #nation #national
    Previous Articleಷೇರು ಮಾರುಕಟ್ಟೆಯಲ್ಲಿ ದುಪ್ಪಟ್ಟು ಲಾಭದ ಆಸೆ; ಕಾರ್ಕಳ ವ್ಯಕ್ತಿಗೆ ₹32.68 ಲಕ್ಷ ವಂಚನೆ
    Next Article ಮನೆಯಲ್ಲೇ ಫ್ರಿಡ್ಜ್ ಸ್ಫೋಟ; ಪೀಠೋಪಕರಣ, ಗೋಡೆಗಳಿಗೆ ಹಾನಿ

    Related Posts

    ಸುಪ್ರೀಂ ಕೋರ್ಟ್ ಆದೇಶದಂತೆ ದೀಪ ಬೆಳಗಿಸಲು ಸಿದ್ಧತೆ; ದರ್ಗಾದಲ್ಲಿ ಮುಸ್ಲಿಂ ಭಕ್ತರಿಂದ ವಿಶೇಷ ಪ್ರಾರ್ಥನೆ, ದೇವಸ್ಥಾನ–ದರ್ಗಾಕ್ಕೆ ಸಿಆರ್‌ಪಿಎಫ್ ಬಿಗಿ ಭದ್ರತೆ

    November 28, 2026

    ತಿರುಪ್ಪರಂಕುಂಡ್ರಂ ಬೆಟ್ಟದ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಿಸಲು ವಿಫಲವಾದ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ; ದೇವಾಲಯದ ಟ್ರಸ್ಟ್ ಅಮಾನತು

    November 27, 2026

    ಅಮಿತಾಭ್ ಬಚ್ಚನ್ ಮನೆ, ಮುಂಬೈ ಮೇಯರ್ ಕಚೇರಿಗೆ ಬಾಂಬ್ ಬೆದರಿಕೆ; ಹೈ ಅಲರ್ಟ್ ಘೋಷಣೆ

    November 26, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026

    ವಿಮಾನ ಇಳಿಯುವ ಕ್ಷಣದಲ್ಲೇ 5.2 ತೀವ್ರತೆಯ ಭೂಕಂಪ; ಲ್ಯಾಂಡಿಂಗ್‌ಗೆ ಬಂದಿದ್ದ ವಿಮಾನ ವಾಪಸ್ ಮೇಲಕ್ಕೆ

    November 29, 2026

    ಉಡುಪಿ: ಆಟೋಗೆ ಡಿಕ್ಕಿ ಹೊಡೆದು ಚರಂಡಿಗೆ ಉರುಳಿದ ಕಾರು; ಕ್ಷಣಾರ್ಧದಲ್ಲಿ ಬೆಂಕಿಗಾಹುತಿ, ಮೂವರಿಗೆ ಗಂಭೀರ ಗಾಯ

    November 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪಾರ್ಕ್ ಜಾಗದಲ್ಲೇ ಅಕ್ರಮ ನಿವೇಶನ ಸೃಷ್ಟಿಸಿ ಇ-ಸ್ವತ್ತು ವಿತರಣೆ ಆರೋಪ; ಘಂಟಂವಾರಿಪಲ್ಲಿ ಪಿಡಿಒ ಅಮಾನತು

    November 29, 2026

    ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿ ಚಿನ್ನದ ಸರ ದೋಚಿದ ಗ್ಯಾಂಗ್; ಎಂಟು ಪ್ರಕರಣಗಳ ಆರೋಪಿಯೂ ಸೇರಿ ನಾಲ್ವರು ಅಂದರ್

    November 29, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.