Close Menu
    What's Hot

    ಕುಂಪಲ ಬೈಪಾಸ್‌ನಲ್ಲಿ ಭೀಕರ ಅಪಘಾತ; ಎರಡು ಕಾರುಗಳ ನಡುವೆ ಸಿಲುಕಿ 68 ವರ್ಷದ ವ್ಯಕ್ತಿ ಸಾವು

    September 30, 2026

    ವಿಮಾನದಲ್ಲೇ ಪೈಲಟ್‌ಗಳ ನಡುವೆ ಗಲಾಟೆ; ತುರ್ತು ಸಂಕೇತದ ಬಳಿಕ ದುಬೈ-ಇಸ್ರೇಲ್ ವಿಮಾನ ಸೌದಿಯಲ್ಲಿ ಲ್ಯಾಂಡ್

    September 30, 2026

    ಜೋಕಟ್ಟೆ ಎಂಆರ್‌ಪಿಎಲ್‌ ಘಟಕದಲ್ಲಿ ಸ್ಫೋಟ; ಗುತ್ತಿಗೆ ಕಾರ್ಮಿಕ ಸಾವು, ತನಿಖೆಗೆ ಆದೇಶ

    September 30, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ನಕಲಿ ಹೂಡಿಕೆ ಸ್ಕೀಮ್‌ ಕೇಸ್; ₹2,110 ಕೋಟಿ ವಂಚನೆ ಆರೋಪ, ಶಿವಾನಂದನಿಗೆ ಇಡಿ ಶಾಕ್
    ಅಪರಾಧ

    ನಕಲಿ ಹೂಡಿಕೆ ಸ್ಕೀಮ್‌ ಕೇಸ್; ₹2,110 ಕೋಟಿ ವಂಚನೆ ಆರೋಪ, ಶಿವಾನಂದನಿಗೆ ಇಡಿ ಶಾಕ್

    adminBy adminAugust 15, 2026No Comments2 Mins Read

    ಬೆಳಗಾವಿ: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮೂಲದ ಶಿವಾನಂದ ಸಿದ್ದಪ್ಪ ನೀಲಣ್ಣವರ್ ಅವರನ್ನು ಮಂಗಳೂರು ವಿಭಾಗದ ಜಾರಿ ನಿರ್ದೇಶನಾಲಯದ  ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ 12 ದಿನಗಳ ಕಸ್ಟಡಿಗೆ ಪಡೆದಿದ್ದಾರೆ.

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002ರ ಅಡಿಯಲ್ಲಿ ಶಿವಾನಂದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ‘ಶಿವಂ ಅಸೋಸಿಯೇಟ್ಸ್’ ಹೆಸರಿನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಬಡ್ಡಿ ನೀಡುವುದಾಗಿ ಜನರನ್ನು ನಂಬಿಸಿ ಹಣ ಸಂಗ್ರಹಿಸಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ 2019ರ BUDS ಕಾಯ್ದೆ ಹಾಗೂ ಠೇವಣಿದಾರರ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

    ತನಿಖೆಯ ಪ್ರಕಾರ, ಶಿವಾನಂದ ನೀಲಣ್ಣವರ್ ‘ಎಂ.ಎಸ್. ಶಿವಂ ಅಸೋಸಿಯೇಟ್ಸ್’ ಹೆಸರಿನಲ್ಲಿ ಸಾವಿರಾರು ಜನರಿಂದ ಹೂಡಿಕೆ ಮಾಡಿಸಿಕೊಂಡಿದ್ದ ಎನ್ನಲಾಗಿದೆ. ತಿಂಗಳಿಗೆ ಶೇ.3ರಷ್ಟು ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಸುಮಾರು ₹2,110 ಕೋಟಿ ಹಣವನ್ನು ಅಕ್ರಮವಾಗಿ ಸಂಗ್ರಹಿಸಿದ್ದಾನೆ ಎಂಬ ಆರೋಪವಿದೆ. ಈತನ ವಹಿವಾಟು ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಛತ್ತೀಸ್‌ಗಢ ರಾಜ್ಯಗಳಿಗೂ ವಿಸ್ತರಿಸಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

    2019ರಿಂದಲೇ ಶಿವಂ ಅಸೋಸಿಯೇಟ್ಸ್ ನಷ್ಟದಲ್ಲಿದ್ದರೂ, ಸಂಸ್ಥೆ ಸುರಕ್ಷಿತವಾಗಿದೆ ಎಂದು ಹೂಡಿಕೆದಾರರನ್ನು ನಂಬಿಸಿ ವಿವಿಧ ಯೋಜನೆಗಳ ಹೆಸರಿನಲ್ಲಿ ಮತ್ತಷ್ಟು ಹಣ ಸಂಗ್ರಹಿಸುತ್ತಿದ್ದ ಎನ್ನಲಾಗಿದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಂತೆ ಬಿಂಬಿಸಿಕೊಳ್ಳಲು ಕುಟುಂಬಸ್ಥರು ಮತ್ತು ಆಪ್ತರ ಮೂಲಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪವೂ ಇದೆ. ಇದಕ್ಕಾಗಿ ‘ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್’ ಮತ್ತು ‘ಶಿವಂ ಪ್ರೊಡಕ್ಷನ್ಸ್’ ಎಂಬ ಸಂಸ್ಥೆಗಳನ್ನು ಸ್ಥಾಪಿಸಿದ್ದ ಎನ್ನಲಾಗಿದೆ.

    ಐಷಾರಾಮಿ ವಾಹನಗಳಲ್ಲಿ ಸಂಚರಿಸುವುದು, ವಿಲ್ಲಾಗಳನ್ನು ಖರೀದಿಸುವುದು ಹಾಗೂ ಸಿನಿಮಾ ನಿರ್ಮಾಣಕ್ಕೆ ಹಣ ಹೂಡಿಕೆ ಮಾಡುವ ಮೂಲಕ ಸಾರ್ವಜನಿಕರ ಮುಂದೆ ಪ್ರಭಾವಿ ವ್ಯಕ್ತಿಯಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ವೈಯಕ್ತಿಕ ಶೋಕಿಗಾಗಿ ಬಳಸಿರುವುದು ಅಕ್ರಮ ಚಟುವಟಿಕೆಯ ಭಾಗವೆಂದು PMLA ಅಡಿಯಲ್ಲಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿವಾನಂದನಿಗೆ ಸೇರಿದ ಮತ್ತಷ್ಟು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಇಡಿ ತಿಳಿಸಿದೆ.

    ಸುಮಾರು ಎರಡು ತಿಂಗಳ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳು ಶಿವಾನಂದ ನೀಲಣ್ಣವರ್‌ಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸಿದ್ದರು. ಬಳಿಕ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ನಕಲಿ ಸ್ಕೀಮ್‌ಗಳ ಹೆಸರಿನಲ್ಲಿ ಹಣ ಸಂಗ್ರಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಶಿವಾನಂದನನ್ನು ಆಗಸ್ಟ್ 13ರಂದು ಸಂಜೆ ಮಂಗಳೂರಿನ ಇಡಿ ಕಚೇರಿಗೆ ವಿಚಾರಣೆಗೆ ಕರೆಸಲಾಗಿತ್ತು.

    ರಾತ್ರಿಯಿಡೀ ವಿಚಾರಣೆ ನಡೆಸಿದ ಬಳಿಕ ಶುಕ್ರವಾರ ಬೆಳಗ್ಗೆ ಶಿವಾನಂದನನ್ನು ಬಂಧಿಸಲಾಗಿದೆ. ನಂತರ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ ಇಡಿ ಅಧಿಕಾರಿಗಳು 12 ದಿನಗಳ ಕಸ್ಟಡಿ ಪಡೆದಿದ್ದಾರೆ. ಪ್ರಕರಣದಲ್ಲಿ ಅಕ್ರಮ ಹಣದ ಹರಿವು, ಆಸ್ತಿ ಹಾಗೂ ಹೂಡಿಕೆಗಳ ಕುರಿತು ತನಿಖೆ ಮುಂದುವರಿದಿದೆ.




    #crime #karnataka
    Previous Articleಗುಟ್ಕಾ-ಪಾನ್ ಮಸಾಲಾ ನಿಷೇಧ ಆದೇಶ ವಾಪಸ್ ಪಡೆದಿಲ್ಲ; ಅಡಿಕೆ ಬೆಳೆಗಾರರಿಗೆ ತೊಂದರೆಯಾಗಲ್ಲ ಎಂದ ಖಾದರ್
    Next Article ಜಿಲ್ಲಾವಾರು ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ; ಉಡುಪಿಗೆ ರಿಜ್ವಾನ್, ದ.ಕ.ಗೆ ಖಾದರ್

    Related Posts

    ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ; ಎಂಟು ಮಂದಿಗೆ ಗಾಯ, ಬೆಂಕಿ ನಂದಿಸುವಲ್ಲಿ ಯಶಸ್ಸು

    September 30, 2026

    25ಕ್ಕೂ ಹೆಚ್ಚು ದೂರುಗಳ ಬೆನ್ನಲ್ಲೇ ನಕಲಿ ಲೇಡಿ PSI ಅರೆಸ್ಟ್; ಚಿನ್ನ, ಕಾರು, ಹಣ ವಂಚನೆ ಆರೋಪ

    September 30, 2026

    ಕೊಲೆಯತ್ನ ಕೇಸ್‌ನಲ್ಲಿ A1, A2 ಆರೋಪಿಗಳಾಗಿದ್ದ ಪತಿ–ಮಹಿಳೆ ಇಬ್ಬರ ಮೃತದೇಹ ಸೌಪರ್ಣಿಕಾ ನದಿ ಬಳಿ ಪತ್ತೆ

    September 30, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕುಂಪಲ ಬೈಪಾಸ್‌ನಲ್ಲಿ ಭೀಕರ ಅಪಘಾತ; ಎರಡು ಕಾರುಗಳ ನಡುವೆ ಸಿಲುಕಿ 68 ವರ್ಷದ ವ್ಯಕ್ತಿ ಸಾವು

    September 30, 2026

    ವಿಮಾನದಲ್ಲೇ ಪೈಲಟ್‌ಗಳ ನಡುವೆ ಗಲಾಟೆ; ತುರ್ತು ಸಂಕೇತದ ಬಳಿಕ ದುಬೈ-ಇಸ್ರೇಲ್ ವಿಮಾನ ಸೌದಿಯಲ್ಲಿ ಲ್ಯಾಂಡ್

    September 30, 2026

    ಜೋಕಟ್ಟೆ ಎಂಆರ್‌ಪಿಎಲ್‌ ಘಟಕದಲ್ಲಿ ಸ್ಫೋಟ; ಗುತ್ತಿಗೆ ಕಾರ್ಮಿಕ ಸಾವು, ತನಿಖೆಗೆ ಆದೇಶ

    September 30, 2026

    ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ; ಎಂಟು ಮಂದಿಗೆ ಗಾಯ, ಬೆಂಕಿ ನಂದಿಸುವಲ್ಲಿ ಯಶಸ್ಸು

    September 30, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    25ಕ್ಕೂ ಹೆಚ್ಚು ದೂರುಗಳ ಬೆನ್ನಲ್ಲೇ ನಕಲಿ ಲೇಡಿ PSI ಅರೆಸ್ಟ್; ಚಿನ್ನ, ಕಾರು, ಹಣ ವಂಚನೆ ಆರೋಪ

    September 30, 2026

    ಕೊಲೆಯತ್ನ ಕೇಸ್‌ನಲ್ಲಿ A1, A2 ಆರೋಪಿಗಳಾಗಿದ್ದ ಪತಿ–ಮಹಿಳೆ ಇಬ್ಬರ ಮೃತದೇಹ ಸೌಪರ್ಣಿಕಾ ನದಿ ಬಳಿ ಪತ್ತೆ

    September 30, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.